ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ವಿಧಿಸಲಾಗುತ್ತಿರುವ ಸದ್ಯದ ಟೋಲ್ ದರಗಳು ಹೊರೆಯಾಗಿ ಪರಿಣಮಿಸಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಟೋಲ್ ದರಗಳನ್ನು ಕಡಿತಗೊಳಿಸುವ ಸಂಬಂಧ ಕೇಂದ್ರ ಹೆದ್ದಾರಿ ಸಚಿವಾಲಯವು ಹೊಸ ನೀತಿಯೊಂದನ್ನು ಜಾರಿ ಮಾಡಲು ಮುಂದಾಗಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರು ಪಾವತಿಸಬೇಕಿರುವ ಭಾರೀ ಪ್ರಮಾಣದ ಟೋಲ್ ದರದಲ್ಲಿ ಇಳಿಕೆ ಕುರಿತಂತೆ ಸುಳಿವು ನೀಡಿರುವ ಕೇಂದ್ರ ಹೆದ್ದಾರಿ ಸಚಿವಾಲಯವು, ವಾಹನಗಳ ಸಂಚಾರಕ್ಕೆ ಅನುಗುಣವಾಗಿ ಟೋಲ್ ಪಾವತಿಸುವ ವ್ಯವಸ್ಥೆಗೆ ಚಾಲನೆ ನೀಡಲು ಸಿದ್ದತೆ ನಡೆಸಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಅಂದ್ರೆ, ವಾಹನ ಸವಾರರು ಹೆದ್ದಾರಿ ಬಳಸಿದ ಪ್ರಮಾಣಕ್ಕೆ ಅನುಗುಣವಾಗಿ ಟೋಲ್ ಪಾವತಿಸುವ ವ್ಯವಸ್ಥೆಯಿದಾಗಿದ್ದು, ಇಷ್ಟು ದಿನಗಳ ಕಾಲ ಬಳಕೆ ಮಾಡಿದ್ದಕ್ಕಿಂತ ಹೆಚ್ಚು ಟೋಲ್ ಪಾವತಿಸುತ್ತಿರುವ ವ್ಯವಸ್ಥೆಗೆ ಬ್ರೇಕ್ ಬೀಳಲಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದು ಟೋಲ್‌‌ನಿಂದ ಮತ್ತೊಂದು ಟೋಲ್‌ನ ಅಂತರವು 60-70 ಕಿ.ಮಿ ಅಂತರದಲ್ಲಿ ಸ್ಥಾಪನೆ ಮಾಡಲಾಗಿರುತ್ತದೆ. ಹೀಗಿರುವಾಗ ಹೆದ್ದಾರಿಯಲ್ಲಿ ಸಾಗುವ ಬಹುತೇಕ ವಾಹನ ಸವಾರರು ಕೆಲವು ಕಡೆ ಅನಾವಶ್ಯಕವಾಗಿ ಟೋಲ್ ಪಾವತಿಸುವ ಅನಿವಾರ್ಯತೆಯಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಒಂದು ಟೋಲ್‌ನಲ್ಲಿ ನೀವು ರೂ. 90 ಪಾವತಿ ಮಾಡಿ ಕಾರು ಚಾಲನೆ ಮಾಡುವಾಗ ಕೆಲವೇ ಗಂಟೆಗಳಲ್ಲಿ ಮತ್ತೊಂದು ಟೋಲ್ ಶುರುವಾಗುತ್ತೆ. ಇದೇ ವೇಳೆ ನೀವು ಆ ಹೆದ್ದಾರಿಯಿಂದ ನಿರ್ಗಮಿಸಿ ಮತ್ತೊಂದು ರಸ್ತೆಗೆ ಹೋಗುವ ಅವಶ್ಯಕತೆಯಿದ್ದಾಗ 2ನೇ ಟೋಲ್‌ನಲ್ಲೂ ನೀವು ಹಣ ಪಾವತಿ ಮಾಡಬೇಕು.

ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಈ ವೇಳೆ ನೀವು ಆ ಹೆದ್ದಾರಿಯಲ್ಲಿ ಮುಂದುವರಿಯದ್ದಿದ್ದರೂ ಕೂಡಾ ಟೋಲ್ ಪಾವತಿಸಲೇಬೇಕಾಗಿದ್ದು, ಕೇಂದ್ರ ಹೆದ್ದಾರಿ ಸಚಿವಾಲಯವು ಜಾರಿಗೆ ತರುತ್ತಿರುವ ಹೊಸ ನಿಯಮದಿಂದಾಗಿ ಹೆಚ್ಚುವರಿ ಟೋಲ್ ಪಾವತಿಸುವುದು ತಪ್ಪಲಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಹೀಗಾಗಿ ಹೆದ್ದಾರಿ ಬಳಕೆ ಮಾಡಿದ ಲೆಕ್ಕಾಚಾರಕ್ಕೆ ಅನುಗುಣವಾಗಿ ಟೋಲ್ ಸಂಗ್ರಹಿಸುವ ಎಲೆಕ್ಟ್ರಾನಿಕ್ ಟೋಲ್ ವ್ಯವಸ್ಥೆ ಜಾರಿಗೆ ಚಿಂತನೆ ನಡೆದಿದ್ದು, ಮುಂಬರುವ ಸಂಸತ್ ಅಧಿವೇಶನ ವೇಳೆ ಈ ಕುರಿತು ಕೇಂದ್ರ ಸರ್ಕಾರವು ಅಂತಿಮ ನಿರ್ಧಾರ ಪ್ರಕಟಿಸಿಲಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಜೊತೆಗೆ ಮುಂದುವರಿದ ರಾಷ್ಟ್ರಗಳಲ್ಲಿ ಈಗಾಗಲೇ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ಸೌಲಭ್ಯ ಚಾಲ್ತಿಯಲ್ಲಿದ್ದು, ಕೇಂದ್ರ ಸರ್ಕಾರವು ಇದೇ ನಿಟ್ಟಿನಲ್ಲಿ ಹೊಸ ಸೌಲಭ್ಯವನ್ನು ದೇಶದ ಹೆದ್ದಾರಿಗಳಲ್ಲೂ ಜೋಡಣೆ ಮಾಡುವ ಉದ್ದೇಶ ಹೊಂದಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಒಟ್ಟಿನಲ್ಲಿ ಟೋಲ್ ಬಳಕೆ ಮಾಡಿದ್ದಕ್ಕಿಂತ ಹೆಚ್ಚು ಪಾವತಿ ಮಾಡಬೇಕಾದ ವ್ಯವಸ್ಥೆಯಿಂದ ವಾಹನ ಸವಾರರಿಗೆ ಮುಕ್ತಿ ಸಿಗಲಿದ್ದು, ಜೊತೆಗೆ ಹೆದ್ದಾರಿಗಳಲ್ಲಿನ ಸ್ಪೀಡ್ ಗೌರ್ವನರ್‌ನಲ್ಲೂ ಕೆಲವು ಸಡಿಕೆ ಮಾಡಿರುವುದು ಪ್ರಯಾಣದ ಅವಧಿಯನ್ನು ಸಹ ತಗ್ಗಿಸಿದೆ ಎನ್ನಬಹುದು.

MOST READ: ವಾಹನ ಚಾಲನೆ ವೇಳೆ ಹೀಗೆಲ್ಲಾ ಮಾಡಿದ್ರೆ 3 ತಿಂಗಳು ಕಾಲ ಡಿಎಲ್ ರದ್ದಾಗುತ್ತೆ.!

ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ಮಹಾನಮೋಸ

ಹೆದ್ದಾರಿಗಳಲ್ಲಿ ಕ್ಯೂ ನಿಂತು ಟೋಲ್ ಕಟ್ಟುವ ಕಿರಿಕಿರಿಯನ್ನು ತಪ್ಪಿಸಲು ಕೆಂದ್ರ ಸರ್ಕಾರವು ಫಾಸ್ಟ್ ಟ್ಯಾಗ್ ಎಂಬ ವ್ಯವಸ್ಥೆಯನ್ನು ಜಾರಿ ಮಾಡಿರುವ ವಿಷಯ ಬಹುತೇಕರಿಗೆ ತಿಳಿದ ವಿಚಾರ. ಆದ್ರೆ ಇದೀಗ ಇದರಲ್ಲೂ ಮೋಸದ ವ್ಯವಹಾರ ನಡೆಯುತ್ತಿದೆ ಅಂದ್ರೆ ನೀವು ನಂಬಲೇಬೇಕು.

ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಹೌದು, ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ವೇಳೆ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ತಗ್ಗಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ತರಲಾಗಿದ್ದು, ನಾಲ್ಕು ಚಕ್ರದ ಹೊಸ ವಾಹನಗಳು ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಕೆ ಮಾಡಿಕೊಳ್ಳಬೇಕೆಂಬ ನಿಯಮವನ್ನು ಕೂಡಾ ಜಾರಿಗೆ ಮಾಡುತ್ತಿದೆ. ಆದ್ರೆ ಇದರಲ್ಲೂ ಮೋಸ ವ್ಯವಹಾರ ನಡೆಯುತ್ತಿರುವುದು ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ತಮಿಳುನಾಡಿದ ತೂತುಕೂಡಿ ಮೂಲದ ಟ್ರಕ್ ಮಾಲೀಕ ಗಣೇಶ್ ಎನ್ನುವವರು ಮೊನ್ನೆಯಷ್ಟೇ ಸರಕು ಸಾಗಾಣಿಕೆ ಕೆಲಸವನ್ನು ಮುಗಿಸಿ ತಮ್ಮ 3 ಟ್ರಕ್‍ಗಳನ್ನು ಸರ್ವಿಸ್‌ಗಾಗಿ ಡೀಲರ್ಸ್ ಯಾರ್ಡ್‍ನಲ್ಲಿ ಪಾರ್ಕ್ ಮಾಡಿದ್ದರು.

MOST READ: ನಕಲಿ ನಂಬರ್ ಪ್ಲೇಟ್‍ ಮಾಫಿಯಾ- ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಹುಷಾರ್..!

ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಆದ್ರೆ ಅದೇ ದಿನದಂದು ಅವರಿಗೆ ಫಾಸ್ಟ್‌ಟ್ಯಾಗ್ ಕಂಟ್ರೋಲ್ ರೂಮ್‌ನಿಂದ ಸಂದೇಶವೊಂದು ಬಂದಿದ್ದು, ಟೋಲ್ ಬಿಲ್ ಕಳುಹಿಸಲಾಗಿದೆ. ಈ ವೇಳೆ ಗಾಬರಿಗೆ ಒಳಗಾದ ಟ್ರಕ್ ಮಾಲೀಕನು ತನ್ನ ವಾಹಗಳನ್ನು ಯಾರಾದರೂ ಕದ್ದು ಸಾಗುತ್ತಿರಬಹುದು ಎಂದು ತಿಳಿದು ಡೀಲರ್ಸ್ ಯಾರ್ಡ್‌ಗೆ ಓಡೋಡಿ ಬಂದಿದ್ದರು.

ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಆದ್ರೆ ಮೂರು ಟ್ರಕ್‌ಗಳಲ್ಲಿ ಪಾರ್ಕ್ ಮಾಡಿದ್ದ ಸ್ಥಳದಲ್ಲೇ ಇರುವುದನ್ನ ಕಂಡ ಟ್ರಕ್ ಮಾಲೀಕನಿಗೆ ಅಚ್ಚರಿಯಾಗಿದೆ. ಅರೇ ಟ್ರಕ್‌ಗಳು ಇಲ್ಲಯೇ ಇದ್ದರೂ ಸಹ ಟೋಲ್ ಬಿಲ್ ಯಾಕೆ ಬರುತ್ತಿವೆ ಎಂದು ಸಹಾಯವಾಣಿ ಕರೆ ಮಾಡಿದಾಗ ಫಾಸ್ಟ್‌ಟ್ಯಾಗ್ ಟೋಲ್ ಸಂಗ್ರಹಣೆಯಲ್ಲಿನ ಮೋಸದ ವ್ಯವಹಾರ ಬಯಲಾಗಿದೆ.

ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಆಂಧ್ರಪ್ರದೇಶದ ಗಡಿವೊಂದರ ಟೋಲ್‌ನಿಂದ ಬಿಲ್ ಬಂದಿರುವ ಬಗ್ಗೆ ದೂರು ನೀಡಿದಾಗ ಎಚ್ಚೇತ್ತುಕೊಂಡಿರುವ ಫಾಸ್ಟ್ ಟ್ಯಾಗ್ ಅಧಿಕಾರಿಗಳು, ಇನ್ನೊಮ್ಮೆ ಈ ರೀತಿಯಾಗದಂತೆ ನೋಡಿಕೊಳ್ಳುವುದಾಗಿ ಟ್ರಕ್ ಮಾಲೀಕನಿಗೆ ಹಾರಿಕೆ ಉತ್ತರ ನೀಡಿ ಕಳಹಿಸಿದ್ದಾರೆ. ಇದರಿಂದ ಫಾಸ್ಟ್‌ಟ್ಯಾಗ್ ಬಳಕೆಯಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತೆ.

Most Read Articles

Kannada
English summary
New toll policy: Pay fee only for stretch you use.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X