ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

Written By: Rahul TS

ಕೆಲವು ಬಾರಿ ನಾವು ಮಾಡುವ ಸಣ್ಣ-ಪುಟ್ಟ ತಪ್ಪುಗಳೇ ದೊಡ್ಡ ಪ್ರಮಾದಕ್ಕೆ ಕಾರಣವಾಗುತ್ತೆ. ಅದು ನಿಮ್ಮಿಂದಾಗಿರಬಹುದು ಅಥವ ಬೇರೆಯವರಿಂದಾಗಿರಬಹುದು ಹೀಗಾಗಿ ಈ ಕೆಳಗಿನ ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ಅಗಬಹುದಾದ ದೊಡ್ಡ ಅನಾಹುತವನ್ನು ತಡೆಯಬಹುದು.

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ಕಾರಿನ ಆರೋಗ್ಯವನ್ನು ಪರೀಕ್ಷಿಸಿ

ವಾಹನ ಚಾಲನೆ ಮುನ್ನ ನಿಮ್ಮ ವಾಹನದ ಬಗ್ಗೆ ಕೂಲಂಕುಶವಾಗಿ ಪರೀಕ್ಷಿಸಿಕೊಳ್ಳಿ. ಉದಾ: ಕಾರುಗಳ ಬ್ರೇಕ್, ಎಂಜಿನ್, ಕ್ಲಚ್, ಟೈರ್‍‍ನ ಗುಣಮಟ್ಟ ಮತ್ತು ಇನ್ನಿತರೆ ಮುಖ್ಯ ಅಂಶಗಳನ್ನು ಪರೀಕ್ಷಿಸಿ ಇಲ್ಲವಾದಲ್ಲಿ ಬೇರೊಂದು ವಾಹನದಲ್ಲಿ ಪ್ರಯಾಣ ಮಾಡುವುದು ಒಳ್ಳೆಯದು.

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ನಿಮ್ಮ ಆರೋಗ್ಯದ ಮೇಲೆಯು ಗಮನವಿರಲಿ

ಕಾರ್ ಚಾಲಾಯಿಸುವುದೆ ಎಂದರೆ ಅಷ್ಟು ಸುಲಭದ ಕೆಲವಲ್ಲ, ಕಾರ್ ಡ್ರೈವ್ ಮಾಡುವಾಗ ಚಾಲಕರು ಕೆಲವೊಮ್ಮೆ ಮಧ್ಯರಾತ್ರಿಯೂ ಕೂಡ ಕೆಲಸ ಮಾಡಿ ಹಣದಾಸೆಗೆ ದಿನವಿಡಿ ಡ್ರೈವ್ ಮಾಡುತ್ತಿರುತಾರೆ. ಇಂತಹ ಸಮಯದಲ್ಲಿ ವಿಶ್ರಾಂತಿಯಿರದೆ ಚಲಾಯಿಸಿದಲ್ಲಿ ನಿಮಗೂ ಮತ್ತು ನಿಮ್ಮ ಕಾರಿನ ಆರೋಗ್ಯವು ಕೆಡುತ್ತದೆ.

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ಸೀಟ್ ಬೆಲ್ಟ್ ಧರಿಸಿ

ಕಾರ್ ಚಾಲನೆ ವೇಳೆ ಸೀಟ್ ಬೆಲ್ಟ್ ಧರಿಸುವುದು ಮುಂದಾಗುವ ಅಪಘಾತದಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಉಪಯೋಗಿಸಲೆಬೇಕು. ಏಕೆಂದರೆ ಕೆಲವು ಭಾರಿ ಅಪಘಾತಗಳು ನಮಗೆ ತಿಳಿಯದಲೆ ಸಾಂಭವಿಸುತ್ತವೆ. ಹೀಗಾಗಿ ಸೀಟ್‍‍ಬೆಲ್ಟ್ ಧರಿಸಿ ಡ್ರೈವ್ ಮಾಡುವುದು ಉತ್ತಮ.

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ಮಧ್ಯಪಾನ ಮಾಡಿ ವಾಹನ ಚಲಾಯಿಸದಿರಿ

ಮಧ್ಯಪಾನ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಮಧ್ಯ ಸೇವಿಸಿ ವಾಹನ ಚಾಲನೆ ಮಾಡುವುದು ದುರಂತಗಳ ಮೂಲ ಕಾರಣವಾಗಿದೆ. ಹೀಗಾಗಿ ಮಧ್ಯಪಾನ ಮಾಡಿ ದಯವಿಟ್ಟು ವಾಹನ ಚಾಲನೆ ಮಾಡಲೇಬೇಡಿ.

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ಮೊಬೈಲ್ ಫೋನ್ ಬಳಸಬೇಡಿ

ಇತ್ತೀಚೆಗಿನ ವರದಿಗಳ ಪ್ರಕಾರ ವಾಹನ ಚಾಲನೆ ವೇಳೆ ಮೊಬೈಲ್ ಬಳಸಿ ಅಪಘಾತಕ್ಕೆ ತುತ್ತಾದವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ನೀವು ನಿಮ್ಮ ಮತ್ತು ನಿಮ್ಮ ಕುಟುಂಬದ ಬಗ್ಗೆ ಕಾಳಜಿವಹಿಸಿದ್ದಲ್ಲಿ ವಾಹನ ಚಾಲನೆ ವೇಳೆ ಮೊಬೈಲ್ ಬಳಸದಿರಿ.

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ಚಾಲನೆಯಲ್ಲಿ ಸ್ಪರ್ಧೆ ಬೇಡ

ಬೇರೆಯವರನ್ನು ಮೆಚ್ಚಿಸಲು ನೀವು ಯಾವುದೇ ಕಾರಣಕ್ಕೂ ಚಾಲನೆಯಲ್ಲಿ ಸ್ಪರ್ಧೆಗಿಳಿಯಬೇಡಿ. ಈ ವೇಳೆ ಅನಾಹುತಗಳೇ ಹೆಚ್ಚು. ಏಕೆಂದರೆ ನಿಮ್ಮಂತೆಯೆ ನಿಮ್ಮ ಹಿಂದಿರುವ ವಾಹನವು ಮಾಡಿದರೆ ನಿಮಗೂ ಹಾಗು ಅವರಿಗು ತೊಂದರೆ ತಪ್ಪಿದಲ್ಲ.

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ವೇಗದ ಕಾರ್ ಚಾಲನೆ ಬೇಡ

ಕಾರನ್ನು ವೇಗವಾಗಿ ಚಾಲನೆ ಮಾಡುವುದರಿಂದಲೂ ನೀವು ಆಯಾಸಕ್ಕೆ ಒಳಗಾಗುವಿರಿ. ಅಲ್ಲದೇ ಅತಿ ವೇಗವ ರಸ್ತೆ ಅಪಘಾತಕ್ಕೂ ದಾರಿತೋರುತ್ತದೆ. ಆದ್ದರಿಂದ ನಿಮ್ಮ ವೇಗವನ್ನು ನಿಯಮಿತಗೊಳಿಸಿ ವಾಹನ ಚಲಾಯಿಸಿ. ಇದು ನಿಮಗೂ ಹಾಗು ಇತರರಿಗೂ ಒಳ್ಳೆಯದು.

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ನಿಯಮಗಳನ್ನು ಅನುಸರಿಸಿ

ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ರೈಡಿಂಗ್ ಟಿಪ್ಸ್ ಅನುಸರಿಸುವುದು ಎಷ್ಟು ಮುಖ್ಯವೋ ರಸ್ತೆ ನಿಯಮಗಳನ್ನು ಕೂಡ ಅನುಸರಿಸುವುದು ಅಷ್ಟೇ ಮುಖ್ಯ. ಹೀಗಾಗಿ ಸುಖಕರ ಪ್ರಯಾಣಕ್ಕಾಗಿ ರಸ್ಥೆಯ ನಿಯಮಗಳನ್ನು ಪಾಲಿಸುವುದು ಅನಿವಾರ್ಯ.

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ರಸ್ತೆ ತಿರುವುಗಳ ಬಗ್ಗೆ ಎಚ್ಚರ

ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆ ತಿರುವುಗಳು ಹೆಚ್ಚು. ಇಂತಹ ವೇಳೆ ಸೂಚನಾ ಫಲಕಗಳನ್ನು ಗಮನಿಸುತ್ತಾ ಪ್ರಯಾಣ ಮಾಡಿ. ಹಾಗೆಯೆ ರಸ್ಥೆಗಳಲ್ಲಿ ತಿರುವುವಾಗ ಇಂಡಿಕೇಟರ್‍‍ಗಳನ್ನು ಬಳ್ಸಿರಿ ಆಗ ನಿಮ್ಮ ಹಿಂದೆ ಹಾಗು ಮುಂಬರುವ ವಾಹನಗಳು ಕೂಡ ನಿಮ್ಮ ತಿರುವಿನ ಬಗ್ಗೆ ಅರೆತಿರುತ್ತಾರೆ.

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ಶೀಘ್ರ ವಿರಾಮ ತೆಗೆದುಕೊಳ್ಳಿ

ಬಿಸಿಲಿನಲ್ಲಿ ದೀರ್ಘವಾಗಿ ಡ್ರೈವ್ ಮಾಡುವಾಗ ನಿಮ್ಮ ನಿರ್ದಿಷ್ಟ ಸ್ಥಳವನ್ನು ತಲುಪಲು ಬ್ರೇಕ್ ತೆಗೆದುಕೊಳ್ಳದೇ ನಿರಂತರವಾಗಿ ಕಾರ್ ರೈಡ್ ಮಾಡುವುದು ಬೇಡ. ಇದರಿಂದಲೂ ಕೂಡಾ ಕೆಲವೊಮ್ಮೆ ಅಪಘಾತಗಳು ಸಂಭವಿಸುವ ಸಾಧ್ಯತೆಯಿರುತ್ತದೆ.

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ಹವಾಮಾನ ಪರಿಸ್ಥಿತಿ ಅರಿತುಕೊಳ್ಳಿ

ಕೆಟ್ಟ ಹವಾಮಾನ ಪರಿಸ್ಥಿತಿಗಳಲ್ಲಿ ವಾಹನ ಚಾಲನೆ ಬೇಡವೇ ಬೇಡ. ಇಂತಹ ಸಂದರ್ಭದಲ್ಲಿ ನಿಮ್ಮ ವಾಹನ ಕೆಟ್ಟು ನಿಂತಲ್ಲಿ ರೀಪೇರಿಗಾಗಿ ಪರದಾಡುವ ಪರಿಸ್ಥಿತಿ ಬರಬಹುದು.

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು...

ಬೇಸಿಗೆಯಲ್ಲಿ ವಾಹನ ಚಾಲನೆ; ಅತ್ಯವಶ್ಯಕ 10 ಸಲಹೆಗಳು

ಸೇಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಎಎಂಟಿ ಕಾರುಗಳನ್ನು ಚಾಲನೆ ಮಾಡುವ ಮುನ್ನ ಈ ವಿಚಾರಗಳು ಗೊತ್ತಿರಲಿ..

Read more on auto tips driving tips
English summary
9 Deadly Driving Mistakes That Can Kill You — Avoid At All Costs.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark