ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿಸುವುದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ?
ಮೋಟಾರ್ ಸೈಕಲ್ ಪ್ರೇಮಿಗಳ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹಲವು ವಿಶೇಷತೆಗಳಿಂದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಅಷ್ಟೇ ಪ್ರಮಾಣದ ನ್ಯೂನತೆಗಳನ್ನು ಹೊಂದುವ ಮೂಲಕ ಬೈಕ್ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ
ಮೋಟಾರ್ ಸೈಕಲ್ ಪ್ರೇಮಿಗಳ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹಲವು ವಿಶೇಷತೆಗಳಿಂದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಅಷ್ಟೇ ಪ್ರಮಾಣದ ನ್ಯೂನತೆಗಳನ್ನು ಹೊಂದುವ ಮೂಲಕ ಬೈಕ್ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದ್ರೆ ನೀವು ನಂಬಲೇಬೇಕು.

ಹೌದು, ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಅಂದ್ರೆನೇ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು ಅಂದ್ರೆ ತಪ್ಪಾಗುವುದಿಲ್ಲ. ಭಾರತೀಯ ಗ್ರಾಹಕರನ್ನು ಎಷ್ಟು ಮೋಡಿ ಮಾಡಿವೆ ಅಂದ್ರೆ ಬಹುತೇಕ ಬೈಕ್ ಪ್ರೇಮಿಗಳಿಗೆ ತಮ್ಮ ಜೀವನದಲ್ಲಿ ಒಮ್ಮೆ ಆದರೂ ಬುಲೆಟ್ ಬೈಕ್ ಖರೀದಿ ಮಾಡಲೇಬೇಕು ಎಂಬ ಮಹಾದಾಸೆ ಇದ್ದೆ ಇರುತ್ತೆ. ಹೀಗಿದ್ದರೂ ಕೂಡಾ ರಾಯಲ್ ಎನ್‌ಫೀಲ್ಡ್ ಖರೀದಿಯು ನ್ಯೂನತೆಗೆ ಹೊರತಾಗಿಲ್ಲ.

ಇದಕ್ಕೂ ಮುನ್ನ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ನಿರ್ಮಾಣದ ಬಗ್ಗೆ ನಾವು ಮಾತನಾಡೋಣ. ಯಾಕೆಂದ್ರೆ ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿರುವ ರಾಯಲ್ ಎನ್‌ಫೀಲ್ಡ್ ಬೈಕ್ ತಾಂತ್ರಿಕವಾಗಿ ನೋಡುವುದಾದರೇ ಇಂದಿಗೂ ಕ್ಲಾಸಿಕ್ ಮಾದರಿಗಳಲ್ಲಿ ಇಂದಿಗೂ ಫೆವರಿಟ್ ಬೈಕ್ ಮಾದರಿಯಾಗಿದೆ.

ಉತ್ಕೃಷ್ಟ ಗುಣಮಟ್ಟ
ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಬೈಕ್ ಮಾದರಿಗಳ ಗುಣಮಟ್ಟದ ನಿರ್ಮಾಣದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಬದಲಾಗಿ ಇತರೆ ಬೈಕ್ ಮಾದರಿಗಳಿಂತಲೂ ಅತ್ಯುತ್ತಮ ಗುಣಮಟ್ಟದ ಎಂಜಿನ್ ಮತ್ತು ಬೀಡಿಭಾಗಗಳನ್ನು ಒದಗಿಸುತ್ತಿದೆ.

ಕ್ವಾಲಿಟಿ ರೈಡ್
ಹೆದ್ದಾರಿಗಳಲ್ಲಿ ಬೈಕ್ ಚಾಲನೆಗೆ ಉತ್ತಮ ಬೈಕ್ ಮಾದರಿ ಎನ್ನಿಸಿಕೊಂಡಿರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಪ್ರತಿ ಗಂಟೆಗೆ 90 ಕಿಮಿ ಕ್ರಮಿಸಬಲ್ಲ ಅಸಾಧರಣ ಶಕ್ತಿ ಹೊಂದಿದ್ದು, ಎಕ್ಸ್‌ಲೆಂಟ್ ಟಾರ್ಕ್ ಉತ್ಪಾದಿಸಬಲ್ಲದು.

ಮರು ಮಾರಾಟಕ್ಕೆ ಉತ್ತಮ
ಇತರೆ ಬೈಕ್ ಮಾದರಿಗಳಿಂತಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಮರು ಮಾರಾಟ ಮೌಲ್ಯವು ಹೆಚ್ಚಿದ್ದು, ಖರೀದಿಗೆ ಮೋಸ ಇಲ್ಲ ಎನ್ನಬಹುದು. ಹೀಗಾಗಿ ಬೈಕ್ ಖರೀದಿಸಿದ 2 ವರ್ಷಗಳ ನಂತರವೂ ಅದರ ಬೆಲೆಯಲ್ಲಿ ಯಾವುದೇ ದೊಡ್ಡ ವ್ಯತ್ಯಾಸ ಕಂಡುಬರುವುದಿಲ್ಲ.

ಹಾಗಾದ್ರೆ ರಾಯಲ್ ಎನ್‌ಫೀಲ್ಡ್ ನ್ಯೂನತೆ ಏನು?
ಸಾಮಾನ್ಯ ತೊಂದರೆಗಳು
ಹೌದು, ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಗೇರ್‌ಬಾಕ್ಸ್‌ನಲ್ಲಿ ಆಯಿಲ್ ಲೀಕ್, ಎಲೆಕ್ಟ್ರಿಕ್ ವೈರ್‌ಗಳಲ್ಲಿ ತೊಂದರೆಗಳು, ಕನ್‌ಸೊಲ್ ತೊಂದರೆಗಳು ಮತ್ತು ಬ್ರೇಕಿಂಗ್ ವಿಭಾಗದಲ್ಲಿ ಪದೇ ಪದೇ ತೊಂದರೆ ಕಾಣಿಸಿಕೊಳ್ಳುತ್ತಲೇ ಇರುತ್ತವೆ ಎನ್ನುವುದು ಗ್ರಾಹಕರ ದೂರು.

ವೈಬ್ರೆಷನ್
ಈ ಮೇಲೆ ಹೇಳಿದಂತೆ ಹೆದ್ದಾರಿಗಳಲ್ಲಿ ಉತ್ತಮ ವೇಗದಲ್ಲಿ ಕ್ರಮಿಸಬಲ್ಲ ಶಕ್ತಿ ಹೊಂದಿರುವ ರಾಯಲ್ ಎನ್‌ಫೀಲ್ಡ್‌ಗಳಲ್ಲಿ ವೆಬ್ರೈಟ್ ತೊಂದರೆ ಸಾಕಷ್ಟಿದೆ. ಒಂದು ವೇಳೆ ನೀವು ಗಂಟೆಗೆ 60 ಕಿಮಿಗಿಂತ ಹೆಚ್ಚು ವೇಗದಲ್ಲಿ ಬೈಕ್ ಸವಾರಿ ಮಾಡಿದಲ್ಲಿ ಇದು ನಿಮ್ಮ ಅನುಭವಕ್ಕೆ ಬರುವುದು.

ಚಾಲನೆ ಸುಲಭವಲ್ಲ
ರಾಯಲ್ ಎನ್‌ಫೀಲ್ಡ್ ಇತರೆ ಬೈಕ್‌ಗಿಂತಲೂ ಸ್ವಲ್ಪ ಕ್ಲಿಷ್ಟಕರವಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಇತರೆ ಬೈಕ್‌ಗಳನ್ನು ಸಲೀಸಾಗಿ ಚಾಲನೆ ಮಾಡಬಲ್ಲ ಅದೆಷ್ಟೋ ಬೈಕ್ ರೈಡರ್‌ಗಳು ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಚಾಲನೆ ಮಾಡಲು ಹಿಂದೇಟು ಹಾಕುತ್ತಾರೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಸರ್ವಿಸ್ ವಿಚಾರ
ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡುವುದು ಎಷ್ಟು ಸುಲಭವೋ ಅಷ್ಟೇ ಪ್ರಮಾಣದಲ್ಲಿ ಅದರ ಬೀಡಿಭಾಗಗಳ ರೀಪೆರಿ ಪ್ರಕ್ರಿಯೆಯೂ ಕೂಡಾ ಕಠಿಣವಾಗಿದೆ. ಯಾಕೆಂದ್ರೆ ಅಧಿಕೃತ ಸರ್ವಿಸ್ ಸೇಂಟರ್‌ಗಳನ್ನು ಹೊರತುಪಡಿಸಿ ಬೇರೆಯಡೆ ಸರ್ವಿಸ್ ಮಾಡಿದಲ್ಲಿ ಮತ್ತಷ್ಟು ತೊಂದರೆ ತಪ್ಪಿದ್ದಲ್ಲ ಎನ್ನಬಹುದು.

ಇನ್ನು ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇತ್ತೀಚೆಗೆ ಗ್ರಾಹಕರ ಸೇವೆಗಳಲ್ಲಿ ಭಾರೀ ಬದಲಾವಣೆ ತಂದಿದ್ದು, ತನ್ನ ಪ್ರತಿಸ್ಪರ್ಧಿ ಬೈಕ್ ಸಂಸ್ಥೆಗಳ ಪೈಪೋಟಿಗೆ ಪ್ರತ್ಯುತ್ತರವಾಗಿ ಬೈಕ್ ಮಾರಾಟದಲ್ಲಿ ಸಾಕಷ್ಟು ಹೊಸತನ ಪರಿಚಯಿಸಿದೆ.
MOST READ: ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಜೊತೆಗೆ ಬೈಕ್‌ಗಳಲ್ಲಿನ ಸುರಕ್ಷತಾ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಡ್ಯುಯಲ್ ಡಿಸ್ಕ್ ಬ್ರೇಕ್, ಎಬಿಎಸ್ ಸೌಲಭ್ಯಗಳನ್ನು ಕಡ್ಡಾಯವಾಗಿ ನೀಡುತ್ತಿದ್ದು, ಕ್ಲಾಸಿಕ್, ಬುಲೆಟ್, ಥಂಡರ್‌ಬರ್ಡ್, ಬುಲೆಟ್ ಟ್ರಯಲ್ಸ್, ಹಿಮಾಲಯನ್ ಜೊತೆಗೆ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳು ಇದೀಗ ಮಾರುಕಟ್ಟೆಯಲ್ಲಿ ಈ ಹಿಂದಿಗಿಂತಲೂ ವಿನೂತನ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ.


Click it and Unblock the Notifications








