ಎಎಂಟಿ ಕಾರುಗಳನ್ನು ಚಾಲನೆ ಮಾಡುವ ಮುನ್ನ ಈ ವಿಚಾರಗಳು ಗೊತ್ತಿರಲಿ...
ಎಎಂಟಿ ಕಾರುಗಳ ಖರೀದಿ ಹೆಚ್ಚಿನ ಒಲವು ತೋರುತ್ತಿದ್ದಾರೆ. ಆದರೇ ಎಎಂಟಿ ಕಾರುಗಳ ಚಾಲನೆಗೂ ಮುನ್ನ ಕೆಲವು ವಿಚಾರಗಳನ್ನು ನೀವು ತಿಳಿದುಕೊಳ್ಳಲೇಬೇಕು.
ಸದ್ಯ ದೇಶಿಯ ಆಟೋ ಉದ್ಯಮದಲ್ಲಿ ಬಹುದೊಡ್ಡ ಬದಲಾವಣೆಯೊಂದಿಗೆ ಪ್ರತಿ ಆರಂಭಿಕ ಕಾರು ಮಾದರಿಗಳಲ್ಲೂ ಸಹ ಎಎಂಟಿ(ಆಟೋಮ್ಯಾಟಿಕ್ ಗೇರ್‌ಬಾಕ್ಸ್) ವ್ಯವಸ್ಥೆಯನ್ನು ಒದಗಿಸಲಾಗುತ್ತಿದ್ದು, ಗ್ರಾಹಕರು ಸಹ ಎಎಂಟಿ ಕಾರುಗಳ ಖರೀದಿ ಹೆಚ್ಚಿನ ಒಲವು ತೋರುತ್ತಿದ್ದಾರೆ. ಆದರೇ ಎಎಂಟಿ ಕಾರುಗಳ ಚಾಲನೆಗೂ ಮುನ್ನ ಕೆಲವು ವಿಚಾರಗಳನ್ನು ನೀವು ತಿಳಿದುಕೊಳ್ಳಲೇಬೇಕು.

ಮೊದಮೊದಲ ಫಾರ್ಮುಲ್ 1 ರೇಸ್ ಕಾರುಗಳಲ್ಲಿ ಪರಿಚಯವಾದ ಎಎಂಟಿ ಸೌಲಭ್ಯಗಳು 2014ರ ನಂತರ ಅಗ್ಗದ ಬೆಲೆಯ ಸೆಲೆರಿಯೊ ಕಾರುಗಳಲ್ಲೂ ಎಎಂಟಿ ಪರಿಚಯಿಸುವ ಮೂಲಕ ಮಾರುತಿ ಸುಜುಕಿ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಬಹುದೊಡ್ಡ ಬದಲಾವಣೆಯನ್ನೇ ತಂದಿತು. ಇದಾದ ಬಳಿಕ ಎಲ್ಲಾ ಕಾರು ಉತ್ಪಾದಕರು ಸಹ ಎಎಂಟಿ ಮಾದಿರಿಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಹೆಚ್ಚಿನ ಆಸಕ್ತಿ ತೊರುತ್ತಿದ್ದಾರೆ.

ಹೀಗಾಗಿ ಸದ್ಯದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಪ್ರತಿ ಕಾರುಗಳು ಮ್ಯಾನುವಲ್ ಗೇರ್‌ಬಾಕ್ಸ್ ಜೊತೆ ಜೊತೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವೆರಿಯೆಂಟ್‌ಗಳು ಲಭ್ಯವಾಗುತ್ತಿದ್ದು, ಈ ಹಿನ್ನೆಲೆ ಎಎಂಟಿ ಪ್ರಿಯರಿಗಾಗಿ ಇಲ್ಲಿ ಕೆಲವು ಟಿಪ್ಸ್‌ಗಳನ್ನು ನೀಡಲಾಗಿದೆ.

ಫ್ಯೂಲ್ ಉಳಿಸುವ ಸಾಹಸ ಬೇಡ
ಕೆಲವು ಇಳಿಜಾರು ಪ್ರದೇಶಗಳಲ್ಲಿ ನ್ಯೂಟ್ರಲ್ ಮೂಡ್‌ಗಳಲ್ಲಿ ಕಾರು ಮಾಡುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಆದ್ರೆ ಹೀಗೆ ಮಾಡುವುದರಿಂದ ನಿಮ್ನ ಕಾರಿನ ಎಂಜಿನ್‌ಗೆ ಹೊಡೆತ ಬೀಳುತ್ತೆ. ಇದರಿಂದ ಇಂಧನ ಉಳಿತಾಯವಾದರೂ ಎಂಜಿನ್ ದಕ್ಷತೆಗೆ ದಕ್ಕೆ ಉಂಟಾಗುತ್ತದೆ.

ಬ್ರೇಕ್ ಹಾಕುವಾಗ ಹುಷಾರ್
ಕೆಲವರು ಎಎಂಟಿ ಕಾರುಗಳನ್ನು ಬ್ರೇಕ್ ಹಾಕುವಾಗ ಬ್ರೇಕ್ ಬಳಕೆ ಬದಲು ಗೇರ್‌ಬಾಕ್ಸ್ ಮೂಲಕ ವೇಗದ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗುತ್ತಾರೆ. ಇದು ಕೂಡಾ ಗೇರ್‌ಬಾಕ್ಸ್‌ಗೆ ಮಾರಕವಾಗಿದ್ದು, ಕಾರು ನಿಲುಗಡೆ ಸಂದರ್ಭದಲ್ಲಿ ಬ್ರೇಕ್ ಬಳಕೆಗೆ ಹೆಚ್ಚಿನ ಒತ್ತುನೀಡಿರಿ.

ನ್ಯೂಟ್ರಲ್ ಮೂಡ್ ಬೇಡವೇ ಬೇಡ
ಅನೇಕ ಎಎಂಟಿ ಕಾರು ಮಾಲೀಕರು ಇಂಧನ ಉಳಿಸಲು ತಮ್ಮ ಕಾರುಗಳನ್ನು ನ್ಯೂಟ್ರಲ್ ಮೂಡ್‌ನಲ್ಲಿ ಇರಿಸುವುದನ್ನು ನಾವು ನೋಡಿದ್ದೇವೆ. ಆದ್ರೆ ಅದು ತಪ್ಪು ಎಂಬುವುದಕ್ಕೆ ಹಲವು ಕಾರಣಗಳಿದ್ದು, ನ್ಯೂಟ್ರಲ್ ಮೂಡ್ ಬದಲಾಗಿ ಡ್ರೈವ್ ಮೂಡ್‌ನಲ್ಲೂ ಇಂಧನ ಉಳಿತಾಯವಾಗುತ್ತದೆ ಎಂಬುವುದನ್ನು ಮರೆಯಬೇಡಿ.

ಪಾರ್ಕ್ ಮಾಡುವಾಗ ಮುನ್ನ ಎಚ್ಚರ
ನೀವು ಕಾರುಗಳನ್ನು ಸಂಪೂರ್ಣವಾಗಿ ನಿಲ್ಲಿಸುವ ವೇಳೆ ಯಾವುದೇ ಕಾರಣಕ್ಕೂ ಪಾರ್ಕ್ ಮೂಡ್‌ನಲ್ಲಿ ನಿಲ್ಲಿಸಬೇಡಿ. ಇದಕ್ಕೆ ಕಾರಣ ಏನೇಂದ್ರೆ ಪಾರ್ಕ್ ಮೂಡ್‌ನಲ್ಲಿರುವಾಗ ಕಾರಿನ ಲಾಕಿಂಗ್ ಮುರಿಯುವ ಸಾಧ್ಯತೆಗಳಿರುತ್ತವೆ.

ಹಾರ್ಡ್ ಡ್ರೈವಿಂಗ್
ವಿಶೇಷವಾಗಿ ಚಳಿಗಾಲದಲ್ಲಿ. ತೈಲವು ದಪ್ಪವಾಗಿರುತ್ತದೆ ಮತ್ತು ಹವಾಮಾನ ತಣ್ಣಗಿರುವಾಗ ನಿಧಾನವಾಗಿ ಚಲಿಸುತ್ತದೆ ಎಂಬುವುದನ್ನು ಮರೆಯಬೇಡಿ. ಹೀಗಾಗಿ ಕಾರು ಚಾಲನೆ ಮಾಡಿದ ಕೆಲ ಸಮಯದ ತನಕ ಹಾರ್ಡ್ ಡ್ರೈವ್ ಬದಲಾಗಿ ಕೆಲ ನಿಮಿಷಗಳ ಕಾಲ ನಿಧಾನವಾಗಿ ಚಲಿಸಿ. ಇಲ್ಲವಾದ್ರೆ ಇದು ಎಂಜಿನ್‌ನ ಆಂತರಿಕ ಭಾಗಗಳಲ್ಲಿ ಹೊಡೆತ ಬೀಳುತ್ತೆ.

ಇಂಧನ ಟ್ಯಾಂಕ್ ಖಾಲಿ ಆದ್ರೆ ಕಷ್ಟ
ಎಎಂಟಿ ಕಾರುಗಳಲ್ಲಿ ಇದು ತುಂಬಾ ಮುಖ್ಯ ವಿಚಾರ. ಒಂದು ವೇಳೆ ಪದೇ ಪದೇ ಕಾರು ಚಾಲನೆಯಲ್ಲಿರುವ ಫ್ಯೂಲ್ ಇಲ್ಲದೇ ಎಂಜಿನ್ ಸ್ತಬ್ಧಗೊಂಡಲ್ಲಿ ಕಾರಿನ ದಕ್ಷತೆ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ನೀವು ಕಾರಿನ ಇಂಧನ ಟ್ಯಾಂಕ್ ಅನ್ನು ಖಾಲಿಯಾಗದಂತೆ ಗಮನಹರಿಸಿ.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಎಎಂಟಿ ಬಳಕೆಯ ವೇಳೆ ಇಂಧನ ದಕ್ಷತೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂಬುದು ಇದರ ಪ್ರಮುಖ ಅಂಶವಾಗಿದೆ. ಇದೇ ಕಾರಣಕ್ಕಾಗಿ ಇಟಲಿಯ ಮಾಗ್ನೆಟ್ಟಿ ಮರೆಲ್ಲಿ ಪೂರೈಕೆ ಮಾಡುತ್ತಿರುವ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳಿಗೆ ಭಾರತದಲ್ಲಿ ಅತ್ಯಧಿಕ ಬೇಡಿಕೆ ಕಂಡುಬರುತ್ತಿದೆ.

ಜೊತೆಗೆ ವಾಹನ ತಜ್ಞರ ಪ್ರಕಾರ ಎಎಂಟಿ ಬಳಕೆಯು ಚಾಲಕ ಹಾಗೂ ತಯಾರಕರ ದೃಷ್ಟಿಕೋನದಲ್ಲೂ ಹೆಚ್ಚು ಅನುಕೂಲಕರವಾಗಿದೆ. ಇನ್ನೊಂದೆಡೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳು ಸಂಪೂರ್ಣ ವಿಭಿನ್ನ ವ್ಯವಸ್ಥೆಯನ್ನು ಪಡೆದುಕೊಂಡಿರುತ್ತದೆ.


Click it and Unblock the Notifications








