ಕ್ಯಾಬ್ ಬಳಸುವ ಮಹಿಳೆಯರು ಖಂಡಿತ ತಿಳಿಯಬೇಕು... ನಿಮ್ಮ ಸ್ನೇಹಿತೆ, ಅಕ್ಕ-ತಂಗಿಯರಿಗೆ ಷೇರ್ ಮಾಡಿ!

ಭಾರತದಲ್ಲಿ ಮಹಿಳೆಯರ ಭದ್ರತೆ ವಿಷಯವಾಗಿ ನಿತ್ಯ ಒಂದಲ್ಲ ಒಂದು ಹೋರಾಟ ನಡೆಯುತ್ತಲೇ ಇರುತ್ತದೆ. ಮಹಿಳೆಯರೊಂದಿಗೆ ಅನುಚಿತವಾಗಿ ನಡೆದುಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಇದೆಯಾದರೂ, ಯುವತಿ ಒಬ್ಬಂಟಿಯಾಗಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿಯೂ ಇದೆ. ಹಾಗಾದ್ರೆ ಕ್ಯಾಬ್‌ನಲ್ಲಿ ಓಡಾಡುವುದು ಸುರಕ್ಷಿತವೇ? ಕ್ಯಾಬ್ ಬುಕ್ ಮಾಡುವುದು ಅನುಕೂಲಕರವಾಗಿರುತ್ತದೆ, ಆದರೆ ಈ ಹಿಂದೆ ನಡೆದ ಕೆಲವು ಕ್ಯಾಬ್ ಘಟನೆಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಖಚಿತವಾಗಿ ಸುರಕ್ಷಿತವೆಂದು ಹೇಳುವುದು ಕೂಡ ಕಷ್ಟ. ಹಾಗಾಗಿ ಮಹಿಳೆಯರು ಕ್ಯಾಬ್ ಬುಕ್‌ ಮಾಡಿದ ಬಳಿಕ ಅನುಸರಿಸಬೇಕಾದ ಕೆಲವು ಸುರಕ್ಷತಾ ಸಲಹೆಗಳನ್ನು ಇಲ್ಲಿ ನೀಡಿದ್ದೇವೆ.

ಕ್ಯಾಬ್ ಅನ್ನು ಪರಿಶೀಲಿಸಿ: ಇತ್ತೀಚಿನ ದಿನಗಳಲ್ಲಿ ಕ್ಯಾಬ್ ಸೇವೆಗಳು ಹೆಚ್ಚಾಗಿವೆ, ವಿವಿಧ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳು ಕೂಡ ಲಭ್ಯವಿದೆ. ಯಾವಾಗಲೂ ಸರ್ಕಾರದಿಂದ ಅನುಮೋದಿಸಲ್ಪಟ್ಟ ಕ್ಯಾಬ್ ಸರ್ವಿಸ್ ಅನ್ನು ಬಳಸಿ. ಸ್ಥಳೀಯ ಕ್ಯಾಬ್ ತೆಗೆದುಕೊಳ್ಳುವ ಬದಲು, ಪ್ರಮಾಣೀಕೃತ ಕ್ಯಾಬ್ ಸೇವೆ ಬಳಸುವುದು ಉತ್ತಮ. ಹಾಗೆಯೇ ಕುಳಿತುಕೊಳ್ಳುವ ಮೊದಲು ಕ್ಯಾಬ್ ನಂಬರ್ ಪ್ಲೇಟ್ ಅನ್ನು ಪರಿಶೀಲಿಸಿ.

safety-tips-for-women-travelling-alone-in-cab

ವಿವರಗಳನ್ನು ಹಂಚಿಕೊಳ್ಳಿ: ಎಲ್ಲಾ ಸಮಯ ಒಂದೇ ರೀತಿ ಇರುವುದಿಲ್ಲ, ಆಪತ್ತುಗಳು ಹಠಾತ್‌ ಆಗಿ ಎದುರಾಗುತ್ತವೆ. ಹಾಗಾಗಿ ಒಮ್ಮೆ ನೀವು ಕ್ಯಾಬ್‌ನಲ್ಲಿ ಕುಳಿತುಕೊಂಡ ಬಳಿಕ, ನಿಮ್ಮ ಎಲ್ಲಾ ಪ್ರಯಾಣದ ಮಾಹಿತಿಯನ್ನು ನೀವು ನಂಬುವ ಯಾರೊಂದಿಗಾದರೂ ಹಂಚಿಕೊಳ್ಳಿ. ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರಿಗೆ ವಿವರಗಳನ್ನು ಹಂಚಿಕೊಳ್ಳಿ.

ಚಾಲಕನನ್ನು ಪರಿಶೀಲಿಸಿ: ಮೊದಲೇ ಹೇಳಿದಂತೆ ಪ್ರಮಾಣೀಕೃತ ಕ್ಯಾಬ್ ಸೇವೆಗಳು ಚಾಲಕನ ಕುರಿತ ವಿವರಗಳನ್ನು ತಮ್ಮ ಆ್ಯಪ್ ನಲ್ಲಿ ನೀಡುತ್ತವೆ. ಹಾಗಾಗಿ ಕ್ಯಾಬ್ ಬುಕ್ ಮಾಡಿದ ಬಳಿಕ ಮೊದಲು ಚಾಲಕನನ್ನು ಪರಿಶೀಲಿಸಿ. ಫೋನ್ ಅಪ್ಲಿಕೇಶನ್‌ನಲ್ಲಿ ನೀವು ನೋಡಿದ ವ್ಯಕ್ತಿಯೇ ಎಂದು ಖಚಿತಪಡಿಸಿಕೊಳ್ಳಿ. ಬಳಿಕವಷ್ಟೇ OTP ಅನ್ನು ಹಂಚಿಕೊಳ್ಳಬೇಕು.

safety-tips-for-women-who-travelling-alone-in-cab

ಮಾಹಿತಿ ಹಂಚಿಕೊಳ್ಳಬೇಡಿ: ಯಾರೇ ಆಗಲಿ ನಯವಾಗಿ ಸಂವಹನ ನಡೆಸಿದಾಗ ಬಹುತೇಕರು ವ್ಯಕ್ತಿಗಳನ್ನು ಸುಲಭವಾಗಿ ನಂಬುತ್ತಾರೆ. ಆದರೆ ಇದು ತಪ್ಪು, ನೀವು ದಾರಿಯಲ್ಲಿರುವಾಗ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳದಿರಲು ಪ್ರಯತ್ನಿಸಬೇಕು. ನೀವು ಎಲ್ಲಿ ವಾಸಿಸುತ್ತೀರಿ ಅಥವಾ ನಿಮ್ಮ ಪ್ರಯಾಣದ ಉದ್ದೇಶವೇನು ಎಂಬುದನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.

ಫೋನ್ ಕೈಯಲ್ಲಿ ಇರಲಿ: ಪ್ರಯಾಣಿಸುವಾಗ ಯಾವಾಗಲೂ ನಿಮ್ಮ ಫೋನ್ ಅನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಶುಲ್ಕ ವಿಧಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ, ನೀವು ನಂಬುವ ಯಾರೊಂದಿಗಾದರೂ ನಿಮ್ಮ ಸ್ಥಳವನ್ನು ಹಂಚಿಕೊಳ್ಳಿ. ಒಂದು ವೇಳೆ ಅನಿರೀಕ್ಷಿತ ಘಟನೆಗಳು ಎದುರಾದಲ್ಲಿ ಕೂಡಲೇ ಫೋನ್‌ ಮೂಲಕ ಮಾಹಿತಿ ರವಾನಿಸಬಹುದು.

safety-tips-for-women-who-travelling-alone-in-cab

ಟ್ರ್ಯಾಕ್ ಮಾಡಿ: ಸಾಮಾನ್ಯವಾಗಿ ದೊಡ್ಡ ನಗರಗಳಲ್ಲಿ ನಾವು ಹೋಗುವ ಮಾರ್ಗಗಳು ಗೊಂದಲಗೊಳಿಸಬಹುದು. ಹಾಗಾಗಿ ಕ್ಯಾಬ್‌ನ ಮಾರ್ಗವನ್ನು ಟ್ರ್ಯಾಕ್ ಮಾಡಲು ನಿಮ್ಮ ಫೋನ್‌ನಲ್ಲಿ ಗೂಗಲ್ ಮ್ಯಾಪ್ ಬಳಸಿ, ಹಾಗೆಯೇ ನಿಮ್ಮ ಲೈವ್‌ ಲೊಕೇಷನ್ ಅನ್ನು ಸ್ನೇಹಿತರು ಅಥವಾ ಕುಟುಂಬಸ್ಥರಿಗೆ ಕಳುಹಿಸಿ. ಕ್ಯಾಬ್ ಬೇರೆ ಯಾವುದೋ ದಿಕ್ಕಿನಲ್ಲಿ ಹೋಗುತ್ತಿದೆ ಎಂದು ನೀವು ಭಾವಿಸಿದರೆ ಕೂಡಲೇ ಮಾರ್ಗ ಮಧ್ಯೆಯೇ ಚಾಲಕನನ್ನು ಪ್ರಶ್ನಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, September 13, 2024, 15:42 [IST]
English summary
Safety tips for women who travelling alone in cab
Read more on tips india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+