kapil sharma: ಸ್ಟಾರ್ ನಟರೇ ಷಾಕ್... ಕಾಮಿಡಿ ಶೋ ಮಾಡಿಕೊಂಡು 3 ಕೋಟಿ ಕಾರು ಖರೀದಿ!

kapil sharma: ಭಾರತದಲ್ಲಿ ಸ್ಟಾರ್ ನಟರಿಗಿಂತ ಹಾಸ್ಯ ಮಾಡುವವರಿಗೆ ತುಂಬಾ ಡಿಮ್ಯಾಂಡ್ ಇದೆ. ಹೀರೋಗಳು ಒಂದು ಸಿನಿಮಾ ಮಾಡುವಷ್ಟರಲ್ಲೆ ಹಾಸ್ಯ ನಟರು ನಾಲ್ಕೈದು ಸಿನಿಮಾಗಳು, ಕಾಮಿಡಿ ಶೋಗಳು, ಈವೆಂಟ್‌ಗಳನ್ನು ಮುಗಿಸಿರುತ್ತಾರೆ. ಹೀಗೆ ಒಂದು ವರ್ಷದಲ್ಲಿ ಅಂದಾಜು ಹೀರೋ ಸಮಾನವಾಗಿ ಸಂಭಾವನೆ ಪಡೆದಿರುತ್ತಾರೆ. ಇತ್ತೀಚೆಗೆ ಭಾರತದ ಖ್ಯಾತ ಆಂಕರ್ ಹಾಗೂ ಹಾಸ್ಯ ನಟ ದುಬಾರಿ ಕಾರನ್ನು ಖರೀದಿಸಿ ಅಚ್ಚರಿಗೊಳಿಸಿದ್ದಾರೆ. ಇದೇ ಕಾರನ್ನು ಬಾಲಿವುಡ್ ನಿಂದ ಹಿಡಿದು ಸ್ಯಾಂಡಲ್‌ವುಡ್ ವರೆಗಿನ ಸ್ಟಾರ್ ನಟರು ಬಳಸುತ್ತಿದ್ದಾರೆ. ಅದೇ ರೇಂಜ್ ರೋವರ್ ಆಟೋಬಯೋಗ್ರಫಿ ಎಸ್‌ಯುವಿ.

ರೇಂಜ್ ರೋವರ್ ಆಟೋಬಯೋಗ್ರಫಿ ಕಾರು ವಿಶ್ವದ ಅತ್ಯಂತ ಪ್ರೀಮಿಯಂ ಎಸ್‌ಯುವಿಗಳಲ್ಲಿ ಒಂದಾಗಿದೆ. ಇದು ಇತ್ತೀಚಿನ ತಂತ್ರಜ್ಞಾನ ಮತ್ತು ಅನುಕೂಲಕರ ಸೌಲಭ್ಯಗಳೊಂದಿಗೆ ಪ್ರಯಾಣಿಕರನ್ನು ಮುದ್ದಿಸುತ್ತದೆ. ರೇಂಜ್ ರೋವರ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 2.40 ಕೋಟಿಯಿಂದ ರೂ. 4.98 ಕೋಟಿಗಳವರೆಗೆ ಇದೆ.

television-host-kapil-sharma-buys-range-rover-autobiography

ಫೀಚರ್ಸ್: ಪಿವಿ ಪ್ರೊ ಓಎಸ್‌ನೊಂದಿಗೆ 13.2-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಪ್ರೀಮಿಯಂ ಮೆರಿಡಿಯನ್ ಸೌಂಡ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ವಾಯ್ಸ್ ಕಮಾಂಡ್, ಹೆಡ್-ಅಪ್ ಡಿಸ್ಪ್ಲೇ, ಡಿಜಿಟಲ್ ಆಡಿಯೋ ಬ್ರಾಡ್ ಕಾಸ್ಟ್ (ಡಿಎಬಿ), ಮಸಾಜ್ ಫಂಕ್ಷನ್ ನೊಂದಿಗೆ 24-ವೇ ಹೀಟೆಡ್ ಮತ್ತು ಕೂಲ್ಡ್ ಫ್ರಂಟ್ ಸೀಟುಗಳನ್ನು ಹೊಂದಿದೆ.

ಎಂಜಿನ್: 3.0-ಲೀಟರ್ ಪಿ400 ಇಂಜಿನಿಯಂ ಟರ್ಬೋಚಾರ್ಜ್ಡ್ ಇನ್ ಲೈನ್-6 ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 394 ಬಿಹೆಚ್ ಪವರ್ ಮತ್ತು 550 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೋಂದಿದ್ದು, ಆಫ್-ರೋಡಿಂಗ್ ಸಾಮರ್ಥ್ಯಗಳನ್ನು ಹೊಂದಿದೆ. ಕೇವಲ 5.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪಬಲ್ಲದು.

television-host-kapil-sharma-buys-range-rover-autobiography

ಅಷ್ಟಕ್ಕೂ ಈ ದುಬಾರಿ ಕಾರು ಖರೀದಿಸಿದವರು ಯಾರು ಗೊತ್ತಾ? ಭಾರತದ ಖ್ಯಾತ ಹಾಸ್ಯ ನಟ 'ಕಪಿಲ್ ಶರ್ಮಾ' (kapil sharma), ಇವರು ಭಾರತೀಯ ಸ್ಟ್ಯಾಂಡ್-ಅಪ್ ಹಾಸ್ಯನಟ, ನಿರೂಪಕ, ನಟ, ಡಬ್ಬಿಂಗ್ ಕಲಾವಿದ, ನಿರ್ಮಾಪಕ ಮತ್ತು ಗಾಯಕರಾಗಿದ್ದಾರೆ. ಶರ್ಮಾ ಸ್ಟ್ಯಾಂಡ್-ಅಪ್ ಕಾಮಿಡಿ ಮತ್ತು ಟಾಕ್ ಶೋ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಮತ್ತು ದಿ ಕಪಿಲ್ ಶರ್ಮಾ ಶೋನಲ್ಲಿ ನಿರೂಪಕರಾಗಿದ್ದಾರೆ.

ಕಪಿಲ್ ಶರ್ಮಾ ಇತ್ತೀಚೆಗೆ ಅಲ್ಟ್ರಾ-ಐಷಾರಾಮಿ ರೇಂಜ್ ರೋವರ್ ಆಟೋಬಯೋಗ್ರಫಿ ಖರೀದಿಸಿದ್ದಾರೆ. ಇದು ವ್ಯಾಪಕವಾಗಿ ಪ್ರಸಿದ್ಧವಾದ ಎಸ್‌ಯುವಿಯಾಗಿದ್ದು, ಬಹಳಷ್ಟು ಕ್ರಿಕೆಟಿಗರು, ಬಾಲಿವುಡ್ ನಟರು ಮತ್ತು ದೇಶದ ಉನ್ನತ ಉದ್ಯಮಿಗಳು ಈ ಕಾರನ್ನು ಹೊಂದಿದ್ದಾರೆ. ಸ್ಟಾರ್‌ ನಟರಷ್ಟೆ ಬಿಸಿಯಾಗಿರುವ ಕಪಿಲ್‌ ಶರ್ಮಾ ಅವರು ವೈಭವೋಪೇತ ವಾಹನಗಳನ್ನು ಹೊಂದಿದ್ದಾರೆ.

ಕಪಿಲ್ ತಮ್ಮ ಹೊಸ ಐಷಾರಾಮಿ ಎಸ್‌ಯುವಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ದೃಶ್ಯಗಳು ವೈರಲ್ ಆಗಿವೆ. ಅವರು ಬಿಳಿ ಬಣ್ಣದ ರೇಂಜ್ ರೋವರ್ ಆಟೋಬಯೋಗ್ರಫಿ ಎಸ್‌ಯುವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರು ವಿಐಪಿ ನಂಬರ್ ಪ್ಲೇಟ್ ಹೋಂದಿದ್ದು, ಇದು ಸಾಮಾನ್ಯವಾಗಿ ದೊಡ್ಡ ಸೆಲೆಬ್ರಿಟಿಗಳು ಮುಂಬೈನಲ್ಲಿ ಹೆಚ್ಚಾಗಿ ಬಳಸುತ್ತಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, February 10, 2025, 12:20 [IST]
English summary
Television host kapil sharma buys range rover autobiography
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+