ಮಳೆ ಅಂತ ಟೆನ್ಷನ್ ಮಾಡಿಕೊಳ್ಳಬೇಡಿ: ಸೇಫ್ ಡ್ರೈವ್‌ಗಾಗಿ ಫುಲ್ ಸಿಂಪಲ್ ಟಿಪ್ಸ್
ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತ ಹಾಗೂ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಪರಿಣಾಮ ಬೆಂಗಳೂರಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ (Rain) ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲದೇ ರಾಜ್ಯದ ಹಲವೆಡೆಗಳಲ್ಲಿ ಮಳೆಯಾಗುತ್ತಿದೆ. ಇದರಿಂದ ನೀವು ಭಾರೀ ಮಳೆಯಲ್ಲಿ ವಾಹನ ಚಲಾಯಿಸುವುದು ಹೆಚ್ಚು ಕಷ್ಟಕರವಾಗಿದೆ. ಅಲ್ಲದೇ ಅಪಾಯಕಾರಿಯಾಗಿ ಕೂಡ ಹೌದು. ಕಡಿಮೆ ಗೋಚರತೆ, ಜಾರುವ ರಸ್ತೆಗಳು ಮತ್ತು ನೀರು ಜಲಾವೃತವಾದ ರಸ್ತೆಗಳಲ್ಲಿ ಚಲಿಸುವುದು ಅಪಾಯಕಾರಿ. ಆದ್ದರಿಂದ, ಮಳೆ ನಡುವೆ ನೀವು ಸುರಕ್ಷಿತವಾಗಿ ವಾಹನ ಚಾಲನೆ ಮಾಡಲು ಇಲ್ಲಿ ಕೆಲವು ಟಿಪ್ಸ್ ಗಳಿವೆ.
ನಿಧಾನವಾಗಿ ಚಲಿಸಿ: ನೀವು ಎಷ್ಟೇ ಅನುಭವಿ ಡ್ರೈವರ್ ಆದರೂ ಮಳೆಗಳದಲ್ಲಿ ನಿಧಾನವಾಗಿ ಚಲಿಸುವುದು ಉತ್ತಮ. ಒದ್ದೆಯಾದ ರಸ್ತೆಗಳಲ್ಲಿ ಬ್ರೇಕ್‌ಗಳು ಅಷ್ಟು ಸಿಗುವುದಿಲ್ಲ. ನಿಮ್ಮ ಕಾರಿನ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು. ವೇಗವಾಗಿ ಚಲಿಸಿ ಸಡನ್ ಬ್ರೇಕ್ ಹಾಕಿದರೆ, ಸ್ಕೀಡ್ ಆಗಲು ಕಾರಣವಾಗಬಹುದು. ಈ ಕಾರಣಗಳಿಂದ ನಿಧಾನವಾಗಿ ಡ್ರೈವ್ ಮಾಡುವುದು ಹೆಚ್ಚು ಉತ್ತಮ.

ಪರಿಚಯವಿಲ್ಲದ ರಸ್ತೆಗಳಲ್ಲಿ ತೆರಳಬೇಡಿ: ಮಳೆಗಾಲದಲ್ಲಿ ಅನಿವಾರ್ಯವಲ್ಲದ ಸಮಯದಲ್ಲಿ ಹೆಚ್ಚಾಗಿ ಪರಿಚಯವಿಲ್ಲದ ರಸ್ತೆಗಳಲ್ಲಿ ಹೋಗಬೇಡಿ. ಏಕೆಂದರೆ, ಕೆಲವು ಕಡೆಗಳಲ್ಲಿ ಮಳೆ ಬಂದು ರಸ್ತೆಗಳು ಜಲಾವೃತವಾಗುತ್ತದೆ. ಅದರಲ್ಲೂ ಗುಡ್ಡಕಾಡು ಪ್ರದೇಶಗಳಲ್ಲಿ ಭೂಕುಸಿತ ಮತ್ತು ಜಲಾವೃತವಾಗುತ್ತದೆ. ಇದರಿಂದ ಇಂತಹ ರಿಸ್ಕ್ ತೆಗೆದುಕೊಳ್ಳುವುದನ್ನು ತಪ್ಪಿಸಿ. ಭೂಕುಸಿತವಾಗುವ ಪ್ರದೇಶಗಳಲ್ಲಿ ಚಲಿಸುವುದು ತುಂಬ ಅಪಾಯಕಾರಿಯಾಗಿದೆ.
ಎಂಜಿನ್ ಸ್ಟಾರ್ಟ್ ಮಾಡಬೇಡಿ: ಮಳೆಗಾಲದಲ್ಲಿ ರಸ್ತೆಯಲ್ಲಿ ತುಂಬಿರುವ ನೀರಿನ ಆಳವ ತಿಳಿಯುದಿಲ್ಲ. ಇದರಿಂದ ನೀರಿನಿಂದ ಜಲಾವೃತಗೊಂಡ ರಸ್ತೆಗಳಲ್ಲಿ ಕಡೆ ಹೋಗಬೇಡಿ. ನಿಮ್ಮ ಕಾರು ಪ್ರವಾಹಕ್ಕೆ ಸಿಲುಕಿದ ರಸ್ತೆಯಲ್ಲಿ ನಿಂತರೆ, ಎಂಜಿನ್ ಅನ್ನು ಸ್ಟ್ರಾಟ್ ಮಾಡುವುದನ್ನು ಪ್ರಯತ್ನಿಸಬೇಡಿ. ಏಕೆಂದರೆ ನೀರು ಎಂಜಿನ್‌ಗೆ ಪ್ರವೇಶಿಸಬಹುದು ಮತ್ತು ಕೆಲವು ಗಂಭೀರ ಹಾನಿಯನ್ನು ಉಂಟುಮಾಡಬಹುದು. ಇಂಥ ಸಂದರ್ಭದಲ್ಲಿ ವಾಹನಗಳ ರಿಪೇರಿ ನಿಜಕ್ಕೂ ದುಬಾರಿ.

ಎಕ್ಸಿಲೇಟರ್ ಹೆಚ್ಚು ಕೊಡಬೇಡಿ: ನೀರಿನಿಂದ ಜಲಾವೃತಗೊಂಡ ರಸ್ತೆಗಳಲ್ಲಿ ಪ್ರಯಾಣಿಸಲು ನಿರ್ಧರಿಸಿದರೆ, ನೀವು ನಿಧಾನಗೊಳಿಸುತ್ತಿದ್ದರೂ ಸಹ ಎಕ್ಸಿಲೇಟರ್ ಪೆಡಲ್ ಮೇಲೆ ಕಾಲನ್ನು ಇರಿಸಿಕೊಳ್ಳಲು ನಾವು ಶಿಫಾರಸು ಮಾಡುತ್ತೇವೆ. ಏಕೆಂದರೆ ಬೀಳುವ ರೆವ್‌ಗಳು ಎಕ್ಸಾಸೃ ನಿಂದ ನೀರನ್ನು ಹೀರಿಕೊಳ್ಳಬಹುದು. ಅಂತೆಯೇ, ರೆವ್‌ಗಳನ್ನು ಇಟ್ಟುಕೊಳ್ಳುವುದು ನೀರಿನಲ್ಲಿ ಸುರಕ್ಷಿತವಾಗಿ ವೇಡ್ ಮಾಡಲು ಸಹಾಯ ಮಾಡುತ್ತದೆ.
ಸ್ಪ್ಲಾಶ್ ಮಾಡಬೇಡಿ: ಕೆಲವರು ಕಾರು ಡ್ರೈವರ್ ರಸ್ತೆಯಲ್ಲಿ ನೀರು ತುಂಬಿರುವುದನ್ನು ಕಂಡರೆ, ವೇಗವಾಗಿ ಹೋಗಿ ನೀರು ಹರಿಸುತ್ತಾರೆ. ಕೆಲವರಿಗೆ ಇದೊಂದು ಥ್ರೀಲ್ ಆಗಿದೆ. ಇನ್ನೂ ಕೆಲವರು ತಮ್ಮ ಕಾರಿನ ಕೆಳಗೆ ತುಂಬಿರುವ ಕೆಸರು ಎಲ್ಲಾ ಹೋಗುತ್ತದೆ ಎಂದು ಹಾಗೇ ಮಾಡುತ್ತಾರೆ. ಆದರೆ ಸ್ಪ್ಲಾಶ್ ಮಾಡಿದಾಗ ಕಾರಿನ ಕೆಳಭಾಗದಲ್ಲಿ ಹೆಚ್ಚು ಕೊಳೆಗಳು ತುಂಬುತ್ತದೆ.
ಸಡನ್ ಬ್ರೇಕಿಂಗ್: ನೀವು ಕಾರು ಚಲಾಯಿಸುವಾಗ ಸಡನ್ ಬ್ರೇಕ್ ಅನ್ನು ಹಾಕಬೇಡಿ. ಹೀಗೆ ಸಡನ್ ಬ್ರೇಕ್ ಹಾಕಿದಾಗ ಹಿಂಬದಿಯಲ್ಲಿರುವ ಬರುವ ವಾಹನವು ನಿಮ್ಮ ಕಾರಿಗೆ ಡಿಕ್ಕಿ ಹೊಡೆಯುವ ಸಾಧ್ಯೆತೆಗಳಿದೆ. ಇನ್ನು ನೀರು ಇದ್ದ ಸ್ಥಳವಾದರೆ, ನೀರು ಎಕ್ಸಾಸ್ಟ್ ಪೈಪ್ ಮೂಲಕ ಎಂಜಿನ್ ಪ್ರವೇಶಿಸುವ ಸಾಧ್ಯತೆ ಇದೆ. ಇನ್ನು ಸಡನ್ ಬ್ರೇಕ್ ಹಾಕಿದರೆ ಕಾರು ಪಲ್ಟಿ ಆಗುವ ಸಾಧ್ಯತೆಗಳು ಕೂಡ ಇದೆ. ಮಳೆಗಾಲದಲ್ಲಿ ಕಾರು ಹೆಚ್ಚು ಜಾರುತ್ತದೆ.
ವೈಪರ್‌ಗಳನ್ನು ಪರಿಶೀಲಿಸಿ: ಮಳೆಯಲ್ಲಿ ಚಾಲನೆ ಮಾಡುವಾಗ ರಸ್ತೆ ಸರಿಯಾಗಿ ಕಾಣಬೇಕಾದುದು ಮುಖ್ಯವಾಗಿದೆ. ಇದೇ ಕಾರಣದಿಂದ ನಿಮ್ಮ ಕಾರಿನ ವೈಪರ್‌ಗಳನ್ನು ಪರಿಶೀಲಿಸಿ. ವೈಪರ್‌ಗಳ ಮೇಲಿನ ರಬ್ಬರ್ ಯಾವುದೇ ಮಳೆಯ ನಿರ್ಮಾಣ ಅಥವಾ ಕೊಳೆಯನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ ಇದು ರಸ್ತೆ ಸ್ಪಷ್ಟವಾಗಿ ಕಾಣುವಂತೆ ಮಾಡುತ್ತದೆ. ಹೊರಡುವ ಮೊದಲು ವಿಂಡ್ ಶೀಲ್ಡ್ ವೈಪರ್ ಸರಿಯಾದ ಸ್ಥಿತಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿ.


Click it and Unblock the Notifications








