ಆರೋಗ್ಯದ ಬಗ್ಗೆ ಇರಲಿ ಕಾಳಜಿ: ಡ್ರೈವಿಂಗ್ ಒತ್ತಡವನ್ನು ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ಭಾರತದಲ್ಲಿ ವಾಹನ ಓಡಿಸುವುಸುದು ಅಷ್ಟು ಸುಲಭವಲ್ಲ. ಸದಾ ಎಚ್ಚರವಹಿಸಿ ಡ್ರೈವ್ (Driving) ಮಾಡಬೇಲು. ಒಂದು ಕಡೆ ಅಡ್ಡಾದಿಡ್ಡಿ ಬರುವ ಇತರ ವಾಹನ ಸಾವರರು ಇನ್ನೋಂದು ಕಡೆ ಪ್ರಾಣಿಗಳು ಬಂದರೆ, ಮತ್ತೊಂದಡೆ ಜನರು ಆಗಾಗ ಅಡ್ಡ ಬರುತ್ತಿರುತ್ತಾರೆ. ಆ ಸಮಯದಲ್ಲಿ ಕೆಲವು ಜನರ ಬಿಪಿ ರೈಸ್ ಆಗುತ್ತದೆ. ಡ್ರೈವ್ ಮಾಡುವಾಗ ಹೆಚ್ಚು ಒತ್ತಡದ ಅನುಭವವಾಗುತ್ತದೆ.

ದೇಹ ಫಿಟ್‌ ಆಗಿ ಆರೋಗ್ಯವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಹೀಗಿದ್ದಾಗ ಅದೇ ರೀತಿಯ ವ್ಯಾಯಾಮ ಆಹಾರ ಶೈಲಿಯನ್ನು ಪಾಲಿಸಬೇಕು. ಆದರೆ ನೀವು ಒತ್ತಡದಿಂದ ಡ್ರೈವಿಂಗ್ ಮಾಡುವಾಗ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ದಿನನಿತ್ಯದ ದಿನಚರಿಯ ಮೇಲೆ ನೇರ ಪರಿಣಾಮ ಬೀರಬಹುದು. ಡ್ರೈವಿಂಗ್ ಒತ್ತಡವನ್ನು ಕಡಿಮೆ ಮಾಡಲು ಕೆಲವು ಉಪಯುಕ್ತ ಸಲಹೆಗಳು ಮತ್ತು ಯೋಗ ತಂತ್ರಗಳು ಇಲ್ಲಿವೆ. ನಿಮ್ಮ ಆರೋಗ್ಯವನ್ನು ಕಾಪಡಲು ಇಲ್ಲಿದೆ ಕೆಲವು ಪ್ರಮುಖ ಟಿಪ್ಸ್.

Reduce Driving Stress

ಧ್ಯಾನ: ನೀವು ಒಂದು ವೇಲೆ ಲಾಂಗ್ ಡ್ರೈವ್ ಹೋಗುವ ಮುನ್ನ ಕೆಲವು ನಿಮಿಷಗಳ ಕಾಲ ಧ್ಯಾನ ಮಾಡುವುದು ನಿಮಗೆ ಶಾಂತವಾಗಲು ಮತ್ತು ಚಾಲನೆಯಲ್ಲಿ ನಿಮ್ಮ ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಶಾಂತತೆಯು ಚಾಲಕನ ಆಯಾಸ ಸಹ ಕಡಿಮೆ ಮಾಡುತ್ತದೆ. ಅಲ್ಲದೇ ರಸ್ತೆಯಲ್ಲಿ ಇತರ ವಾಹನ ಅಥವಾ ಪ್ರಾಣಿಗಳು ಅಡ್ಡ ಬಂದರೆ ಕೋಪ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಉಸಿರಾಟದ ವ್ಯಾಯಾಮ: ಉಸಿರಾಟದ ವ್ಯಾಯಾಮಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವ ಅತ್ಯುತ್ತಮ ತಂತ್ರಗಳಲ್ಲಿ ಒಂದಾಗಿದೆ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಈ ವ್ಯಾಯಾಮವು ತುಂಬಾ ಉಪಯುಕ್ತವಾಗಿದೆ, ವಿಶೇಷವಾಗಿ ನೀವು ವಾಹನ ಅಥವಾ ಪ್ರಾಣಿಗಳು ಅಡ್ಡಾದಿಡ್ಡಿ ಬಂದರೆ ದೀರ್ಘವಾದ ಉಸಿರನ್ನು ತೆಗೆದುಕೊಂಡು ಕೋಪವನ್ನು ನಿತಂತ್ರಿಸಿ. ಇದೇ ರೀತಿ ಮೂರು ನಾಲ್ಕು ಬಾರಿ ಮಾಡಿ.

Reduce Driving Stress

ಭುಜಕ್ಕೆ ವ್ಯಾಯಮ: ನೀವು ಡ್ರೈವಿಂಗ್ ಮಾಡುವಾಗ ನಿರಂತರ ಸ್ಟೀರಿಂಗ್ ತಿರುಗಿಸುವಾಗ ನಿಮ್ಮ ಭುಜದ ಬಲವನ್ನು ಬಲಸುತ್ತೀರಾ. ಇದಕ್ಕೆ ಭುಜದ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಬಹುದು. ಈ ಒತ್ತಡವನ್ನು ನಿವಾರಿಸಲು, ನಿಮ್ಮ ಭುಜವನ್ನು ಪ್ರದಕ್ಷಿಣಾಕಾರವಾಗಿ ಮತ್ತು ವಿರೋಧಿ ಪ್ರದಕ್ಷಿಣಾಕಾರವಾಗಿ ತಿರುಗಿಸುವುದು ನಿಮ್ಮ ಭುಜಗಳನ್ನು ವಿಶ್ರಾಂತಿ ಮಾಡಲು ಮತ್ತು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ತೋಳಿನ ವ್ಯಾಯಮ: ಭುಜಗಳಂತೆಯೇ, ಹೆಚ್ಚು ಸಮಯದವರೆಗೆ ಚಾಲನೆ ಮಾಡುವುದು ತೋಳುಗಳಲ್ಲಿ ಸಾಕಷ್ಟು ಒತ್ತಡ ಮತ್ತು ಅಸ್ವಸ್ಥತೆಯನ್ನು ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ ವಾಹನವನ್ನು ಸುರಕ್ಷಿತವಾಗಿ ನಿಲ್ಲಿಸುವುದು ಮತ್ತು ಕೆಲವು ನಿಮಿಷಗಳ ಕಾಲ ನಿಮ್ಮ ತೋಳುಗಳನ್ನು ವಿಶ್ರಾಂತಿ ಮಾಡುವುದು ಉತ್ತಮ ಕೆಲಸ. ಇನ್ನು ತೋಳಿನ ಭಾಗದ ಕೊಬ್ಬನ್ನು ಕರಗಿಸಲು ಒಂದಷ್ಟು ಕಠಿಣ ವ್ಯಾಯಾಮಗಳನ್ನು ಮಾಡಲೇಬೇಕು.

Reduce Driving Stress

ಸ್ಟ್ರೆಚಿಂಗ್ ವ್ಯಾಯಾಮ ದೀರ್ಘ ಪ್ರಯಾಣಗಳು ಸಾಮಾನ್ಯವಾಗಿ ನಿಮ್ಮ ದೇಹದಲ್ಲಿ ಸಾಕಷ್ಟು ಆಯಾಸವನ್ನು ಉಂಟುಮಾಡಬಹುದು, ದೇಹದಾದ್ಯಂತ ರಕ್ತದ ಹರಿವನ್ನು ಸುಧಾರಿಸಲು ಕೆಲವು ಸರಿಯಾದ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡುವುದು ತುಂಬಾ ಒಳ್ಳೆಯದು. ಇದು ಇಡೀ ದೇಹವನ್ನು ವಿಶ್ರಾಂತಿ ಮಾಡುವುದು ಮಾತ್ರವಲ್ಲದೆ ಕೆಲವು ದೇಹದ ನೋವನ್ನು ಸಹ ನಿವಾರಿಸಲು ಸಹಾಯ ಮಾಡುತ್ತದೆ.

ಡ್ರೈವಿಂಗ್ ಒತ್ತಡವು ಸಾಮಾನ್ಯ ಜನರು ಮತ್ತು ಕಾರು ಪ್ರೇಮಿಗಳು ಕಡಿಮೆ ಮಾತನಾಡುವ ವಿಷಯವಾಗಿದೆ. ಡ್ರೈವಿಂಗ್ ಒತ್ತಡವು ಬಹಳ ಗಂಭೀರವಾದ ಸಮಸ್ಯೆಯಾಗಿದೆ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು. ಹೇಳುವುದಾದರೆ, ಮೇಲೆ ಪಟ್ಟಿ ಮಾಡಲಾದ ಸಲಹೆಗಳು ಮತ್ತು ತಂತ್ರಗಳು ಡ್ರೈವಿಂಗ್ ಒತ್ತಡವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ನೀವು ನಿಮ್ಮ ಆರೋಗ್ಯದ ಕಡೆ ಗಮನಹರಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, September 14, 2023, 20:28 [IST]
English summary
Tips to reduce driving stress details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+