RCB ವಿರುದ್ಧದ ಸೋಲಿನ ಬಳಿಕ ಹತಾಶರಾದ ಎಂಎಸ್‌ ಧೋನಿ ಏನ್ ಮಾಡ್ತಿದ್ದಾರೆ ಗೊತ್ತಾ?

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್​ನ 68ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಸೋಲುಣಿಸಿ ಪ್ಲೇಆಫ್​ಗೆ ಪ್ರವೇಶಿಸಿದೆ. ಪ್ಲೇಆಫ್ ಹಂತಕ್ಕೇರಲು ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 218 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆ ತಂಡವು 191 ರನ್​ಗಳಿಸಲಷ್ಟೇ ಗಳಸಿ 27 ರನ್‌ಗಳಿಂದ ಸೋಲುಂಡಿತು. ಎಂಎಸ್‌ ಧೋನಿ (MS Dhoni) ಅವರ ಕಡೇ ಐಪಿಎಲ್‌ ಇದಾಗಿದೆ ಎಂದು ಎದುರು ನೋಡುತ್ತಿದ್ದ ಅಭಿಮಾನಿಗಳು ಸಿಎಸ್‌ಕೆ ಟ್ರೋಫಿ ಗೆಲ್ಲುವುದರೊಂದಿಗೆ ಧೋನಿ ಗುಡ್‌ ಬೈ ಹೇಳಲಿ ಎಂದು ಬಯಸಿದ್ದರು. ಈ ಎಲ್ಲಾ ಕನಸುಗಳು ಈಗ ನುಚ್ಚು ನೂರಾಗಿವೆ.

MS Dhoni

ಈ ಸೋಲಿನ ನಂತರ ಧೋನಿ ಸಾಕಷ್ಟು ಹತಾಶರಾಗಿದ್ದರು. ಅವನ ಕಣ್ಣುಗಳು ತೇವವಾಗಿರುವುದು ಸಹಾ ಕಾಣಿಸಿತ್ತು. ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಧೋನಿ ಆರ್​ಸಿಬಿ ಆಟಗಾರರಿಗೆ ಹಸ್ತಲಾಘವ ನೀಡದೇ ಡ್ರೆಸ್ಸಿಂಗ್ ರೂಮ್​ಗೆ ತೆರಳಿದ್ದರು ಎಂಬ ವಿವಾದ ಎಬ್ಬಿದೆ. ಇನ್ನು ಮರುದಿನ ಮೇ 19 ರ ಭಾನುವಾರದಂದು ಧೋನಿ ಮತ್ತು ಅವರ ಕುಟುಂಬ ಬೆಂಗಳೂರಿನಿಂದ ರಾಂಚಿಗೆ ಮರಳಿದ್ದಾರೆ.

ಇದೀಗ ಧೋನಿ ಬೈಕ್ ರೈಡಿಂಗ್ ಮಾಡುವ ವೀಡಿಯೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಧೋನಿ ರಾಂಚಿಯ ಬೀದಿಗಳಲ್ಲಿ ತಮ್ಮ ವಿಂಟೇಜ್ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ವೀಡಿಯೋದಲ್ಲಿ ಯಮಹಾ ಬೈಕ್‌ನಲ್ಲಿ ಧೋನಿ ಫಾರ್ಮ್‌ಹೌಸ್‌ಗೆ ಮರಳುತ್ತಿರುವುದನ್ನು ನೋಡಬಹುದು. ಇದನ್ನು ಅಭಿಮಾನಿಯೊಬ್ಬ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೀಗ ವೈರಲ್ ಆಗಿದೆ.

MS Dhoni

ಧೋನಿ ಅವರ ವಾಹನಗಳ ಕ್ರೇಜ್ ಹೆಚ್ಚು ಎಂಬುದು ಎಲ್ಲರಿಗೂ ಗೂತ್ತಿರುವ ವಿಷಯ. ಕ್ರಿಕೆಟ್​ನಷ್ಟೇ ಧೋನಿ ಅವರು ಕಾರು-ಬೈಕ್ ಗಳನ್ನು ಪ್ರೀತಿಸುತ್ತಾರೆ. ಅವರ ಬಳಿಯಿರುವ ಕಾರು ಮತ್ತು ಬೈಕ್ ಸಂಗ್ರಹ ಎಂತವರಿಗೂ ಅಚ್ಚರಿ ಮೂಡಿಸುತ್ತದೆ ಎಂಬುವುದರಲ್ಲಿ ಅನುಮಾನವಿಲ್ಲ. ಧೋನಿ2020 ರಲ್ಲಿ ಎಲ್ಲಾ ರೀತಿಯ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಅಪರೂಪದ ಹಳೆಯ ಕಾರು ಮತ್ತು ಬೈಕ್ ಗಳನ್ನು ಸೇರಿಸುವ ಮೂಲಕ ತಮ್ಮ ಕ್ಲಾಸಿಕ್ ಕಾರ್ ಗ್ಯಾರೇಜ್ ಅನ್ನು ವಿಸ್ತರಿಸಿದರು.

ಮಹೇಂದ್ರ ಸಿಂಗ್ ಧೋನಿ ಅವರು ಈ ಬಾರಿ ಯಮಹಾ ಆರ್‌ಡಿ350 (Yamaha RD350) ಬೈಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಯಮಹಾ ಆರ್‌ಡಿ350 ಬೈಕ್ ಗಳಿಗೆ ಎಂಎಸ್ ಧೋನಿಯವರಿಗೆ ಅಚ್ಚುಮೆಚ್ಚು ಆಗಿದೆ. ಇದಕ್ಕೆ ಸಾಕ್ಷಿ ಈಗಾಗಲೇ ಅವರ ಸಂಗ್ರಹದಲ್ಲಿ ಹಲವಾರು ಆರ್‌ಡಿ ಬೈಕುಗಳನ್ನು ಹೊಂದಿದ್ದಾರೆ. ಅವರ ಯೌವನದಿಂದ ಅವರ ಮೊಟ್ಟಮೊದಲ ಮೋಟಾರ್‌ಸೈಕಲ್ ಕೆಂಪು-ಬಣ್ಣದ ಯಮಹಾ ಆರ್‌ಡಿ 350 ಆಗಿತ್ತು. ಈಗ, ಧೋನಿ ಅವರ ಸಂಗ್ರಹಕ್ಕಾಗಿ ಮತ್ತೊಂದು ಯಮಹಾ ಆರ್‌ಡಿ 350 ಸೇರ್ಪಡೆಯಾಗಿದೆ.

MS Dhoni

ಚಂಡೀಗಢ ಮೂಲದ "ಬ್ಲೂ ಸ್ಮೋಕ್ ಕಸ್ಟಮ್ಸ್" ನಿಂದ ಕಸ್ಟಮೈಸ್ ಮಾಡಲಾದ ಕಸ್ಟಮ್ ಹಸಿರು ಬಣ್ಣದ ಬೈಕ್ ಆಗಿದೆ. ಧೋನಿ ಖರೀದಿಸಿದ ಕಸ್ಟಮೈಸ್ ಮಾಡಲಾದ ಈ ಯಮಹಾ ಆರ್‌ಡಿ 350 ಬೈಕ್ ಫ್ಯೂಯಲ್ ಟ್ಯಾಂಕ್, ಸೈಡ್ ಬಾಡಿ ಪ್ಯಾನೆಲ್‌ಗಳು, ಹೆಡ್‌ಲ್ಯಾಂಪ್ ಕೌಲ್ ಮತ್ತು ಮುಂಭಾಗದ ಟೆಲಿಸ್ಕೋಪಿಕ್ ಫೋರ್ಕ್‌ಗಳ ಮೇಲಿನ ಭಾಗವನ್ನು ಒಳಗೊಂಡಿರುವ ಕಸ್ಟಮ್ ಬ್ರಿಟಿಷ್ ಹಸಿರು ಬಣ್ಣದ ಕೆಲಸವನ್ನು ಹೊಂದಿದೆ.

ಈ ಹಸಿರು ಯಮಹಾ ಆರ್‌ಡಿ 350 ಬೈಕಿನ ಫ್ಯೂಯಲ್ ಟ್ಯಾಂಕ್ ಅನ್ನು ಅಲಂಕರಿಸುವುದು "ರಾಜ್‌ದೂತ್" ಲೋಗೋ, ಆದರೆ ಸೈಡ್ ಬಾಡಿ ಪ್ಯಾನೆಲ್‌ಗಳು "350 ಟಾರ್ಕ್ ಇಂಡಕ್ಷನ್" ಲೊಗೋವನ್ನು ಹೊಂದಿವೆ. ಈ ರಿಸ್ಟೂರ್ ಮಾಡಲಾದ ಬೈಕ್ ಕ್ರೋಮ್-ಫಿನಿಶ್ಡ್ ಫ್ರಂಟ್ ಮತ್ತು ರಿಯರ್ ಫೆಂಡರ್‌ಗಳು, ರೌಂಡ್ ಅಂಬರ್ ಟರ್ನ್ ಇಂಡಿಕೇಟರ್ ಹೌಸಿಂಗ್‌ಗಳು, ಟ್ವಿನ್ ಎಕ್ಸಾಸ್ಟ್ ಪೈಪ್‌ಗಳು ಮತ್ತು ಟ್ಯೂಬ್ಯುಲರ್ ಪಿಲಿಯನ್ ಗ್ರಾಬ್ ರೈಲ್ ಅನ್ನು ಒಳಗೊಂಡಿದೆ.

ಈ ಯಮಹಾ ಆರ್‌ಡಿ350 ಎಲ್‍‍ಸಿ ಬೈಕಿನಲ್ಲಿ 347cc ಪ್ಯಾರಲಲ್ ಟ್ವಿನ್, ಟು-ಸ್ಟ್ರೋಕ್ ಮೋಟಾರ್‌ ಅನ್ನು ಹೊಂದಿದೆ. ಈ ಎಂಜಿನ್ 49 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಒಂದೇ ಆಗಿರುವಾಗ, ಕಾರ್ಯಕ್ಷಮತೆ ಮತ್ತು ನಿರ್ವಹಣೆಯನ್ನು ಆಫ್ಟರ್‌ಮಾರ್ಕೆಟ್ ಭಾಗಗಳು ಮತ್ತು ಘಟಕಗಳ ಶ್ರೇಣಿಯೊಂದಿಗೆ ಹೆಚ್ಚಿಸಲಾಗಿದೆ.

More from DriveSpark

Article Published On: Tuesday, May 21, 2024, 16:57 [IST]
English summary
Ms dhoni riding yamaha rd350 bike after ipl viral video details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+