ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000 ಸಿಸಿ ಬೈಕ್ ಇದು...

Written By:

ಆ ಯುವಕ ಯಾವುದೇ ಇಂಜಿನಿಯರಿಂಗ್ ಪದವಿದರ ಅಲ್ಲ. ಆದರೂ ಅವನಿಗೆ ಸಂಬಂಧವೇ ಇಲ್ಲದ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದಾನೆ. ಕೇವಲ ಅನುಭವದ ಆಧಾರ ಮೇಲೆ ಹೊಸ ಪ್ರಯತ್ನಕ್ಕೆ ಹಾಕಿ ಇದೀಗ ಯಶಸ್ವಿ ಕೂಡಾ ಆಗಿದ್ದಾನೆ. ಈ ಮೂಲಕ ಸಾಧನೆಗೆ ಯಾವುದೇ ಪದವಿ ಅಗತ್ಯವಿಲ್ಲ ಅನ್ನೋದನ್ನು ತೋರಿಸಿಕೊಟ್ಟಿದ್ದಾನೆ.

ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000ಸಿಸಿ ಬೈಕ್ ಇದು

ಅತ್ಯಂತ ಕಡಿಮೆ ವೆಚ್ಚದಲ್ಲಿ 1000ಸಿಸಿ ಸಾಮರ್ಥ್ಯದ ಕಾಪರ್ ಬೈಕ್‌ ಮಾದರಿಯೊಂದನ್ನು ಸಿದ್ದಗೊಳಿಸಿರುವ ಈ ಯುವಕ ಆಟೋ ಮೊಬೈಲ್ ತಂತ್ರಜ್ಞರನ್ನೇ ಬೆರಗುಗೊಳಿಸಿದ್ದು, ಹೊಸ ಬೈಕಿಗೆ ದಿ ರಿಡ್ ಎಂದು ನಾಮಕರಣ ಮಾಡಿ ಸೂಪರ್ ಬೈಕ್ ಪ್ರಿಯರ ಕುತೂಹಲಕ್ಕೆ ಕಾರಣನಾಗಿದ್ದಾನೆ.

ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000ಸಿಸಿ ಬೈಕ್ ಇದು

ಗುಜುರಾತಿನ ರಾಜ್‌ಕೋಟ್ ಮೂಲದ ರಿದ್ದೇಶ್ ವ್ಯಾಸ್ ಎಂಬಾತನೇ ಈ ವಿನೂತನ ಬೈಕ್ ನಿರ್ಮಾಣ ಮಾಡಿದ್ದು, ಈ ಬೈಕ್ ಸಿದ್ದಗೊಳಿಸಲು ರಿದ್ದೇಶ್ ವ್ಯಾಸ್ ತೆಗೆದುಕೊಂಡಿದ್ದು ಬರೋಬ್ಬರಿ ಎಂಟು ವರ್ಷ ಅಂದ್ರೆ ನೀವು ನಂಬಲೇಬೇಕು.

ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000ಸಿಸಿ ಬೈಕ್ ಇದು

ಇದಕ್ಕೆ ಕಾರಣ, ರಿದ್ದೇಶ್ ಸಿದ್ದಗೊಳಿಸಿರುವ ದಿ ರಿಡ್ ಬೈಕ್ ಮಾದರಿಯು ಸಂಪೂರ್ಣ ಹ್ಯಾಂಡ್ ಮೆಡ್ ಕೌಶಲ್ಯದೊಂದಿಗೆ ಸಿದ್ದಗೊಳಿಸಲಾಗಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ಸೇರಿದಂತೆ ಹೈಡ್ರೊಲಿಕ್ ಕ್ಲಚ್, 4 ಸಿಲಿಂಡರ್ ಎಂಜಿನ್ ಹೊಂದಿದೆ.

ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000ಸಿಸಿ ಬೈಕ್ ಇದು

ಜೊತೆಗೆ 170 ಕೆಜಿ ತೂಕ ಪಡೆದುಕೊಂಡಿರುವ ದಿ ರಿಡ್ ಬೈಕ್ ಮಾದರಿಯು, ಹೈ ಎಂಡ್ ಬೈಕ್ ಲಭ್ಯವಾಗುವ ಎಲ್ಲಾ ವೈಶಿಷ್ಟ್ಯತೆಗಳನ್ನು ಈ ಬೈಕಿನಲ್ಲಿ ಇರಿಸಲಾಗಿದೆ. ಹೀಗಾಗಿ ಬೈಕಿನ ಪ್ರತಿ ಭಾಗವು ಇತರೆ ಸೂಪರ್ ಬೈಕಿಗಿಂತ ವಿಭಿನ್ನವಾಗಿದ್ದು, ಹ್ಯಾಂಡ್ ಮೆಡ್ ವಿನ್ಯಾಸಗಳು ಬೈಕಿಗೆ ಹೊಸ ಲುಕ್ ನೀಡಿವೆ.

ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000ಸಿಸಿ ಬೈಕ್ ಇದು

ಒಂದು ವೇಳೆ 1000 ಸಿಸಿ ಸಾಮರ್ಥ್ಯದ ಸಿಸಿ ಖರೀದಿಸಬೇಕೆಂದರೆ ಏನಿಲ್ಲವೆಂದರೂ 14 ರಿಂದ 18 ಲಕ್ಷ ಬೆಲೆಯಿದ್ದು, ರಿದ್ದೇಶ್ ವ್ಯಾಸ್ ಸಿದ್ದಗೊಳಿಸಿರುವ ಈ ಬೈಕ್ ಕೇವಲ 8 ಲಕ್ಷದೊಳಗೆ ಸಿದ್ದವಾಗಿರುವುದು ಮತ್ತೊಂದು ವಿಶೇಷ.

ಬೈಕಿನ ಟೈರ್‌ಗಳು ಮತ್ತು ಸೀಟುಗಳ ವಿನ್ಯಾಸವು ಸಹ ಸುಖಕರ ಬೈಕ್ ಪ್ರಯಾಣಕ್ಕೆ ಅನುಕೂಲಕರವಾಗುವಂತೆ ಸಿದ್ದಗೊಳಿಸಲಾಗಿದ್ದು, ಸುರಕ್ಷತೆಗಾಗಿ ಎಬಿಎಸ್ ಮತ್ತು ಡಿಸ್ಕ್ ಬ್ರೇಕ್‌ಗಳನ್ನು ಇದರಲ್ಲಿ ಇರಿಸಲಾಗಿದೆ.

ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000ಸಿಸಿ ಬೈಕ್ ಇದು

ಇದಲ್ಲದೆ ದೀರ್ಘ ಕಾಲದ ಬೈಕ್ ರೈಡಿಂಗ್‌ಗಾಗಿ ಇಂಧನ ದಕ್ಷತೆ ಹೆಚ್ಚಿಸಲು ಪ್ರತಿ ಗಂಟೆಗೆ 170ಕಿಮಿ ಟಾಪ್ ಸ್ಪೀಡ್ ಅಳವಡಿಸಿರುವ ರಿದ್ದೇಶ್, ವಿಶ್ವದಲ್ಲೇ ಮೊದಲ ಬಾರಿಗೆ 1000 ಸಿಸಿ ಸಾಮರ್ಥ್ಯದ ಬೈಕ್ ಅನ್ನು ಹ್ಯಾಂಡ್ ಮೆಡ್‌ನೊಂದಿಗೆ ಸಿದ್ದಗೊಳಿಸಿ ಲಿಮ್ಕಾ ರೇಡಾರ್ಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01. ಏಪ್ರಿಲ್ 1ರಿಂದಲೇ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಹೊಸ ರೂಲ್ಸ್..!!

02. ವಯಸ್ಸು 103, ಆದ್ರು ಕಡಿಮೆ ಆಗಿಲ್ಲಾ ಇವರ ಕ್ಯಾಬ್ ಚಾಲನೆಯಲ್ಲಿನ ಹುಮ್ಮಸ್ಸು..

03. ಅಂಬಾನಿ ಮಗನ ಕಾರಿನಲ್ಲಿರುವ ಈ ಗಡಿಯಾರದ ಬೆಲೆ ಕೇವಲ 1.95 ಕೋಟಿ !! ಇನ್ನು ಈ ಕಾರಿನ ಬೆಲೆ ಕೇಳ್ಬೇಡಿ

04. ಜಗತ್ತಿನ 10 ದುಬಾರಿ ಬೈಕ್‌ಗಳು ಯಾವವು ಗೊತ್ತಾ..!!

05. ಅವರದು ವೃತ್ತಿಯಲ್ಲಿ ಕ್ಷೌರಿಕ ಕಾಯಕ- ಆದ್ರೆ ಅವರ ಐಷಾರಾಮಿ ಕಾರುಗಳ ಸಂಗ್ರಹ ಕೇಳಿದ್ರೆ ನಿಮಗೂ ಶಾಕ್..!!

English summary
Meet the man from Rajkot who handmade a 1,000cc bike.
Story first published: Sunday, March 25, 2018, 13:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark