ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಫಿದಾ ಆದ ಸೇನೆ...

ಕಾಲಕ್ಕೆ ತಕ್ಕಂತೆ ಭಾರತೀಯ ಸೇನೆಯು ಕೂಡಾ ವಾಹನ ತಂತ್ರಜ್ಞಾನದಲ್ಲಿ ಬದಲಾವಣೆ ಹೊಂದುತ್ತಲೇ ಬಂದಿದೆ. ಇದೀಗ ಬಹುದಿನಗಳಿಂದ ಬಳಕೆಯಾಗುತ್ತಿದ್ದ ಜನಪ್ರಿಯ ಮಾರುತಿ ಜಿಪ್ಸಿಗೆ ಗುಡ್ ಬೈ ಹೇಳಲಾಗಿದೆ.

By Praveen Sannamani

ಕಾಲಕ್ಕೆ ತಕ್ಕಂತೆ ಭಾರತೀಯ ಸೇನೆಯು ಕೂಡಾ ವಾಹನ ತಂತ್ರಜ್ಞಾನದಲ್ಲಿ ಬದಲಾವಣೆ ಹೊಂದುತ್ತಲೇ ಬಂದಿದೆ. ಇದೀಗ ಬಹುದಿನಗಳಿಂದ ಬಳಕೆಯಾಗುತ್ತಿದ್ದ ಜನಪ್ರಿಯ ಮಾರುತಿ ಜಿಪ್ಸಿಗೆ ಗುಡ್ ಬೈ ಹೇಳಲಾಗಿದ್ದು, ಅದರ ಬದಲಾಗಿ ಟಾಟಾ ವಿನೂತನ ಸಫಾರಿ ಸ್ಟ್ರೋಮ್ ಎಸ್‌ಯುವಿ ಬಳಕೆಗೆ ಹಸಿರು ನಿಶಾನೆ ತೊರಿದೆ.

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಪಿಧಾ ಆದ ಸೇನೆ...

ಇಂಡಿಯನ್ ಆರ್ಮಿಯಲ್ಲಿ ಈ ವರೆಗೆ 25 ಸಾವಿರದಷ್ಟು ಮಾರುತಿ ಜಿಪ್ಸಿ ಯುಟಿಲಿಟಿ ವಾಹನಗಳನ್ನು ಬಳಕೆ ಮಾಡಲಾಗುತ್ತಿದ್ದು, ಈ ಹಗುರ ವಾಹನಗಳನ್ನು ಭಯೋತ್ಪಾದನಾ ನಿಗ್ರಹ ಹಾಗೂ ಇತರ ಭದ್ರತಾ ಕಾರ್ಯಾಚರಣೆಗೆ ಬಳಸಲಾಗಿತ್ತು. ಆದ್ರೆ ಸುಧಾರಿತ ತಂತ್ರಜ್ಞಾನ ಕೊರತೆಯನ್ನು ನಿಗಿಸಲು ಜಿಪ್ಸಿಗೆ ಗುಡ್ ಬೈ ಹೇಳುವುದು ಅನಿವಾರ್ಯವಾಗಿದೆ.

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಪಿಧಾ ಆದ ಸೇನೆ...

ಇದಕ್ಕಾಗಿಯೇ ಸೇನಾ ವಾಹನಗಳನ್ನು ಉನ್ನತೀಕರಿಸುವ ಉದ್ದೇಶದಿಂದ ಬರೋಬ್ಬರಿ 3 ಸಾವಿರ ಕೋಟಿ ಮೌಲ್ಯದ ಯೋಜನೆಯೊಂದನ್ನು ಜಾರಿಗೆ ಮಾಡಲಾಗಿದ್ದು, ಇದರ ಪರಿಣಾಮವೇ ಸೇನಾ ಪಡೆಯಲ್ಲಿನ ಗಸ್ತು ವಾಹನಗಳ ಪಟ್ಟಿಯಲ್ಲಿ ಟಾಟಾ ಸಫಾರಿ ಸ್ಟ್ರೋಮ್‌ ಹೊಸ ಆಯ್ಕೆಯಾಗಿ ಹೊರಹೊಮ್ಮಿದೆ.

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಪಿಧಾ ಆದ ಸೇನೆ...

ಕಳೆದ ಕೆಲದಿನಗಳ ಹಿಂದಷ್ಟೇ ಮಿಲಿಟರಿ ವರ್ಷನ್ ಎಸ್‌ಯುವಿ ಕಾರುಗಳಿಗಾಗಿ ಬಿಡ್ ಮಾಡಿದ್ದ ಭಾರತೀಯ ಸೇನೆಯು, ಮಹೀಂದ್ರಾ ಸ್ಕಾರ್ಪಿಯೊ ಮತ್ತು ಟಾಟಾ ಸಫಾರಿ ಸ್ಟ್ರೋಮ್ ಕಾರುಗಳ ಮೂಲಕ ಪರೀಕ್ಷೆ ಕೈಗೊಂಡಿತ್ತು. ಇದರಲ್ಲಿ ಸಫಾರಿ ಸ್ಟೋಮ್‌ಗಳು ಸೇನಾಪಡೆಯ ಅಗತ್ಯಕ್ಕೆ ತಕ್ಕಂತೆ ಸಿದ್ದವಾಗಿರುವುದು ಆಯ್ಕೆಗೆ ಕಾರಣವಾಗಿದೆ.

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಪಿಧಾ ಆದ ಸೇನೆ...

ಸದ್ಯ ಆರ್ಮಿ ವರ್ಷನ್ ಸಫಾರಿ ಸ್ಟ್ರೋಮ್ ಕಾರುಗಳು ಮೊಟ್ಟ ಮೊದಲ ಬಾರಿಗೆ ಸೇನಾ ಕ್ಯಾಂಪ್‌ಗಳಲ್ಲಿ ಕಾಣಿಸಿಕೊಂಡಿದ್ದು, ಒಟ್ಟು 3,193 ಸಫಾರಿ ಸ್ಟ್ರೋಮ್ ಕಾರುಗಳನ್ನು ಟಾಟಾ ಮೋಟಾರ್ಸ್ ಸಂಸ್ಥೆಯು ಸೇನಾಪಡೆಗೆ ಸರಬರಾಜು ಮಾಡಲಿದೆ.

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಪಿಧಾ ಆದ ಸೇನೆ...

ಸೇನಾಪಡೆಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಆರ್ಮಿ ವರ್ಷನ್ ಸಫಾರಿ ಸ್ಟ್ರೋಮ್ ಕಾರುಗಳು ಮ್ಯಾಟೆ ಗ್ರೀನ್‌ ಬಣ್ಣ ಹೊಂದಿದ್ದು, ಸ್ಟ್ರೋಮ್ ಕಾರಿನ ಇಂಚಿಂಚೂ ಕೂಡಾ ಆರ್ಮಿ ಗ್ರೀನ್ ಬಣ್ಣದೊಂದಿಗೆ ಮಿಂಚುತ್ತಿವೆ.

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಪಿಧಾ ಆದ ಸೇನೆ...

ಆದರೇ ಫೂಟ್ ಬೋರ್ಡ್ ಮತ್ತು ರೂಫ್ ರೈಲ್ಸ್ ಹೊರತುಪಡಿಸಿ ಸಂಪೂರ್ಣ ಹಸಿರು ಮಯವಾಗಿರುವ ಸಫಾರಿ ಸ್ಟ್ರೋಮ್ ಕಾರುಗಳು, ಸಾಮಾನ್ಯ ಮಾದರಿಯ ಸಫಾರಿ ಸ್ಟ್ರೋಮ್‌ಗೆ ಕಾರುಗಳಿಂತ ಸಾಕಷ್ಟು ವಿಭಿನ್ನತೆಯನ್ನು ಹೊಂದಿವೆ.

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಪಿಧಾ ಆದ ಸೇನೆ...

ಜೊತೆಗೆ ಸರಕು ಸಾಗಿಸಲು ಅನುಕೂಲಕವಾಗುವಂತೆ ರಿಯರ್ ಹುಕ್, ಕಾರಿನ ಬ್ಯಾನೆಟ್ ಮೇಲೆ ಆ್ಯಂಟೆನಾ, ಫ್ರಂಟ್ ಬಂಪರ್‌ಗಳಲ್ಲಿ ಸ್ಪಾಟ್ ಲೈಟ್ ಪಡೆದುಕೊಂಡಿದ್ದು, ಇನ್ನು ಕಾರಿನ ಒಳಭಾಗದಲ್ಲಿ ಅಳವಡಿಸಲಾಗಿರುವ ತಾಂತ್ರಿಕ ಅಂಶಗಳ ಬಗೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಪಿಧಾ ಆದ ಸೇನೆ...

ಎಂಜಿನ್ ಸಾಮರ್ಥ್ಯ

ಆರ್ಮಿ ವರ್ಷನ್ ಟಾಟಾ ಸಫಾರಿ ಸ್ಟ್ರೋಮ್ ಕಾರುಗಳು 2.2 ಲೀಟರ್ 4 ಸಿಲಿಂಡರಿನ ಟರ್ಬೋ ಚಾರ್ಜ್ಡ್ ಡೀಸೇಲ್ ಎಂಜಿನ್ ಪಡೆದುಕೊಂಡಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 154ಬಿಎಚ್‌ಪಿ ಮತ್ತು

400ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಪಿಧಾ ಆದ ಸೇನೆ...

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಟಾಟಾ ಸಫಾರಿ ಸ್ಟ್ರೋಮ್ ಕಾರುಗಳು 4x4 ಡ್ರೈವ್ ಟೆಕ್ನಾಲಜಿಯೊಂದಿಗೆ ಆಫ್ ರೋಡ್ ಕೌಶಲ್ಯ ಹೊಂದಿದ್ದು, ಇದು ಗಡಿಭಾಗಗಳಲ್ಲಿನ ರಕ್ಷಣಾ ಕಾರ್ಯಚರಣೆಗಳಲ್ಲಿ ಮಹತ್ವದ ಪಾತ್ರವಹಿಸಲಿವೆ.

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಪಿಧಾ ಆದ ಸೇನೆ...

ಇನ್ನು ಸಮಕಾಲೀನ ಪರಿಸ್ಥಿತಿಯಲ್ಲಿ ಭಾರತೀಯ ಸೇನೆಯು ತನ್ನ ಅಗತ್ಯಗಳಿಗನುಸಾರವಾಗಿ ವಾಹನಗಳನ್ನು ಅಪ್‌ಗ್ರೇಡ್ ಮಾಡುತ್ತಿದ್ದು, ಸೇನೆಗೆ ಇದೀಗ ತನ್ನ ಸಾಮಾನ್ಯ ಸೇನಾ ವಾಹನಗಳಿಗಾಗಿ ಕನಿಷ್ಠ 120 ಹಾರ್ಸ್ ಪವರ್ ಉತ್ಪಾದಿಸುವ ಟರ್ಬೊ ಡೀಸೆಲ್ ಎಂಜಿನ್ ವಾಹನಗಳ ಅಗತ್ಯವಿದೆ.

ಮಾರುತಿ ಜಿಪ್ಸಿಗೆ ಗುಡ್ ಬೈ- ಟಾಟಾ ಸಫಾರಿ ಸ್ಟ್ರೋಮ್‌ಗೆ ಪಿಧಾ ಆದ ಸೇನೆ...

ಹೀಗಾಗಿಯೇ 1.3 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಮಾರುತಿ ಜಿಪ್ಸಿಗಳನ್ನು ಕೈಬೀಡುತ್ತಿರುವ ಭಾರತೀಯ ಸೇನೆಯು, ಡ್ಯುಯಲ್ ಏರ್‌ಬ್ಯಾಗ್, ಪವರ್ ವಿಂಡೋ, ಎಬಿಎಸ್‌ಗಳಂತಹ ಆಧುನಿಕ ಸೌಲಭ್ಯವಿರುವ ವಾಹನಗಳನ್ನು ಖರೀದಿಸಲು ಬೃಹತ್ ಪ್ರಮಾಣದ ಯೋಜನೆ ರೂಪಿಸಿದೆ ಎನ್ನಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ಮೋದಿ ಹೆಸರಿನಲ್ಲಿ ಭಾರೀ ಜನಪ್ರಿಯತೆ ಪಡೆಯುತ್ತಿರುವ ಈ ಬೈಕಿನ ಅಸಲಿಯತ್ತು ಏನು?

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ?

Most Read Articles

Kannada
Read more on tata motors
English summary
Tata Safari Storme Army Edition Spotted; Specifications, Features And More Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X