Monsoon Car Care Tips: ಬೇಸಿಗೆ ಮುಗಿಯುವ ಮುನ್ನವೇ ಈ ಸಿಂಪಲ್ ಟಿಪ್ಸ್‌ನಿಂದ ಕಾರನ್ನು ಸಜ್ಜುಗೊಳಿಸಿ
ಬೇಸಿಗೆ ಇನ್ನೇನು ಮುಕ್ತಾಯಗೊಳ್ಳಲಿದ್ದು, ಮಳೆಗಾಲಕ್ಕೆ ಕಾಲಿಡುತ್ತಿದ್ದೇವೆ. ವಾಹನಗಳು ಒಂದೊಂದು ಸೀಸನ್‌ನಲ್ಲೂ ಒಂದೊಂದು ವಾತಾವರಣವನ್ನು ಎದುರಿಸಬೇಕಾಗಿರುತ್ತದೆ. ಎಲ್ಲಾ ಸೀಸನ್‌ಗಳಲ್ಲೂ ನಾವು ನಮ್ಮ ವಾಹನಗಳ ಬಗ್ಗೆ ಕಂಡಿತ ಕಾಳಜಿ ವಹಿಸಬೇಕು, ಇಲ್ಲದಿದ್ದರೇ ಅವು ಶೆಡ್ ಸೇರುವುದು ಖಚಿತ. ಅದರಲ್ಲೂ ಕಾರು ಮಾಲೀಕರು ವಿಶೇಷ ಕಾಳಜಿ ವಹಿಸಬೇಕು.
ಈಗ ಮಾನ್‌ಸೂನ್‌ಗೆ ಲಗ್ಗೆಯಿಡುತ್ತಿರುವುದರಿಂದ ಬೇಸಿಗೆ ಅಂತ್ಯಕ್ಕೂ ಮುನ್ನವೇ ನಿಮ್ಮ ಕಾರಿಗೆ ಬೇಕಾದ ಎಲ್ಲವನ್ನು ಸಜ್ಜುಗೊಳಿಸಬೇಕು. ಏಕೆಂದರೆ ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಕಾರಿನ ರಿಪೇರಿಗಾಗಿ ಸಾವಿರಾರು ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ಕಾರು ಮಾಲೀಕರು ಬೇಸಿಗೆ ಮುಗಿಯುವ ಮುನ್ನವೇ ಈ ಸಿಂಪಲ್ ಟಿಪ್ಸ್ ಬಳಸುಕೊಂಡು ಕಾರುನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ.

ಹೊಸ ವೈಪರ್‌ಗಳನ್ನು ಹಾಕಿಸಿ: ವಿಂಡ್‌ಶೀಲ್ಡ್ ವೈಪರ್ ಬ್ಲೇಡ್‌ಗಳನ್ನು ಬದಲಾಯಿಸುವುದು ಉತ್ತಮ. ಏಕೆಂದರೆ ಬೇಸಿಗೆಯ ಶಾಖವು ರಬ್ಬರ್‌ಗೆ ತುಂಬಾ ಹಾನಿ ಮಾಡಿರುತ್ತದೆ. ಅಲ್ಲದೇ ತಜ್ಞರು ಪ್ರತಿ ಆರು ತಿಂಗಳಿಗೊಮ್ಮೆ ಅವುಗಳನ್ನು ಬದಲಾಯಿಸಲು ಸಲಹೆ ನೀಡುತ್ತಾರೆ. ಇಲ್ಲಾ ನಮ್ಮ ವೈಪರ್ ಉತ್ತಮವಾಗಿದೆ, ಆದ್ರೂ ಒಮ್ಮೆ ಪರಿಶೀಲಿಸುವುದು ಹೇಗೆ ಎಂದರೇ ಅವು ಗೆರೆ ಅಥವಾ ಕೀರಲು ಧ್ವನಿಯಲ್ಲಿ ಶಬ್ದ ಮಾಡಿದ್ರೆ ಬದಲಾಯಿಸುವ ಸಮಯ ಬಂದಿದೆ ಎಂದು ಅರ್ಥ.
ಬ್ರೇಕ್ ಪರಿಶೀಲಿಸಬೇಕು: ಬೇಸಿಗೆಯಲ್ಲಿ ವಾತವರಣದ ಶಾಖ ಹಾಗೂ ಲಾಂಗ್ ಡ್ರೈವ್‌ಗಳು ಹೋಗಿದ್ದಲ್ಲಿ ಬ್ರೇಕ್ ಲೈನಿಂಗ್‌ಗಳು, ಡ್ರಮ್ಸ್ ರೋಟರ್‌ಗಳು ಮತ್ತು ಬ್ರೇಕ್ ಪ್ಯಾಡ್‌ಳ ಸವೆತವು ಆಗಿರಬಹುದು. ಮುಖ್ಯವಾಗಿ ನೀವು ಬ್ರೇಕ್ ಸಿಸ್ಟಮ್ ಅನ್ನು ವಾರ್ಷಿಕವಾಗಿ ನೋಡಬೇಕು. ಮಳೆಗಾಲದಲ್ಲಿ ಬ್ರೇಕ್ ಗಳು ಸೂಕ್ಷ್ಮವಾಗಿ ಕಾರ್ಯನಿರ್ವಹಿಸಬೇಕಾದ್ದರಿಂದ ಒಮ್ಮೆ ಪರಿಶೀಲಿಸಿ ಸವೆದಿದ್ದರೇ ಬದಲಾಯಿಸುವುದು ಉತ್ತಮ.

ಟೈರ್‌ಗಳನ್ನು ಪರಿಶೀಲಿಸಿ: ಬೇಸಿಗೆ ರಸ್ತೆ ಪ್ರವಾಸಗಳ ನಂತರ, ಟೈರ್‌ಗಳ ಸ್ಥಿತಿಯನ್ನು ಒಮ್ಮೆ ಪರಿಶೀಲಿಸಬೇಕು. ಏಕೆಂದರೆ ಒಣ ರಸ್ತೆ ಹಾಗೂ ಮಳೆ ಬಿದ್ದ ರಸ್ತೆಯಲ್ಲಿ ಕಾರು ತನ್ನ ನಿರ್ವಹಣೆಯಲ್ಲಿ ಬದಲಾವಣೆ ತೋರುತ್ತದೆ. ಹಾಗಾಗಿ ಟೈರುಗಳು ಸವೆದಿದ್ದರೆ, ಅವುಗಳನ್ನು ಕೂಡಲೇ ಬದಲಾಯಿಸಿ. ಇದಕ್ಕಾಗಿ ಟೈರ್‌ಗಳನ್ನು ತಿರುಗಿಸಿದಾಗ ಅಸಮ ಚಿಹ್ನೆಗಳನ್ನು ಕಾಣಬಹುದು. ಇದು ಸಸ್ಪೆನ್ಸನ್ ಸಮಸ್ಯೆಯನ್ನು ಕೂಡ ಸೂಚಿಸುತ್ತದೆ.
ಹೆಡ್‌ಲೈಟ್ ಬದಲಾಯಿಸಿ: ಬೇಸಿಗೆ ಸೀಸನ್‌ನಲ್ಲಿ ರಾತ್ರಿ ಪ್ರಯಾಣ ಅಷ್ಟೇನು ತೊಂದರೆ ನೀಡುವುದಿಲ್ಲ. ಹಾಗಾಗಿ ಹೆಡ್‌ಲೈಟ್‌ಗಳ ಬಗ್ಗೆ ನಾವು ಗಮನಹರಿಸುವುದಿಲ್ಲ, ಆದರೆ ಮಳೆ ಹಾಗೂ ಚಳಿಗಾಲದಲ್ಲಿ ಮಂಜು ಹಾಗೂ ಮಳೆಯು ಗೋಚರತೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ನಿಮ್ಮ ಕಾರಿನಲ್ಲಿರುವ ಎಲ್ಲಾ ಲೈಟ್‌ಗಳು ಉತ್ತಮವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹೆಡ್‌ಲೈಟ್‌ಗಳು, ಫಾಗ್ ಲ್ಯಾಂಪ್‌ಗಳು, ಟರ್ನ್ ಇಂಡಿಕೇಟರ್‌ಗಳು ಟೈಲ್‌ಲೈಟ್‌ಗಳನ್ನು ಪರೀಕ್ಷಿಸಿ.

ಆಯಿಲ್ ಮತ್ತು ಬ್ಯಾಟರಿಯನ್ನು ಪರಿಶೀಲಿಸಿ: ಚಳಿಗಾಲ ಹಾಗೂ ಮಳೆಗಾಲ ಕಾರ್ ಬ್ಯಾಟರಿಗೆ ಕಠಿಣ ಸಮಯವಾಗಿರುತ್ತದೆ. ಬ್ಯಾಟರಿ ಟರ್ಮಿನಲ್‌ಗಳ ಸುತ್ತಲೂ ತುಕ್ಕು ಹಿಡಿದಿದೆಯೇ ಎಂಬುದನ್ನು ನೋಡಬೇಕು. ಕನೆಕ್ಷನ್‌ಗಳು ಬಿಗಿಯಾಗಿವೆಯೇ ಎಂದು ಪರಿಶೀಲಿಸಬೇಕು. ಹಾಗೆಯೇ ಎಂಜಿನ್ ಆಯಿಲ್ ಕೂಡ ಪರಿಶೀಲಿಸಿ, ಇತ್ತೀಚಿನ ದಿನಗಳಲ್ಲಿ ಎಂಜಿನ್ ಆಯಿಲ್ 5,000 ರಿಂದ 10,000 ಮೈಲುಗಳವರೆಗೆ ಹೋಗಬಹುದಾದ್ದರಿಂದ ಹೆಚ್ಚಾಗಿ ಸಮಸ್ಯೆಯಿಲ್ಲದಿದ್ರೂ ಒಮ್ಮೆ ಪರಿಶೀಲಿಸುವುದು ಉತ್ತಮ.
ಫ್ಲೂಯೆಡ್‌ಗಳನ್ನು ತುಂಬಿಸಿ: ಬೇಸಿಗೆಯ ಕೊನೆಯಲ್ಲಿ ನಿಮ್ಮ ಕಾರನ ಫ್ಲೂಯೆಡ್‌ಗಳ ಮಟ್ಟವನ್ನು ಪರಿಶೀಲಿಸಬೇಕು. ಎಂಜಿನ್ ಕೂಲಂಟ್, ಪವರ್ ಸ್ಟೀರಿಂಗ್ ಆಯಿಲ್, ಬ್ರೇಕ್ ಆಯಿಲ್ ಮತ್ತು ಟ್ರಾನ್ಸ್‌ಮಿಷನ್ ಆಯಲ್‌ಗಳನ್ನು ಒಮ್ಮೆ ಮೆಕಾನಿಕ್ ಬಳಿ ತೋರಿಸಿ ಅದರ ಮಟ್ಟವನ್ನು ಪರಿಶೀಲಿಸಬೇಕು. ಕೆಲವೊಮ್ಮೆ ನಮ್ಗೆ ತಿಳಿಯದಂತೆ ಬೇಸಿಗೆಯಲ್ಲಿ ವಾಹನ ಕೆಲವೊಮ್ಮೆ ಹೆಚ್ಚಾಗಿ ಖರ್ಚು ಮಾಡಿರುವುದರಿಂದ ಇವನ್ನು ಪರಿಶೀಲಿಸುವುದು ಉತ್ತಮ.
ಎಕ್ಸಾಸ್ಟ್ ಪರೀಕ್ಷಿಸಿ: ನಿಮ್ಮ ರೆಗ್ಯುಲರ್ ತಪಾಸಣೆಯಂತೆ ನಿಮ್ಮ ಕಾರಿನ ಎಕ್ಸಾಸ್ಟ ಕೂಡ ಪರಿಶೀಲಿಸಬೇಕು. ಏಕೆಂದರೆ ಅದರ ಹೊಗೆಯು ವಾಹನದ ಕಂಡಿಷನ್ ಕುರಿತು ತಿಳಿಸಿಬಿಡುತ್ತದೆ. ಮೆಕ್ಯಾನಿಕ್ ಬಳಿ ಎಕ್ಸಾಸ್ಟ್ ವ್ಯವಸ್ಥೆಯನ್ನು ಪರೀಕ್ಷಿಸಿಸುವುದು ಬೆಸ್ಟ್. ಇದು ಅತಿ ಮುಖ್ಯ ಸಲಹೆಯಾಗಿರುವುದರಿಂದ ಕಂಡಿತ ಈ ಟಿಪ್ ಫಾಲೋ ಮಾಡಿ, ಏಕೆಂದರೆ ಎಕ್ಸಾಸ್ಟ್ ಸೋರಿಕೆ ತುಂಬಾ ಅಪಾಯಕಾರಿ.


Click it and Unblock the Notifications








