ನಿಮ್ಮ ಕಾರಿನಲ್ಲಿ ಕಂಪನಿ ಹೇಳುವ ಮೈಲೇಜ್ ಯಾಕೆ ಬರುವುದಿಲ್ಲ ಗೊತ್ತಾ? ಇಲ್ಲಿದೆ ಮಾಹಿತಿ

ಕಾರು ಖರೀದಿಸುವಾಗ ಕಂಪನಿಯು ಕಾರಿಗೆ ಇಷ್ಟು ಮೈಲೇಜ್ ಬರುತ್ತೆ ಎಂದು ಹೇಳುತ್ತಾರೆ. ಆದರೆ ನಾವು ಕಾರು ಓಡಿಸುವಾಗ ಕಂಪನಿ ಹೇಳಿದ ಮೈಲೇಜ್ ಸಿಗುವುದಿಲ್ಲ. ಕಂಪನಿ ಕ್ಲೈಮ್ ಮಾಡಿದ ಮೈಲೇಜ್ (Mileage) ಮೇಲೆ ಪರಿಣಾಮ ಬೀರುವ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಕಂಪನಿ ಕ್ಲೈಮ್ ಮಾಡಿದ ಮೈಲೇಜ್ ಸಿಗದಿರಲು ಇಲ್ಲಿದೆ ಕೆಲವು ಕಾರಣಗಳಿವೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ಡ್ರೈವಿಂಗ್: ಹೆಚ್ಚಿನ ಟ್ರಾಫಿಕ್ ಮತ್ತು ರಸ್ತೆ ಗುಣಮಟ್ಟದ ಮೇಲೆ ಮೈಲೇಜ್ ನಿರ್ಧಾರವಾಗುತ್ತದೆ. ಕೆಟ್ತ ರಸ್ತೆಗಳಿಂದ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಫಸ್ಟ್ ಮತ್ತು ಸೆಕೆಂಡ್ ಗೇರ್ ಗಳಲ್ಲಿ ಚಲಿಸುವಾಗ ಹೆಚ್ಚಿನ ಇಂಧನವನ್ನು ಇರಿಕೊಳ್ಳುತ್ತದೆ. ಸುಗಮ ಹೆದ್ದಾರಿ ಚಾಲನೆಗೆ ಹೋಲಿಸಿದರೆ ಹೆಚ್ಚು ಸಂಚಾರ ದಟ್ಟನೆ ಇರುವ ರಸ್ತೆಗಳಲ್ಲಿ ಕಡಿಮೆ ಮೈಲೇಜ್ ನೀಡುತ್ತದೆ.

Mileage

ವಾಹನ ನಿರ್ವಹಣೆ: ನೀವು ಖರೀದಿಸಿದ ವಾಹನವನ್ನು ಸರಿಯಾದ ಸಮಯಕ್ಕೆ ಸರ್ವಿಸ್ ಮಾಡಿಸಿ ಉತ್ತಮವಾಗಿ ನಿರ್ವಹಣೆಯನ್ನು ಮಾಡಬೇಕು. ಸರಿಯಾದ ಸಮಯಕ್ಕೆ ಆಯಿಲ್ ಬದಲಾವಣೆ ಮಾಡಬೇಕು. ವಾಹನ ಏರ್ ಫಿಲ್ಟರ್ ಬದಲಾವಣೆ ಮತ್ತು ವ್ಹೀಲ್ ಅಲೈನ್ ಮೆಂಟ್ ಎಲ್ಲಾ ಸರಿಯಾಗಿದೆಯೇ ಎಂದು ಪರಿಶೀಲಿಸಬೇಕು. ಇಲ್ಲದಿದ್ದರೆ, ಇದು ವಾಹನದ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ.

ಡ್ರೈವಿಂಗ್ ಅಭ್ಯಾಸಗಳು: ವಾಹನದಲ್ಲಿ ಹೆಚ್ಚು ಎಕ್ಸಿಲೆಟರ್ ಕೊಡುವುದು ಅಥವಾ ಹಾರ್ಡ್ ಬ್ರೇಕಿಂಗ್‌ನಂತಹ ಡ್ರೈವಿಂಗ್ ಅಭ್ಯಾಸಗಳು ಹೆಚ್ಚು ಇಂಧನವನ್ನು ಬಳಸುತ್ತವೆ. ಸ್ಥಿರವಾದ ವೇಗವನ್ನು ಕಾಯ್ದುಕೊಳ್ಳುವುದು ವಾಹನದ ಮೈಲೇಜ್ ಅನ್ನು ಸುಧಾರಿಸಬಹುದು. ಅದರಿಂದ ಉತ್ತಮ ಮೈಲೇಜ್ ನೀಡಲು ಹೆಚ್ಚು ನಿಧಾನವಾಗಿ ಅಲ್ಲದೇ ಹೆಚ್ಚು ವೇಗವಾಗಿ ಕೂಡ ಚಲಿಸಬಾರದು.

Mileage

ಇಂಧನ ಗುಣಮಟ್ಟ: ಬಳಸಿದ ಇಂಧನದ ಗುಣಮಟ್ಟವು ಎಂಜಿನ್‌ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ಕಳಪೆ-ಗುಣಮಟ್ಟದ ಅಥವಾ ಕಲಬೆರಕೆ ಇಂಧನಗಳು ಕಡಿಮೆ ಮೈಲೇಜ್ಗೆ ಕಾರಣವಾಗಬಹುದು. ಇದರಿಂದ ನಿಗಧಿತವಾದ ಮೈಲೇಜ್ ಸಿಗುವುದಿಲ್ಲ. ನಿಮ್ಮಕ್ಕೆ ವಿಶ್ವಾಸರ್ಹ ಪೆಟ್ರೋಲ್ ಬಂಕ್ ಗಳಿಂದ ನಿಮ್ಮ ವಾಹನಕ್ಕೆ ಇಂಧನ ಅನ್ನು ತುಂಬಿಸಿ. ಕೆಲವು ಕಡೆಗಳಲ್ಲಿ ಕಲಬೆರಕೆ ಇಂಧನಗಳು ವಾಹನಗಳಿಗೆ ತುಂಬಿಸಿದ ಘಟನೆಗಳು ಕೂಡ ವರದಿಯಾಗಿದೆ.

ವಾಹನದ ತೂಕ: ಭಾರವಾದ ವಾಹನಗಳು ಚಲಿಸಲು ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ, ಇದು ಪ್ರತಿ ಕಿಲೋಮೀಟರ್ ಪ್ರಯಾಣಿಸಲು ಇಂಧನ ಬಳಕೆಯನ್ನು ಹೆಚ್ಚಿಸುತ್ತದೆ. ಭಾರವಾದ ವಾಹನಗಳಿಗೆ ಹೋಲಿಸಿದರೆ ಹಗುರವಾದ ವಾಹನಗಳು ಸಾಮಾನ್ಯವಾಗಿ ಉತ್ತಮವಾದ ಮೈಲೇಜ್ ಅನ್ನು ನೀಡುತ್ತವೆ. ದೊಡ್ದ ಟ್ರಕ್ ಮತ್ತು ಬಸ್ ಗಳು ಹೆಚ್ಚು ಮೈಲೇಜ್ ನೀಡುವುದಿಲ್ಲ. ಸಣ್ಣ ವಾಹನಗಳೇ ಹೆಚ್ಚು ಮೈಲೇಜ್ ನೀಡುತ್ತದೆ. ಇದರಿಂದ ವಾಹನದ ತೂಕ ಕೂಡ ಮಲೇಜ್ ನಲ್ಲಿ ಒಂದು ಪ್ರಮುಖ ಅಂಶವಾಗಿದೆ.

Mileage

ಏರೋಡೈನಾಮಿಕ್ಸ್: ವಾಹನದ ಏರೋಡೈನಾಮಿಕ್ಸ್ ವಿನ್ಯಾಸವು ಗಾಳಿಗೆ ಅದರ ಪ್ರತಿರೋಧದ ಮೇಲೆ ಪರಿಣಾಮ ಬೀರುತ್ತದೆ, ಇದು ವಾಹನದ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ. ಸ್ಲೀಕರ್ ವಿನ್ಯಾಸಗಳು ಮತ್ತು ಕಡಿಮೆ ಡ್ರ್ಯಾಗ್ ಗುಣಾಂಕಗಳನ್ನು ಹೊಂದಿರುವ ಕಾರುಗಳು ಉತ್ತಮವಾದ ಮೈಲೇಜ್ ಅನ್ನು ನೀಡುತ್ತದೆ. ಇದರಿಂದ ವಾಹನದ ಏರೋಡೈನಾಮಿಕ್ಸ್ ಕೂಡ ಮೈಲೇಜ್ ನಲ್ಲಿ ಒಂದು ಪ್ರಮುಖ ಅಂಶವಾಗಿದೆ.

ಟೈರ್ ಪ್ರೆಶರ್: ಏರ್ ತುಂಬಿದ ಟೈರ್‌ಗಳು ರೋಲಿಂಗ್ ಪ್ರತಿರೋಧವನ್ನು ಹೆಚ್ಚಿಸುತ್ತವೆ, ಇದರ ಪರಿಣಾಮವಾಗಿ ಮೈಲೇಜ್ ಕಡಿಮೆಯಾಗುತ್ತದೆ. ತಯಾರಕರು ಶಿಫಾರಸು ಮಾಡಿದಂತೆ ಸರಿಯಾದ ಟೈರ್ ಒತ್ತಡವನ್ನು ನಿರ್ವಹಿಸುವುದು ಕ್ಲೈಮ್ ಮೈಲೇಜ್ ಅನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ. ಅದರಿಂದ ಕಂಪನಿ ಹೇಳಿದ ಹಂತದಲ್ಲೇ ಏರ್ ಫಿಲ್ ಮಾಡಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Tuesday, August 22, 2023, 19:34 [IST]
English summary
Factors affecting claimed mileage car buyers india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+