ಹೈವೇ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

ಹೆದ್ದಾರಿಗಳಲ್ಲಿ ದೂರ ಪ್ರಯಾಣ ಮಾಡುವ ವೇಳೆ ಅನುಸರಿಸಬೇಕಾದ ಎಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿ ಮಾಹಿತಿಯನ್ನು ಕೊಡಲಿದ್ದೇವೆ.

By Nagaraja

ಕಾರಿನಲ್ಲಿ ದೂರ ಪ್ರಯಾಣ ಹೊರಡುವ ವೇಳೆ ಕೆಲವೊಂದು ಅಂಶಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಇವುಗಳಲ್ಲಿ ಹವಾಮಾನ ಪರಿಸ್ಥಿತಿ ಪ್ರಮುಖ ಅಂಶವಾದರೆ ಚಾಲಕನ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಆರೋಗ್ಯ ಸಮಸ್ಯೆಯಿದ್ದಲ್ಲಿ ದೂರ ಪ್ರಯಾಣವನ್ನು ನಿಶ್ಚಿತ ದಿನದಿಂದ ಮುಂದೂಡುವುದು ಒಳಿತು. ಈ ಸಂಬಂಧ ಹೆದ್ದಾರಿ ಪ್ರಯಾಣದ ವೇಳೆ ಗಮನದಲ್ಲಿಟ್ಟುಕೊಳ್ಳಬೇಕಾದ 11 ಅಂಶಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

01. ಪ್ರಯಾಣ ಆರಂಭಕ್ಕೂ ಮುನ್ನ

01. ಪ್ರಯಾಣ ಆರಂಭಕ್ಕೂ ಮುನ್ನ

ದೂರ ಪ್ರಯಾಣ ಆರಂಭಕ್ಕೂ ಮುನ್ನ ಇಂಧನ ಟ್ಯಾಂಕ್ ಸಂಪೂರ್ಣವಾಗಿ ಭರ್ತಿ ಮಾಡಿಡಿ. ಇನ್ನು ಮೊಬೈಲ್ ಫೋನ್ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಲು ಮರೆಯದಿರಿ. ಡ್ರೈವಿಂಗ್ ಲೈಸನ್ಸ್ ನಿಂದ ಹಿಡಿದು ಕಾರಿಗೆ ಸಂಬಂಧಪಟ್ಟ ಎಲ್ಲ ದಾಖಲಾತಿ ಪ್ರತಿಗಳನ್ನು ಕೈಯಲ್ಲಿಟ್ಟುಕೊಳ್ಳಲು ಮರೆಯದಿರಿ.

02. ವೇಗದಲ್ಲಿ ಮಿತಿಯಿರಲಿ

02. ವೇಗದಲ್ಲಿ ಮಿತಿಯಿರಲಿ

ಭಾರತೀಯ ಬಹುತೇಕ ಹೆದ್ದಾರಿಗಳಲ್ಲಿ ವೇಗ ಮಿತಿ ನಿಯಮ ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಹಾಗಾಗಿ ಹೆದ್ದಾರಿ ಪರಿಸ್ಥಿತಿಗೆ ಅನುಗುಣವಾಗಿ ವೇಗದಲ್ಲಿ ಮಿತಿಯಿರಲಿ. ನಿಮ್ಮ ಗುರಿ ತಲುಪಲು ಯಾವುದೇ ರೀತಿಯ ಅವಸರ ಬೇಡ. ಮಳೆ, ಟ್ರಾಫಿಕ್ ಅಥವಾ ಮಂಜಿನ ತೊಂದರೆಯಿದ್ದಲ್ಲಿ ನಿಧಾನವಾಗಿ ಚಲಿಸಲು ಮರೆಯದಿರಿ. ಮುನ್ಮುಖವಾಗಿ ಚಲಿಸುವ ಪ್ರತಿಯೊಂದು ವಾಹನವನ್ನು ಓವರ್ ಟೇಕ್ ಮಾಡುವ ಗೋಜಿಗೆ ಹೋಗದಿರಿ.

03. ಟ್ಯಾಂಕರ್ ಮತ್ತು ಲಾರಿಗಳು

03. ಟ್ಯಾಂಕರ್ ಮತ್ತು ಲಾರಿಗಳು

ಘಾಟಿ ಪ್ರದೇಶಗಳಲ್ಲಿ ನಿಧಾನವಾಗಿ ಚಲಿಸುವ ಅಮಿತ ಭಾರದ ಟ್ಯಾಂಕರ್ ಮತ್ತು ಸರಕು ಲಾರಿಗಳು ತುಂಬಿಕೊಂಡಿರುವುದರಿಂದ ಅತಿಯಾದ ಜಾಗ್ರತೆಯಿಂದ ಪ್ರಯಾಣ ಮುಂದುವರಿಸಿರಿ. ಹೆದ್ದಾರಿಗಳಲ್ಲಿ ಸಾಕಷ್ಟು ಹೊತ್ತು ಡ್ರೈವಿಂಗ್ ಮಾಡಿ ದಣಿವಾಗಿರುವುದರಿಂದ ಅಜಾಗರೂಕತೆಯಿಂದ ಚಾಲನೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಓವರ್ ಟೇಕ್ ಮಾಡುವಾಗ ಎಚ್ಚರದಿಂದಿರಬೇಕು.

04. ಎಡಭಾಗದಲ್ಲಿ ಚಲಿಸಿ

04. ಎಡಭಾಗದಲ್ಲಿ ಚಲಿಸಿ

ಪ್ರಯಾಣದುದ್ಧಕ್ಕೂ ಬಲಬದಿಯಲ್ಲಿ ಚಲಿಸುವ ಸಾಹಸ ಬೇಡ. ಒಮ್ಮೆ ಓವರ್ ಟೇಕ್ ಮಾಡಿದ ಬಳಿಕ ಎಡಬದಿಯ ಲೇನ್ ನಲ್ಲಿ ಮುಂದಕ್ಕೆ ಚಲಿಸಿ.

05. ರಸ್ತೆ ಉಬ್ಬುಗಳು

05. ರಸ್ತೆ ಉಬ್ಬುಗಳು

ಹೆದ್ದಾರಿಗಳಲ್ಲಿ ರಾತ್ರಿ ವೇಳೆಯಲ್ಲಿ ವೇಗವಾಗಿ ಚಲಿಸುವಾಗ ರಸ್ತೆ ಉಬ್ಬುಗಳು ಕಣ್ಣಿಗೆ ಕಾಣಸಿಗದು. ಇನ್ನು ಕೆಲವು ಕಡೆಗಳಲ್ಲಿ ರಸ್ತೆ ಉಬ್ಬುಗಳ ಚಿಹ್ನೆಯೇ ಇರಲಾರದು. ಹಾಗಾಗಿ ಆಕಸ್ಮತ್ ಎದುರಾಗುವ ರಸ್ತೆ ಉಬ್ಬುಗಳ ಬಗ್ಗೆ ಎಚ್ಚರದಿಂದಿರಬೇಕು. ಹಾಗಾಗಿ ವಾಹನಗಳ ನಡುವೆ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ಇಂತಹ ವೇಗ ಮಿತಿಗಳ ಬಗ್ಗೆ ನಿಗಾವಹಿಸುವುದು ಒಳಿತು.

06. ರಸ್ತೆ ಚಿಹ್ನೆ

06. ರಸ್ತೆ ಚಿಹ್ನೆ

ಪ್ರಯಾಣ ಹಾದಿಯ ಬಗ್ಗೆ ನಿಮಗೆ ಸ್ಪಷ್ಟವಾದ ಜ್ಞಾನವಿಲ್ಲದಿದ್ದಲ್ಲಿ ರಸ್ತೆ ಮಾರ್ಗ ಬದಿಗಳಲ್ಲಿರುವ ರಸ್ತೆ ಚಿಹ್ನೆಗಳನ್ನು ಪಾಲಿಸಲು ಮರೆಯದಿರಿ. ಕಡಿದಾದ ತಿರುವು, ಕಿರಿದಾದ ಸೇತುವೆ, ಅಂಕುಡೊಂಕುವಕ್ರಾಕೃತಿ, ಝಿಬ್ರಾ ಕ್ರಾಸಿಂಗ್, ಇಳಿಜಾರು, ರೈಲ್ವೆ ಕ್ರಾಸಿಂಗ್ ಹೀಗೆ ಎಲ್ಲ ರಸ್ತೆ ಚಿಹ್ನೆಗಳನ್ನು ನೋಡಿಕೊಂಡು ಮುನ್ನುಗಬೇಕು.

07. ಎರಡು ಲೇನ್ ಹೆದ್ದಾರಿ

07. ಎರಡು ಲೇನ್ ಹೆದ್ದಾರಿ

ಎರಡು ಲೇನ್ ಹೆದ್ದಾರಿಗಳನ್ನು ಸಮೀಪಿಸಿದಾಗ ವೇಗದಲ್ಲಿ ಮಿತಿಯಿರಲಿ. ಮುಂಭಾಗದಿಂದ ಬರುವ ವಾಹನಗಳು ಹೆಡ್ ಲೈಟ್ ಫ್ಲ್ಯಾಶ್ ಮಾಡಿದಾಗ ವಾಹನ ನಿಧಾನ ಮಾಡಿ ಆ ಗಾಡಿಗೆ ಮುಂದಕ್ಕೆ ಹೋಗಲು ಅನುವು ಮಾಡಿಕೊಡಿ. ಹಾಗೆಯೇ ಹೈ ಬಿಮ್ ಹೆಡ್ ಲೈಟ್ ಗಳನ್ನು ಡಿಮ್/ಡಿಪ್ ಮಾಡಲು ಮರೆಯದಿರಿ.

08. ಘಾಟಿ ಪ್ರದೇಶ

08. ಘಾಟಿ ಪ್ರದೇಶ

ಘಾಟಿ ಪ್ರದೇಶದಂತಹ ಅಂಕು ಡೊಂಕಾದ ಕಡಿದಾದ ತಿರುವುಗಳನ್ನು ಒಳಗೊಂಡಿರುವ ಎರಡು ಲೇನ್ ಹೆದ್ದಾರಿಗಳಲ್ಲಿ ಚಲಿಸುವಾಗ ಅತೀಯ ಜಾಗ್ರತೆ ಅಗತ್ಯ. ಇಲ್ಲಿ ಓವರ್ ಟೇಕ್ ಮಾಡುವುದು ಶುದ್ಧ ಅಸಂಬಂಧ. ಅತೀವ ಏರಿಳಿತದಿಂದ ಕೂಡಿದ ಇಂತಹ ರಸ್ತೆಗಳಲ್ಲಿ ಲೇನ್ ತಪ್ಪುವುದು ಅಪಘಾತವನ್ನು ಕೈಬೀಸಿ ಕರೆದಂತೆ. ಇನ್ನು ರಸ್ತೆಗಳಲ್ಲಿ ಗುಂಡಿಗಳಿರುವುದರಿಂದ ನಿಧಾನವಾಗಿ ಸಂಚರಿಸಬೇಕು. ಘಾಟಿ ಪ್ರದೇಶದಲ್ಲಿ ಮೇಲಕ್ಕೆ ಏರುವ ವಾಹನಗಳು ಕಡಿದಾದ ತಿರುವುಗಳಲ್ಲಿ ಲೇನ್ ತಪ್ಪಿ ಬಲಭಾಗದತ್ತ ವಾಲುವ ಸಂಭವ ಇರುವುದರಿಂದ ಮೇಲಿಂದ ಕೆಳಕ್ಕೆ ಇಳಿಯುವ ವಾಹನಗಳು ವೇಗವನ್ನು ನಿಧಾನಗೊಳಿಸಿ ಮೇಲಕ್ಕೆರುವ ವಾಹನಗಳ ಸುಗಮ ಸಂಚಾರಕ್ಕೆ ಹಾದಿ ಬಿಟ್ಟುಕೊಡಬೇಕು.

09. ದಣಿವು

09. ದಣಿವು

ದೂರ ಪ್ರಯಾಣದ ವೇಳೆ ದಣಿವು ಆವರಿಸಲಿರುವುದರಿಂದ ಪ್ರಯಾಣದ ಮಧ್ಯೆ ಸಣ್ಣ ಪುಟ್ಟ ಬ್ರೇಕ್ ಪಡೆದುಕೊಳ್ಳುವುದನ್ನು ರೂಢಿಸಿಕೊಳ್ಳಿ. ರಾತ್ರಿ ವೇಳೆಯಲ್ಲಿ ಟೀ ಬ್ರೇಕ್ ನಿಮಗೆ ನಿದ್ರೆ ಬರುವುದನ್ನು ತಡೆಯಲಿದೆ. ಇನ್ನು ಒಂದಕ್ಕಿಂತ ಹೆಚ್ಚು ಚಾಲಕರಿದ್ದಲ್ಲಿ ಕಡಿಮೆ ಪಕ್ಷ ಪ್ರತಿ ಮೂರು ತಾಸಿಗೊಮ್ಮೆ ಚಾಲಕರನ್ನು ಬದಲಾಯಿಸಿಕೊಳ್ಳಿರಿ.

10. ಪಂಚರ್ ಆದ್ದಲ್ಲಿ

10. ಪಂಚರ್ ಆದ್ದಲ್ಲಿ

ಕಾರು ಬ್ರೇಕ್ ಡೌನ್ ಅಥವಾ ಪಂಚರ್ ಆದ್ದಲ್ಲಿ ರಸ್ತೆಯಿಂದ ಬದಿಗೆ ಸರಿಸಿ ಪಾರ್ಕಿಂಗ್ ಮಾಡಿಟ್ಟುಕೊಂಡು ಹಜಾರ್ಡ್ ಲೈಟ್ ಉರಿಸಲು ಮರೆಯದಿರಿ. ಕೆಂಪು ಪ್ರತಿಫಲಕ ಸೂಚನಾ ಫಲಕಗಳು ಇಲ್ಲಿ ನೆರವಿಗೆ ಬರಲಿದೆ. ಇದರಿಂದ ಚಕ್ರ ಬದಲಾಯಿಸಲು ಯಾವುದೇ ತೊಂದರೆ ಕಾಡದು.

11. ಅಪಕ್ವ ಚಾಲನೆ

11. ಅಪಕ್ವ ಚಾಲನೆ

ದೇಶದಲ್ಲಿ ನಡೆಯುತ್ತಿರುವ ಬಹುತೇಕ ಅಪಘಾತ ಪ್ರಕರಣಗಳು ಅಪಕ್ವ ರೀತಿಯ ಚಾಲನೆಯಿಂದಲೇ ನಡೆಯುತ್ತಿರುತ್ತದೆ. ಹಾಗಾಗಿ ಇತರರನ್ನು ದೂಷಿಸುವ ಮೊದಲು ನಿಮ್ಮ ತಪ್ಪನ್ನು ಮೊದಲು ಸರಿಪಡಿಸಿಕೊಂಡು ಸುರಕ್ಷಿತ ಚಾಲನೆಗೆ ಆಸ್ಪದ ಕೊಡರಿ. ಹ್ಯಾಪಿ ಡ್ರೈವಿಂಗ್!

Most Read Articles

Kannada
English summary
11 Important Tips For Highway Driving
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X