ಮೋದಿ ಹೆಸರಿನಲ್ಲಿ ಭಾರೀ ಜನಪ್ರಿಯತೆ ಪಡೆಯುತ್ತಿರುವ ಈ ಬೈಕಿನ ಅಸಲಿಯತ್ತು ಏನು?
ಐಐಟಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ವಿಶೇಷ ಮಾದರಿಯ ಬೈಕ್ ಒಂದನ್ನು ಸಿದ್ದಗೊಳಿಸಿ ಬೈಕ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ಈ ಹಿಂದೆ 15 ವರ್ಷದ ವಿದ್ಯಾರ್ಥಿಯೊಬ್ಬ ನೀರಿನಿಂದಲೇ ಬೈಕ್ ಓಡಿಸಬಹುದೆಂದು ಸಾಬೀತುಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣನಾಗಿದ್ದ, ಇದರ ಬೆನ್ನೆಲ್ಲೇ ಐಐಟಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ವಿಶೇಷ ಮಾದರಿಯ ಬೈಕ್ ಒಂದನ್ನು ಸಿದ್ದಗೊಳಿಸಿ ಬೈಕ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ಅಂತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಮಾದರಿಯ ಬೈಕ್ ಸಿದ್ದಗೊಳಿಸಬಹುದು ಎನ್ನುವುದನ್ನು ಸಾಬೀತು ಮಾಡಿರುವ ಈ ವಿದ್ಯಾರ್ಥಿ, ಪರಿಸರಕ್ಕೆ ಹಾನಿಕಾರವಾಗಿರುವ ಪೆಟ್ರೋಲ್ ಎಂಜಿನ್‌ಗೆ ಬದಲಾಗಿ ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಹೊಸ ಬೈಕ್ ಅಭಿವೃದ್ಧಿ ಮಾಡಿದ್ದಾನೆ.

ಅಂದಹಾಗೆ ಈ ವಿಶೇಷ ಬೈಕ್ ಅನ್ನು ನಿರ್ಮಾಣ ಮಾಡಿರುವ ವಿದ್ಯಾರ್ಥಿ ಹೆಸರು ವಾಖರ್ ಅಹಮದ್ ಅಂತಾ. ಈತ ದೆಹಲಿಯ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಆಟೋ ಮೊಬೈಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ.

ವಿಶೇಷ ಅಂದ್ರೆ, ಪ್ರಧಾನಿ ಮೋದಿಯವರ ಕನಸಿನ ಯೋಜನೆ ಮೆಕ್ ಇನ್ ಇಂಡಿಯಾ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಈ ವಿದ್ಯಾರ್ಥಿ, ತಾನು ನಿರ್ಮಾಣ ಮಾಡಿದ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ಹೊಸ ಬೈಕಿಗೆ 'ಮೋದಿ' ಎಂದು ನಾಮಕರಣ ಮಾಡಿದ್ದಾನೆ.

ಜೊತೆಗೆ ಬೈಕಿನ ಮೇಲೆ ನಮೂದಿಸಲಾಗಿರುವ ಮೋದಿ ಹೆಸರಿಗೆ ವಿಶೇಷ ಅರ್ಥ ಕಲ್ಪಿಸಿರುವ ವಿದ್ಯಾರ್ಥಿ ವಾಖರ್ ಅಹಮದ್, Mode of Develping India ಎಂದು ಕರೆಯುವ ಮೂಲಕ ಆಟೋ ಮೊಬೈಲ್ ಉದ್ಯಮದಲ್ಲಿ ಹೊಸ ಆವಿಷ್ಕಾರಕ್ಕಾಗಿ ಮುನ್ನುಡಿ ಬರೆದಿದ್ದಾನೆ.

ಮೂಲತಃ ಉತ್ತರ ಪ್ರದೇಶದ ಮಿರತ್ ನಿವಾಸಿ ಆಗಿರುವ ವಾಖರ್ ಅಹಮದ್, ಮಧ್ಯಮ ವರ್ಗದಲ್ಲಿ ಹುಟ್ಟಿಬೆಳೆದಿದ್ದರು ಆಟೋ ಮೊಬೈಲ್ ಬಗ್ಗೆ ಎಲ್ಲಿಲ್ಲದ ಆಸಕ್ತಿ ಹೊಂದಿದ್ದನು. ಇದೇ ಕಾರಣಕ್ಕೆ ಪಿಯು ಓದುತ್ತಿರುವಾಗಲೇ ಈ ಬಗ್ಗೆ ಕನಸು ಕಂಡಿದ್ದ ವಾಖರ್ ಅಹಮದ್, ಅತ್ಯುತ್ತಮ ರ‍್ಯಾಂಕಿಂಗ್‌ನೊಂದಿಗೆ ದೆಹಲಿ ಐಐಟಿಯಲ್ಲಿ ಸೀಟು ಗಿಟ್ಟಿಸಿಕೊಂಡಿದ್ದ.

ಸದ್ಯ ಆಟೋ ಮೊಬೈಲ್ ಎಂಜಿನಿಯರಿಂಗ್ ವಿಭಾಗದಲ್ಲಿ 5ನೇ ಸೆಮಿಸ್ಟರ್ ಓದುತ್ತಿರುವ ವಾಖರ್ ಅಹಮದ್, ತನ್ನ ಓದು ಮುಗಿಯುವ ವೇಳೆಗೆ ಆಟೋ ಮೊಬೈಲ್ ಕ್ಷೇತ್ರದಲ್ಲಿ ಏನಾದ್ರೂ ಹೊಸ ಅವಿಷ್ಕಾರ ಮಾಡಲೇಬೇಕೆಂಬ ಹಠದೊಂದಿಗೆ ಈ ಬೈಕ್ ಅನ್ನು ಅಭಿವೃದ್ಧಿ ಮಾಡಿದ್ದಾನೆ.

ಹೊಸ ಬೈಕಿನಲ್ಲಿ 7.7 ವೋಲ್ಟ್ ಶಕ್ತಿ ಪ್ರೇರಿತ ಎಂಜಿನ್ ಬಳಕೆ ಮಾಡಲಾಗಿದ್ದು, ಇದು ಜಿರೋ ಎಮಿಷನ್ ವೈಶಿಷ್ಟ್ಯತೆಯನ್ನು ಹೊಂದಿರಲಿದೆ. ಜೊತೆಗೆ ಈ ಬೈಕ್ ಪ್ರತಿ ಗಂಟೆಗೆ 100 ಕಿ.ಮಿ ಟಾಪ್ ಸ್ಪೀಡ್ ಹೊಂದಿದ್ದು, ಪೂರ್ಣ ಪ್ರಮಾಣದ ಬ್ಯಾಟರಿ ಚಾರ್ಜಿಂಗ್‌ಗೆ 3 ಗಂಟೆ ಸಮಯಾವಕಾಶ ತೆಗೆದುಕೊಳ್ಳುತ್ತದೆ.

ಇನ್ನು ಈ ಬೈಕ್ ನಿರ್ಮಾಣಕ್ಕಾಗಿ ಬರೋಬ್ಬರಿ ಎರಡೂವರಿ ತಿಂಗಳು ಕಾಲ ಶ್ರಮವಹಿಸಿರುವ ವಾಖರ್ ಅಹಮದ್, ತಾನು ನಿರ್ಮಾಣ ಮಾಡುವ ವಾಹನವು ಪರಿಸಕ್ಕೆ ಯಾವುದೇ ರೀತಿಯ ಧಕ್ಕೆಯಾಗಬಾರದು ಎನ್ನುವ ಧ್ಯೇಯವಾಕ್ಯದೊಂದಿಗೆ ಈ ಬೈಕ್ ನಿರ್ಮಿಸಿದ್ದಾನೆ.

ಹೀಗಾಗಿಯೇ ಈ ಬೈಕಿನ ಬೆಲೆಯನ್ನು ಕೇವಲ 72 ಸಾವಿರಕ್ಕೆ ನಿಗದಿಪಡಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಇಂತದ್ದೇ ಬೈಕ್‌ಗಳನ್ನು ನಿರ್ಮಾಣ ಮಾಡುವ ಗುರಿ ವಾಖರ್ ಅಹಮದ್‌ನಲ್ಲಿದೆ.

ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ವಾಖರ್ ಅಹಮದ್ ನಿರ್ಮಾಣ ಮಾಡಿರುವ ಬೈಕಿನ ಪೆಟೇಂಟ್ ಪಡೆಯಲು ಈಗಾಗಲೇ ಕೆಲ ವಿದೇಶಿ ಕಂಪನಿಗಳು ಮುಂದೆ ಬಂದಿದ್ದರು ಅಂತಹ ಆಮೀಷಗಳಿಗೆ ಒಪ್ಪಿಕೊಳ್ಳದ ಈ ವಿದ್ಯಾರ್ಥಿಯು ಮುಂಬರುವ ದಿನಗಳಲ್ಲಿ ತಾನೇ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಬೈಕ್‌ಗಳನ್ನು ಸಿದ್ದಗೊಳಿಸುವ ತವಕದಲ್ಲಿದ್ದಾನೆ.

ಒಟ್ಟಿನಲ್ಲಿ ಮೋದಿ ಹೆಸರಿನೊಂದಿಗೆ ತನ್ನ ಹೊಸ ಬೈಕಿನ ಬಗೆಗೆ ಆಟೋ ಉದ್ಯಮ ವಲಯದಲ್ಲಿ ಸಂಚಲನ ಸೃಷ್ಠಿಸಿರುವ ವಾಖರ್ ಅಹಮದ್, ಜನಪ್ರಿಯ ವಾಹನ ಉತ್ಪಾದಕರಲ್ಲಿಯೇ ಕುತೂಹಲ ಹುಟ್ಟುಹಾಕಿರುವುದಂತೂ ಸುಳ್ಳಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..
ಕಾನೂನು ಬಾಹಿರವಾಗಿ ಪಾರ್ಕ್ ಮಾಡಿದ್ದಕ್ಕೆ ಸೂಪರ್ ಕಾರ್ ಪುಡಿ ಪುಡಿ ಮಾಡಿದ್ರು...
ಕೆಟಿಎಂ ಗ್ರಾಹಕರೇ ಹುಷಾರ್- ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...
ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್ ಮೆಡ್ 1000 ಸಿಸಿ ಬೈಕ್ ಇದು...
ಅಪಘಾತದ ನಂತರ ಶವವನ್ನು 70 ಕಿಮಿ ಎಳೆದುಕೊಂಡು ಹೊಯ್ತು ಕೆಎಸ್ಆರ್‌ಟಿಸಿ ಬಸ್


Click it and Unblock the Notifications








