Just In
- 1 hr ago
ಎಸ್ಬಿಐ ಜೊತೆಗೂಡಿ ಇವಿ ಕಾರುಗಳಿಗಾಗಿ ವಿಶೇಷ ಸಾಲ ಸೌಲಭ್ಯ ಘೋಷಣೆ ಮಾಡಿದ ಟಾಟಾ ಮೋಟಾರ್ಸ್
- 15 hrs ago
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- 15 hrs ago
ಜುಲೈ ಎಲೆಕ್ಟ್ರಿಕ್ ಕಾರುಗಳ ನೋಂದಣಿಯಲ್ಲಿ ಶೇ 3.5 ರಷ್ಟು ಏರಿಕೆ: ಶೇ 90 ರಷ್ಟು ಪಾಲು ಟಾಟಾಗೆ
- 16 hrs ago
30.9 ಕಿ.ಮೀ ಮೈಲೇಜ್ನೊಂದಿಗೆ ಮಾರುತಿ ಸ್ವಿಫ್ಟ್ ಸಿಎನ್ಜಿ ಕಾರು ಬಿಡುಗಡೆ
Don't Miss!
- News
ವೆಂಟಿಲೇಟರ್ನಲ್ಲಿರುವ ಸಲ್ಮಾನ್ ರಶ್ದಿ, ದೃಷ್ಟಿ ಕಳೆದುಕೊಳ್ಳುವ ಅಪಾಯ!
- Lifestyle
ಕಿಡ್ನಿಗೆ ಅಪಾಯವಿದೆ ಎಂದು ಸೂಚಿಸುವ ಲಕ್ಷಣಗಳಿವು!
- Sports
Asia Cup 2022: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಈ ತಂಡ ಗೆಲ್ಲಲಿದೆ; ರಿಕಿ ಪಾಂಟಿಂಗ್
- Movies
ಅತ್ತ ಪೊಲೀಸ್, ಇತ್ತ ರೌಡಿ ಇಬ್ಬರನ್ನೂ ಎದುರಿಸುತ್ತಿರುವ ಕಂಠಿ!
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ರೂ.14 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ವಿಶೇಷತೆಗಳಿವು!
ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ವೇಸ್ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಲಾಗಿರುವ ಬುಂದೇಲ್‌ಖಂಡ್ ಚತುಷ್ಪಥ ಎಕ್ಸ್‌ಪ್ರೆಸ್‌ವೇ ಇಂದು ಲೋಕಾರ್ಪಣೆಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಹೊಸ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ್ದಾರೆ.

2020ರ ಫೆಬ್ರವರಿಯಲ್ಲಿ ಹೊಸ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಇಂದು ಹೊಸ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ್ದು, ಬರೋಬ್ಬರಿ 296 ಕಿಲೋಮೀಟರ್ ಉದ್ದದ ಈ ಎಕ್ಸ್‌ಪ್ರೆಸ್ ವೇ ನಿಗದಿತ ಸಮಯಕ್ಕಿಂತಲೂ ಎಂಟು ತಿಂಗಳು ಮುಂಚಿತವಾಗಿ ಪೂರ್ಣಗೊಂಡಿದೆ.

ಬರೋಬ್ಬರಿ ರೂ. 14,850 ಕೋಟಿ ರೂಪಾಯಿ ವೆಚ್ಚದಲ್ಲಿ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡಲಾಗಿದ್ದು, ಇದು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಚತುಷ್ಪಥ ಎಕ್ಸ್‌ಪ್ರೆಸ್‌ವೇ ಆಗಿದೆ.

ಹೊಸ ಎಕ್ಸ್‌ಪ್ರೆಸ್‌ವೇ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಉತ್ತೇಜನವನ್ನು ನೀಡುವುದರ ಜೊತೆಗೆ ಈ ಪ್ರದೇಶದಲ್ಲಿನ ಸಂಪರ್ಕವನ್ನು ಸುಧಾರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು, ಎಕ್ಸ್‌ಪ್ರೆಸ್‌ವೇಗೆ ಹೊಂದಿಕೊಂಡಿರುವ ಬಂದಾ ಮತ್ತು ಜಲೌನ್ ಜಿಲ್ಲೆಗಳಲ್ಲಿನ ಕೈಗಾರಿಕಾ ಕಾರಿಡಾರ್ ಯೋಜನೆಗಳಿಗೆ ಇದು ಮತ್ತಷ್ಟು ಬಲತುಂಬಲಿದೆ.

ಏಳು ಜಿಲ್ಲೆಗಳಲ್ಲಿ ಹಾಯ್ದುಹೋಗುವ ಹೊಸ ಎಕ್ಸ್‌ಪ್ರೆಸ್‌ವೇ
ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಸದ್ಯ ನಾಲ್ಕು ಲೇನ್ ಎಕ್ಸ್‌ಪ್ರೆಸ್‌ವೇ ಆಗಿದ್ದು, ಅದನ್ನು ನಂತರ ಆರು ಲೇನ್‌ಗಳಿಗೆ ವಿಸ್ತರಿಸುವ ಯೋಜನೆ ಹೊಂದಲಾಗಿದೆ. ಇದು ಉತ್ತರ ಪ್ರದೇಶ ಪ್ರಮುಖ ಏಳು ಜಿಲ್ಲೆಗಳ ಮೂಲಕ ಹಾದುಹೋಗಿದ್ದು, ಚಿತ್ರಕೂಟ, ಬಂದಾ, ಮಹೋಬಾ, ಹಮೀರ್‌ಪುರ, ಜಲೌನ್, ಔರೈಯಾ ಮತ್ತು ಇಟಾವಾ ನಗರಗಳ ಸಂಪರ್ಕವನ್ನು ಸುಧಾರಿಸುತ್ತದೆ.

ಚಿತ್ರಕೂಟ ಜಿಲ್ಲೆಯ ಭರತ್‌ಕೂಪ್ ಬಳಿಯ ಗೊಂಡಾದಿಂದ ಆರಂಭವಾಗಿ ಇಟಾವಾ ಜಿಲ್ಲೆಯ ಕುದುರೆಲ್ ಬಳಿ ಪೂರ್ಣಗೊಂಡಿದ್ದು, ಇದು ಮುಂದೆ ಆಗ್ರಾ ಲಕ್ನೋ ಎಕ್ಸ್‌ಪ್ರೆಸ್‌ವೇಯೊಂದಿಗೆ ವಿಲೀನಗೊಳ್ಳುತ್ತದೆ.

ಇದು ಈ ಪ್ರದೇಶದಲ್ಲಿನ ಸಂಪರ್ಕವನ್ನು ಸುಧಾರಿಸುವುದರ ಹೊರತಾಗಿ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಆರ್ಥಿಕ ಬೆಳವಣಿಗೆಗೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ ಮತ್ತು ಸ್ಥಳೀಯ ಜನರಿಗೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಸರ್ಕಾರ ನಿರೀಕ್ಷಿಸುತ್ತದೆ.

ಎಕ್ಸ್‌ಪ್ರೆಸ್‌ವೇಗೆ ಹೊಂದಿಕೊಂಡಿರುವ ಬಂದಾ ಮತ್ತು ಜಲೌನ್ ಜಿಲ್ಲೆಗಳಲ್ಲಿನ ಕೈಗಾರಿಕಾ ಕಾರಿಡಾರ್ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ನಿರ್ಮಾಣದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿಲಾಗಿದೆ.

ಈ ಎಕ್ಸ್‌ಪ್ರೆಸ್‌ವೇಯಲ್ಲಿ 6 ಟೋಲ್ ಪ್ಲಾಜಾಗಳು ಮತ್ತು 7 ರಾಂಪ್ ಪ್ಲಾಜಾಗಳಿದ್ದು, ವಿವಿಧ ಸ್ಥಳಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಸಹ ಸ್ಥಾಪಿಸಲಾಗಿದೆ. ಮಳೆ ಬಂದರೆ ರಸ್ತೆಯ ಚರಂಡಿಯ ನೀರು ಮಳೆ ಕೊಯ್ಲು ವ್ಯವಸ್ಥೆಯ ತೊಟ್ಟಿಗೆ ಸೇರಲಿದ್ದು, ಸೂಚನಾ ಫಲಕಗಳು, ಲೈಟಿಂಗ್ ಸೌಲಭ್ಯವು ಹೈವೆ ಪ್ರಯಾಣವನ್ನು ಮತ್ತಷ್ಟು ಸುರಕ್ಷಿತವಾಗಿಸುತ್ತದೆ.

ಇನ್ನು 2013-14 ರಿಂದ ರಾಷ್ಟ್ರೀಯ ಹೆದ್ದಾರಿ/ರಸ್ತೆಗಳ ನಿರ್ಮಾಣದಲ್ಲಿ ನಿರಂತರ ಏರಿಕೆ ಕಂಡುಬರುತ್ತಿದ್ದು, 2019-20ನೇ ಹಣಕಾಸು ವರ್ಷದವರೆಗೆ 10,237 ಕಿ.ಮೀ ರಸ್ತೆಗಳನ್ನು ನಿರ್ಮಿಸಿದ್ದರೆ, 2020-21ರವರೆಗೆ 13,327 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿದೆ.

ಹಿಂದಿನ ವರ್ಷಕ್ಕಿಂತ 2020-21ರಲ್ಲಿ ಶೇ.30.2ರಷ್ಟು ಹೆದ್ದಾರಿ ನಿರ್ಮಾಣ ಕಾರ್ಯ ಹೆಚ್ಚಳವಾಗಿದ್ದು, 2021-22ರಲ್ಲಿ ಕೋವಿಡ್ ಪರಿಣಾಮ ನಿರ್ಮಾಣ ಕಾರ್ಯವು ತುಸು ತಗ್ಗಿದರೂ ಕೂಡಾ ಪ್ರಮುಖ ಯೋಜನೆಗಳು ಪೂರ್ಣಗೊಂಡಿರುವುದು ಹೆದ್ದಾರಿ ಸಂಪರ್ಕವು ಮತ್ತಷ್ಟು ಸುಧಾರಿಸಿದೆ.

2025ರ ವೇಳೆಗೆ ದೇಶದ ಒಟ್ಟು ರಾಷ್ಟ್ರೀಯ ಹೆದ್ದಾರಿಗಳ ಉದ್ದವನ್ನು 2 ಲಕ್ಷ ಕಿ.ಮೀ ಗೆ ತಲುಪುವ ಗುರಿಹೊಂದಲಾಗಿದ್ದು, ಭಾರತ ಈಗಾಗಲೇ 1.40 ಲಕ್ಷ ಕಿ.ಮೀ.ಗೂ ಹೆಚ್ಚು ರಾಷ್ಟ್ರೀಯ ಹೆದ್ದಾರಿ ಜಾಲವು ಸೇವೆಯಲ್ಲಿದೆ.

ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳು ಪ್ರಯಾಣದ ಸಮಯ ತಗ್ಗಿಸುವುದರ ಜೊತೆಗೆ ಇಂಧನ ವೆಚ್ಚವನ್ನು ಪರಿಣಾಮಕಾರಿಯಾಗಿ ಕಡಿತಗೊಳಿಸಲು ಸಹಕಾರಿಯಾಗುತ್ತಿದ್ದು, ಜೊತೆಗೆ ಕೈಗಾರಿಕಾ ಕಾರಿಡಾರ್ ಅಭಿವೃದ್ದಿಗೆ ಸಹಕಾರಿಯಾಗುವ ಮೂಲಕ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತವೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಯೋಜನೆಗಳ ಮೇಲೆ ವಿಶೇಷ ಆಸಕ್ತಿ ವಹಿಸಿರುವ ಕೇಂದ್ರ ಸರ್ಕಾರವು ಭಾರೀ ಪ್ರಮಾಣದಲ್ಲಿ ಹಣ ವ್ಯಯಿಸುತ್ತಿದ್ದು, 2020-2021ರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು ದಿನಂಪ್ರತಿ ದೇಶಾದ್ಯಂತ ಕನಿಷ್ಠ 37 ಕಿ.ಮೀ ಹೆದ್ದಾರಿ ನಿರ್ಮಿಸಿ ದಾಖಲೆ ನಿರ್ಮಿಸಿದೆ.

2022ರ ಕೇಂದ್ರ ಬಜೆಟ್‌ನಲ್ಲಿ ಹಲವಾರು ಹೊಸ ಯೋಜನೆಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಮಾಣವನ್ನು ಹೆಚ್ಚಿಸಲು ಮಹತ್ವದ ಯೋಜನೆ ರೂಪಿಸಲಾಗಿದ್ದು, 2022-23ನೇ ಸಾಲಿನ ಕೇಂದ್ರ ಬಜೆಟ್‍ನಲ್ಲಿ 25 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ.

ಗುರಿಸಾಧನೆಗಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಕ್ರಿಯೆಯನ್ನು ತೀವ್ರಗೊಳಿಸಿರುವ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಪ್ರಸಕ್ತ ವರ್ಷದಲ್ಲಿ ದಿನಂಪ್ರತಿ ಕನಿಷ್ಠ 50 ಕಿ.ಮೀ ಹೆದ್ದಾರಿ ನಿರ್ಮಾಣ ಮಾಡುವ ನಿರ್ಧಾರ ಕೈಗೊಂಡಿದ್ದು, ಅತ್ಯುತ್ತಮ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸಾರಿಗೆ ಸಂಪರ್ಕವನ್ನು ಸರಳಗೊಳಿಸಿ ಆರ್ಥಿಕತೆಗೆ ಉತ್ತೇಜನ ನೀಡಲಾಗುತ್ತಿದೆ.