TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ನಕಲಿ ನಂಬರ್ ಪ್ಲೇಟ್ ಮಾಫಿಯಾ- ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಹುಷಾರ್..!
ಪ್ರತಿಯೊಬ್ಬರಿಗೆ ತಮ್ಮದೆಯಾದ ಒಂದು ಸ್ವಂತ ವಾಹನ ಖರೀದಿ ಮಾಡಬೇಕೆಂಬ ಮಹಾದಾಸೆ ಇದ್ದೆ ಇರುತ್ತೆ. ಆದ್ರೆ ಬಹುತೇಕರಿಗೆ ದುಬಾರಿ ಬೆಲೆ ತೆತ್ತು ಹೊಸ ವಾಹನ ಖರೀದಿ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳತ್ತ ಮುಖ ಮಾಡುವುದು ಕಾಮನ್. ಈ ವೇಳೆ ನೀವು ಸ್ವಲ್ಪವೇ ಎಚ್ಚರ ತಪ್ಪಿದ್ರು ಮೋಸಕ್ಕೆ ಒಳಗಾಗುವುದಲ್ಲದೇ ಮಾಡದ ತಪ್ಪಿಗೆ ಕಾನೂನು ಕ್ರಮ ಎದುರಿಸಬೇಕಾಗದ ಪರಿಸ್ಥಿತಿ ಬರಬಹುದು.
ಹೌದು, ಬೆಂಗಳೂರಿನಲ್ಲಿ ನಕಲಿ ನಂಬರ್ ಪ್ಲೇಟ್ ಸೃಷ್ಠಿಸಿ ಕದ್ದ ವಾಹನಗಳನ್ನು ಸೆಕೆಂಡ್ ಹ್ಯಾಂಡ್ ರೂಪದಲ್ಲಿ ಮಾರಾಟ ಮಾಡುವ ಜಾಲವೊಂದು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಸೆಕೆಂಡ್ ಹ್ಯಾಂಡ್ ವಾಹನ ಖರೀದಿಗಾಗಿ ಎದುರು ನೋಡುತ್ತಿರುವ ಗ್ರಾಹಕರಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಹೊಸ ವಾಹನ ಖರೀದಿ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸೆಕೆಂಡ್ ಹ್ಯಾಂಡ್ ವಾಹನವನ್ನಾದರೂ ಖರೀದಿ ಮಾಡಬೇಕೆಂಬ ಯೋಜನೆಯಲ್ಲಿರುವ ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಬಳಸಿದ ವಾಹನಗಳನ್ನು ಮಾರಾಟ ಮಾಡುವ ಖದೀಮರ ತಂಡವು ಗ್ರಾಹಕರಿಗೆ ಮಕ್ಮಲ್ ಟೋಪಿ ಹಾಕುತ್ತಿವೆ.
ದೊಡ್ಡ ದೊಡ್ಡ ವಾಹನ ತಯಾರಕ ಸಂಸ್ಥೆಗಳ ಡೀಲರ್‍ಗಳು ಸಹ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟದ ಹೆಸರಿನಲ್ಲಿ ಗ್ರಾಹಕರಿಗೆ ಯಾವೆಲ್ಲಾ ರೀತಿ ಮೋಸ ಮಾಡುತ್ತಿದ್ದಾರೆ ಎಂಬುವುದರ ಬಗ್ಗೆ ನಾವೀಗಾಗಲೇ ನಿಮಗೆ ಮಾಹಿತಿಯನ್ನು ನೀಡಿದ್ದೇವೆ. ಆದ್ರೆ ಬೆಂಗಳೂರಿನಲ್ಲಿ ಶುರುವಾಗಿರುವ ಹೊಸ ಮಾಫಿಯಾ ಒಂದು ನಿಮ್ಮನ್ನು ಬೆಚ್ಚಿಬಿಳಿಸುತ್ತೆ.
ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡುವಾಗ ಸರಿಯಾದ ದಾಖಲೆಗಳು ಇದೆಯೆ ಇಲ್ಲವೇ ಎಂದು ಪರಿಶೀಲಿಸಿದರೆ ಮಾತ್ರ ಸಾಲದು. ಇದೀಗ ನೀಡಲಾದ ನಂಬರ್ ಪ್ಲೇಟ್ ಬೇರೊಂದು ವಾಹನಕ್ಕೂ ನೀಡಲಾಗಿದೆಯೇ ಎಂಬ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರಿನಲ್ಲಿ ನಕಲಿ ನಂಬರ್ ಪ್ಲೇಟ್ ಮಾಫಿಯಾ ಇರುವುದನ್ನು ಪೊಲೀಸರ ಗಮನಕ್ಕೆ ಬಂದಿದ್ದು, ಬೇರಾವುದೋ ದೂರದ ಊರಿನಲ್ಲಿ ಕದ್ದ ವಾಹನಗಳನ್ನು ತೆಗೆದುಕೊಂಡು ಬಂದು ಅವುಗಳಿಗೆ ಈಗಾಗಲೇ ನೋಂದಣಿಯಾಗಿರುವ ನಂಬರ್‍ಗಳನ್ನು ನೀಡಿ ಮರು ಮಾರಾಟ ಮಾಡುತ್ತಿರುವ ಸಂಖ್ಯೆ ಹೆಚ್ಚಾಗಿದೆ.
ಮೊನ್ನೆಯಷ್ಟೇ ಲಕ್ನೊದಲ್ಲಿ ಕದ್ದ ವಾಹನದ ಚಾಸಿಸ್ ಸಂಖ್ಯೆಯನ್ನು ಬದಲಾಯಿಸುವ ಮೂಲಕ ಇಲ್ಲಿ ಮಾರಾಟ ಮಾಡಲಾಗಿದ್ದು, ನಕಲಿ ನಂಬರ್ ಪ್ಲೆಟ್ ಮಾಫಿಯಾ ತಂಡವು ಕದ್ದ ವಾಹನಗಳನ್ನು ಎರಡು ವಿಧಗಳಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಕದ್ದಿರುವ ವಾಹನಗಳಿಗೆ ಈಗಿರುವ ಚಾಸಿಸ್ ಸಂಖ್ಯೆಯ ದಾಖಲೆಗಳನ್ನು ವಿರೂಪಗೊಳಿಸುವುದು ಒಂದು ವಿಧವಾದ್ರೆ, ಮತ್ತೊಂದಡೆ ಅವರ ಅಸ್ತಿತ್ವದಲ್ಲಿರುವ ಡಾಕ್ಯುಮೆಂಟ್‍ಗಳನ್ನು ಆಧರಿಸಿ ಚಾಸಿಸ್ ಸಂಖ್ಯೆಯನ್ನು ಬದಲಿಸಿ ಮಾರಾಟ ಮಾಡುತ್ತಿದ್ದಾರೆ.
ಖದೀಮರು ಬಹುತೇಕ ಪ್ರಕರಣಗಳಲ್ಲಿ ಹಳೆಯ ವಾಹನಗಳ ಚಾಸಿಸ್ ಅನ್ನು ನವೀಕರಿಸಿ ನಂತರ ನಕಲಿ ಸಂಖ್ಯೆಯ ಫಲಕವನ್ನು ತಯಾರು ಮಾಡುತ್ತಿದ್ದು, ಅಪರಾಧಿಗಳು ಇತರರಿಗೆ ಮಾರಾಟ ಮಾಡುವ ಮೊದಲು ಡಾಕ್ಯುಮೆಂಟ್‍ಗಳು, ನಂಬರ್ ಪ್ಲೇಟ್, ಚಾಸಿಸ್ ಸಂಖ್ಯೆ ಮತ್ತು ಎಂಜಿನ್ ಸಂಖ್ಯೆಗಳನ್ನು ನಕಲು ಮಾಡುವುದು ವರದಿಯಾಗಿದೆ.
ಪ್ರಕರಣ ಪತ್ತೆಗೆ ಪೊಲೀಸರ ಪರದಾಟ
ಇಂತಹ ಪ್ರಕರಣಗಳನ್ನು ಬಗೆಹರಿಸುವುದು ಪೊಲೀಸರಿಗೂ ತುಸು ಕಷ್ಟದ ಕೆಲಸ ಅಂದ್ರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಕದ್ದ ವಾಹನಗಳು ಟ್ರಾಫಿಕ್ ಪೊಲೀಸರ ಕಣ್ಣಿಗೆ ಬಿದ್ದಾಗಲೂ ಸಹ ನಕಲು ಮಾಡಲಾದ ನೋಂದಣಿ ಸಂಖ್ಯೆ ಮತ್ತು ಮೂಲ ಮಾಲೀಕನ ಸಂಖ್ಯೆಯ ವಾಹನ ಮಾಹಿತಿ ತಿಳಿಯುವುದು ಕಷ್ಟ ಕಷ್ಟ.
ಹೀಗಾಗಿ ತಂತ್ರಜ್ಞಾನದಿಂದ ಆಗುವ ಉಪಯೋಗಕರ ಕೆಲಸಗಳಿಂತ ಮೋಸವೇ ಹೆಚ್ಚು ನಡೆಯುತ್ತಿದ್ದು, ಹೀಗಾಗಿ ನಕಲಿ ನಂಬರ್ ಪ್ಲೇಟ್ ಮತ್ತು ಅಸಲಿ ನಂಬರ್ ಪ್ಲೇಟ್ ಪತ್ತೆ ಹಚ್ಚಲು ಪೊಲೀಸರಿಗೆ ಕಷ್ಟಕರವಾಗುತ್ತಿದೆ ಎಂದು ಆರ್‍ಟಿಒ ಅಧಿಕಾರಿ ರಾಜಣ್ಣ ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಸೇಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಮುನ್ನ..!
ಹೊಸ ಕಾರುಗಳನ್ನು ಹೋಲಿಸಿದರೆ ಬಳಕೆಯಾದ ಕಾರುಗಳನ್ನು ಖರೀದಿಸುವುದು ತುಂಬಾನೇ ಕಷ್ಟಕರ. ಹೊಸ ಕಾರು ಖರೀದಿಸುವಾಗ ನಮಗೆ ನೈಜ ಮಾಹಿತಿ ಗಿಟ್ಟಿಸಿಕೊಳ್ಳುವುದು ತುಂಬಾನೇ ಸುಲಭ. ಆದರೆ ಇಂದಿನ ಈ ಲೇಖನದ ಮೂಲಕ ಹಳೆ ಕಾರು ಖರೀದಿಸುವಾಗ ಗಮನಹರಿಸಬೇಕಾದ ಮಹತ್ವಪೂರ್ಣ ವಿಚಾರಗಳ ಬಗ್ಗೆ ತಿಳಿಯಲು ಮುಂದಕ್ಕೆ ಓದಿರಿ..
ಕಾರಿನ ಬಜೆಟ್
ಹೊಸ ಕಾರಿನಂತೆ ಹಳೆ ಕಾರು ಖರೀದಿ ವಿಚಾರದಲ್ಲೂ ಮೊದಲು ನೀವು ಕೊಂಡುಕೊಳ್ಳುವ ಕಾರಿನ ಬಜೆಟ್ ಬಗ್ಗೆ ಸ್ಪಷ್ಟ ಅರಿವನ್ನು ಹೊಂದಿರಬೇಕಾಗುತ್ತದೆ. ನಿಮ್ಮದ್ದು ಸಣ್ಣ ಕುಟುಂಬವಾಗಿದ್ದು, ನಾಲ್ಕು ಪ್ರಯಾಣಿಕರನ್ನಷ್ಟೇ ಹೊಂದಿದ್ದಲ್ಲಿ ಹ್ಯಾಚ್‌ಬ್ಯಾಕ್ ಕಾರು ಹೆಚ್ಚು ಸೂಕ್ತವೆನಿಸುವುದು.ಅದೇ ಹೊತ್ತಿಗೆ ದೀರ್ಘ ಪಯಣ ಬಯಸುವುದಾದ್ದಲ್ಲಿ ಹಾಗೆಯೇ 5ಕ್ಕಿಂತ ಹೆಚ್ಚು ಸದಸ್ಯರನ್ನು ನಿಮ್ಮ ಕುಟುಂಬ ಹೊಂದಿರುವುದಲ್ಲಿ ಸೆಡಾನ್, ಎಸ್‌ಯುವಿ ಅಥವಾ ಎಂಪಿವಿ ಆಯ್ಕೆ ಮಾಡಿಕೊಳ್ಳಬಹುದು.
ಅವಲೋಕನ
ಎರಡನೇಯದಾಗಿ ಮಾರುಕಟ್ಟೆ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕನ ಮಾಡಿಕೊಳ್ಳುವುದು ಅಷ್ಟೇ ಮುಖ್ಯ. ಸದ್ಯದ ಮಾರುಕಟ್ಟೆ ಪರಿಸ್ಥಿತಿ ಹೇಗಿದೆ ಇತ್ಯಾದಿ ವಿಚಾರಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ಹಾಗಾಗಿ ಸ್ವಲ್ಪ ಹೊತ್ತು ಅಂತರ್ಜಾಲದಲ್ಲಿ ಜಾಲಾಡಿದರೆ ಒಳಿತು.
ಸರಿಯಾದ ಡೀಲರ್‍ಗಳ ಆಯ್ಕೆ
ನೀವು ಮಾಡಬೇಕಾಗಿರುವ ಇನ್ನೊಂದು ಮಹತ್ವಪೂರ್ಣ ಕೆಲಸವೆಂದರೆ ಹಳೆ ಕಾರು ಖರೀದಿ ವೇಳೆ ಸರಿಯಾದ ವಿತರಕರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಡೀಲರುಗಳು ತಮ್ಮ ವ್ಯಾಪಾರ ಕುದುರಿಸಿಕೊಳ್ಳುವ ನಿಟ್ಟಿನಲ್ಲಿ ಮೋಸ ಮಾಡುವ ಸಾಧ್ಯತೆಯಿದ್ದು, ಹಾಗಾಗಿ ಸ್ಟಾಂಡರ್ಡ್ ಡೀಲರುಗಳನ್ನು ಆಯ್ಕೆ ಮಾಡಿಕೊಳ್ಳಿರಿ...
ಹಣಕಾಸು ನೆರವು
ನಿಮ್ಮ ಕಾರು ಖರೀದಿ ಆಸೆಯನ್ನು ಪೂರೈಸಲು ಮಾರುಕಟ್ಟೆಯಲ್ಲಿ ಹಲವಾರು ಫಿನಾನ್ಸ್ ಅಥವಾ ಬ್ಯಾಂಕ್‌ಗಳು ಸಾಲ ನೀಡಲು ಮುಂದಾಗುತ್ತವೆ. ಹಾಗಿರುವಾಗ ಹಳೆ ಕಾರು ಖರೀದಿಗೆ ಯಾವ ಸ್ಕೀಮ್ ಸರಿಹೊಂದುತ್ತದೆ ಎಂಬುದನ್ನು ತಜ್ಞರಿಂದ ಅರಿತುಕೊಳ್ಳುವುದು ಉತ್ತಮ.
ಟೆಸ್ಟ್ ಡ್ರೈವ್
ನೀವು ಖರೀದಿಸುವ ಹಳೆ ಕಾರು ನೋಡಲು ತುಂಬಾನೇ ಅಂದವಾಗಿರಬಹುದು. ಆದರೆ ಅದರ ಎಂಜಿನ್ ಅಥವಾ ಬಿಡಿಭಾಗಗಳ ದೌರ್ಬಲ್ಯ ಬಗ್ಗೆ ಅರಿಯಲು ನಿಮ್ಮಿಂದ ಹೇಗೆ ಸಾಧ್ಯ? ಹಾಗಿರುವಾಗ ಹಳೆ ಕಾರುಗಳನ್ನು ಸಹ ಒಂದೆರಡು ಬಾರಿ ಓಡಿಸಿ ನೋಡುವುದು ಹೆಚ್ಚು ಸೂಕ್ತ.
ಹಳೆ ಕಾರಿನ ದಾಖಲೆ ಪತ್ರ
ಇನ್ನು ಕಾರಿನ ಆರ್‌ಸಿ ಬುಕ್, ಎಮಿಷನ್ ಟೆಸ್ಟ್ ಕಾರ್ಡ್, ವಿಮಾ ಕಾರ್ಡ್ ಎಲ್ಲವೂ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿರಿ. ಹಾಗೆಯೇ ಕಾರಿನ ಮಾಡೆಲ್ ಯಾವುದು? ಲೋನ್ ಕ್ಲಿಯರ್ ಆಗಿದೆಯೇ? ಎಷ್ಟು ಮಾಲಿಕರು ಹಸ್ತಾಂತರದ ಬಳಿಕ ನಿಮ್ಮ ಬಳಿಗೆ ತಲುಪುತ್ತಿದೆ? ಎಂಬುದರ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಿರಿ.
ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಿ
ಅಂತಿಮವಾಗಿ ವ್ಯವಹಾರ ಮುಗಿದ ಮೇಲೆ ಕಾರನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಿರಿ. ಒಟ್ಟಿನಲ್ಲಿ ಹೊಸ ಕಾರಿನಂತೆ ಹಳೆ ಕಾರು ಖರೀದಿ ವೇಳೆಯೂ ಹೆಚ್ಚು ಜಾಗರೂಕರಾಗಬೇಕಾಗಿರುವುದು ಅಷ್ಟೇ ಮುಖ್ಯ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದಿರಿ.