ಹೊಸ ಹೋಂಡಾ ಬೈಕ್ ಖರೀದಿಸಿದ ಕಿರುಚಿತ್ರದಿಂದ ಬಂದು ಬೆಳ್ಳಿತೆರೆಯಲ್ಲಿ ಮಿಂಚಿದ ನಟ

ಸಿನಿಮಾ ಸೆಲೆಬ್ರಿಟಿಗಳಿಗೆ ವಾಹನಗಳ ಕ್ರೇಜ್ ಹೆಚ್ಚು ಇರುತ್ತದೆ. ಕೆಲವರಿಗೆ ಕಾರುಗಳ ಬಗ್ಗೆ ಹೆಚ್ಚು ಕ್ರ್ರೇಜ್ ಹೊಂದಿದ್ದರೆ, ಇನ್ನೂ ಕೆಲವರು ಬೈಕುಗಳ ಬಗ್ಗೆ ಹೆಚ್ಚು ಕ್ರೇಜ್ ಅನ್ನು ಹೊಂದಿರುತ್ತಾರೆ. ಕಡಿಮೆ ಅವಧಿಯಲ್ಲಿ ಒಂದಿಷ್ಟು ಪಾತ್ರಗಳ ಮೂಲಕ ಸಿನಿಪ್ರೆಕ್ಷಕರ ಮನಗೆದ್ದ ಮಲಯಾಳಂ ನಟ ಪ್ರಶಾಂತ್ ಮುರಳಿ (Prasant Murali) ಅವರು ಬೈಕ್ ಕ್ರೇಜ್ ಅನ್ನು ಹೊಂದಿದ್ದಾರೆ. ಇದೀಗ ನಟ ಪ್ರಶಾಂತ್ ಮುರಳಿ ಹೋಂಡಾದ ಹೊಚ್ಚಹೊಸ ಪ್ರೀಮಿಯಂ ಬೈಕ್ ಅನ್ನು ಖರೀದಿಸಿದ್ದಾರೆ. ಇದು ಹೋಂಡಾ CB300R (Honda 300R) ನೇಕೆಡ್ ಸ್ಟ್ರೀಟ್ ಬೈಕ್ ಆಗಿದೆ.

ಕೊಚ್ಚಿಯ ಹೋಂಡಾದ ದೊಡ್ಡ ವಿಂಗ್ ಡೀಲರ್‌ಶಿಪ್ ಆಗಿರುವ ಇವಿಎಂ ಹೋಂಡಾದಿಂದ ನಟ ಹೊಸ ಹೋಂಡಾ CB300R ಬೈಕ್ ವಿತರಣೆಯನ್ನು ಪಡೆದುಕೊಂಡಿದ್ದಾರೆ. ಇದರ ವಿಡಿಯೋವನ್ನು ವಿತರಕರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಾಹನವನ್ನು ಕೊಚ್ಚಿಯಿಂದ ಖರೀದಿಸಲಾಗಿದೆ ಆದರೆ ಅವರ ಹುಟ್ಟೂರಾದ ಪಲೈನಲ್ಲಿ ನೋಂದಾಯಿಸಲಾಗಿದೆ ಎಂದು ರೀಲ್ ವೀಡಿಯೊ ನೋಡಿದಾಗ ತಿಳಿಯುತ್ತೆ.

Honda 300R

ನಟ ಪ್ರಶಾಂತ್ ಮುರಳಿ ಕೆಲವು ಕಿರುಚಿತ್ರಗಳ ಮೂಲಕ ಯೂಟ್ಯೂಬ್‌ನಲ್ಲಿ ವೈರಲ್ ಆಗಿದ್ದರು. ಆದರೆ ಈಗ ನಟ ತಾನು ಮಾಡಿದ ಪಾತ್ರಗಳ ಮೂಲಕ ಹಿರಿತೆರೆಯಲ್ಲಿ ಮಿಂಚುತ್ತಿದ್ದಾರೆ. ಜಾನೆ ಮನ್ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಅರ್ಜುನ್ ಅಶೋಕನ್ ಮತ್ತು ಬಾಸಿಲ್ ಜೋಸೆಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು ಮಲೆಯಾಳಿಗಳ ಮನಗೆದಿದ್ದಾರೆ.

ಈ ನಟ ಪ್ರಶಾಂತ್ ಮುರಳಿ ಖರೀದಿಸಿದ ಬೈಕ್ ಬಗ್ಗೆ ಹೇಳುವುದಾದರೆ, ಒಬಿಡಿ2ಎ(OBD2A-On-Board diagnostics): ಅಂದರೆ ಶೇ20 ರಷ್ಟು ಎಥೆನಾಲ್ ಮಿಶ್ರಣ ಹೊಂದಿರುವ ಪೆಟ್ರೋಲ್‌ ಬಳಸುವ ಎಂಜಿನ್ ತಯಾರಿಕೆಯ ನಿಯಮ ಅನುಸರಣೆಯ ಹೋಂಡಾ CB300R ದ್ವಿಚಕ್ರ ವಾಹನವಾಗಿದೆ. ಒಟ್ಟಾರೆ ಶೇ 20 ರಷ್ಟು ಎಥನಾಲ್ ಬಳಸುವುದರಿಂದ ಕಾರ್ಬನ್ ಹೊರಸೂಸುವಿಕೆಯನ್ನು ಗಣನೀಯವಾಗಿ ತಗ್ಗಿಸಬಹುದು. ಐಕಾನಿಕ್ ರೆಟ್ರೊ-ಥೀಮಿನ CB1000R ಲೀಟರ್-ಕ್ಲಾಸ್ ರೋಡ್‌ಸ್ಟರ್‌ನಿಂದ ವಿನ್ಯಾಸ ಸ್ಫೂರ್ತಿ ಪಡೆದು, CB300R ವಿನ್ಯಾಸವನ್ನು ಮಾಡಲಾಗಿದೆ.

Honda 300R

ಈ ಬೈಕ್ ಮಸ್ಕುಲರ್ ಇಂಧನ ಟ್ಯಾಂಕ್ ಮತ್ತು ನಿಯೋ ಸ್ಪೋರ್ಟ್ಸ್ ಕೆಫೆ ಡಿಎನ್‌ಎ ಆಧಾರಿತ ಬೀಫಿ ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಅನ್ನು ಹೊಂದಿದೆ. ಎಲ್ಇಡಿ ಲೈಟಿಂಗ್ ಸಿಸ್ಟಮ್ (ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ವಿಂಕರ್‌ಗಳು ಮತ್ತು ಎಲ್ಇಡಿ ಟೈಲ್) ಮೂಲಕ ಸ್ಟೈಲಿಂಗ್ ಅಂಶವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಕೇವಲ 146kg ತೂಕವಿದ್ದು, CB300R ಅದರ ವರ್ಗದಲ್ಲಿ ಅತ್ಯಂತ ಹಗುರವಾದ ಮೋಟಾರ್‌ಸೈಕಲ್ ಆಗಿದೆ.

ಈ ಹೋಂಡಾ ಬೈಕ್ 41mm USD ಮುಂಭಾಗದ ಫೋರ್ಕ್‌ಗಳು ಮತ್ತು ಹಿಂಬದಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಅಬ್ಸಾರ್ಬರ್ ಹೊಂದುವ ಮೂಲಕ ಇದು ಭಾರತೀಯ ರಸ್ತೆಗಳಿಗೆ ಪರಿಪೂರ್ಣ ಬೈಕ್ ಆಗಿರುವುದಾಗಿ ಕಂಪನಿ ಹೇಳಿಕೊಂಡಿದೆ. ಬ್ರೇಕಿಂಗ್ ಬಗ್ಗೆ ಹೇಳುವುದಾದರೆ, 296mm ಡಿಸ್ಕ್ ಬ್ರೇಕ್ (ಮುಂಭಾಗ) ಮತ್ತು 220mm ಡಿಸ್ಕ್ (ಹಿಂಭಾಗ) ಜೊತೆಗೆ ಡ್ಯುಯಲ್ - ಚಾನೆಲ್ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

Honda 300R

ಈ ಬೈಕಿನಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಇದ್ದು, ಇದು ಈಗ ತುರ್ತು ನಿಲುಗಡೆ ಸಿಗ್ನಲ್ (ಎಮರ್ಜನ್ಸಿ ಸ್ಟಾಪ್ ಸಿಗ್ನಲ್) ಮತ್ತು ಅಪಾಯದ ಬೆಳಕಿನ ಸ್ವಿಚ್ (ಹಜಾರ್ಡ್ ಲೈಟ್) ಅನ್ನು ಪಡೆದಿದೆ. ಈ ಹೋಂಡಾ CB300R ಶಕ್ತಿಶಾಲಿ 286.01cc, 4 ಸ್ಟ್ರೋಕ್, ಸಿಂಗಲ್-ಸಿಲಿಂಡರ್ BSVI OBD2A ಕಂಪ್ಲೈಂಟ್ PGM-FI ಎಂಜಿನ್ ಅನ್ನು ಹೊಂದಿದೆ. ಇದರ ಮೋಟಾರ್ 22.9 kW ಪವರ್ ಮತ್ತು 27.5 Nm ಟಾರ್ಕ್ ಉತ್ಪಾದಿಸುತ್ತದೆ.

ಇದರೊಂದಿಗೆ CB300R 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿರುವುದರಿಂದ ತನ್ನ ವಿಭಾಗದಲ್ಲಿ ಉತ್ತಮ ಪರ್ಫಾಮೆನ್ಸ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ. ಇನ್ನು ಇದರ ಹೆಚ್ಚುವರಿ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಹೋಂಡಾ CB300R ಅಸಿಸ್ಟ್ ಸ್ಲಿಪ್ಪರ್ ಕ್ಲಚ್ ಅನ್ನು ಸಹ ಪಡೆದಿದೆ, ಇದು ಗೇರ್‌ಶಿಫ್ಟ್‌ಗಳನ್ನು ಸುಲಭಗೊಳಿಸುವುದು. ಮತ್ತು ನಿಧಾನಗೊಳಿಸುವಾಗ ಹಾರ್ಡ್ ಡೌನ್ ಶಿಫ್ಟ್‌ಗಳಲ್ಲಿ ಹಿಂಬದಿ ಚಕ್ರ ಲಾಕ್ - ಅಪ್ ಅನ್ನು ನಿರ್ವಹಿಸುತ್ತದೆ, ಇದರಿಂದಾಗಿ ಸವಾರರ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 30, 2024, 11:46 [IST]
English summary
Malayalam actor prasant murali buys new honda 300r details
Read more on celebrity bike india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+