ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

Written By: Rahul TS

ರಾತ್ರಿ ವೇಳೆ ಸುರಕ್ಷಿತ ಡ್ರೈವಿಂಗ್ ಮಾಡುವುದೆಂದರೆ ಅಂದೊಂದು ಉತ್ತಮ ಕಲೆಯೇ ಸರಿ. ಆದ್ರೆ ಈ ವೇಳೆ ಮುಂಜಾಗ್ರತೆ ತುಂಬಾ ಮುಖ್ಯ. ಇಲ್ಲವಾದ್ರೆ ಅಪಘಾತ ತಪ್ಪಿದ್ದಲ್ಲ. ಹೀಗಾಗಿ ರಾತ್ರಿ ವೇಳೆ ವಾಹನ ವಾಹನೆಗೂ ಮುನ್ನ ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಚಾಲನೆ ಮಾಡಿದ್ದಲ್ಲಿ ಆಗಬಹುದಾದ ದುರಂತಗಳನ್ನು ತಪ್ಪಿಸಬಹುದು.

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

ಇನ್ನೊಂದು ಪ್ರಮಖ ವಿಚಾರ ಅಂದ್ರೆ, ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ರಾತ್ರಿ ವೇಳೆಯಲ್ಲಿ ವಾಹನ ಚಾಲನೆ ಮಾಡುವುದು ಬೇಡ. ಇದಾಗ್ಯೂ ವಾಹನ ಚಾಲನೆ ಅನಿವಾರ್ಯವಾದಲ್ಲಿ ಮುಂಜಾಗ್ರತ ಕೈಗೊಳ್ಳುವ ಮೂಲಕ ಸುಖಕರ ಪ್ರಯಾಣ ಮಾಡುವುದು ಎಲ್ಲರಿಗೂ ಒಳಿತು. ಹಾಗಾದ್ರೆ ಯಾವೆಲ್ಲಾ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಅಂತೀರಾ? ಹಾಗಾದ್ರೆ ಕೆಳಗೆ ನೀಡಲಾಗಿರುವ ಮಾಹಿತಿಗಳನ್ನು ತಪ್ಪದೇ ಪಾಲಿಸಿ...

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

1. ರಸ್ತೆ ಬಗ್ಗೆ ಮಾತ್ರ ಗಮನವಿರಲಿ

ಹೌದು.. ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುವುದು ರಾತ್ರಿಯ ಸಮಯದಲ್ಲೇ. ಹೀಗಾಗಿ ಡ್ರೈವಿಂಗ್ ಮಾಡುವವರು ಹಗಲಿನಲ್ಲಿ ಎಷ್ಟು ಹುಷಾರಾಗಿ ಡ್ರೈವ್ ಮಾಡುತ್ತಿರೋ ಅದಕ್ಕಿಂತ ಹೆಚ್ಚು ಹುಷಾರಾಗಿ ರಾತ್ರಿಯ ಹೊತ್ತಿನಲ್ಲಿ ಡ್ರೈವ್ ಮಾಡಬೇಕು. ಚಾಲಕರು ಯಾವುದೇ ಭಯಕ್ಕೆ ತುತ್ತಾಗದೆ ಕಾರ್ ಚಾಲನೆಯ ಬಗ್ಗೆ ಮಾತ್ರ ಗಮನ ನೀಡಬೇಕು.

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

2. ಹೆಡ್‍ಲೈಟ್ ಅನ್ನು ಪರೀಶೀಲಿಸಿಕೊಳ್ಳಿ

ನೀವು ಮೊದಲನೇ ಬಾರಿ ರಾತ್ರಿಯ ಸಮಯದಲ್ಲಿ ಡ್ರೈವಿಂಗ್ ಮಾಡುತ್ತಿದ್ದರೆ ಮೊದಲಿಗೆ ನಿಮ್ಮ ಕಾರಿನ ಹೆಡ್‍‍ಲೈಟ್ ಹಾಗೂ ಹೈ ಭೀಮ್ ಲೈಟ್‍ಗಳ ಗುಣಮಟ್ಟವನ್ನು ಪರಿಶೀಲಿಸಿಕೊಳ್ಳಿ. ಜೊತೆಗೆ ಹೆಡ್‍ಲೈಟ್‍ಗಳನ್ನು ಯಾವಾಗ ಆನ್ ಹಾಗೂ ಆಫ್ ಮಾಡಬೇಕೆಂಬುದನ್ನು ಸಹ ಅರಿತುಕೊಳ್ಳಿ.

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

3. ರಸ್ತೆಯ ಚಿಹ್ನೆಗಳು

ರಾತ್ರಿಯ ಹೊತ್ತು ಡ್ರೈವ್ ಮಾಡುವಾಗ ರಸ್ಥೆಯ ಬದಿಗಳಲ್ಲಿ ನಿಮಗೆ ರಸ್ತೆ ಚಿಹ್ನೆಗಳು ಗೋಚರಿಸುತ್ತವೆ. ಅವು ರಾತ್ರಿ ವೇಳೆ ವಾಹನ ಚಾಲನೆಗೆ ತುಂಬಾ ಸಹಕಾರಿಯಾಗಲಿದ್ದು, ಗುರುತಿಲ್ಲದ ಪ್ರದೇಶಗಳಲ್ಲಿ ಚಾಹನ ಚಲಾಯಿಸುವಾಗ ಅವುಗಳನ್ನು ತಪ್ಪದೇ ಫಾಲೋ ಮಾಡಿ.

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

4. ವೇಗದ ಮಿತಿ

ಎಲ್ಲರಿಗೂ ತಿಳಿದಿರುವ ಹಾಗೆ ಅತಿ ವೇಗದ ಚಾಲನೆಯು ಅಪಘಾತದ ಮೂಲ ಕಾರಣ. ಆದ್ದರಿಂದ ಹಗಲಿನ ವೇಳೆ ಡ್ರೈವ್ ಮಾಡುವ ವೇಗಕ್ಕಿಂತ ರಾತ್ರಿಯ ಸಮಯದಲ್ಲಿ ಕಡಿಮೆ ವೇಗದಲ್ಲಿ ಚಲಿಸುವುದು ಉತ್ತಮ.

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

5. ಕಾರಿನ ಹೈ ಭೀಮ್ ಲೈಟ್

ಮುಸ್ಸಂಜೆಯಲ್ಲಿ, ನಗರ ಪ್ರದೇಶಗಳಲ್ಲಿ ಅಥವಾ ದೂರದ ಪ್ರಯಾಣದ ವೇಳೆ ಹೈ ಭೀಮ್ ಲೈಟ್ ತುಂಬಾ ಸಹಕಾರಿಯಾಗಲಿದೆ. ಯಾಕೆೇಂದ್ರೆ ಗ್ರಾಮೀಣ ಪ್ರದೇಶಗಳತ್ತ ಪ್ರಯಾಣಿಸುವ ಸಂದರ್ಭಗಳಲ್ಲಿ ರಸ್ತೆಗಳಲ್ಲಿರುವ ತಗ್ಗು ದಿಣ್ಣೆಗಳನ್ನು ನೋಡಿ ವಾಹನ ಚಾಲನೆ ಮಾಡಲು ಹೈ ಭೀಮ್ ಲೈಟ್ ಅವಶ್ಯಕವಾಗಿರುತ್ತೆ.

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

ಇದರಲ್ಲಿ ವಾಹನ ಚಾಲಕ ಗಮನಿಸಬೇಕಾದ ಮತ್ತೊಂದು ವಿಚಾರ ಅಂದ್ರೆ, ಹೈ ಭೀಮ್ ಲೈಟ್ ಬಳಕೆ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಅಗತ್ಯ ಸಂದರ್ಭಗಳಲ್ಲಿ ಮಾತ್ರ ಉಪಯೋಗಿಸುವುದಲ್ಲದೇ ಬೇಡವಾದಾಗ ಕಡಿಮೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಜೊತೆಗೆ ಮತ್ತೊಂದು ಕಾರಿನ ಹಿಂದೆ ಚಾಲನೆ ಮಾಡುವಾಗ ನಿಮ್ಮ ಹೈ ಭೀಮ್ ಲೈಟ್ ಅನ್ನು ಎಂದಿಗೂ ಬಳಸಬೇಡಿ.

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

6. ಅರಣ್ಯ ಪ್ರದೇಶಗಳು

ದೂರ ಪ್ರಯಾಣದ ಸಮಯದಲ್ಲಿ ಅರಣ್ಯ ಪ್ರದೇಶಗಳಲ್ಲಿ ಡ್ರೈವ್ ಮಾಡುವ ಸಂದರ್ಭಗಳು ಬರಬಹುದು. ಈ ವೇಳೆ ರಸ್ತೆಗಳಲ್ಲಿ ಕಾಡು ಪ್ರಾಣಿಗಳು ನಿಮ್ಮ ವಾಹನಗಳಿಗೆ ಅಡ್ಡಬಹುದು ಸಾಮಾನ್ಯ. ಹಾಗಾಗಿ ನೀವು ಅವುಗಳಿಗೆ ಯಾವುದೇ ಹಾನಿ ಮಾಡದಂತೆ ಡ್ರೈವ್ ಮಾಡಿ. ಏಕೆಂದರೆ ಅಡ್ಡ ಬಂದ ಪ್ರಾಣಿಗಳಿಗೆ ಹಾನಿ ಮಾಡಿದಲ್ಲಿ ಜೈಲಿಗೆ ಸೇರಬೇಕಾದಿತು.

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

7. ದ್ವಿಚಕ್ರ ವಾಹನ ಸವಾರರ ಮೇಲೆ ಗಮನಹರಿಸಿ

ರಾತ್ರಿ ವೇಳೆ ಹೆದ್ದಾರಿಗಳಲ್ಲಿ ನೀವು ಜಾಗ್ರತೆಯಾಗಿ ಕಾರು ಓಡಿಸುತ್ತಿದ್ದರೂ ನಿಮ್ಮ ಆಸುಪಾಸಿನಲ್ಲಿ ಬರುವ ದ್ವಿಚಕ್ರ ವಾಹನ ಸವಾರರು ಕೆಲವೊಮ್ಮೆ ಮಧ್ಯಪಾನ ಮಾಡಿ ಬೈಕ್ ಚಾಲನೆ ಮಾಡುತ್ತಿರುತ್ತಾರೆ. ಆದ್ದರಿಂದ ಡ್ರೈವ್ ಮಾಡುವಾಗ ಅವರ ಬಗ್ಗೆಯೂ ಕೂಡ ಕೊಂಚ ಗಮನವಿರಲಿ.

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

8. ಎಚ್ಚರದಿಂದಿರಿ

ರಾತ್ರಿ ವೇಳೆ ಡ್ರೈವ್ ಮಾಡುವಾಗ ಸೆಲ್‍ಫೋನ್ ಬಳಸಬೇಡಿ. ಕಾರಿನಲ್ಲಿರುವ ರೇಡಿಯೊವನ್ನು ಆಫ್ ಮಾಡಿ. ಜೊತೆಗೆ ಕಾರಿನಲ್ಲಿರುವ ಸಹಪ್ರಯಾಣಿಕರು ನಿಮ್ಮ ಡ್ರೈವ್‌ಗೆ ಯಾವುದೇ ತೊಂದರೆ ನೀಡದಂತೆ ಚಾಲನೆಗೂ ಮುನ್ನವೇ ಅವರಲ್ಲಿ ಮನವಿ ಮಾಡಿ.

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

9. ಡ್ರೈವಿಂಗ್ ವೇಳೆ ನಿದ್ದೆ ಬಂದ್ರೆ?

ಹೆದ್ದಾರಿಗಳಲ್ಲಿ ಸುರಕ್ಷಿತ ಡ್ರೈವ್ ಮಾಡುವುದು ಅಷ್ಟು ಸುಲಭವಲ್ಲ. ಅದು ಹೆಚ್ಚು ಗಮನಹರಿಸಬೇಕಾದ ಹಾಗೂ ಹೆಚ್ಚು ಒತ್ತಡವಿರುವ ಕೆಲಸ. ಇದಲ್ಲದೇ ದೂರದ ಪ್ರಯಾಣದ ವೇಳೆ ಬೆಳಗಿನಿಂದ ರಾತ್ರಿಯವರೆಗೂ ಡ್ರೈವಿಂಗ್ ಮಾಡುವ ಪರಿಸ್ಥಿತಿ ಇರುತ್ತೆ. ಆದ್ರೆ ಒತ್ತಡದಲ್ಲಿ ಡ್ರೈವ್ ಮಾಡಲೇಬೇಡಿ. ಪ್ರತಿ 2 ರಿಂದ 3 ಗಂಟೆಗಳಿಗೆ ಒಮ್ಮೆ 15 ನಿಮಿಷ ವಿಶ್ರಾಂತಿ ಪಡೆಯುವುದನ್ನ ಮರೆಯಬೇಡಿ.

ಹ್ಯಾಪಿ ಜರ್ನಿ, ಸೇಫ್ ಡ್ರೈವ್....Smile

ರಾತ್ರಿ ವೇಳೆ ಡ್ರೈವಿಂಗ್ ಮಾಡುವ ಮುನ್ನ ಈ ಅಮೂಲ್ಯ ಟಿಪ್ಸ್‌ಗಳನ್ನು ತಪ್ಪದೇ ಪಾಲಿಸಿ...

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಫಿದಾ ಆದ ಸೇನೆ...

2. ಬೇಸಿಗೆಯಲ್ಲಿ ವಾಹನ ಚಾಲನೆ; ಅತ್ಯವಶ್ಯಕ 10 ಸಲಹೆಗಳು

3. ಬೇಸಿಗೆಯಲ್ಲಿ ಬೈಕ್ ರೈಡಿಂಗ್; ಇಲ್ಲಿವೆ ಅತ್ಯವಶ್ಯಕ ಸಲಹೆಗಳು...

4. 10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

5. ಹೈವೇ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

Read more on auto tips driving tips
English summary
9 Critical Tips for Safe and Unstressful Driving at Night.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark