ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಇತ್ತೀಚೆಗೆ ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳನ್ನು ತಡೆದು ದರೋಡೆ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಹಣ ಕೊಡಲು ಒಪ್ಪದಿದ್ದಾಗ ಕೊಲೆ ಮಾಡುವುದಕ್ಕೂ ಹಿಂದೆ ಮುಂದೆ ನೋಡದ ದರೋಡೆಕೋರರ ಗ್ಯಾಂಗ್‌ಗಳು ವಾಹನ ಸವಾರರ ಮೇಲೆ ಅಟ್ಟಹಾಸ ಮೆರೆಯುತ್ತಿದ್ದಾರೆ.

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಹೀಗಿರುವಾಗ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಹೈವೆ ದರೋಡೆಕೋರರನ್ನು ಮಟ್ಟಹಾಕಲು ಕೈಗೊಂಡ ವಿಶೇಷ ಕಾರ್ಯಚರಣೆಯೊಂದು ಭಾರೀ ಪ್ರಶಂಸೆಗೆ ಪಾತ್ರವಾಗಿದ್ದು, ಹಣಕ್ಕಾಗಿ ಲಾರಿ ಚಾಲಕನನ್ನು ಹತ್ಯೆ ಮಾಡಿ ಆರಾಮಾಗಿ ಓಡಾಡಿಕೊಂಡಿದ್ದ ನಟೋರಿಸ್ ರಾಬರ್ಸ್ ಗ್ಯಾಂಗ್‌ವೊಂದನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾರದ ಹಿಂದಷ್ಟೇ ಲಾರಿ ಚಾಲಕನನ್ನು ನಟೋರಿಸ್ ಗ್ಯಾಂಗ್‌ವೊಂದು ಹಣಕ್ಕಾಗಿ ಹತ್ಯೆ ಮಾಡಿತ್ತು. ಆದಾದ ಬಳಿಕ ಮತ್ತೊಬ್ಬ ಲಾರಿ ಚಾಲಕನ ಮೇಲೂ ಮಾರಣಾಂತಿಕ ಹಲ್ಲೆ ಮಾಡಿ ಹಣ, ಮೊಬೈಲ್ ಕಿತ್ತು ಪರಾರಿಯಾಗಿತ್ತು.

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಇಷ್ಟೆಲ್ಲಾ ಘಟನೆ ನಡೆದ್ರು ಯಾವುದೇ ಸುಳಿವು ಬಿಟ್ಟುಕೊಡದ ದರೋಡೆಕೋರರ ತಂಡವು ತಾವು ಯಾರ ಕೈಗೂ ಸಿಕ್ಕಿಕೊಳ್ಳುವುದಿಲ್ಲ ಎಂದುಕೊಂಡು ವಾಹನ ಸವಾರರನ್ನು ತಡೆದು ದರೋಡೆ ಮಾಡುವುದನ್ನು ಮುಂದುವರಿಸಿತ್ತು.

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಆದ್ರೆ ಈ ಬಾರಿ ಖದೀಮರ ಗ್ಯಾಂಗ್ ಮಟ್ಟಹಾಕಲೆಂದು ಡಿಸಿಪಿ ಅಣ್ಣಾಮಲೈ ಅವರು ಮಾಡಿದ ಆ ಒಂದು ಪ್ಲ್ಯಾನ್‌ ಮುಂದೆ ದರೋಡೆಕೋರರ ಕಳ್ಳಾಟಕ್ಕೆ ಬ್ರೇಕ್ ಬಿದ್ದಿದ್ದು, ಲಾರಿ ಚಾಲಕರನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದ ಮೂವರು ಖದೀಮರ ಹೆಡೆಮುರಿ ಕಟ್ಟಿದ್ದಾರೆ.

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಲಾರಿ ಚಾಲಕನ ಹತ್ಯೆ ಪ್ರಕರಣವನ್ನು ಭೇದಿಸಲು ಡಿಸಿಪಿ ಅಣ್ಣಾಮಲೈ ಕೊಟ್ಟ ಸಲಹೆ ಅಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಲಾರಿ ಚಾಲಕರಂತೆ ನಟಿಸಿ ಫೀಲ್ಡ್‌ಗೆ ಇಳಿದಿದ್ದರು. ಈ ವೇಳೆ ಲಾರಿ ಚಾಲಕನ ವೇಷದಲ್ಲಿದ್ದ ಪೊಲೀಸರನ್ನೇ ದರೋಡೆ ಮಾಡಲು ಬಂದಿದ್ದ ಖದೀಮರು ಲಾಕ್ ಆಗಿದ್ದಾರೆ.

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಲಾರಿ ಚಾಲಕರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಖದೀಮರ ಗ್ಯಾಂಗ್ ಬಂಧಿಸಲು ಕಳೆದ ಮೂರು ದಿನಗಳಿಂದ ಈ ಪ್ಲ್ಯಾನ್ ಮಾಡಿದ್ದ ಪೊಲೀಸರು ಹಗಲು ರಾತ್ರಿ ಎನ್ನದೇ ಕಾಯ್ದು ಮೂವರು ಖದೀಮರನ್ನು ವಶಕ್ಕೆ ಪಡೆದಿದ್ದಾರೆ.

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಒಟ್ಟಿನಲ್ಲಿ ಅಮಾಯಕರ ಮೇಲೆ ದರೋಡೆ ಮಾಡಿ ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಆರೋಪಿಗಳ ಸೆರೆಗೆ ಡಿಸಿಪಿ ಅಣ್ಣಾಮಲೈ ನೀಡಿದ ಪ್ಲ್ಯಾನ್ ಸಕ್ಸಸ್ ಆಗಿದ್ದು, ಆರೋಪಿಗಳ ಬಂಧನದಿಂದಾಗಿ ಇನ್ನು ಹಲವಾರು ದರೋಡೆ ಪ್ರಕರಣಗಳು ಬೆಳಕಿಗೆ ಬಂದಿವೆ.

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ರಾತ್ರಿ ವೇಳೆ ಹೈವೇ ಡ್ರೈವಿಂಗ್‌ಗೂ ಮುನ್ನ ಎಚ್ಚರ..!

ಕೆಲವರಿಗೆ ರಾತ್ರಿ ವೇಳೆಯಲ್ಲಿ ವಾಹನ ಚಾಲನೆ ಮಾಡುವುದು ಅಂದ್ರೆ ತುಂಬಾನೇ ಇಷ್ಟ. ಹಾಗೊಂದು ವೇಳೆ ನಿಮ್ಮಲ್ಲು ನೈಟ್ ರೈಡಿಂಗ್ ಹವ್ಯಾಸವಿದ್ದಲ್ಲಿ ನಾವು ಹೇಳುವ ಕೆಲವು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಂಡು ರಾತ್ರಿ ವೇಳೆ ವಾಹನ ಚಾಲನೆ ಮಾಡಿದ್ದಲ್ಲಿ ಇಂತಹ ಘಟನೆಗಳಿಂದ ಬಚಾವ್ ಆಗಬಹುದು.

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಹೈವೆನಲ್ಲಿ ಇತ್ತೀಚೆಗೆ ಸಾಕಷ್ಟು ಅಹಿತರ ಘಟನೆಗಳು ಸಂಭವಿಸುತ್ತಿರುವುದನ್ನು ನಾವೆಲ್ಲಾ ಕೇಳಿಯೇ ಇರುತ್ತವೆ. ಅದರಲ್ಲೂ ಡ್ರಾಪ್ ನೇಪದಲ್ಲಿ ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ಹಣ ಕೊಡಲು ಒಪ್ಪದ್ದಿದ್ದಾಗ ಕೊಲೆ ಮಾಡಲು ಅವರು ಹಿಂದೆ ಮುಂದೆ ನೋಡುವುದಿಲ್ಲಾ.

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಹೀಗಾಗಿ ರಾತ್ರಿ ವೇಳೆ ಹೆದ್ದಾರಿಗಳಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆಗಳಲ್ಲಿದ್ದಲ್ಲಿ ನಾವಿಂದು ಕೆಲವು ಟಿಪ್ಸ್‌ಗಳನ್ನು ನೀಡಲಿದ್ದೇವೆ. ಈ ಟಿಪ್ಸ್‌ಗಳು ಈಗಾಗಲೇ ಬಹುತೇಕ ವಾಹನ ಸವಾರರ ಅನುಭವಕ್ಕೆ ಬಂದಿರುತ್ತೆವೆ ಎನ್ನಬಹುದು.

MOST READ: ನಕಲಿ ನಂಬರ್ ಪ್ಲೇಟ್‍ ಮಾಫಿಯಾ- ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಹುಷಾರ್..!

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಕಾರಿಗೆ ರಾತ್ರಿ ಮೊಟ್ಟೆ ಬೀಳುತ್ತೆ..!

ರಾತ್ರಿ ಸಮಯದಲ್ಲಿ ಕಾರನ್ನೊಡಿಸುತ್ತಿರುವಾಗ ಕಾರಿನ ಮುಂಭಾಗಕ್ಕೆ ಆಕಸ್ಮಾತ್ ಮೊಟ್ಟೆ ಅಭಿಷೇಕವಾದ್ದಲ್ಲಿ ಯಾವುದೇ ಕಾರಣಕ್ಕೂ ಗಾಡಿ ನಿಲ್ಲುಸುವ ಗೋಜಿಗೆ ಹೋಗದಿರಿ. ಅದಕ್ಕೂ ಮುಖ್ಯವಾಗಿ ಕಾರಿನ ವೈಪರ್ ಆನ್ ಮಾಡುವ ಪ್ರಯತ್ನಕ್ಕೆ ಮುಂದಾಗದಿರಿ.

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಮೇಲೆ ತಿಳಿಸಿದಂತೆ ರಾತ್ರಿ ಪ್ರಯಾಣ ಮಾಡುತ್ತಿರುವಾಗ ಆಕಾಸ್ಮತ್ ಮೊಟ್ಟೆಗಳ ದಾಳಿ ನಡೆದರೆ ವೈಪರ್ ಆನ್ ಮಾಡದಿರಿ. ನೀರು ಚಿಮುಕಿಸಿ ಅದನ್ನು ತೊಳೆಯುವ ಪ್ರಯತ್ನಕ್ಕೆ ಮುಂದಾಗದಿರಿ. ಈ ರೀತಿ ಮಾಡುವುದರಿಂದ ದರೋಡೆಕೋರರ ಉದ್ದೇಶ ಸುಲಭವಾಗಿ ಈಡೇರಲಿದೆ.

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಮೊಟ್ಟೆಯ ಲೋಳೆ, ಹಳದಿ ಹಾಗೂ ನೀರು ಮಿಶ್ರಣವಾಗಿ ಕಾರಿನ ವೈಂಡ್ ಸ್ಕ್ರೀನ್ ಶೇಕಡಾ 92 ರಷ್ಟು ಮುಸುಕಿದಂತಾಗುತ್ತದೆ. ಶುಭ್ರವಾಗಿದ್ದ ಕನ್ನಡಿ ಕೆಲವೇ ಕ್ಷಣಗಳಲ್ಲಿ ಬಿಳಿ ಪೇಂಟ್ ಬಳಿದಂತಾಗುತ್ತದೆ. ಮೊಟ್ಟೆ ನೀರಿನೊಂದಿಗೆ ಮಿಶ್ರಣವಾದರೆ ಶೇಕಡಾ 92 ರಷ್ಟು ನಿಮ್ಮ ದೃಷ್ಟಿ ಸಾಮರ್ಥ್ಯವನ್ನು ಕಡಿಮೆ ಮಾಡಲಿದೆ.

MOST READ:ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ದರೋಡೆಕೋರರ ಉದ್ದೇಶ ಈಡೇರುವುದು

ಈ ಸಂದರ್ಭದಲ್ಲಿ ಕಾರು ನಿಲ್ಲಿಸಬೇಕಾಗಿರುವುದು ಅನಿವಾರ್ಯವಾಗುತ್ತದೆ. ತಕ್ಷಣ ಕಾರ್ಯಪ್ರವೃತರಾಗುವ ಕಳ್ಳರು ನಿಮ್ಮನ್ನು ಸುತ್ತುವರಿದು ನಿಮ್ಮಲ್ಲಿದ್ದ ಅಮೂಲ್ಯ ವಸ್ತುಗಳನ್ನೆಲ್ಲ ದೋಚುವ ಸಾಧ್ಯತೆಯಿದೆ.

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಗ್ಯಾಂಗ್ ದರೋಡೆ

ಪ್ರಸ್ತುತ ಮೊಟ್ಟೆಯೆಸೆದು ದರೋಡೆ ಮಾಡುವ ಪ್ರಕ್ರಿಯೆ ಬಲು ಜೋರಾಗಿ ನಡೆಯುತ್ತಿದೆ. ಗುಂಪು ಗುಂಪಾಗಿ ಆಗಮಿಸುವ ಕಳ್ಳರ ತಡ ಸುಲಭದಲ್ಲಿ ನಿಮ್ಮನ್ನು ಮೋಸ ಮಾಡಬಲ್ಲರು.

ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಹಾಗಾಗಿ ಎಚ್ಚರ ವಹಿಸಿರಿ!

ರಾತ್ರಿ ಪಯಣದ ವೇಳೆ ಆಕಸ್ಮಾತ್ ಮೊಟ್ಟೆ ಎಸೆತ ಉಂಟಾದ್ದಲ್ಲಿ ತಕ್ಷಣ ಕಾರು ನಿಲ್ಲಿಸದಿರಿ. ಹಾಗೆಯೇ ವೈಪರ್ ಆನ್ ಮಾಡುವ ಸಾಹಸಕ್ಕೆ ಮುಂದಾಗದಿರಿ. ಇಲ್ಲದಿದ್ದರೆ ಯೋಗರಾಜ್ ಭಟ್ಟರ ಹಾಡಿನಂತೆ "ಕತ್ತಲಲ್ಲಿ ಕರಡಿಗೆ ಜಾಮೂನು ತಿನ್ನಿಸಿದ್ದಾಂತಾಗುತ್ತೆ" ಎಚ್ಚರವಿರಲಿ!

ಹ್ಯಾಪಿ ಡ್ರೈವಿಂಗ್!

ಅತಿಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಹೊಸ ಎರ್ಟಿಗಾ ಫೋಟೋ ಗ್ಯಾಲರಿ..!

Kannada
Read more on off beat
English summary
Bengaluru cops become lorry drivers to bust gang of thieves.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more