ಕಡಿಮೆ ಬಜೆಟ್ನ ಮಲಯಾಳಂ ಸಿನಿಮಾ ಬಾಕ್ಸ್ ಆಫೀಸ್ ಹಿಟ್: ದುಬಾರಿ ಕಾರು ಖರೀದಿಸಿದ ಜನಪ್ರಿಯ ನಟ
ತುಂಬಾ ಚಿಕ್ಕ ಬಂಡವಾಳದ ಮಲಯಾಳಂ ಸಿನಿಮಾಗಳು ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ದಾಖಲೆ ಬರೆಯುತ್ತಿದೆ. ಇತ್ತೀಚಿನ ಕೆಲವು ಮಲಯಾಳಂ ಸಿನಿಮಾಗಳು ನಿರೀಕ್ಷೆಯನ್ನೂ ಮೀರಿ ಲಾಭ ಮಾಡಿವೆ. ಕರ್ನಾಟಕದಲ್ಲೂ ಮಲಯಾಳಂ ಸಿನಿಮಾಗಳು ದೊಡ್ಡ ಕಲೆಕ್ಷನ್ ಮಾಡುತ್ತಿದೆ. ಈ ನಡುವೆ ಮಳೆಯಾಳಂ ಜನಪ್ರಿಯ ನಟ ಹೊಸ ದುಬಾರಿ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ. ಮಾಲಿವುಡ್‌ನಲ್ಲಿ ಚಾಕೊಲೇಟ್ ಹೀರೋ ಎಂಬ ಖ್ಯಾತಿ ಗಳಿಸಿದ ನಟ ಕುಂಚಾಕೊ ಬೋಬನ್ (Kunchacko Boban) ಅವರು ದುಬಾರಿ ಪೋರ್ಷೆ ಕಾರನ್ನು ಖರೀದಿಸಿದ್ದಾರೆ.
90ರ ದಶಕದಲ್ಲಿ ಕಾಲೇಜು ಹುಡುಗಿಯರ ಡ್ರೀಮ್ ಹೀರೋ ಆಗಿದ್ದರು ಕುಂಚಾಕೊ ಬೋಬನ್. ಚಾಕಲೇಟ್ ಹೀರೋ ತನ್ನೆಲ್ಲ ವರ್ಚಸ್ಸನ್ನು ಬದಿಗಿಟ್ಟು ವಿಭಿನ್ನ ಶೈಲಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕುಂಚಾಕೊ ಬೋಬನ್ ತಮ್ಮ ಲುಕ್‌ನಲ್ಲಿ ಮಾತ್ರವಲ್ಲದೆ ಕೆಲಸದಲ್ಲಿಯೂ ಸಾಕಷ್ಟು ಬದಲಾಗಿದ್ದಾರೆ ಎಂದು ಎಲ್ಲಾ ನಿರ್ಮಾಪಕರು ಹೇಳುತ್ತಾರೆ. ನಟನು ಇತ್ತೀಚೆಗೆ ಬಿಡುಗಡೆಯಾದ ಬೌಗೆನ್ವಿಲ್ಲಾ ಪಾತ್ರದಲ್ಲಿ ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಳ್ಳುತಿದ್ದಾರೆ.

ಈಗಾಗಲೇ ಹೆಚ್ಚಿನ ಸಂಖ್ಯೆಯ ಐಷಾರಾಮಿ ಕಾರುಗಳನ್ನು ಹೊಂದಿರುವ ನಟ ಈಗ ತಮ್ಮ ಗ್ಯಾರೇಜ್‌ಗೆ ಹೊಸ ಅತಿಥಿಯನ್ನು ಸೇರಿಸಿಕೊಂಡಿದ್ದಾರೆ. ನಟನ ಹೊಸ ಕಾರು ಪೋರ್ಷೇ ಕೆಯೆನ್ನೆ ಆಗಿದೆ. ಅವರು ತಮ್ಮ ಕುಟುಂಬದೊಂದಿಗೆ ಆಗಮಿಸಿ ಹೊಸ ಕಾರನ್ನು ಡೆಲಿವರಿ ತೆಗೆದುಕೊಳ್ಳುತ್ತಿರುವ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.
ನಟ ಕುಂಚಾಕೊ ಬೋಬನ್ ಪೋರ್ಷೆ ಕಯೆನ್ನೆ (Porsche Cayenne) ಎಸ್‌ಯುವಿಯು ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಪೋರ್ಷೆ ಕಯೆನ್ನೆ ಎಸ್‌ಯುವಿಯು ರೂ.1.81 ಕೋಟಿಯಿಂದ ರೂ.2.54 ಕೋಟಿವರೆಗೆ ಇದೆ. ನಟನು ಪೋರ್ಷೆ ಕಯೆನ್ನೆ ಎಸ್‌ಯುವಿಯ ಟಾಪ್ ಎಂಡ್ ವೆರಿಯಂಟ್ ಖರೀದಿಸುವ ಸಾಧ್ಯತೆಯಿದೆ. ಭಾರತದಲ್ಲಿ ವಾಹನವನ್ನು ಸಂಪೂರ್ಣವಾಗಿ ಬಿಲ್ಟ್-ಅಪ್ ಯುನಿಟ್ ಆಗಿ (CBU) ಮಾರಾಟ ಮಾಡಲಾಗುತ್ತಿದೆ.

ಪೋರ್ಷೆ ಕಯೆನ್ನೆ ಎಸ್‌ಯುವಿಯಲ್ಲಿ 3.0 ಲೀಟರ್ ವಿ6 ಟರ್ಬೊ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 340 ಬಿಎಚ್‌ಪಿ ಪವರ್ ಮತ್ತು 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಟಿಪ್ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನುಈ ಎಸ್‍ಯುವಿಯು ಕೇವಲ 6 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.
ಈ ಪೋರ್ಷೆ ಕಯೆನ್ನೆ ಎಸ್‌ಯುವಿಯು 243 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ. ಇನ್ನು ವಿನ್ಯಾಸದ ಬಗ್ಗೆ ಹೇಳುವುದಾದರೆ, ಪೋರ್ಷೆ ಕಯೆನ್ನೆ ಎಸ್‌ಯುವಿಯು ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್‌ಇಡಿ ಟೈಲ್ ಲೈಟ್‌ಗಳು, ದೊಡ್ಡ ಅಲಾಯ್ ಚಕ್ರಗಳು, ಸೈಡ್ ಸ್ಕರ್ಟ್‌ಗಳು, ವೀಲ್ ಆರ್ಚ್‌ಗಳು ಇತ್ಯಾದಿಗಳನ್ನು ಪೋರ್ಷೆಯ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಹೊಂದಿದೆ.
ಈ ಪೋರ್ಷೆ ಕಯೆನ್ನೆ ಎಸ್‌ಯುವಿ 12.3-ಇಂಚಿನ ಸೆಂಟ್ರಲ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೇ, 10.9-ಇಂಚಿನ ಸಹ-ಪ್ಯಾಸೆಂಜರ್ ಡಿಸ್‌ಪ್ಲೇ, 12.6-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 8-ವೇ ಅಡ್ಜಸ್ಟ್ ಮಾಡಬಹುದಾದ ಮುಂಭಾಗದ ಸೀಟುಗಳು, 4-ಝೋನ್ ಕ್ಲೈಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ಡ್ಯುಯಲ್-ಪೇನ್ ಪನೋರಮಿಕ್ ಸನ್‌ರೂಫ್, ಎಲೆಕ್ಟ್ರಿಕ್ ಹಿಂಬದಿ ಕಿಟಕಿಗಳು ಸನ್‌ಬ್ಲೈಂಡ್‌ಗಳು, 14-ಸ್ಪೀಕರ್ 710-ವ್ಯಾಟ್ ಬೋಸ್ ಆಡಿಯೊ ಸಿಸ್ಟಮ್ ಮತ್ತು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಹೂಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








