ಮೊದಲ ಬಾರಿ ಕಾರು ಖರೀದಿಸಿದ್ದೀರಾ? ಹಾಗಾದ್ರೆ ಇವು ತಿಳಿದಿರಲಿ... ಕಂಪನಿ ಕೂಡ ಹೇಳುವುದಿಲ್ಲ!
ಹೊಸ ಕಾರನ್ನು (New car) ಖರೀದಿಸುವುದು ಹಲವರು ಕನಸು, ಆದರೆ ಮೊದಲ ಬಾರಿಗೆ ಕಾರು ಖರೀದಿಸಿದ ಮಾಲೀಕರಿಗೆ ಹೇಗೆ ನಿರ್ವಹಣೆ ಮಾಡಬೇಕು ಎಂಬುದು ತಿಳಿದಿರುವುದಿಲ್ಲ. ಮೇಂಟೇನನ್ಸ್, ಡ್ರೈವಿಂಗ್, ಟ್ರಾಫಿಕ್‌ನ ದೈನಂದಿನ ಅಡೆತಡೆಗಳು ಆರಂಭದಲ್ಲಿ ತುಂಬಾ ತೊಂದರೆ ಕೊಡುತ್ತವೆ. ಇದರಿಂದ ತಮ್ಮ ಮೊದಲ ಕಾರನ್ನು ಖರೀದಿಸಿದ ಸಂತೋಷವನ್ನೇ ಮರೆತುಬಿಡುತ್ತಾರೆ.
ಇಂತಹ ಸಮಸ್ಯೆಗಳನ್ನು ಎದುರಿಸಲು ಮೊದಲ ಬಾರಿ ಕಾರು ಖರೀದಿಸಿದ ಮಾಲೀಕರಿ (First time car buyer)ಗಾಗಿ ಕೆಲವು ಸಿಂಪಲ್ ಸಲಹೆಗಳನ್ನು ನಾವು ನೀಡುತ್ತಿದ್ದೇವೆ. ರಸ್ತೆಯ ಪರಿಸ್ಥಿತಿಗಳು ಅಥವಾ ಟ್ರಾಫಿಕ್ ಬಗ್ಗೆ ಏನೂ ಮಾಡಲಾಗದಿದ್ದರೂ, ನಿರ್ವಹಣೆ ಮಾಡಲು ಸಾಕಷ್ಟು ಟಿಪ್ಸ್ ಇವೆ. ಮೊದಲ ಬಾರಿಗೆ ಕಾರು ಖರೀದಿಸುವವರಿಗೆ 5 ಪ್ರಮುಖ ಕಾರು ನಿರ್ವಹಣಾ ಸಲಹೆಗಳು ಇಲ್ಲಿವೆ.

ಮ್ಯಾನುವಲ್ ಓದಿ (Read manual) : ಮೊದಲ ಬಾರಿಗೆ ಕಾರು ಖರೀದಿಸಿದವರಾಗಿರಲಿ ಅಥವಾ ಕಾರು ಖರೀದಿಯಲ್ಲಿ ಸಾಕಷ್ಟು ಅನುಭವ ಇದ್ದವರಾಗಿರಲಿ ಮ್ಯಾನುವಲ್ ಓದುವುದು ತುಂಬಾ ಮುಖ್ಯ. ಇದು ಅನಗತ್ಯವೆಂದು ತೋರುತ್ತದೆ, ಆದರೆ ಫ್ಯೂಸ್‌ಗಳು ಎಲ್ಲಿವೆ, ಯಾವ ರೀತಿಯ ಆಯಿಲ್ ಬಳಸಬೇಕು, ಕಾರನ್ನು ಯಾವಾಗ ಸರ್ವಿಸ್ ಮಾಡಬೇಕು, ಎಷ್ಟು ಟೈರ್ ಒತ್ತಡವನ್ನು ಶಿಫಾರಸು ಮಾಡಲಾಗಿದೆ ಎಂಬುದರ ಕುರಿತಂತೆ ಎಲ್ಲಾ ಮಾಹಿತಿಯನ್ನು ಇದರಲ್ಲೇ ತಿಳಿಯಬಹುದು.
ಕಾರಿನ ಕಂಟ್ರೋಲ್ ಮಾಡುವ ಕುರಿತು ಹಾಗೂ ಸುರಕ್ಷಿತವಾಗಿ ಹೇಗೆ ಬಳಸುವುದು ಎಂಬುದರ ಕುರಿತು ಪರಿಚಿತರಾಗಲು ಮ್ಯಾನುವಲ್ ನಿಮಗೆ ತುಂಬಾ ಸಹಾಯ ಮಾಡುತ್ತದೆ. ಅಲ್ಲದೆ, ಒಮ್ಮೆ ನೀವು ಅದನ್ನು ಓದಿದ ನಂತರ ಬಿಸಾಡದೇ ಯಾವಾಗಲೂ ಕಾರಿನಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸಿ. ಇದು ನಿಮ್ಮ ಕಾರಿನ ಬಗ್ಗೆ ನಿಮಗೆ ಸರಿಯಾದ ಸಮಯಕ್ಕೆ ಬೇಕಾದ ಮಾಹಿತಿ ಒದಗಿಸುತ್ತದೆ.

ಆಫ್ಟರ್ ಮಾರ್ಕೆಟ್ ಬಿಡಿಭಾಗಗಳು ಬೇಕೆ? (Need aftermarket parts?): ನಮ್ಮಲ್ಲಿ ಹೆಚ್ಚಿನವರು ಹೊಚ್ಚ ಹೊಸ ಕಾರನ್ನು ಪಡೆದ ನಂತರ ಹೊಸ ಮ್ಯೂಸಿಕ್ ಸಿಸ್ಟಮ್, ಅಪ್‌ಗ್ರೇಡ್ ಮಾಡಿದ ಸ್ಪೀಕರ್‌ಗಳು, ಫಾಗ್ ಲ್ಯಾಂಪ್‌ಗಳು ಮತ್ತು ಹೆಚ್ಚಿನವುಗಳನ್ನು ಆಫ್ಟರ್ ಮಾರ್ಕೆಟ್‌ನಿಂದ ಬದಲಿಸತ್ತಾರೆ. ಆದರೆ ಇತ್ತೀಚೆಗೆ ಕಾರು ತಯಾರಕರು ಕೂಡ ಸ್ವತಃ ಅವರೇ ಅತ್ಯುತ್ತಮವಾದ ಮನರಂಜನಾ ವ್ಯವಸ್ಥೆ ಕಲ್ಪಿಸುತ್ತಿರುವುದರಿಂದ ನೀವು ಅದನ್ನು ಅತಿಯಾಗಿ ಕೆಡಿಸಬೇಡಿ.
ಕಾರ್ ಆಡಿಯೋ ಸಿಸ್ಟಮ್‌ಗಳು ಮತ್ತು ಎಲೆಕ್ಟ್ರಿಕಲ್ ಅಪ್‌ಡೇಟ್‌ಗಳು ಅತ್ಯಂತ ಸಾಮಾನ್ಯವಾದ ಪರಿಕರಗಳಾಗಿವೆ. ಅವುಗಳನ್ನು ಡೀಲರ್‌ಶಿಪ್ ಹೊರತುಪಡಿಸಿ ಬೇರೆಡೆ ಮಾಡಿದರೆ, ನೀವು ಕಾರಿನ ಖಾತರಿ ಕವರೇಜ್ ಅಪಾಯವನ್ನು ಎದುರಿಸುತ್ತೀರಿ. ಅಲ್ಲದೆ, ಅವುಗಳನ್ನು ಸರಿಯಾಗಿ ಮಾಡದಿದ್ದರೆ, ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುವ ಅಪಾಯವು ಇದೆ ಎಂಬುದನ್ನು ಮರೆಯಬೇಡಿ.

ನಿಧಾನವಾಗಿ ಚಾಲನೆ ಮಾಡಿ, ಆತುರ ಬೇಡ (Drive slowly, don't rush): ಹೊಸ ಕಾರುಗಳನ್ನು ಹಿಂದಿನ ಕಾಲದಂತೆ ಓಡಿಸಬೇಕಾಗಿಲ್ಲ, ಏಕೆಂದರೆ ಈಗಿನ ಎಂಜಿನ್‌ಗಳು ಈಗಾಗಲೇ ಸಾಕಷ್ಟು ಅಪ್‌ಡೇಟ್ ಆಗಿವೆ. ನಿಮ್ಮ ಮೊದಲ ಕಾರಾಗಿರುವುದರಿಂದ ಅದರಡೈ ಡೈನಾಮಿಕ್ಸ್, ಹ್ಯಾಂಡ್ಲಿಂಗ್, ಬ್ರೇಕಿಂಗ್ ಮತ್ತು ನಿಮ್ಮ ಚಾಲನೆಗೆ ಕಾರು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ. ಬಳಿಕ ಅದಕ್ಕೆ ತಕ್ಕಂತೆ ಕಾರನ್ನು ಓಡಿಸಿ.
ಬಣ್ಣವನ್ನು ರಕ್ಷಿಸಿ (Protect the color) : ಹೊಸ ಕಾರಿನ ಬಣ್ಣದ ಮೇಲೆ ಚಿಕ್ಕದಾದ ಗೀರುಗಳು ಗೋಚರಿಸುತ್ತವೆ, ವಿಶೇಷವಾಗಿ ಕಾರು ಕೆಂಪು ಅಥವಾ ಕಪ್ಪು ಮುಂತಾದ ಗಾಢ ಬಣ್ಣಗಳಲ್ಲಿ ಇದ್ದರೆ ಇದು ಇನ್ನೂ ಹೆಚ್ಚಾಗಿ ಕಾಣುತ್ತದೆ. ಇದನ್ನು ತಪ್ಪಿಸಲು ಹೊರಭಾಗವನ್ನು ಜಾಗರೂಕತೆಯಿಂದ ರಕ್ಷಿಸಬೇಕು. ಇದಕ್ಕಾಗಿ ಉತ್ತಮ ಸೆರಾಮಿಕ್ ಕೋಟ್ ಮಾಡಿಸುವುದು ಒಳ್ಳೆಯದು. ಇಲ್ಲದಿದ್ದರೇ ಸ್ಪಷ್ಟವಾದ PPF ಕೂಡ ಮಾಡಿಕೊಳ್ಳಬಹುದು.

ಸಮಯಕ್ಕೆ ಸರಿಯಾಗಿ ಸರ್ವಿಸಿ ಮಾಡಿಸಿ (Service on time): ಕಾರು ಖರೀದಿಸುವುದು ಕೇವಲ ಮೊದಲ ಹೆಜ್ಜೆ. ನಿರ್ವಹಣೆ ಮತ್ತು ಸರ್ವಿಸ್ ಕಾರು ದೀರ್ಘಕಾಲ ಉಳಿಯಲು ಪ್ರಮುಖ ಹಂತಗಳಾಗಿವೆ. ಸರ್ವಿಸ್ ಮಧ್ಯಂತರಗಳನ್ನು ಎಂದಿಗೂ ಮರೆಯಬಾರದು. ಸಮಯ ಬಂದಾಗ ಟೈರ್‌ಗಳನ್ನು ಬದಲಾಯಿಸಿ, ಏನಾದರೂ ಸರಿಯಿಲ್ಲ ಎಂದು ಭಾವಿಸಿದರೆ, ತಕ್ಷಣವೇ ಪರೀಕ್ಷಿಸಿ. ಪ್ರಾರಂಭದಲ್ಲಿಯೇ ಇಂತಹ ಸಮಸ್ಯೆಗಳನ್ನು ಪರಿಹರಿಸುವುದರಿಂದ ನೀವು ಬಹಳಷ್ಟು ಹಣ ಉಳಿಸಬಹುದು.


Click it and Unblock the Notifications








