Driverless Car: ಬೆಂಗಳೂರಿನಲ್ಲಿ ಜನರಿದ್ದ ಚಾಲಕ ರಹಿತ ಕಾರು ಪ್ರತ್ಯಕ್ಷ.. ವಿಪ್ರೋ & IISc ನೆರವಿನಿಂದ ತಯಾರು! ವಿಡಿಯೋ ನೋಡಿ

ಇಲ್ಲೊಂದು ಕಾರು ಡ್ರೈವರ್ ಇಲ್ಲದೆಯೇ ಚಲಿಸಿದೆ. ಈ ದೃಶ್ಯಗಳನ್ನು ಕಂಡ ಅಲ್ಲಿದ್ದವರೂ ಕ್ಷಣಕಾಲ ಆಶ್ಚರ್ಯಚಕಿತರಾಗಿದ್ದಾರೆ. ಅಷ್ಟಕ್ಕೂ ಈ ಕಾರು ಕಾಣಿಸಿಕೊಂಡಿರುವುದು ಎಲ್ಲಿ ಅಂದುಕೊಂಡಿದ್ದೀರಾ.. ಅದುವೇ ನಮ್ಮ ಐಟಿ ಸಿಟಿ ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ.. ಸದ್ಯ ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲೂ ಸಖತ್ ವೈರಲ್ ಆಗುತ್ತಿದ್ದು, ನೋಡುಗರಲ್ಲೂ ತೀವ್ರ ಕುತೂಹಲವನ್ನು ಹುಟ್ಟು ಹಾಕುತ್ತಿದೆ.

ಆದರ್ಶ್ ಹೆಗ್ಡೆ ಎಂಬುವವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಚಾಲಕ ರಹಿತ ಕಾರಿನ 28 ಸೆಕೆಂಡುಗಳ ಪುಟ್ಟ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಉತ್ತರಾದಿ ಮಠದ ಸತ್ಯಾತ್ಮತೀರ್ಥ ಸ್ವಾಮೀಜಿ ಹಾಗೂ ಇತರರು ಕೊಂಚ ದೂರದ ಪ್ರಯಾಣಿಸುವುದನ್ನು ಕಾಣಬಹುದಾಗಿದೆ.

Wipro IISc And RV College Jointly Develop New Driverless Car Spotted in Bengaluru Details

ಈ ಚಾಲಕ ರಹಿತ ಕಾರು (Driverless Car) ಅಭಿವೃದ್ಧಿ ಹಂತದಲ್ಲಿದೆ. ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ದೈತ್ಯ ವಿಪ್ರೋ (Wipro), ಭಾರತೀಯ ವಿಜ್ಞಾನ ಸಂಸ್ಥೆ (IISc) ಹಾಗೂ ಆರ್‌ವಿ ಎಂಜಿನಿಯರಿಂಗ್ ಕಾಲೇಜು (RV Engineering College) ಸಹಯೋಗದಲ್ಲಿ ತಯಾರಿಸಲಾಗುತ್ತಿದೆ.

ಇದು ಮುಂಬರುವ ತಿಂಗಳಲ್ಲಿ ಅಧಿಕೃತವಾಗಿ ರಸ್ತೆಗಳಿಯುವ ನಿರೀಕ್ಷೆಯಿದೆ. ಕೃತಕ ಬುದ್ದಿಮತ್ತೆ (AI), ಕ್ಯಾಮೆರಾ ಹಾಗೂ ಸೆನ್ಸಾರ್‌ಗಳ ಆಧಾರಿತವಾಗಿ ಕೆಲಸ ನಿರ್ವಹಿಸಲಿದೆ. ಭಾರತದ ರಸ್ತೆಗಳಿಗೆ ಈ ಚಾಲಕ ರಹಿತ ಕಾರು, ಸುಲಭವಾಗಿ ಹೊಂದಿಕೊಳ್ಳಲು ಸಾಧ್ಯವಾಗುವಂತೆ ಮಾರ್ಗ - ನಕ್ಷೆ (Route - Map) ಕುರಿತಂತೆಯೂ ಒಂದಷ್ಟು ಅಧ್ಯಯನಗಳು ನಡೆಯುತ್ತಿವೆ ಎಂಬ ವಿವರಗಳು ಲಭ್ಯವಾಗಿವೆ.

ಈ ಹಿಂದೆಯೂ ಬೆಂಗಳೂರಿನಲ್ಲಿ ಚಾಲಕ ರಹಿತ ಕಾರು ಕಾಣಿಸಿಕೊಂಡಿತ್ತು:

2023 ರಲ್ಲಿ ಬೆಂಗಳೂರಿನ ಫ್ರೇಜರ್‌ಟೌನ್ ರಸ್ತೆಯಲ್ಲಿ 'ಚಾಲಕ ರಹಿತ ಕಾರು'ವೊಂದು ಸಂಚರಿಸಿತ್ತು. ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು. ನಗರದ ಸ್ಟಾರ್ಟ್‌ಅಪ್ ಕಂಪನಿಯಾದ ಮೈನಸ್ ಝೀರೋ (Minus Zero) ಈ ಕೃತಕ ಬುದ್ದಿಮತ್ತೆ ಆಧಾರಿತ, ಚಾಲಕ ರಹಿತ ಜಡ್‌ಪಾಡ್ (zPod) ಕಾರನ್ನು ಸಿದ್ದಪಡಿಸಿದ್ದು, ಪ್ರಾಯೋಜಿಕ ಸಂಚಾರದ ವೇಳೆಯಲ್ಲಿ ಕಾಣಿಸಿಕೊಂಡಿತ್ತು.

ಮೈನಸ್ ಝೀರೋ ಪ್ರಕಾರ ಚಾಲಕ ರಹಿತ 'ಜಡ್‌ಪಾಡ್' ಕಾರು, ಈಗಿರುವ ಸಾಮಾನ್ಯ ಕಾರುಗಳಂತೆ ಸ್ಟೀರಿಂಗ್ ವೀಲ್ ಹೊಂದಿಲ್ಲ. ಅದರ ಬದಲಾಗಿ, ಸಂಚಾರ ದಟ್ಟಣೆ ಮತ್ತು ಚಾಲನಾ ಪರಿಸ್ಥಿತಿಯನ್ನು ವಿಶ್ಲೇಷಿಸಲು ಹೈ - ರೆಸಲ್ಯೂಶನ್ ಕ್ಯಾಮೆರಾವನ್ನು ಒಳಗೊಂಡಿದೆ. ಇದು ರಸ್ತೆಯ ಮೇಲೆ ಸುಲಭವಾಗಿ ಸಂಚರಿಸಲು ನೆರವಾಗಲಿದೆ.

ಸ್ಕ್ಯಾನಿಯಾ (Scania) ಕಂಪನಿಯಿಂದಲೂ ಚಾಲಕ ರಹಿತ ಟ್ರಕ್ ಅಭಿವೃದ್ಧಿ:

ಸ್ವೀಡನ್‌ ಮೂಲದ ಪ್ರಮುಖ ವಾಹನ ತಯಾರಕ ಕಂಪನಿ 'ಸ್ಕ್ಯಾನಿಯಾ' ಸಹ ಚಾಲಕ ರಹಿತ ಟ್ರಕ್‌ನ್ನು ತಯಾರಿಸುವ ಕೆಲಸದಲ್ಲಿ ನಿರತವಾಗಿದೆ. 2022 ರಲ್ಲಿಯೇ ಭರ್ತಿ ಲೋಡ್‌ಯಿದ್ದ ಚಾಲಕ ರಹಿತ ಟ್ರಕ್‌ನ್ನು ಪರೀಕ್ಷಾರ್ಥ ಸಂಚಾರಕ್ಕೆ ಒಳಪಡಿಸಿತ್ತು. ಈ ಟ್ರಕ್‌ ಸೊಡೆರ್ಟಾಲ್ಜೆ ಹಾಗೂ ಜೊಂಕೋಪಿಂಗ್ ನಡುವಿನ 300 ಕಿ.ಮೀ ದೂರವನ್ನು ಯಶಸ್ವಿಯಾಗಿ ಕ್ರಮಿಸಿತ್ತು. ಇದರ ಮೇಲ್ಭಾಗದಲ್ಲಿ ಕ್ಯಾಮೆರಾ & ಬಗ್ ಆಂಟೆನಾಗಳಿಗೆ ಹೋಲಿಕೆಯಾಗಬಲ್ಲ 2 ಸೆನ್ಸಾರ್‌ಗಳನ್ನು ಹಾಕಲಾಗಿತ್ತು. ಅವು ಟ್ರಕ್‌ ಓಡಲು ನೆರವಾಗಿದ್ದವು.

ಒಟ್ಟಾರೆಯಾಗಿ, ಚಾಲಕ ರಹಿತ ವಾಹನಗಳು ಆವಿಷ್ಕಾರದಿಂದ ಸಾಕಷ್ಟು ಸಮಸ್ಯೆಗಳು ಬಗೆಹರಿಯಲಿವೆ. ಬಹುಮುಖ್ಯವಾಗಿ ಚಾಲಕರ ಕೊರತೆ ನೀಗಲಿದ್ದು, ಸುಲಭವಾಗಿ ಸಂಚಾರ ಸಾಧ್ಯವಾಗಲಿದೆ. ಸಮಯದ ಉಳಿತಾಯವು ಆಗಲಿದೆ. ಸರಕು ಸರಂಜಾಮುಗಳನ್ನು ಬೇಗನೆ ಸಾಗಾಟವು ಮಾಡಬಹುದು. ವಿಶೇಷವಾಗಿ ನಿದ್ದೆ ಮಂಪರು ಹಾಗೂ ಮದ್ಯಪಾನ ಚಾಲನೆಯಿಂದ ಉಂಟಾಗುವ ಅಪಘಾತಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಲಿದೆ. ಸಾವಿನ ಪ್ರಮಾಣವು ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ಚಾಲಕ ರಹಿತ ವಾಹನಗಳು ತುಂಬಾ ಅತ್ಯಗತ್ಯವಾಗಿವೆ ಎಂದು ಹೇಳಬಹುದು.

Image Source: Financial Express

More from DriveSpark

Article Published On: Wednesday, October 29, 2025, 16:10 [IST]
English summary
Wipro iisc and rv college jointly develop new driverless car spotted in bengaluru details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+