ಪತ್ನಿಗೆ ಹೊಸ ಮಹೀಂದ್ರಾ ಬಿಇ 6 ಎಲೆಕ್ಟ್ರಿಕ್ ಎಸ್‌ಯುವಿ ಗಿಫ್ಟ್ ಕೊಟ್ಟ ಪತಿ

ನಾವು ಇಷ್ಟಪಡುವ ವ್ಯಕ್ತಿಗಳಿಗೆ ಅಪರೂಪವಾಗಿ ಏನಾದರು ಉಡುಗೊರೆ ಕೊಡುವ ಸಂದರ್ಭ ಬಂದಾಗ ತುಂಬಾ ಯೋಚಿಸಿ ದುಬಾರಿ ಗಿಫ್ಟ್‌ಗಳನ್ನು ಕೊಡುತ್ತೇವೆ. ಇಂತಹ ಉಡುಗೊರೆಗಳನ್ನು ನಮ್ಮ ಸಂಗಾತಿಗಳಿಗೆ ಹೆಚ್ಚಾಗಿ ಕೊಡುತ್ತೇವೆ. ಕೆಲವೊಮ್ಮೆ ಈ ಉಡುಗೊರೆಗಳು ಚಿಕ್ಕದಾಗಿರುತ್ತವೆ, ಆದರೆ ಇನ್ನೂ ಕೆಲ ಸಂದರ್ಭಗಳಲ್ಲಿ ಈ ಉಡುಗೊರೆಗಳು ತುಂಬಾ ದೊಡ್ಡದಾಗುತ್ತವೆ. ಇತ್ತೀಚೆಗೆ ಭಾರತದಾದ್ಯಂತ ಸಖತ್ ಸದ್ದು ಮಾಡಿರುವ ಮಹೀಂದ್ರಾ ಬಿಇ 6 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಪತ್ನಿಗೆ ಉಡುಗೊರೆಯಾಗಿ ನೀಡಿ ಅಚ್ಚರಿಗೊಳಿಸಿರುವ ವಿಡಿಯೋ ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪತಿಯೊಬ್ಬ ತನ್ನ ಪತ್ನಿಗೆ ಹೊಚ್ಚ ಹೊಸ ಮಹೀಂದ್ರಾ ಬಿಇ 6 ಕಾರಿನ ಕೀಲಿಗಳನ್ನು ಹಸ್ತಾಂತರಿಸುವ ಈ ಸುಂದರ ಮತ್ತು ಹೃದಯಸ್ಪರ್ಶಿ ವೀಡಿಯೊ ತುಂಬಾ ಜನರ ಮನಗೆದ್ದಿದೆ. ಪತಿ-ಪತ್ನಿ ಹಾಗೂ ಕುಟುಂಬ ಸದಸ್ಯರೊಂದಿಗೆ ಮಹೀಂದ್ರಾ ಡೀಲರ್ ಶಿಪ್‌ನಲ್ಲಿ ಹೊಚ್ಚ ಹೊಸ ಬಿಇ 6 ಅನ್ನು ಡೆಲಿವರಿ ಪಡೆಯುವ ಮುನ್ನ ಅವರು ಮಾಡಿದ ಕೆಲವು ಅಚ್ಚರಿಯ ಕೆಲಸಗಳು ನೋಡುಗರನ್ನು ಖುಷಿಗೊಳಿಸಿವೆ.

husband-gifts-his-wife-a-new-mahindra-be6-electric-suv

ಪತಿ ತನ್ನ ಹೆಂಡತಿಯನ್ನು ಕಾರಿನ ಬಳಿ ಕರೆದೊಯ್ದು ಡ್ರೈವರ್ ಸೀಟ್‌ನಲ್ಲಿ ಕುಳಿತುಕೊಳ್ಳುವಂತೆ ಹೇಳಿದಾಗ ಪತ್ನಿಯ ಖುಷಿಯು ದುಪ್ಪಟ್ಟಾಗುವುದನ್ನು ಕಾಣಬಹುದು. ಬಳಿಕ ಮಹೀಂದ್ರಾ ಬಿಇ 6 ಕಾರಿನ ಸ್ಟೀರಿಂಗ್ ವೀಲ್‌ನೊಂದಿಗೆ ಪತ್ನಿ ಆಟವಾಡುವುದನ್ನು ಕಾಣಬಹುದು. ಇದರ ನಂತರ ಪತಿ ಈ ಕಾರಿನ ಕೀಲಿಗಳನ್ನು ತನ್ನ ಹೆಂಡತಿಗೆ ಹಸ್ತಾಂತರಿಸುವ ಮೂಲಕ ದುಬಾರಿ ಗಿಫ್ಟ್‌ಗೆ ಹೆಂಡತಿ ಫಿದಾ ಆಗಿದ್ದಾರೆ.

ಮಹೀಂದ್ರಾ ಬಿಇ 6 ವಿಶೇಷತೆಗಳು: ಈ ಕಾರು ರೂ.18.90 ಲಕ್ಷ ಹಾಗೂ ಗರಿಷ್ಠ ರೂ.26.90 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ವೇರಿಯೆಂಟ್‌ಗಳ ಬಗ್ಗೆ ಹೇಳುವುದಾದರೆ, ಬಿಇ 6 ಅನ್ನು ನಾಲ್ಕು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಇದು 79 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 682 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ.

husband-gifts-his-wife-a-new-mahindra-be6-electric-suv

ಮಹೀಂದ್ರಾ ಬಿಇ 6 ಕಾರು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ & ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಡುಯಲ್ ಸ್ಕ್ರೀನ್, ಟೂ-ಸ್ಪೋಕ್ ಸ್ಟೀರಿಂಗ್ ವೀಲ್, ವೆಂಟಿಲೇಟೆಡ್ ಸೀಟ್‌ಗಳು, ವೈರ್‌ಲೆಸ್ ಚಾರ್ಜರ್‌ಗಳು ಹಾಗೂ 16-ಸ್ಪೀಕರ್ ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಮ್, ವಿಷನ್ಎಕ್ಸ್ ಆಗ್ಮೆಂಟೆಡ್ ರಿಯಾಲಿಟಿ, 16 ಮಿಲಿಯನ್ ಬಣ್ಣ ಆಯ್ಕೆಗಳನ್ನು ನೀಡುವ ಪ್ರೋಗ್ರಾಮಬಲ್ ಎಲ್ಇಡಿ ಆಂಬಿಯೆಂಟ್ ಲೈಟಿಂಗ್‌ನೊಂದಿಗೆ ಬರುವ ಇನ್ಫಿನಿಟಿ ಗ್ಲಾಸ್ ರೂಫ್ ನೀಡಲಾಗಿದೆ.

ಸುರಕ್ಷತೆಗಾಗಿ ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾಗಳನ್ನು ಪಡೆದಿದೆ. ಇದು ಲೇನ್ ಚೇಂಜ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, 360 ಡಿಗ್ರಿ ಕ್ಯಾಮೆರಾ, 7 ಏರ್ ಬ್ಯಾಗ್‌ಗಳು ಮತ್ತು ಕ್ರ್ಯಾಶ್ ರೆಸಿಸ್ಟೆಂಟ್ ಬ್ಯಾಟರಿ ಇದೆ.

59 ಕೆಡಬ್ಲ್ಯೂಹೆಚ್ & 79 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಹೊಂದಿದ್ದು, ಫುಲ್ ಚಾರ್ಜ್‌ನಲ್ಲಿ 542 ರಿಂದ 656 ಕಿಲೋಮೀಟರ್ ಓಡುತ್ತದೆ. 59 ಹಾಗೂ 79 ಕೆಡಬ್ಲ್ಯೂಹೆಚ್ ಬ್ಯಾಟರಿಯ ಕಾರು 282 ಬಿಹೆಚ್ ಪವರ್ ಮತ್ತು 380 ಎನ್ಎಂ ಟಾರ್ಕ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, April 29, 2025, 16:11 [IST]
English summary
Husband gifts his wife a new mahindra be6 electric suv
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+