ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

Written By:

ಆಕಸ್ಮಿಕವಾಗಿಯೋ ಇಲ್ಲವೇ ಪ್ರಕೃತಿ ವಿಕೋಪಗಳಿಂದಲೋ ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಸೇರಿಕೊಳ್ಳುವ ಸಂಭವವಿರುತ್ತದೆ. ಇದರ ಪರಿಣಾಮ ಕಾರಿನ ಎಂಜಿನ್‌ಗೆ ನೇರ ಹೊಡೆದ ಬೀಳುವುದಲ್ಲದೇ ವಿವಿಧ ರೀತಿಯ ತಾಂತ್ರಿಕ ಸಮಸ್ಯೆಗೆ ಕಾರಣವಾಗುತ್ತದೆ.

ಹೀಗಾಗಿ ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ಕಾರಿನ ಫ್ಯೂಲ್ ಟ್ಯಾಂಕ್‌ಗಳಲ್ಲಿ ನೀರು ಹೋದಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ವಹಿಸಿ ಕಾರಿನ ಎಂಜಿನ್ ಅನ್ನು ಹೇಗೆ ಸಂರಕ್ಷಣೆ ಮಾಡಬೇಕು ಎಂಬುವುದನ್ನು ತಿಳಿಸಿಕೊಡಲಿದೆ.

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಪ್ರತಿಯೊಬ್ಬ ಕಾರು ಮಾಲೀಕರು ಮಳೆಗಾಲದಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಒಳಿತು. ಯಾಕೇಂದ್ರೆ ತಗ್ಗುಪ್ರದೇಶಗಳಲ್ಲಿರುವ ಮನೆಗಳಿಗೆ ನುಗ್ಗುವ ಮಳೆ ನೀರಿನಿಂದಾಗಿ ವಾಹನಗಳ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋಗುವ ಸಾಧ್ಯತೆಗಳಿರುತ್ತವೆ. ಜೊತೆಗೆ ಇಂಧನದಲ್ಲಿ ನೀರಿನ ಕಲಬೆರಕೆ ಕೂಡಾ ಇದ್ದಿರಬಹುದು. ಇದು ನೇರವಾಗಿ ಕಾರಿನ ಎಂಜಿನ್ ಮೇಲೆ ಪರಿಣಾಮ ಬೀರುತ್ತದೆ.

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಇದರಿಂದಾಗಿ ಇಂಧನದಲ್ಲಿ ನೀರಿನ ಮಿಶ್ರಣವು ಕಾರಿನ ಎಂಜಿನ್ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಹಾಗೂ ಅವುಗಳಿಗೆ ಏನು ಪರಿಹಾರ ಎನ್ನುವ ಕುರಿತು ಇಲ್ಲಿ ಚರ್ಚಿಸಿದ್ದೇವೆ. ನೀವು ಕೂಡಾ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್‌ನಲ್ಲಿ ತಪ್ಪದೇ ಹಂಚಿಕೊಳ್ಳಿ...

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಮೊದಲು ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಆಗುವ ಪರಿಣಾಮಗಳ ಚರ್ಚೆ ಮಾಡೋಣ...

ಫ್ಯೂಲ್ ಟ್ಯಾಂಕ್‌ನಲ್ಲಿ ತುಕ್ಕು...

ಹೌದು, ನೀರು ಮತ್ತು ಇಂಧನ ಪರಸ್ಪರ ಮಿಶ್ರಣವಾದಲ್ಲಿ ನೀರು ಫ್ಯೂಲ್ ಟ್ಯಾಂಕ್‌ನ ತಳ ಸೇರುತ್ತದೆ. ಇದಕ್ಕೆ ಕಾರಣ ಇಂಧನ ಸಾಂದ್ರತೆಗಿಂತ ನೀರಿನ ಹೆಚ್ಚಿರುತ್ತದೆ. ಆಗ ಇಂಧನ ಟ್ಯಾಂಕ್ ಒಳಭಾಗವು ತುಕ್ಕು ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಇಂಜೆಕ್ಟರ್‌ಗೆ ಹೊಡೆತ

ಇಂಜೆಕ್ಟರ್ ಸಾಮರ್ಥ್ಯವು ಇಂಧನದ ಸಾಂದ್ರತೆಯನ್ನು ಅವಲಂಬಿಸಿರುತ್ತದೆ. ಇದರಿಂದ ಪೆಟ್ರೋಲ್‌ಗಿಂತ ನೀರು ಸಾಂದ್ರವಾಗಿರುವುದರಿಂದ ಇಂಜೆಕ್ಟರ್ ವಿಭಾಗದಲ್ಲಿ ಇದು ಒತ್ತಡವನ್ನು ಉಂಟುಮಾಡುತ್ತದೆ. ಈ ವೇಳೆ ನೀರಿನ ಸಾಂದ್ರತೆಯು ಇಂಜೆಕ್ಟರ್ ವಿಫಲತೆ ಕಾರಣವಾಗುತ್ತದೆ. ಆದ್ರೆ ಇದೇ ತೊಂದರೆಯು ಡಿಸೇಲ್ ಎಂಜಿನ್ ಪ್ರೇರಿತ ಕಾರುಗಳಲ್ಲಿ ಇನ್ನು ಹೆಚ್ಚು ಎನ್ನಬಹುದು.

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಫ್ಯೂಲ್ ಪಂಪ್ ವಿಫಲತೆ

ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ ಸಂದರ್ಭದಲ್ಲಿ ಮೊದಲ ಹಂತದಲ್ಲೇ ಫ್ಯೂಲ್ ಪಂಪ್ ವಿಫಲತೆಗೆ ಕಾರಣವಾಗುತ್ತದೆ. ಇದಕ್ಕೆ ಕಾರಣ, ಸಾಂದ್ರತೆ ಜಾಸ್ತಿ ಇರುವ ನೀರು ಫ್ಯೂಲ್ ಟ್ಯಾಂಕ್ ತಳಕ್ಕೆ ಕುಳಿತಿರುತ್ತದೆ. ಮತ್ತು ಕಾರು ಆರಂಭವಾದ ಫ್ಯೂಲ್‌ಗಿಂತ ಮೊದಲು ನೀರು ಎಂಜಿನ್ ಸೇರುತ್ತದೆ.

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಎಂಜಿನ್ ಸೀಸ್

ಮೇಲೆ ಹೇಳಿದ ಎಲ್ಲಾ ತೊಂದರೆಗಳು ಕಾಣಿಸಿಕೊಂಡ ನಂತರ ಎಂಜಿನ್ ಸೀಸ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೊಕ್ಕಿರುವ ವಿಚಾರ ಗೊತ್ತಿಲ್ಲದ ಕಾರು ಮಾಲೀಕರು ಕಾರು ಚಾಲನೆ ಆರಂಭಿಸಲು ಸಾಕಷ್ಟು ಪ್ರಯತ್ನ ಪಟ್ಟಿರುತ್ತಾರೆ. ಈ ವೇಳೆ ನೀರಿನ ಅಂಶವು ಎಂಜಿನ್‌ನ ಎಲ್ಲಾ ಭಾಗದಲ್ಲೂ ಹರಡಿಕೊಂಡಿರುತ್ತದೆ.

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಸಮಸ್ಯೆಯ ಗುಣಲಕ್ಷಣಗಳು

ಕಡಿಮೆ ಎಂಜಿನ್ ಸಾಮರ್ಥ್ಯ ಮತ್ತು ತಗ್ಗುವ ಮೈಲೇಜ್

ಎಂಜಿನ್ ಸೀಸ್ ಆಗುವ ಮುನ್ನ ಫ್ಯೂಲ್ ಟ್ಯಾಂಕ್‌ನಲ್ಲಿ ಹೊಕ್ಕಿರುವ ನೀರಿನ ಅಂಶದಿಂದಾಗಿ ಕಾರಿನ ಎಂಜಿನ್ ಸಾಮರ್ಥ್ಯದ ತಗ್ಗಿಸುವುದಲ್ಲದೇ ಕಾರಿನ ಮೈಲೇಜ್ ಮೇಲೂ ಪರಿಣಾಮ ಬೀರುತ್ತದೆ.

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಕಾರು ಸ್ಟಾರ್ಟ್ ಆಗೋದಿಲ್ಲ..

ಮೇಲೆ ಹೇಳಿದ ಹಾಗೆ, ಫ್ಯೂಲ್ ಟ್ಯಾಂಕ್‌ನಲ್ಲಿ ನೀರಿನ ಅಂಶ ಹೆಚ್ಚಾಗಿದ್ದಲ್ಲಿ ಕಾರಿನ ಚಾಲನೆಯು ತೊಂದರೆಗೆ ಇಡಾಗುವುದಲ್ಲದೇ ಅಪಾಯದ ಮುನ್ಸೂಚನೆ ಇರುತ್ತದೆ. ಇದರಿಂದ ಇಂತಹ ಗುಣಲಕ್ಷಣಗಳು ಕಂಡುಬಂದಲ್ಲಿ ಹತ್ತಿರ ಕಾರು ಗ್ಯಾರೆಜ್‌ನಲ್ಲಿ ಪರೀಕ್ಷೆ ಮಾಡಿಸುವುದು ಒಳ್ಳೆಯದು.

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಹಾಗಾದ್ರೆ ಸಮಸ್ಯೆ ಪರಿಹಾರ ಏನು?

ಹೊಸ ಫ್ಯೂಲ್ ಫಿಲ್ಟರ್

ಫ್ಯೂಲ್ ಫಿಲ್ಟರ್‌ನಲ್ಲಿ ನೀರಿನ ಅಂಶವು ಅಂಟಿಕೊಂಡಿದಲ್ಲಿ ಎಂಜಿನ್ ದಕ್ಷತೆಯು ಕಡಿಮೆಯಾಗುತ್ತದೆ. ಆದ್ದರಿಂದ ಫ್ಯೂಲ್ ಫಿಲ್ಟರ್ ಬದಲಿಸುವುದು ಅಗತ್ಯ.

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಹೊಸ ಇಂಧನ ಸೇರ್ಪಡೆ

ಫ್ಯೂಲ್ ಟ್ಯಾಂಕ್‌ನಲ್ಲಿ ಹೊಕ್ಕಿರುವ ನೀರಿ ಅಂಶವನ್ನು ಸರಿದೂಗಿಸಲು ಮೆಥನಾಲ್ ಆಧಾರಿತ ಇಂಧನಗಳನ್ನು ಬಳಕೆ ಮಾಡುವುದು ಕೂಡಾ ಉತ್ತಮ ಉಪಕ್ರಮ. ಇದು ಟ್ಯಾಂಕಿನಲ್ಲಿ ಸೇರಿಕೊಂಡಿರುವ ನೀರಿನ ಅಂಶವನ್ನು ಕಡಿಮೆ ಅವಧಿಯಲ್ಲಿ ಹೊರ ಹಾಕುತ್ತದೆ. (ಲಿಕ್ವಿ ಮಾಲಿ, ಹೀಟ್ ಮತ್ತು ಹೈಡ್ರೊಬರ್ನ್ ಜಿ)

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಆಲ್ಕೋಹಾಲ್ ರಬ್ಬಿಂಗ್

ರಸಾಯನಿಕ ಮಿಶ್ರಿತ ಮಧ್ಯ ಕೂಡಾ ಫ್ಯೂಲ್ ಟ್ಯಾಂಕ್‌ನಲ್ಲಿ ಹೊಕ್ಕಿರುವ ನೀರಿನ ಅಂಶವನ್ನು ತೊಲಗಿಸಲು ಉತ್ತಮ ಮಾರ್ಗವಾಗಿದ್ದು, ಇದು ಟ್ಯಾಂಕ್‌ನ ತಳಭಾಗದಲ್ಲಿ ಕುಳಿತಿರುವ ನೀರನ್ನು ಹಿರಿಕೊಳ್ಳಲು ಸಹಾಯ ಮಾಡುತ್ತದೆ.

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಒಂದು ವೇಳೆ ನಿಮ್ಮ ಕಾರುಗಳಲ್ಲೂ ಇಂತದ್ದೆ ಸಮಸ್ಯೆಯಾಗಿದ್ದಲ್ಲಿ ಕೂಡಲೇ ಸ್ವಯಂ ಪ್ರೇರಿತವಾಗಿ ಪರಿಹಾರ ಕಂಡುಕೊಳ್ಳುವುದಕ್ಕಿಂತ ನುರಿತ ತಂತ್ರಜ್ಞರಲ್ಲಿ ಪರಿಹಾರ ಕಂಡುಕೊಳ್ಳುವ ಮೂಲಕ ನಿಮ್ಮ ಕಾರಿನ ಎಂಜಿನ್ ಅನ್ನು ರಕ್ಷಣೆ ಮಾಡಿಕೊಳ್ಳಬಹುದು.

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಸುಧಾರಿತ ತಂತ್ರಜ್ಞಾನ ಹೊಂದಿರುವ ಕಾರುಗಳಲ್ಲಿ ಫ್ಯೂಲ್ ಟ್ಯಾಂಕ್‌ಗಳಲ್ಲಿ ನೀರು ಹೋದ್ರು ಯಾವುದೇ ತೊಂದರೆಯಾಗದಂತೆ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದ್ದರೂ ಕೈಗೆಟುವ ಬೆಲೆಗಳಲ್ಲಿ ಲಭ್ಯವಿರುವ ಕಾರುಗಳಲ್ಲಿ ಈ ವ್ಯವಸ್ಥೆ ಇನ್ನು ಬಂದಿಲ್ಲ ಎನ್ನಬಹುದು.

Read more on auto tips off beat
English summary
Water In The Fuel Tank Of Your Car? — Here Are The Problems, Symptoms & Solutions!
Story first published: Monday, April 16, 2018, 14:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark