ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

Written By:

ಆಟೋ ಉದ್ಯಮದಲ್ಲಿ ದಿನಕ್ಕೊಂದು ಬಗೆಯ ಕಾರು ಮಾದರಿಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಆದ್ರೆ ಬಿಡುಗಡೆಯಾಗುವ ಕಾರುಗಳಲ್ಲಿ ಯಾವುದನ್ನು ಖರೀದಿ ಮಾಡಿದ್ರೆ ಒಳಿತು ಎನ್ನುವ ಗೊಂದಲ ಕಾರು ಖರೀದಿದಾರರಲ್ಲಿ ಇದ್ದೇ ಇರುತ್ತೆ. ಅದರಲ್ಲೂ ಪೆಟ್ರೋಲ್ ಎಂಜಿನ್ ಕಾರು ಖರೀದಿಸಬೇಕೋ ಅಥವಾ ಡೀಸೆಲ್ ಖರೀದಿಸಬೇಕೋ? ಎನ್ನುವ ಪ್ರಶ್ನೆಗಳೇ ಹೆಚ್ಚು.

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ಆದರೆ ಆಟೋ ವಿಶ್ಲೇಷಕರನ್ನು ಈ ಬಗ್ಗೆ ಕೇಳಿದಾಗ ಅವರಿಂದ ಬರುವ ಉತ್ತರ ನಿಜಕ್ಕೂ ಅಚ್ಚರಿಯಾಗುತ್ತೆ. ಯಾಕೆಂದ್ರೆ ಪೆಟ್ರೋಲ್ ಕಾರುಗಳಿಂದ ಡೀಸೆಲ್ ಎಂಜಿನ್ ಕಾರುಗಳೇ ಶ್ರೇಷ್ಠ ಎನ್ನುವ ಅವರ ವಾದಕ್ಕೆ ಹಲವು ವೈಜ್ಞಾನಿಕ ಕಾರಣಗಳಿದ್ದು, ಮಹತ್ವದ ವಿಚಾರಗಳನ್ನು ಇಲ್ಲಿ ಚರ್ಚಿಸಿದ್ದಾರೆ.

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ದೀರ್ಘ ಕಾಲದ ಪಯಣ

ನಿಜವಾಗಲೂ ನಿಮ್ಮ ದೈನಂದಿನ ಪಯಣದಲ್ಲಿ ಅಧಿಕ ದೂರ ಪಯಣಿಸುವುದಾದ್ದಲ್ಲಿ ನಿಸ್ಸಂಶಯವಾಗಿಯೂ ಡೀಸೆಲ್ ಕಾರನ್ನು ಖರೀದಿ ಮಾಡುವುದು ಹೆಚ್ಚು ಸೂಕ್ತ. ಅಂದರೆ ದೈನಂದಿನ 70ರಿಂದ 90 ಕೀ.ಮೀ. ಅಥವಾ ಅದಕ್ಕಿಂತಲೂ ಹೆಚ್ಚು ಪಯಣಿಸುವುದರಲ್ಲಿ ನಿಮಗೆ ಡೀಸೆಲ್ ಕಾರು ಹೆಚ್ಚು ಹೊಂದಿಕೆಯಾಗುತ್ತದೆ.

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ಡೀಸೆಲ್ ಕಾರುಗಳನ್ನು ಪರಿಗಣಿಸಿದಾಗ ಪೆಟ್ರೋಲ್ ಮಾದರಿಗಳು ಹೆಚ್ಚು ಶಕ್ತಿಶಾಲಿ ಎನಿಸಿದರೂ ಕಡಿಮೆ ಮೈಲೇಜ್ ನೀಡುತ್ತದೆ. ಇದರಿಂದಾಗಿ ಹೆಚ್ಚು ಚಾಲನಾ ವೆಚ್ಚ ಖರ್ಚಾಗಲಿದೆ. ಹಾಗಾಗಿ ದೈನಂದಿನ 20 ರಿಂದ 25 ಕೀ.ಮೀ ಸಂಚರಿಸುವುದಾದ್ದಲ್ಲಿ ಪೆಟ್ರೋಲ್ ಕಾರುಗಳೇ ಹೊಂದಿಕೆಯಾಗಬಹುದು.

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ವಾಣಿಜ್ಯ ಬಳಕೆ

ನಿಮ್ಮ ವೈಯಕ್ತಿಕ ಅಗತ್ಯಗಳಿಗಾಗಿ ಕಾರನ್ನು ಬಳಸುವುದಾದ್ದಲ್ಲಿ ಪೆಟ್ರೋಲ್ ಕಾರು ಓಕೆ ಎನ್ನಬಹುದು. ಆದರೆ ವಾಣಿಜ್ಯ ಅಥವಾ ವ್ಯಾಪಾರ ಅಗತ್ಯಗಳಿಗಾಗಿ ಡೀಸೆಲ್ ಮಾದರಿ ಆಯ್ಕೆ ಬೆಸ್ಟ್. ಮೇಲೆ ತಿಳಿಸಿದಂತೆಯೇ ಆರ್ಥಿಕತೆಯ ದೃಷ್ಟಿಕೋನದಲ್ಲೂ ಡೀಸೆಲ್ ಕಾರುಗಳು ನಿಮಗೆ ಹೆಚ್ಚು ಇಂಧನ ಕ್ಷಮತೆ ನೀಡುತ್ತದೆ.

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ಹೆಚ್ಚು ಮೈಲೇಜ್

ಮೇಲೆ ತಿಳಿಸಿರುವಂತೆಯೇ ಪೆಟ್ರೋಲ್‌ಗಿಂತ ಡೀಸೆಲ್ ಕಾರುಗಳು ಹೆಚ್ಚು ಮೈಲೇಜ್ ನೀಡುತ್ತದೆ. ಸಣ್ಣ ಕಾರುಗಳಲ್ಲಿ ಇದು ಹೆಚ್ಚು ಭಾಸವಾಗದಿದ್ದರೂ ದೊಡ್ಡ ಕಾರು ಆಯ್ಕೆ ಮಾಡುವಾಗ ಖಂಡಿತವಾಗಿಯೂ ಇದು ನಿಮ್ಮ ಅನುಭವಕ್ಕೆ ಬರಲಿದೆ.

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ತಜ್ಞರ ಪ್ರಕಾರ 3 ಲೀಟರ್ ಪೆಟ್ರೋಲ್ ಎಂಜಿನ್ ಕಾರೊಂದು ಪ್ರತಿ ಲೀಟರ್‌ಗೆ 8ರಿಂದ 9 ಕೀ.ಮೀ. ಮೈಲೇಜ್ ನೀಡುವುದಾದರೆ ಡೀಸೆಲ್ ಕಾರುಗಳಲ್ಲಿ ಈ ಪ್ರಮಾಣ 11ರಿಂದ 12ರಷ್ಟು ಕೀ.ಮೀ.ಗಳಷ್ಟು ಆಗಿರಲಿದೆ. ಇದು ಶೇಕಡಾ 15ರಿಂದ 20ರಷ್ಟು ಹೆಚ್ಚಾಗಿದೆ.

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ಆದರೆ 800ಸಿಸಿಗಳಂತಹ ಸಣ್ಣ ಕಾರುಗಳ ವಿಚಾರಕ್ಕೆ ಬಂದಾಗ ಕಡಿಮೆ ಮಾಲಿಕತ್ವ ವೆಚ್ಚ ಹಾಗೂ ನಿರ್ವಹಣಾ ವೆಚ್ಚವನ್ನು ಹೊಂದಿರುವ ಪೆಟ್ರೋಲ್ ಕಾರುಗಳು ತನ್ನ ಪ್ರತಿಸ್ಪರ್ಧಿ ಡೀಸೆಲ್ ಕಾರುಗಳನ್ನು ಮೀರಿ ನಿಂತಿದೆ.

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ಯುರೋಪಿಯನ್ ಬ್ರಾಂಡ್ ಕಾರುಗಳು

ಡೀಸೆಲ್ ಕಾರು ಆಯ್ಕೆ ವಿಚಾರದಲ್ಲಿ ಯುರೋಪಿಯನ್ ಬ್ರಾಂಡ್ ಕಾರುಗಳು ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಫೋಕ್ಸ್‌ವ್ಯಾಗನ್, ಆಡಿ, ಬಿಎಂಡಬ್ಲ್ಯುಗಳಂತಹ ಯುರೋಪ್‌ನ ವಾಹನ ತಯಾರಕ ಸಂಸ್ಥೆಗಳು ಹೆಚ್ಚೆಚ್ಚು ಡೀಸೆಲ್ ಕಾರುಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತವೆ.

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ಇನ್ನೊಂದೆಡೆ ಪೆಟ್ರೋಲ್ ಮೇಲೆ ಅತಿ ಹೆಚ್ಚು ಹೂಡಿಕೆ ಮಾಡುತ್ತಿರುವ ಜಪಾನ್ ಹಾಗೂ ಅಮೆರಿಕದ ವಾಹನ ತಯಾರಕ ಸಂಸ್ಥೆಗಳು ಅತ್ಯುತ್ತಮ ಪೆಟ್ರೋಲ್ ಕಾರುಗಳನ್ನು ಹೊಂದಿದೆ. ಹೀಗಾಗಿ ಕಾರು ಬ್ರ್ಯಾಂಡ್ ಆಯ್ಕೆ ಪ್ರಮುಖವಾಗಿರುತ್ತದೆ.

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ದೀರ್ಘ ಎಂಜಿನ್ ಬಾಳ್ವಿಕೆ

ನಿಮಗೆ ಕಾರಿನ ಎಂಜಿನ್ ಧೀರ್ಘ ಕಾಲದ ಬಾಳ್ವಿಕೆ ಬರಲು ಡೀಸೆಲ್ ಎಂಜಿನ್‌ಗಳನ್ನು ಆಯ್ಕೆ ಮಾಡಿ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಸಾಮಾನ್ಯವಾಗಿ ಡೀಸೆಲ್ ಎಂಜಿನ್‌ಗಳು ಕಂಪ್ರೆಷನ್ ಟೈಪ್ ಇಗ್ನಿಷನ್‌ನಿಂದ ಕೆಲಸ ಮಾಡುತ್ತಿದ್ದು, ಇನ್ನೊಂದೆಡೆ ಪೆಟ್ರೋಲ್ ಎಂಜಿನ್ ಸ್ಪಾರ್ಕ್ ಇಗ್ನಿಷನ್ ವ್ಯವಸ್ಥೆ ಹೊಂದಿದೆ.

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ಇದರಿಂದಾಗಿ ಡೀಸೆಲ್ ಎಂಜಿನ್ ಬಾಳ್ವಿಕೆ ಕಡಿಮೆ ಎನ್ನಲಾಗುತ್ತಿದೆ. ಆದರೆ ಸರಿಯಾಗಿ ನಿರ್ವಹಣೆ ಮಾಡಿದ ಡೀಸೆಲ್ ಎಂಜಿನ್‌ಗಳು 3ರಿಂದ ಕೆಲವೊಂದು ಬಾರಿ 5 ಲಕ್ಷ ಕೀ.ಮೀ. ವರೆಗೂ ನಿರ್ವಹಣೆ ನೀಡಲಿದೆ. ಇನ್ನೊಂದೆಡೆ ಪೆಟ್ರೋಲ್ ಕಾರು ಒಂದು ಲಕ್ಷ ಕೀ.ಮೀ. ವರೆಗೆ ಮಾತ್ರ ಹೊಂದಿರುತ್ತದೆ. ಸಹಜವಾಗಿಯೇ ಡೀಸೆಲ್ ಕಾರು ನಿರ್ವಹಣೆಗೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ರೀ ಸೇಲ್ ಮೌಲ್ಯ

ಪೆಟ್ರೋಲ್‌ಗೆ ಹೋಲಿಸಿದರೆ ಡೀಸೆಲ್ ಕಾರುಗಳ ಮರು ಮಾರಾಟ ಮೌಲ್ಯ ಸಹ ಹೆಚ್ಚಿರುತ್ತದೆ. ಅಂದರೆ ದೇಶೀಯ ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಡೀಸೆಲ್ ಕಾರುಗಳ ಮೌಲ್ಯ ಪೆಟ್ರೋಲ್ ಕಾರಿಗಿಂತ ಹೆಚ್ಚಾಗಿದೆ.

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ಉತ್ತಮ ನಿರ್ವಹಣೆ

ಹೆಚ್ಚು ಆರ್‌ಪಿಎಂ ನಿರ್ವಹಿಸಬಲ್ಲ ಪೆಟ್ರೋಲ್ ಎಂಜಿನ್‌ಗಳು ಅತ್ಯುತ್ತಮ ಕ್ಷಮತೆ ಹೊಂದಿವೆ ಎಂದು ಪರಿಗಣಿಸಲಾಗುತ್ತದೆ. ಜೊತೆಗೆ ಸ್ಪಾರ್ಕ್ ಇಗ್ನಿಷನ್ ಹಾಗೂ ಹಗುರ ಭಾರವನ್ನು ಹೊಂದಿರುತ್ತದೆ. ಸಹಜವಾಗಿಯೇ ತಾಂತ್ರಿಕವಾಗಿ ಪೆಟ್ರೋಲ್ ಎಂಜಿನ್‌ಗಳು ಉನ್ನತ ದರ್ಜೆ ಕಾಯ್ದುಕೊಂಡಿದೆ.

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ಆದರೆ ಹೈ ಟೆಕ್ ಡೀಸೆಲ್ ಎಂಜಿನ್‌ಗಳ ಮುಂದೆ ಇದು ಏನು ಅಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅಲ್ಲದೆ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್‌ಗಳು ನಿರ್ವಹಣೆಗೆ ಉತ್ತೇಜನ ನೀಡುತ್ತದೆ.

ಪೆಟ್ರೋಲ್‌ ಕಾರ್ v/s ಡೀಸೆಲ್ ಕಾರ್... ಇವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ತಜ್ಞರ ವಿವರಣೆ...

ಅಂದ ಹಾಗೆ ನಿಮ್ಮ ಬಳಿ ಡೀಸೆಲ್ ಅಥವಾ ಪೆಟ್ರೋಲ್ ಕಾರು ಇದೆಯೇ ? ನಿಮ್ಮ ಕಾರಿನ ನಿರ್ವಹಣೆ ಹಾಗೂ ಮೈಲೇಜ್ ಇತ್ಯಾದಿ ವಿಚಾರಗಳ ಬಗ್ಗೆ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳಿರಿ

Read more on tips cars
English summary
Which one is better, a petrol car or a diesel car, and why?
Story first published: Monday, February 12, 2018, 17:32 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark