ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು...

Written By: Rahul TS

ಇದೀಗ ಸುಡುಬಿಸಿಲು ಆರಂಭವಾಗುತ್ತಿದೆ. ಹೀಗಾಗಿ ವಾಹನ ಸವಾರಿ ಈ ಸಮಯದಲ್ಲಿ ಕೊಂಚ ಕಷ್ಟಸಾಧ್ಯ. ಅದರಲ್ಲೂ ಬೈಕ್ ಸವಾರರು ತುಸು ಹೆಚ್ಚೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಇಲ್ಲಿ ವಿಶೇಷಯಾಗಿ ದೀರ್ಘ ಪ್ರಯಾಣ ಹಮ್ಮಿಕೊಳ್ಳುವವರು ಕೆಲವೊಂದು ಸುರಕ್ಷಾ ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ.

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು.

ಅದರಿಂದಾಗಿ ಬೈಕ್ ಸವಾರು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡದೇ ಇರಲಾರದು. ಇದೇ ಉದ್ದೇಶದಿಂದ ನಾವಿಂದು ನಿಮಗೆ ಹೇಳಿಕೊಡುವ ಅಂಶಗಳ ಕಡೆ ಗಮನ ಕೊಟ್ಟರೆ ನಿಮ್ಮ ಸಂಚಾರವನ್ನು ಆನಂದದಾಯಕವಾಗಿಸಬಹುದು. ಹಾಗಿದ್ದರೆ ನೀವೇನು ಮಾಡಬೇಕು? ಬನ್ನಿ ನೋಡೋಣ..

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು.

ಬೇಕಾದಷ್ಟು ಕುಡಿಯುವ ನೀರು

ಬೇಸಿಗೆ ಕಾಲದಲ್ಲಿ ಬಾಯಾರಿಕೆಯಾಗುವುದು ಸಹಜ. ಇನ್ನು ದೂರ ಪ್ರಯಾಣದ ವೇಳೆ ಬಾಟಲಿಯಲ್ಲಿ ಬೇಕಾದಷ್ಟು ನೀರನ್ನು ಕೊಂಡು ಹೋಗುವುದು ಉತ್ತಮ. ಬೈಕ್ ಸವಾರರಿಗಾಗಿ ವಿಶೇಷ ರೀತಿಯ ಹೈಡ್ರೋ ಬ್ಯಾಕ್ ಪ್ಯಾಕ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದನ್ನು ಧರಿಸಿದ್ದಲ್ಲಿ ಸುಲಭವಾಗಿ ನೀರಿನ ದಾಹ ನೀಗಿಸಬಹುದಾಗಿದೆ. ಅಲ್ಲದೆ ಪದೇ ಪದೇ ನೀರು ಕುಡಿಯಲು ಬೈಕ್ ನಿಲ್ಲಿಸಬೇಕಾದ ಅಗತ್ಯವಿರುವುದಿಲ್ಲ.

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು.

ಎಳನೀರು

ಎಳನೀರು ಅಮೃತಪಾನಕ್ಕೆ ಸಮಾನವಾಗಿದೆ. ಕೇವಲ ಬೇಸಿಗೆ ಮಾತ್ರವಲ್ಲದೆ ಯಾವ ಕಾಲಘಟ್ಟದಲ್ಲೂ ನಿಮ್ಮ ದೇಹವನ್ನು ತಂಪಾಗಿಸಿ ಚೈತನ್ಯ ತುಂಬುವಷ್ಟು ಶಕ್ತಿ ಇದಕ್ಕಿದೆ. ಹಾಗಾಗಿ ದೂರ ಪ್ರಯಾಣ ತೆರಳುವಾಗ ಹೈವೇ ಬದಿಗಳಲ್ಲಿ ಕಂಡುಬರುವ ಎಳನೀರು ಸ್ಟಾಲ್ ಗಳಲ್ಲಿ ಒಂದೆರಡು ನಿಮಷ ಬ್ರೇಕ್ ತೆಗೆದುಕೊಳ್ಳಲು ಮರೆಯದಿರಿ. ಇದು ನಿರಂತದ ಪಣಯದಲ್ಲಿ ಸುಸ್ತಾಗದಂತೆ ನೋಡಿಕೊಳ್ಳಲಿದೆ.

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು.

ಬಹು ಪದರುಗಳ ಬಟ್ಟೆ

ಬಹು ಪದರುಗಳ ಜಾಕೆಟ್ ಧರಿಸುವುದು ನಿಮಗೆ ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳಲು ಸಹಕಾರಿಯಾಗಲಿದೆ. ನೀವು ಸವಾರಿಯನ್ನು ಬೇಗನೇ ಆರಂಭಿಸುವುದಾದ್ದಲ್ಲಿ ಸಾಮಾನ್ಯವಾಗಿ ಬೆಳಗ್ಗಿನ ಜಾವದಲ್ಲಿ ತಂಪು ಜಾಸ್ತಿಯಾಗಿರುವುದರಿಂದ ಬಹು ಪದರಿನ ಜಾಕೆಟ್ ನೆರವಿಗೆ ಬರಲಿದೆ. ಇದನ್ನು ಸೂರ್ಯನ ತಾಪ ಏರಿದಂತೆ ಪದರನ್ನು ಒಂದೊಂದಾಗಿ ತೆಗೆಯಬಹುದು.

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು.

ಬೇಸಿಗೆ ಕಾಲದ ಜಾಕೆಟ್

ಮಾರುಕಟ್ಟೆಯಲ್ಲಿ ವಿಶೇಷ ವಿನ್ಯಾಸ ಬೇಸಿಗೆಯಲ್ಲಿ ಧರಿಸಬೇಕಾದ ಸುರಕ್ಷಿತ ಜಾಕೆಟ್ ಗಳ ಲಭ್ಯವಿರುತ್ತದೆ. ಇದು ಚೆನ್ನಾಗಿ ಗಾಳಿ ಒಳಗೆ ಪ್ರವೇಶಿಸಲು ವೆಂಟ್ಸ್ ಗಳಿದ್ದು, ನಿಮ್ಮನ್ನು ತಂಪಾಗಿಸಲಿದೆ.

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು.

ಸಾಹಸ ಬೇಡ

ಯಾವುದೇ ಕಾರಣಕ್ಕೂ ದೂರ ಪ್ರಯಾಣದ ವೇಳೆ ಸಾಮಾನ್ಯ ಬಟ್ಟೆ ಧರಿಸಿ ಸಂಚಾರ ನಡೆಸುವುದು ಬೇಡ. ಅಲ್ಲದೆ ಬಿಸಿ ಗಾಳಿ ಹಾಗೂ ಶಾಖಾ ನೇರವಾಗಿ ಅಪ್ಪಳಿಸುವುದರಿಂದ ನಿಮ್ಮ ತ್ವಚೆಗೆ ರಕ್ಷಣೆಯನ್ನು ನೀಡುತ್ತದೆ.

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು.

ಉರಿ ಬಿಸಿಲಿನಲ್ಲಿ ಪಯಣ ಕಡಿಮೆ ಮಾಡಿ

ಬೇಸಿಗೆಯಲ್ಲಿ ಬೆಳಗಿನ ಜಾವ ಆದಷ್ಟು ಬೇಗ ಪ್ರಯಾಣ ಆರಂಭಿಸುವುದು ಹೆಚ್ಚು ಸೂಕ್ತ. ಅಲ್ಲದೆ ಮಧ್ಯಾಹ್ನದ ಹೊತ್ತಿನಲ್ಲಿ ಅಂದರೆ ಉರಿ ಬಿಸಿಲಿನಲ್ಲಿ (ಅಪರಾಹ್ನ 12ರಿಂದ 2 ಗಂಟೆಯ ವರೆಗೆ) ಸವಾರಿ ಮಾಡುವ ಸಾಹಸ ಬೇಡ. ಸಂಪೂರ್ಣ ದೈಹಿಕ ಸಾಮರ್ಥ್ಯ ಇರದ ಹೊರತು ಚಾಲನೆ ದುಸ್ಸಾಹಸಕ್ಕೆ ಮುಂದಾದ್ದಲ್ಲಿ ತಲೆ ಸುತ್ತುವ ಭೀತಿಯೂ ಕಾಡಬಹುದು.

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು.

ವಿಶ್ರಾಂತಿ ಅತ್ಯಗತ್ಯ

ಯಾವಾಗ ವಿಶ್ರಾಂತಿ ಅಗತ್ಯವಿದೆಯೋ ಎಂದು ಅನಿಸಿದಾಗ ಆದಷ್ಟು ಬೇಗ ವಿರಾಮ ಪಡೆಯಲು ಹಿಂಜಯದಿರಿ. ಕೇವಲ ವಾಹನ ಓಡಿಸುವವನ ಪಾಲಿಗೆ ಮಾತ್ರವಲ್ಲ. ದೀರ್ಘ ದೂರದ ಪಯಣದಲ್ಲಿ ವಾಹನ ಎಂಜಿನ್ ಗಳಿಗೂ ವಿರಾಮದ ಅಗತ್ಯವಿರುತ್ತದೆ.

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು.

ಫುಲ್ ಫೇಸ್ ಹೆಲ್ಮೆಟ್

ಬೈಕ್ ರೈಡಿಂಗ್ ನಲ್ಲಿ ಅತಿ ಮುಖ್ಯ ಘಟಕ ಹೆಲ್ಮೆಟ್ ಎಂಬುದು ನಿಮಗೆ ತಿಳಿದೇ ಇದೆ. ಹಾಗಂತ ಮಾರುಕಟ್ಟೆಯಲ್ಲಿ ದೊರಕುವ ಕಡಿಮೆ ಬೆಲೆಯ ಹೆಲ್ಮೆಟ್ ಗಳನ್ನ ಆಯ್ಕೆ ಮಾಡದಿರಿ. ಐಎಸ್‌ಐ ಮಾನ್ಯತೆ ಪಡೆದ ಅದರಲ್ಲೂ ತಲೆಗೆ ಸರಿಯಾಗಿ ಹೊಂದಿಕೆಯಾಗುವ ಫುಲ್ ಫೇಸ್ ಹೆಲ್ಮೆಟ್ ಧರಿಸುವುದು ಅತ್ಯಗತ್ಯ.

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು.

ಚಕ್ರಗಳನ್ನು ಪರಿಶೀಲಿಸಿ

ಆಗಲೇ ತುಂಬಾ ಸಮಯದಿಂದ ಬೈಕ್ ಸವಾರಿಯನ್ನು ಮಾಡುತ್ತಿದ್ದಲ್ಲಿ ಅದರ ಚಕ್ರಗಳನ್ನು ಪರಿಶೀಲಿಸಲು ಮರೆಯದಿರಿ. ನಮ್ಮ ದೇಹಕ್ಕೆ ಪ್ರತಿಯೊಂದು ಅವಯವಗಳ ಸರಿಯಾದ ಕಾರ್ಯ ನಿರ್ವಹಣೆ ಹೇಗೆ ಅಗತ್ಯವೋ ಅದೇ ರೀತಿ ಬೈಕ್ ಗಳಲ್ಲೂ ಚಕ್ರಗಳ ನಿರ್ವಹಣೆ ಅತಿ ಮುಖ್ಯವೆನಿಸುತ್ತದೆ.

ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು.

ರಸ್ತೆ

ನಿಮಗೆ ಪರಿಚಯವಿಲ್ಲದ ರಸ್ತೆಯಲ್ಲಿ ತೆರಳುವಾಗ ವೇಗದಲ್ಲಿ ಸ್ವಲ್ಪ ಮಿತಿಯಿರಲಿ. ಕಡಿದಾದ ತಿರುವು ಅಥವಾ ಘಾಟಿ ರಸ್ತೆಯಲ್ಲಿ ಸ್ವಲ್ಪ ಎಚ್ಚರ ವಹಿಸುವುದು ಒಳಿತು. ಇನ್ನು ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ರಸ್ತೆಯ ಡಾಂಬರು ಕರಗುವ ಸಾಧ್ಯತೆಯಿರುತ್ತದೆ. ಈ ಬಗ್ಗೆಯೂ ಎಚ್ಚರವಹಿಸಿ.

Read more on auto tips
English summary
Summer Riding Tips: 10 Must Know Safety Essentials.
Story first published: Monday, March 12, 2018, 18:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark