ಇಂಧನ ಬೆಲೆ ಏರಿಕೆ ಚಿಂತೆ ಬಿಡಿ: ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಿದೆ. ಇದರಿಂದ ಹೆಚ್ಚಿನ ಜನರು ಹೆಚ್ಚು ಮೈಲೇಜ್ ನೀಡುವ ಕಾರುಗಳ ಕಡೆ ಒಲವು ತೋರಿಸುತ್ತಿದ್ದಾರೆ. ನಿಮ್ಮ ಕಾರು (Car) ಹೆಚ್ಚು ಮೈಲೇಜ್ (Fuel Efficiency) ನೀಬೇಕೇ? ಆಗದರೆ ನೀವು ನಿಮ್ಮ ಡ್ರೈವಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಬೇಕು ಮತ್ತು ಇಲ್ಲಿ ನಾವು ನೀಡುವ ಕೆಲವು ಟಿಪ್ಸ್ ಫಾಲೋ ಮಾಡಿ.

ಟೈರ್ ಪ್ರೆಶರ್: ಕಂಪನಿಯು ಶಿಫಾರಸು ಮಾಡಲಾದ ರೀತಿಯಲ್ಲೇ ಟೈರ್ ಪ್ರೆಶರ್ ಇಡಿ. ಕಾರಿನ ಟೈರ್ ಪ್ರೆಶರ್ ಹೆಚ್ಚು ಇಟ್ಟರೆ ರೋಲಿಂಗ್ ಪ್ರತಿರೋಧವನ್ನು ಹೆಚ್ಚಿಸುತ್ತವೆ. ಅಲ್ಲದೇ ಮೈಲೇಜ್ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ಕಾರಿನಲ್ಲಿ ಸದಾ ಕಂಪನಿಯು ಶಿಫಾರಸು ಮಾಡಿದ ಟೈರ್ ಪ್ರೆಶರ್ ಅನ್ನು ಇರಿಸಲು ಮರೆಯದಿರಿ.

Car Fuel Efficiency

ಅತಿಯಾದ ಐಡ್ಲಿಂಗ್ ಮಾಡದಿರಿ: ಒಂದು ನಿಮಿಷಕ್ಕಿಂತ ಹೆಚ್ಚು ಕಾಲ ನೀವು ನಿಮ್ಮ ಕಾರನ್ನು ನಿಶ್ಚಲವಾಗಿ ಐಡ್ಲಿಂಗ್ ಇರಿಸಬೇಕಾದರೆ ಕಾರ್ ಅನ್ನು ಆಫ್ ಮಾಡಿ. ಅತಿಯಾದ ಐಡ್ಲಿಂಗ್ ಇಂಧನವನ್ನು ಅನಗತ್ಯವಾಗಿ ವ್ಯರ್ಥ ಮಾಡುತ್ತದೆ. ನೀವು ಟ್ರಾಫಿಕ್ ಸಿಗ್ನಲ್ ಗಳಲ್ಲಿ ಇಂಧನವನ್ನು ಉಳಿಸಲು ಕಾರನ್ನು ಆಫ್ ಮಾಡಿ. ಈ ರೀತಿ ಮಾಡಿದರೆ ನಿಮ್ಮ ಕಾರಿನ ಇಂಧನವನ್ನು ಉಳಿಸಬಹುದು.

ನಿಗಧಿತ ವೇಗ: ನೀವು ಭಾರೀ ವೇಗವಾಗಿ ಕಾರ್ ಡ್ರೈವ್ ಮಾಡುವಾಗ ಹೆಚ್ಚು ಇಂಧನವನ್ನು ಬಳಿಸಿಕೊಳ್ಳುತ್ತದೆ. ಸುಗಮವಾದ ಚಾಲನಾ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ರಸ್ತೆಯಲ್ಲಿರುವಾಗ ಸ್ಥಿರವಾದ ವೇಗವನ್ನು ಕಾಪಾಡಿಕೊಳ್ಳುವ ಮೂಲಕ, ನಿಮ್ಮ ವಾಹನಕ್ಕೆ ಉತ್ತಮ ಮೈಲೇಜ್ ಸಾಧಿಸಲು ಸಾಧ್ಯವಿದೆ. ಇದರಿಂದ ನೀವು ಕಾರು ಡ್ರೈವ್ ಮಾಡುವಾಗ ನಿಗಧಿತ ವೇಗವನ್ನು ಕಾಪಾಡಿ ಹೆಚ್ಚಿನ ಮೈಲೇಜ್ ಗಳಿಸಿ.

Car Fuel Efficiency

ಬದಲಿ ಮಾರ್ಗಗಳನ್ನು ಯೋಜಿಸಿ: ಪ್ರಯಾಣದ ದೂರವನ್ನು ಕಡಿಮೆ ಮಾಡಲು ಮತ್ತು ಅನಗತ್ಯ ಇಂಧನ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಾದಾಗಲೆಲ್ಲಾ ದಟ್ಟಣೆಯ ಮಾರ್ಗಗಳನ್ನು ತಪ್ಪಿಸಲು ಇತರ ಮಾರ್ಗಗಳಲ್ಲಿ ತೆರಳಿ. ಬೆಂಗಳೂರಿನಂತಹ ಸಿಟಿಗಳಲ್ಲಿ ಮುಖ್ಯ ರಸ್ತೆಗಳಲ್ಲಿ ಹೆಚ್ಚು ಟ್ರಾಫಿಕ್ ಇರುತ್ತದೆ. ಆಗ ನೀವು ಬದಲಿ ಮಾರ್ಗವನ್ನು ಆರಿಸಿಕೊಳ್ಳಿ. ಟ್ರಾಫಿಕ್ ನಲ್ಲಿ ಹೆಚ್ಚು ಇಂಧನ ವ್ಯರ್ಥವಾಗುತದೆ.

ಕಾರು ತೂಕ: ಕಾರು ಹೆಚ್ಚು ಭಾರವಾಗಿರುತ್ತದೆ, ಅದು ಹೆಚ್ಚು ಇಂಧನವನ್ನು ಬಳಸುತ್ತದೆ. ಆದ್ದರಿಂದ, ಇಂಧನ ಮಿತವ್ಯಯವನ್ನು ಸುಧಾರಿಸಲು, ಮಕ್ಕಳ ಸೀಟುಗಳು, ಬೈಸಿಕಲ್ ರ್ಯಾಕ್, ರೂಫ್ ರ್ಯಾಕ್, ರೂಫ್ ಬಾಕ್ಸ್ ಇತ್ಯಾದಿಗಳಂತಹ ಅನಗತ್ಯ ತೂಕದ ಉಪಕರಣಗಳನ್ನು ಸೇರಿಸಬೇಡಿ. ಅಗತ್ಯವಾದ ವಸ್ತುಗಳನ್ನು ಮಾತ್ರ ನಿಮ್ಮ ಕಾರಿನಲ್ಲಿ ಇರಿಸಿ.

ಎಸಿ: ಇತ್ತೀಚಿನ ದಿನಗಳಲ್ಲಿ ಶೆಕೆ ಹೆಚ್ಚಾಗಿರುವುದರಿಂದ ಮತ್ತು ಮಾಲಿನ್ಯ ಗಾಳಿಯಿಂದ ಹಲವರು ಕಾರುಗಳಲ್ಲಿ ಎಸಿಯನ್ನು ಬಳಸುತ್ತಾರೆ. ಆದರೆ ಎಸಿಯನ್ನು ಬಳಸುವುದರಿಂದ ನಿಮ್ಮ ಕಾರಿನ ಇಂಧನ ದಕ್ಷತೆಯ ಮೇಲೆ ಪರಿಣಾಮ ಬೀರಬಹುದು. ನೀವು ಎಸಿ ಬಳಸುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಎಸಿ ಬಳಸುವಾಗ ಮೈಲೇಜ್ ಕುಸಿತವನ್ನು ಮಿತಿಗೊಳಿಸಲು ಎಸಿಯನ್ನು ಅದರ ಅತ್ಯಂತ ತಣ್ಣನೆಯ ಸೆಟ್ಟಿಂಗ್‌ನಲ್ಲಿ ಇರಿಸಬೇಡಿ ಏಕೆಂದರೆ ಇದು ಮೈಲೇಜ್ ಮೇಲೆ ಗಣನೀಯವಾಗಿ ಪರಿಣಾಮ ಬೀರುತ್ತದೆ.

ಕಾರ್ ಸರ್ವಿಸ್: ತಯಾರಕರು ಶಿಫಾರಸು ಮಾಡಿದ ನಿಯಮಿತ ಮಧ್ಯಂತರಗಳಲ್ಲಿ ನಿಮ್ಮ ಕಾರಿಗೆ ಸರ್ವಿಸ್ ಮಾಡಿಸುವುದರಿಂದ ನಿಮ್ಮ ಕಾರಿನ ಮೈಲೇಜ್ ಸುಧಾರಿಸಬಹುದು. ಇದಲ್ಲದೆ, ಇದು ಕಾರು ಉತ್ತಮ ಗುಣಮಟ್ಟದಲ್ಲಿ ಇರಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಕಾರನ್ನು ನಿಗಧಿತ ಸಮಯದಲ್ಲಿ ಸರ್ವಿಸ್ ಮಾಡಿಸಿ ಉತ್ತಮ ಸ್ಥಿತಿಯಲ್ಲಿ ಕಾರನ್ನು ಇರಿಸಿ.

ಗೇರ್ ಶಿಫ್ಟ್: ನಿಮ್ಮ ಕಾರಿನ ಇಂಧನ ದಕ್ಷತೆಯಲ್ಲಿ ಗೇರ್ ಶಿಫ್ಟ್‌ಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಉತ್ತಮ ಇಂಧನ ದಕ್ಷತೆಯ ಅಂಕಿಅಂಶಗಳಿಗಾಗಿ, ಕಡಿಮೆ ಗೇರ್‌ಗಳು ಹೆಚ್ಚು ಇಂಧನವನ್ನು ಬಳಸುವುದರಿಂದ ಹೆಚ್ಚಿನ ಗೇರ್‌ಗೆ ಬದಲಾಯಿಸಲು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ. ಅದರ ಹೊರತಾಗಿ, ಪೆಟ್ರೋಲ್ ಕಾರುಗಳಲ್ಲಿ 2,000rpm ಅನ್ನು ಬದಲಾಯಿಸುವುದು ಮತ್ತು ಡೀಸೆಲ್ ಕಾರುಗಳಲ್ಲಿ 1,500rpm ನಿಂದ 1,700rpm ಅನ್ನು ಬದಲಾಯಿಸುವುದು ಮೈಲೇಜ್ ಅಂಕಿಅಂಶಗಳನ್ನು ಸುಧಾರಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Wednesday, August 23, 2023, 19:00 [IST]
English summary
Improve car fuel efficiency indian drivers save money
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+