ಪತಿ ಅಜಿತ್​​ ಹುಟ್ಟು ಹಬ್ಬಕ್ಕೆ ಪತ್ನಿ ಶಾಲಿನಿ ಕೊಟ್ಟ ದುಬಾರಿ ಗಿಫ್ಟ್: ಬೈಕ್ ಬೆಲೆ ಕೇಳಿ ನೆಟ್ಟಿಗರು ಶಾಕ್!

ಸಿನಿಮಾ ರಂಗ ಎಂಬ ಕಲರ್ ಫುಲ್ ದುನಿಯಾದಲ್ಲಿ ಇರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳಿವೆ. ಇದರಲ್ಲಿ ಕೆಲವು ನಟರಿಗೆ ಕಾರುಗಳಿಗಿಂತ ಬೈಕ್‌ಗಳ ಮೇಲೆ ಹೆಚ್ಚು ಕ್ರೇಜ್ ಹೊಂದಿರುತ್ತಾರೆ. ಇದೇ ರೀತಿ ತಮಿಳು ಚಲನಚಿತ್ರ ನಟ ಅಜಿತ್ ಕುಮಾರ್ (Ajith Kumar) ಅವರು ದೊಡ್ಡ ಬೈಕ್ ಲವರ್ ಆಗಿದ್ದಾರೆ. ಕಾಲಿವುಡ್‌ನಲ್ಲಿ ಇವರು 'ತಲಾ' ಎಂದೇ ಖ್ಯಾತಿ ಪಡೆದವರು.

ನಟ ಈ ವರ್ಷ ತನ್ನ 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷ, ನಟ ಅಜಿತ್ ಕುಮಾರ್ ಅವರ ಪತ್ನಿ ಶಾಲಿನಿಯು ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಶಾಲಿನಿ ಅವರು ಬರ್ತ್ ಡೇ ಗಿಫ್ಟ್ ಆಗಿ ನೀಡಿರುವುದು ಹೊಚ್ಚಹೊಸ ಡುಕಾಟಿ ಮಲ್ಟಿಸ್ಟ್ರಾಡಾ V4 (Ducati Multistrada V4) ಅಡ್ವೆಂಚರ್ ಟೂರರ್ ಬೈಕ್ ಆಗಿದೆ. ನಟನ ಹೊಸ ಡುಕಾಟಿಯ ಚಿತ್ರಗಳು ಈಗಾಗಲೇ ವಿವಿಧ ಸೋಶೀಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

Actor Ajith Kumar

ನಟಿಯೂ ಆಗಿದ್ದ ಅವರ ಪತ್ನಿ ಶಾಲಿನಿ ಅವರ ಹುಟ್ಟುಹಬ್ಬದಂದು ನಟನಿಗೆ ವಿಶೇಷ ಪಾರ್ಟಿಯನ್ನು ಏರ್ಪಡಿಸಿ ಆ ಪಾರ್ಟಿಯಲ್ಲಿ ಅವರಿಗೆ ಬೈಕ್ ಉಡುಗೊರೆಯಾಗಿ ನೀಡಲಾಗಿದೆ. ಅನೇಕ ಅಜಿತ್ ಅಭಿಮಾನಿ ಸೋಶೀಯಲ್ ಮೀಡಿಯಾಗಳಲ್ಲಿ ಪೇಜ್ ಗಳಲ್ಲಿ ಈ ಹೊಸ ಬೈಕಿನ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದೆ. ಅಜಿತ್ ಕುಮಾರ್ ಒಬ್ಬ ಹಾರ್ಡ್‌ಕೋರ್ ಬೈಕರ್ ಮತ್ತು ತನ್ನ ಮೋಟಾರ್‌ಸೈಕಲ್‌ನಲ್ಲಿ ಲಾಂಗ್ ರೈಡ್ ಹೋಗುತ್ತಾರೆ.

1993ರಲ್ಲಿ ಹೀರೋ ಆಗಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಅವರು, ಹಿಂದಿ, ತೆಲುಗು ಭಾಷೆಯ ತಲಾ ಒಂದೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಮಾತ್ರವಲ್ಲದೇ ಹಲವು ಭಾಷೆಗಳಲ್ಲಿ ಖ್ಯಾತಿ ಪಡೆದಿರುವ ನಟ ಅಜಿತ್ ಕುಮಾರ್​ 5ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಯಸ್ಸಿನಲ್ಲಿಯೂ ಟಾಲಿವುಡ್​ನಲ್ಲಿ ಹವಾ ಸೃಷ್ಟಿಸುತ್ತಿದ್ದಾರೆ ನಟ ಅಜಿತ್​. ಇನ್ನು ಕನ್ನಡದಲ್ಲಿ ಅವರ ಡಬ್ಬಿಂಗ್ ಚಿತ್ರಗಳು ಬರುತ್ತಿದೆ. ನಟ ಅಜಿತ್ ಅವರಿಗೆ ಕರ್ನಾಟಕದಲ್ಲೂ ದೊಡ್ಡ ಅಭಿಮಾನಿ ಬಳಗವಿದೆ.

Actor Ajith Kumar

ನಟನಿಗೆ ಗಿಫ್ಟ್ ಸಿಕ್ಕ ಡುಕಾಟಿ ಮಲ್ಟಿಸ್ಟ್ರಾಡಾ V4 ಬೈಕ್ ಬಗ್ಗೆ ಹೇಳುವುದಾದರೆ, ಡುಕಾಟಿ ಮಲ್ಟಿಸ್ಟ್ರಾಡಾ ಹೆಚ್ಚಿನ ಪರ್ಫಾಮೆನ್ಸ್ ಅಡ್ವೆಂಚರ್ ಟೂರಿಂಗ್ ಬೈಕ್ ಆಗಿದೆ. ಇದು ಮಲ್ಟಿಸ್ಟ್ರಾಡಾ V4 ನಂತೆ ಕಾಣುತ್ತದೆ, ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 21.48 ಲಕ್ಷವಾಗಿದೆ. ಡುಕಾಟಿಯ ಮಲ್ಟಿಸ್ಟ್ರಾಡಾ ರೇಂಜ್ ಬೈಕುಗಳು ಅಡ್ವೆಂಚರ್ ಟೂರ್ ಬೈಕುಗಳಾಗಿವೆ. ಡುಕಾಟಿ ಭಾರತದಲ್ಲಿ ಮಲ್ಟಿಸ್ಟ್ರಾಡಾವನ್ನು V2, V2 S, V4 ಮತ್ತು V4 S ರೂಪಾಂತರಗಳನ್ನು ನೀಡುತ್ತದೆ.

ನಟ ಅಜಿತ್ ಕುಮಾರ್‌ಗೆ ಉಡುಗೊರೆಯಾಗಿ ನೀಡಲಾದ ಮಲ್ಟಿಸ್ಟ್ರಾಡಾ V4 ರೂಪಾಂತರವಾಗಿದೆ. ಮಲ್ಟಿಸ್ಟ್ರಾಡಾ V4 ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ 50 mm ಅಪ್ ಸೈಡ್ ಫೋರ್ಕ್ ಮತ್ತು ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಅನ್ನು ಪಡೆಯುತ್ತದೆ. ಇದು ಕಾರ್ನರ್ ಮಾಡುವ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS), ವೀಲಿ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್‌ಗಳನ್ನು ನಿರ್ವಹಿಸಲು ಡುಕಾಟಿಯ ಇತ್ತೀಚಿನ ಎಲೆಕ್ಟ್ರಾನಿಕ್ಸ್ ಸಿಸ್ಟಂ ಅನ್ನು ಪಡೆಯುತ್ತದೆ.

Actor Ajith Kumar

ಡುಕಾಟಿ ಮಲ್ಟಿಸ್ಟ್ರಾಡಾ V4 ಅಡ್ವೆಂಚರ್ ಟೂರರ್ ಬೈಕ್ ಟ್ರಾವೆಲ್, ಎಂಡ್ಯೂರೋ, ಸ್ಪೋರ್ಟ್ ಮತ್ತು ಅರ್ಬನ್ ಎಂಬ ನಾಲ್ಕು ರೈಡ್ ಮೋಡ್‌ಗಳನ್ನು ಹೊಂದಿವೆ. ಈ ಪ್ರತಿಯೊಂದು ಮೋಡ್‌ಗಳು ಬೈಕ್‌ನ ಎಂಜಿನ್ ಔಟ್‌ಪುಟ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಎಬಿಎಸ್ ಸೆಟ್ಟಿಂಗ್‌ಗಳನ್ನು ರೈಡಿಂಗ್ ಶೈಲಿಗೆ ತಕ್ಕಂತೆ ಬದಲಾಯಿಬಹುದು. ಈ ಬೈಕ್ 1,158 cc, V4 ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 170 Ps ಮತ್ತು 125 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅಜಿತ್ ಅವರ ಸಂಗ್ರಹದಲ್ಲಿರುವ ಅಡ್ವೆಂಚರ್ ಟೂರಿಂಗ್ ಮೋಟಾರ್ ಸೈಕಲ್ ಇದೊಂದೇ ಅಲ್ಲ. ಅವರು BMW R1250 GS ಜೊತೆಗೆ ಅನೇಕ ಇತರ ಬೈಕ್ ಗಳನ್ನು ಹೊಂದಿದ್ದಾರೆ. ಅವರು ಇತ್ತೀಚೆಗೆ ವೀನಸ್ ಮೋಟಾರ್ ಸೈಕಲ್ ಟೂರ್ಸ್ ಎಂಬ ಮೋಟಾರ್ ಸೈಕಲ್ ಟೂರಿಂಗ್ ಕಂಪನಿಯನ್ನು ಪ್ರಾರಂಭಿಸಿದರು. ನತ ಅಜಿತ್ ಕುಮಾರ್ ಅವರ ಈ ಹೊಸ ಉದ್ಯಮದ ಮೂಲಕ ಪ್ರವಾಸಗಳನ್ನು ಏರ್ಪಡಿಸುತ್ತಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 2, 2024, 13:36 [IST]
English summary
Actor ajith kumars wife gifts ducati multistrada bike details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+