ಕಾರನ್ನು ಕಳ್ಳತನದಿಂದ ರಕ್ಷಿಸಲು ಮಾಸ್ಟರ್ ಪ್ಲಾನ್... ಕರೆಂಟ್‌ ಕಂಬಕ್ಕೆ ಕಟ್ಟಿ ಮುಳ್ಳಿನ ಕವರ್ ಹಾಕಿದ!

ವಿಶ್ವದಲ್ಲಿ ಅತೀ ಹೆಚ್ಚು ವಾಹನ ಕಳ್ಳತನ ನಡೆಯುವ ದೇಶಗಳಲ್ಲಿ ಭಾರತ ಕೂಡ ಒಂದು. ಪ್ರತಿ ವರ್ಷ ಲಕ್ಷಕ್ಕೂ ಹೆಚ್ಚು ಕಾರುಗಳು ಮತ್ತು ಬೈಕ್‌ಗಳು ಕಳ್ಳತನವಾಗುತ್ತಿವೆ ಎಂದು ಅಂಕಿಅಂಶಗಳು ತೋರಿಸುತ್ತಿವೆ. ಮಾಲೀಕರು ತಮ್ಮ ವಾಹನಗಳ ಬಗ್ಗೆ ಎಚ್ಚರವಹಿಸಬೇಕಿದೆ ಎಂಬುದಕ್ಕೆ ಈ ವ್ಯಕ್ತಿಯೇ ನಿದರ್ಶನವಾಗಿದ್ದಾರೆ.

ಇತ್ತೀಚೆಗೆ ನಮ್ಮ ದೇಶದ ಅನೇಕ ಮೆಟ್ರೋ ನಗರಗಳಲ್ಲಿ ಕಾರು ಕಳ್ಳತನ ಹಾಗೂ ನಾಯಿಗಳು ಕಾರಿನ ಮೇಲಕ್ಕೆ ಏರುವುದು ಮತ್ತು ಕಾರ್ ಕವರ್‌ಗಳನ್ನು ಹರಿದು ಹಾಕುವುದು ಸಾಮಾನ್ಯವಾಗಿಬಿಟ್ಟಿದೆ. ಆದ್ದರಿಂದ, ಜನರು ಈ ಸವಾಲುಗಳನ್ನು ಎದುರಿಸಲು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಾರೆ. ಅಂದಹಾಗೆ ಇತ್ತೀಚೆಗೆ ಕಾರು ಮಾಲೀಕರೊಬ್ಬರು ಮಾಡಿರುವ ಕೆಲಸ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ.

master-plan-to-protect-the-car-from-theft-viral-video

ಮಾಲೀಕರೊಬ್ಬರು ತಮ್ಮ ಕಾರಿನ್ನು ಕಾಪಾಡಿಕೊಳ್ಳಲು ಮಾಡಿರುವ ಉಪಾಯ ಹಲವರಿಗೆ ತಮಾಷೆಯಾಗಿದ್ದರೂ, ಕೆಲವರ ಗಮನ ಸೆಳೆದಿದೆ. ತಮ್ಮ ಮಹೀಂದ್ರಾ ಸ್ಕಾರ್ಪಿಯೋವನ್ನು ಕಳ್ಳತನ ಮತ್ತು ಪ್ರಾಣಿಗಳಿಂದಾಗುವ ಹಾನಿಯಿಂದ ತಪ್ಪಿಸಲು ಕರೆಂಟ್ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಈ ಕುರಿತ ಪೋಸ್ಟ್ ಅನ್ನು Instagram ನಲ್ಲಿ Crime_guys__ ಎಂಬ ಅಕೌಂಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಬಹಳಷ್ಟು ಕಾರು ಮಾಲೀಕರು ಎದುರಿಸುತ್ತಿರುವ ಕೆಲವು ಪ್ರಮುಖ ಸಮಸ್ಯೆಗಳನ್ನು ನಿಭಾಯಿಸಲು ಇದು ಆಸಕ್ತಿದಾಯಕ ತಂತ್ರವಾಗಿ ಹೇಳಲಾಗುತ್ತಿದೆ. ಮೊದಲನೆಯದಾಗಿ, ಮಾಲೀಕರು ಸ್ಕಾರ್ಪಿಯೋ ಬಾಡಿಯನ್ನು ಪ್ಲಾಸ್ಟಿಕ್ ಸ್ಪೈಕ್‌ಗಳನ್ನು ಒಳಗೊಂಡಿರುವ ಕವರ್‌ನೊಂದಿಗೆ ಸುತ್ತಿದ್ದಾರೆ. ಇದರಿಂದ ನಾಯಿಗಳು ಅಥವಾ ಇತರ ಪ್ರಾಣಿಗಳು ಕಾರಿನ ಬಾನೆಟ್ ಮೇಲೆ ಹತ್ತುವುದಿಲ್ಲ ಎಂದು ಇದು ಖಚಿತಪಡಿಸುತ್ತದೆ.

master-plan-to-protect-the-car-from-theft-viral-video

ಪ್ರಾಣಿಗಳು ಸಾಮಾನ್ಯವಾಗಿ ಕಾರಿನ ಕವರ್‌ಗಳನ್ನು ಹರಿದು ಹಾಕುತ್ತವೆ. ಕೆಲವು ದುರ್ಬಲ ಕಾರುಗಳ ರೂಫ್ ಮೇಲೆ ಹತ್ತಿ ಡೆಂಟ್ ಬೀಳುವಂತೆ ಮಾಡುತ್ತವೆ. ಇಲ್ಲಿಯವೆರೆಗೆ ಎಲ್ಲವೂ ಸರಿಯೇ ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಹಲವರು ತಮಾಷೆಯಂತೆ ನೊಡುತ್ತಿರುವುದು SUV ಅನ್ನು ವಿದ್ಯುತ್ ಕಂಬಕ್ಕೆ ಕಟ್ಟಿರುವುದು. ಈ ಕಂಬಕ್ಕೆ SUV ಯ ಹಿಂಭಾಗವನ್ನು ಕಟ್ಟಲು ಅವರು ದಪ್ಪವಾದ ಕೇಬಲ್ ಅನ್ನು ಬಳಸಿದ್ದಾರೆ.

ಕಳ್ಳರಿಂದ ವಾಹನವನ್ನು ಸುರಕ್ಷಿತವಾಗಿರಿಸುವ ಸಲುವಾಗಿ ಹೀಗೆ ಮಾಡಲಾಗಿದೆ. ಆದರೆ ಇದು ಅವರು ಅಂದುಕೊಂಡಂತೆ ಕಾರನ್ನು ಕಾಪಾಡಬಲ್ಲದೇ? ಕಾರಿಗೆ ಕಟ್ಟಿರುವ ಕೇಬಲ್‌ಗಳನ್ನು ನೋಡಿದ್ರೆ ತುಂಬಾ ಗಟ್ಟಿಮುಟ್ಟಿಯಾಗಿ ಕಾಣುತ್ತಿದೆ. ಇದನ್ನು ಅಷ್ಟು ಸುಲಭವಾಗಿ ಕತ್ತರಿಸುವುದು ಅಸಾಧ್ಯ. ಆದ್ರೆ ಈಗಿನ ಕಳ್ಳರು ಎಲ್ಲಾ ವಿಧದ ಎಚ್ಚರಿಕೆಗಳೊಂದಿಗೆ ಕಳ್ಳತನಕ್ಕೆ ಮುಂದಾಗುವುದರಿಂದ ಇದರ ಬಗ್ಗೆ ಖಚಿತವಾಗಿ ಏನೂ ಹೇಳಲಾಗುವುದಿಲ್ಲ.

master-plan-to-protect-the-car-from-theft-viral-video

ಆದರೂ ಕಳ್ಳರು ಕಾರುಗಳನ್ನು ಎಗರಿಸುವಾಗ ತುಂಬಾ ಸಮಯವನ್ನು ಕಳೆಯುವುದಿಲ್ಲ, ಬದಲಾಗಿ ಕೆಲವೇ ಕ್ಷಣಗಳಲ್ಲಿ ಕಳ್ಳತನ ಮಾಡಿ ಮುಗಿಸಲು ಪ್ರಯತ್ನಿಸುತ್ತಾರೆ. ಆದ್ರೆ ಈ ಕೇಬಲ್‌ಗಳನ್ನು ಕತ್ತರಿಸಲು ತುಂಬಾ ಸಮಯ ಹಿಡಿಯುವುದರಿಂದ ಇದು ಕೂಡ ಉತ್ತಮ ಉಪಾಯವೆಂದು ಹೇಳಬಹುದು. ಜನರು ಇಂತಹ ಕ್ರಮಗಳಿಗೆ ಮುಂದಾಗುವ ಅಗತ್ಯವನ್ನು ಅರ್ಥಮಾಡಿಕೊಳ್ಳಲೇಬೇಕು.

ಒಂದು ದೊಡ್ಡ ಸಮಸ್ಯೆಗೆ ಸರಿಯಾದ ಪರಿಹಾರವನ್ನು ಸಾಧಿಸಲು ಸೃಜನಶೀಲ ತಂತ್ರಗಳನ್ನು ರೂಪಿಸುವುದು ಇತರರನ್ನು ಎಚ್ಚರಗೊಳಿಸುತ್ತದೆ. ಈ ತಂತ್ರಗಳಿಗೆ ದೊಡ್ಡ ಪ್ರಮಾಣದ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಯಾರಾದರೂ ಅನುಸರಿಸಬಹುದಾದ ಸರಳ ತಂತ್ರಗಳಾಗಿರುವುದರಿಂದ ಎಲ್ಲರೂ ಇದನ್ನು ಅನುಸರಿಸಬಹುದು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, December 26, 2023, 13:36 [IST]
English summary
Master plan to protect the car from theft viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+