ಯಾವ ಹೀರೋಗಳಿಗೂ ಕಮ್ಮಿಯಿಲ್ಲ.. ದುಬಾರಿ ಬೆಲೆಯ ಡುಕಾಟಿ ಬೈಕ್ ಖರೀದಿಸಿದ ಕನ್ನಡದ ನಟಿ ಡೈಸಿ ಬೋಪಣ್ಣ
ಗಾಳಿಪಟ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿಯಾಗಿ ನಡೆಸುವ ಮೂಲಕ ನಟಿ ಡೈಸಿ ಬೋಪಣ್ಣ (Daisy Bopanna) ಭಾರೀ ಜನಪ್ರಿಯತೆಯನ್ನು ಗಳಿಸಿದ್ದರು. ಕೊಡಗು ಮೂಲದ ಈ ನಟಿ, ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾದಲ್ಲೂ ಅಭಿನಯಿಸಿದ್ದಾರೆ.
ಸಾಮನ್ಯವಾಗಿ ನಟರು ಹೆಚ್ಚಿನ ಹಣವನ್ನು ಕೊಟ್ಟು ಐಷಾರಾಮಿ ಬೈಕ್‌ಗಳನ್ನು ಖರೀದಿಸುವುದನ್ನು ನೋಡಿದ್ದೇವೆ. ಆದರೆ, ಕೆಲವು ನಟಿಯರಿಗೂ ಮೋಟಾರ್‌ಸೈಕಲ್ ಗಳ ಬಗ್ಗೆ ವಿಶೇಷವಾದ ಆಸಕ್ತಿ ಇರುತ್ತದೆ. ಅದಕ್ಕೆ ಕನ್ನಡದ ನಟಿ ಡೈಸಿ ಬೋಪಣ್ಣ ಸಹ ಹೊರತಾಗಿಲ್ಲ. ಇತ್ತೀಚೆಗೆ, ಹೊಚ್ಚ ಹೊಸ ಡುಕಾಟಿ ಮಾನ್‌ಸ್ಟರ್ (Ducati Monster) ಬೈಕ್‌ನ್ನು ಅವರು ಖರೀದಿಸಿದ್ದಾರೆ.

ಈ ಬಗ್ಗೆ ನಟಿ ಡೈಸಿ ಬೋಪಣ್ಣ ಅವರೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಯಲ್ಲಿ ನೂತನ ಬೈಕ್‌ನ್ನು ವಿತರಣೆ ಪಡೆಯುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಹೊಸ ಮೋಟಾರ್‌ಸೈಕಲ್ ಕುರಿತು 'ಅಧಿಕೃತವಾಗಿ ಈಗ ನನ್ನ ಮಗು. ಅವಳಿಗೆ ಆನಂದಿ ಎಂದು ಹೆಸರಿಟ್ಟಿದ್ದೇನೆ. ಸ್ವರ್ಗಕ್ಕೆ ನನ್ನ ದಾರಿ.. ಅತ್ಯುತ್ತಮ ಬೈಕ್, ಕ್ರೇಜಿ ಸ್ವೀಡ್, ಹೆಚ್ಚು ಆರಾಮದಾಯಕ' ಎಂದು ಶೀರ್ಷಿಕೆ ಬರೆದಿದ್ದಾರೆ.
ಸದ್ಯ, ನಟಿ ಡೈಸಿ ಬೋಪಣ್ಣ (Daisy Bopanna) ಅವರು, ಡುಕಾಟಿ ಮಾನ್‌ಸ್ಟರ್ ಮೋಟಾರ್‌ಸೈಕಲ್‍ನ ಯಾವ ರೂಪಾಂತರವನ್ನು ಖರೀದಿಸಿದ್ದಾರೆ ಎನ್ನುವುದರ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ ಈ ಬೈಕ್, ರೂಪಾಂತರಗಳಿಗೆ ಅನುಗುಣವಾಗಿ ರೂ.12.95 ಲಕ್ಷದಿಂದ ರೂ.15.95 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಡಾರ್ಕ್ ಸ್ಟೆಲ್ತ್ ಮತ್ತು ಏವಿಯೇಟರ್ ಸಿಲ್ವ್ ಸೇರಿದಂತೆ ಆಕರ್ಷಕ ಬಣ್ಣಗಳೊಂದಿಗೂ ದೊರೆಯುತ್ತದೆ.

ಈ ಡುಕಾಟಿ ಮಾನ್‌ಸ್ಟರ್ ಬೈಕ್, 937 ಸಿಸಿ ಟ್ವಿನ್ ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಎಂಜಿನ್ ಹೊಂದಿದ್ದು, 98 ಪಿಎಸ್ ಗರಿಷ್ಠ ಪವರ್ (ಶಕ್ತಿ) ಹಾಗೂ 111 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 6 - ಸ್ವೀಡ್ ಗೇರ್ ಬಾಕ್ಸ್ ಒಳಗೊಂಡಿದ್ದು, 18.9 ಕೆಎಂಪಿಎಲ್ ವರೆಗೆ ಮೈಲೇಜ್ ನೀಡಬಲ್ಲದು.
ನೂತನ ಡುಕಾಟಿ ಮಾನ್‌ಸ್ಟರ್ (Ducati Monster) ಬೈಕ್ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 4.3 - ಇಂಚಿನ ಟಿಎಫ್‌ಟಿ ಕನ್ಸೋಲ್, ಕ್ವಿಕ್‌ಶಿಫ್ಟರ್, ಡೈನಾಮಿಕ್ ಟರ್ನ್ ಇಂಡಿಕೇಟರ್, ಎಲ್ಇಡಿ ಲೈಟಿಂಗ್ ಸೆಟಪ್, ಯುಎಸ್‌ಬಿ ಚಾರ್ಜಿಂಗ್ ಸಾಕೆಟ್ ಅನ್ನು ಒಳಗೊಂಡಿದ್ದು, ಅತ್ಯಾಧುನಿಕ ರೈಡಿಂಗ್ ಮೋಡ್ ಆಯ್ಕೆಗಳನ್ನೂ ಪಡೆದಿದೆ.
ಈ ಮೋಟಾರ್‌ಸೈಕಲ್ ಫ್ರಂಟ್ (ಮುಂಭಾಗ) ಯುಎಸ್‌ಡಿ ಫೋರ್ಕ್ & ರೇರ್ (ಹಿಂಭಾಗ) ಪ್ರಿಲೋಡ್ ಅಡ್ಜಸ್ಟ್ಏಬಲ್ ಲಿಂಕ್ಡ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಸುರಕ್ಷತೆಗಾಗಿ ಡಬಲ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. 17 - ಇಂಚಿನ ಅಲಾಯ್ ವೀಲ್ಸ್ ಮತ್ತು ಟ್ಯೂಬ್ ಲೆಸ್ ಟೈಯರ್ಸ್ ಅನ್ನು ಹೊಂದಿದ್ದು, 186 ಕೆಜಿ ತೂಕವಿದೆ. ಡುಕಾಟಿ ಮಾನ್‌ಸ್ಟರ್ ಬೈಕ್‌ಗೆ ಕವಾಸಕಿ ಝಡ್900 (Kawasaki Z900) ಪ್ರಬಲ ಪ್ರತಿಸ್ಪರ್ಧಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








