ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

ಡೀಸೆಲ್ ಕಾರುಗಳು ಈ ಹಿಂದೆ ಅತಿಯಾದ ಹೊಗೆ ಮತ್ತು ಸದ್ದು ಮಾಡುತ್ತವೆ ಎನ್ನುವ ಕಾರಣಕ್ಕೆ ಬಹುತೇಕರು ಖರೀದಿಗೆ ಹಿಂದೇಟು ಹಾಕುತ್ತಿದ್ರು.

By Rahul Ts

ಡೀಸೆಲ್ ಕಾರುಗಳು ಈ ಹಿಂದೆ ಅತಿಯಾದ ಹೊಗೆ ಮತ್ತು ಸದ್ದು ಮಾಡುತ್ತವೆ ಎನ್ನುವ ಕಾರಣಕ್ಕೆ ಬಹುತೇಕರು ಖರೀದಿಗೆ ಹಿಂದೇಟು ಹಾಕುತ್ತಿದ್ರು. ಆದ್ರೆ ಇತ್ತೀಚಿನ ದಿನಗಳಲ್ಲಿ ಡೀಸೆಲ್ ಕಾರುಗಳು ಹಾಟ್ ಕೇಕ್‌ನಂತೆ ಮಾರಾಟ ಗೊಳ್ಳುತ್ತಿದ್ದು, ಡೀಸೆಲ್ ಎಂಜಿನ್ ಅಭಿವೃದ್ದಿಯಲ್ಲಿನ ಸುಧಾರಿತ ತಂತ್ರಜ್ಞಾನಗಳು ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿವೆ.

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

ಡೀಸೆಲ್ ಕಾರು‍‍ಗಳು ಕಡಿಮೆ ಆರ್‍‍ಪಿಎಂ ಅನ್ನು ಉತ್ಪಾದಿಸುವ ಸಲುವಾಗಿ ತಮ್ಮ ಅಸಾಧಾರಣ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ವಾಣಿಜ್ಯ ಸಾರಿಗೆ ವಿಭಾಗದಲ್ಲಿ ಅತಿಹೆಚ್ಚು ಜನಪ್ರಿಯವಾಗಿದ್ದರೂ ಇನ್ನು ಕೆಲವರ ಮನಸ್ಸಿನಲ್ಲಿ ಡೀಸೆಲ್ ಕಾರುಗಳ ಖರೀದಿಯು ಹಿತವಲ್ಲ ಎನ್ನುವ ಭಾವನೆಯಿದೆ. ಹೀಗಾಗಿ ಇಂದಿನ ಲೇಖನದಲ್ಲಿ ಡೀಸೆಲ್ ಕಾರುಗಳ ಖರೀದಿಯಿಂದಾಗುವ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಚರ್ಚೆ ಮಾಡಿದ್ದೇವೆ.

ಅನುಕೂಲಗಳು

1. ಉತ್ತಮ ಮೈಲೇಜ್

ಗ್ಯಾಸೊಲಿನ್ ಆಧಾರಿತ ವಾಹನಗಳಿಗಿಂತ ಡೀಸೆಲ್ ವಾಹನಗಳು ಶೇಕಡಾ 20 ರಿಂದ 30ರಷ್ಟು ಉತ್ತಮವಾದ ಇಂಧನ ಕಾರ್ಯಕ್ಷಮತೆ ಹೊಂದಿರುತ್ತವೆ. ಹೀಗಾಗಿ ಡೀಸೆಲ್ ವಾಹನಗಳು ಗ್ಯಾಸೊಲಿನ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎನ್ನಬಹುದು.

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

ಇಂಧನ ಆರ್ಥಿಕ ಕಾರ್ಯಕ್ಷಮತೆಗೆ ಬಂದಾಗ ಡೀಸೆಲ್ ಮಾದರಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಗಮನಿಸಬೇಕು. ಆದರೆ ಮುಖ್ಯವಾದ ಅಂಶವೆಂದರೇ. ಗ್ಯಾಸೋಲಿನ್ ಎಂಜಿನ್‍ಗಳನ್ನು ಹೋಲಿಸಿದರೆ ಡೀಸೆಲ್ ಇಂಜಿನ್‍ಗಳು ಉತ್ತಮ ಇಂಧನ ಮಿತವ್ಯಯವನ್ನು ನೀಡುತ್ತವೆ.

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

2. ಇಂಧನ ಕಾರ್ಯಕ್ಷಮತೆ

ಡೀಸೆಲ್ ವಾಹನಗಳು ಮಾಲೀಕರಿಗೆ ಅದರಲ್ಲಿಯೂ ವಿಶೇಷವಾಗಿ ಧೀರ್ಘಾವಧಿ ಪ್ರಯಾಣವನ್ನು ಬಯಸುವ ಗ್ರಾಹಕರಿಗೆ ಹೆಚ್ಚು ಸಹಾಯಕವಾಗಿದೆ. ಏಕೆಂದರೆ ಗ್ಯಾಸೊಲಿನ್ ಎಂಜಿನ್‍‍ಗಳಿಗೆ ಹೋಲಿಸಿದರೆ ಡೀಸೆಲ್ ಎಂಜಿನ್‍‍ಗಳು ಶೇಕಡಾ 30ರಷ್ಟು ಉತ್ತಮವಾಗಿ ಕಾರ್ಯವನ್ನು ನಿರ್ವಹಿಸುತ್ತದೆ.

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

ಜೊತೆಗೆ ಬಹುತೇಕರು ತಮ್ಮ ಖರ್ಚನ್ನು ಮಿತಗೊಳಿಸಲು ಹೈಬ್ರಿಡ್ ಅಥವಾ ಇಂಧನ-ಸಮಾರ್ಥ ಕಾಂಪ್ಯಾಕ್ಟ್‌ಗಳ ಕಡೆಗೆ ಗಮನ ಕೊಡುತ್ತಾರೆ. ಅಂತವರಿಗೆ ಡೀಸೆಲ್ ಎಂಜಿನ್ ಕಾರುಗಳು ಸಹಾಯಕವಾಗಿದೆ.

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

3. ಇಗ್ನಿಷನ್ ಟ್ಯೂನ್ ಅಪ್ ಮಾಡುವ ಅಗತ್ಯವಿರುವುದಿಲ್ಲ

ಡೀಸೆಲ್ ಆಧಾರಿತ ವಾಹನಳು ಸ್ಪಾರ್ಕ್ ಪ್ಲಗ್‍‍ಗಳನ್ನು ಅಥವಾ ವಿತರಕರನ್ನು ಹೊಂದಿರುವುದಿಲ್ಲ. ಆದ್ದರಿಂದ ಅವುಗಳಿಗೆ ಇಗ್ನಿಷನ್ ಟ್ಯೂನ್ ಅಪ್ ಮಾಡುವ ಅಗತ್ಯವಿರುವುದಿಲ್ಲ. ಇನ್ನು ತಮ್ಮ ವಾಹನಗಳು ನಿಯಮಿತವಾಗಿ ಪರೀಕ್ಷಿಸಲು ಇಷ್ಟಪಡದವರಿಗೆ ಇದು ಒಂದು ಪ್ರಯೋಜನಕರವಾಗಿದೆ.

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

4. ಹೆಚ್ಚಿನ ಒತ್ತಡವನ್ನು ತಡೆಹಾಕುತ್ತದೆ

ಗ್ಯಾಸೊಲಿನ್ ವಾಹನಗಳಿಗೆ ಹೋಲಿಸಿದರೆ ಡೀಸೆಲ್ ವಾಹನಗಳು ಕಡೆಮೆ ವೇಗದಲ್ಲಿ ಚಲಿಸುತ್ತವೆ. ಆದ್ರೆ ವಾಹನವು ಚಲಿಸಬೇಕಾದರೆ ಟಾರ್ಕ್‍ ಎಂಬುದು ಮುಖ್ಯವಾದದಾಗಿದ್ದು, ಡೀಸೆಲ್ ವಾಹನಗಳು ಟಾರ್ಕ್ ಅನ್ನು ಉತ್ಪಾದಿಸುವದರಲ್ಲಿ ಪ್ರಾವಿಣ್ಯವನ್ನು ಪಡೆದಿರುತ್ತದೆ. ಆದ್ದರಿಂದ ಇವು ಇದು ವಾಹನದಲ್ಲಿ ಹೆಚ್ಚು ತೂಕವಿರುವ ವಸ್ತುಗಳನ್ನು ಸರಬರಾಜು ಮಾಡಲು ಸುಲಭವಾಗಿಸುತ್ತದೆ.

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

ಅನಾನುಕೂಲತೆಗಳು

1. ದುಬಾರಿ ಬೆಲೆ

ಈ ಹಿಂದೆ ಗ್ಯಾಸೊಲಿನ್ ಅನಿಲಕ್ಕಿಂತ ಡೀಸೆಲ್‍‍ನ ಬೆಲೆ ಕಡಿಮೆಯೇ ಇತ್ತು ನಂತರ ಎರಡು ಒಂದೇ ಬೆಲೆಗೆ ಮಾರಾಟವಾಗುತ್ತಿತ್ತು. ಯಾವಾಗ ಜನರು ಡೀಸೆಲ್ ಅನ್ನು ವಾಣಿಜ್ಯ ವಾಹನಗಳಲ್ಲಿ, ಮನೆಯಲ್ಲಿ ಮತ್ತು ಕೈಗಾರಿಕಾ ಕಾರ್ಯಗಳಿಗೆ ಬಳಕೆಗೆ ಹೆಚ್ಚಿತೊ ಅಂದಿನಿಂದ ಡೀಸೆಲ್‍‍ನ ಬೆಲೆಯು ಹೆಚ್ಚಾಗಿತ್ತು. ಏಕೆಂದರೆ ನಮಗೆಲ್ಲಾ ತಿಳಿದಿರುವ ಹಾಗೇ ಬೇಡಿಕೆಯು ಎಲ್ಲಿ ಹೆಚ್ಚಿರುತ್ತದೆಯೋ ಅದಕ್ಕೆ ಸಂಬಂಧಿಸಿದ ವಸ್ತುಗಳ ಬೆಲೆಯು ಕೂಡಾ ಹೆಚ್ಚಿರುತ್ತದೆ.

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

2. ಕಡಿಮೆ ಸ್ಪೀಡ್

ಡೀಸೆಲ್ ಕಾರುಗಳು ಶಾಖವನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಗ್ಯಾಸೊಲಿನ್ ಎಂಜಿನ್‍‍ಗಳು ಶಾಖವನ್ನು ಶಕ್ತಿಯನ್ನಾಗಿ ಪರಿವರ್ತಿಸಿದರೂ ಟೈಲ್‍‍ಪೈಪ್‍‍ನಿಂದ ಹೊರ ಹಾಕುತ್ತದೆ. ಆದ್ದರಿಂದ ಸ್ಪೀಡ್ ರೈಡಿಂಗ್ ಅನುಭವವನ್ನು ಇಚ್ಛಿಸುವವರಿಗೆ ಡೀಸೆಲ್ ಎಂಜಿನ್‍‍ಗಳು ನಿರಾಸಕ್ತಿಯನ್ನು ನೀಡುತ್ತದೆ.

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

3. ನಿಯಮಿತ ನಿರ್ವಹಣೆ ಅತ್ಯಗತ್ಯ

ಡೀಸೆಲ್ ಕಾರುಗಲ್ಲಿನ ಪ್ರಮುಖ ಅನಾನುಕೂಲವೆಂದರೆ, ಇವುಗಳು ಸ್ಪಾರ್ಕ್ ಪ್ಲಗ್‍‍ಗಳನ್ನು ಪಡೆದುಕೊಂಡಿಲ್ಲದಿರುವ ಕಾರಣದಿಂದಾಗಿ ನಿಯಮಿತವಾಗಿ ಆಯಿಲ್, ಗಾಳಿ ಮತ್ತು ಇಂಧನ ಶೋಧಕಗಳನ್ನು ನೀವು ಆಗಾಗ ಬದಲಾಯಿಸಬೇಕಾಗುತ್ತದೆ.

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

4. ನಿಭಾಯಿಸುವುದು ಕಷ್ಟ

ಡೀಸೆಲ್ ಎಂಜಿನ್ ಕಾರುಗಳು ಹೆಚ್ಚಿನ ತಾಂತ್ರಿಕತೆಯನ್ನು ಪಡೆದಿರುವ ಕಾರಣದಿಂದಾಗಿ, ಅವುಗಳನ್ನು ನಿಭಾಯಿಸುವುದು ಕೂಡಾ ಕಷ್ಟವಾಗಿರುತ್ತದೆ. ಈ ದಿನಗಳಲ್ಲಿ ಒಮ್ಮೆ ಕಾರು ಕೆಟ್ಟು ನಿಂತ್ರೆ ಸಾವಿರಾರು ರೂಪಾಯಿ ಖರ್ಚು ಮಾಡಲೇಬೇಕು.

ಡೀಸೆಲ್ ಕಾರು ಖರೀದಿಯ ಅನುಕೂಲತೆ ಮತ್ತು ಅನಾನುಕೂಲತೆ ಏನು?

ಡೀಸೆಲ್ ತಂತ್ರಜ್ಞಾನದ ಕ್ಷೇತ್ರದಲ್ಲಿ ವಿಷಯಗಳನ್ನು ನಿರಂತರವಾಗಿ ಸುಧಾರಿಸಲಾಗುತ್ತಿದೆ. ಪ್ಯಾಸೆಂಜರ್ ವಾಹನಗಳು, ಟ್ರಕ್‍‍ಗಳು, ಬಸ್ ಅಲ್ಲದೆಯೇ ಕೃಷಿ ಮತ್ತು ಕೈಗಾರಿಕಾ ವಲಯದಲ್ಲೂ ಡೀಸೆಲ್ ಬಳಕೆಯು ಹೆಚ್ಚುತ್ತಿದ್ದು, ಕಡಿಮೆ ಮಟ್ಟದ ಎಮಿಷನ್‌ಗಾಗಿ ಹತ್ತಾರು ಮಾದರಿಯ ಸಂಶೋಧನೆಗಳು ನಡೆಯುತ್ತಲೇ ಇವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ನಿಯಂತ್ರಣ ತಪ್ಪಿ 20 ಅಡಿ ಹಳ್ಳಕ್ಕೆ ಬಿದ್ದ ಟಾಟಾ ನೆಕ್ಸಾನ್- ಕಾರಿನಲ್ಲಿದ್ದವರಿಗೆ ಪರಿಸ್ಥಿತಿ ಏನಾಯ್ತು ಗೊತ್ತಾ?

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ಎಎಂಟಿ ಕಾರುಗಳನ್ನು ಚಾಲನೆ ಮಾಡುವ ಮುನ್ನ ಈ ವಿಚಾರಗಳು ಗೊತ್ತಿರಲಿ...

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

Most Read Articles

Kannada
Read more on auto tips diesel car diesel
English summary
8 Advantages and Disadvantages of Diesel Cars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X