Just In
Don't Miss!
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Finance
ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ
- News
ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ
- Movies
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೇಶದ ಜನಪ್ರಿಯ ಕಾರ್ ಬ್ರಾಂಡ್ ಆಗಿ ಮಿಂಚುತ್ತಿರುವ ಟಾಟಾ ಯಶಸ್ವಿ ಹಿಂದಿನ ಕಾರಣವೇನು?
ಹೊಸ ಕಾರುಗಳ ಉತ್ಪಾದನೆಯಲ್ಲಿ ಸದ್ಯ ಅಗ್ರಸ್ಥಾನದಲ್ಲಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಈ ಹಿಂದಿಗಿಂತಲೂ ಹೆಚ್ಚು ಗ್ರಾಹಕರ ಆಕರ್ಷಣೆಗೆ ಕಾರಣವಾಗುತ್ತಿದ್ದು, ಯಶಸ್ವಿ ಹಾದಿಯಲ್ಲಿರುವ ಟಾಟಾ ಬೆಳವಣಿಗೆಯ ಹಿಂದಿನ ಇಂಟ್ರಸ್ಟಿಂಗ್ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

1945ರ ಸ್ವಾತಂತ್ರ ಪೂರ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಟ್ರಕ್ ಉತ್ಪಾದನೆ ಮೂಲಕ ಆಟೋ ಮೊಬೈಲ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದ ಟಾಟಾ ಮೋಟರ್ಸ್ ಸಂಸ್ಥೆಯು ಇಂದಿನ ಆಲ್‌ಟ್ರೊಜ್ ಕಾರು ಉತ್ಪಾದನೆಯವರೆಗೂ ಹಲವಾರು ಏಳು ಬೀಳುಗಳನ್ನು ಕಂಡಿದ್ದು, ದೇಶದ ಜನಪ್ರಿಯ ಆಟೋ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವುದರ ಹಿಂದಿನ ಇಂಟ್ರಸ್ಟಿಂಗ್ ಮಾಹಿತಿಗಳು ಪ್ರತಿಯೊಬ್ಬರಿಗೂ ಅಚ್ಚರಿ ತರಿಸದೇ ಇರಲಾರದು.

ಆಟೋ ಉದ್ಯಮಕ್ಕೆ ಕಾಲಿಟ್ಟ ಹೊಸತದರಲ್ಲಿ ಮೊದಲ ಬಾರಿಗೆ ವಾಣಿಜ್ಯ ವಾಹನಗಳ ಉತ್ಪಾದನೆ ಕೈಗೊಂಡಿದ್ದ ಟಾಟಾ ಸಂಸ್ಥೆಯು ಯಾವುದೇ ರೀತಿಯ ಸ್ವಾಯತ್ತ ಎಂಜಿನ್ ತಂತ್ರಜ್ಞಾನವನ್ನು ಹೊಂದದೆ ಇದ್ದರೂ ಜರ್ಮನ್ ಪ್ರತಿಷ್ಠಿತ ಟ್ರಕ್ ಉತ್ಪಾದನಾ ಸಂಸ್ಥೆಯಾದ ಡೈಮ್ಲರ್-ಬೆಂಝ್ ಜೊತೆಗೂಡಿ ಟ್ರಕ್ ಉತ್ಪಾದನೆ ಮಾಡುತ್ತಿತ್ತು.

ಕೇವಲ ಟ್ರಕ್ ಕವಚಗಳನ್ನು ಮಾತ್ರವೇ ನಿರ್ಮಾಣ ಮಾಡುತ್ತಿದ್ದ ಟಾಟಾ ಮೋಟಾರ್ಸ್ ಸಂಸ್ಥೆಯು ಡೈಮ್ಲರ್ ಎಂಜಿನ್ ತಂತ್ರಜ್ಞಾನ ಬಳಕೆಯೊಂದಿಗೆ ಉತ್ಕೃಷ್ಟ ಗುಣಮಟ್ಟದ ಟ್ರಕ್ ಉತ್ಪನ್ನಗಳೊಂದಿಗೆ ನಿಧಾನವಾಗಿ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯಗೊಳ್ಳತೊಡಗಿತು.

ತದನಂತರ 1955ರಲ್ಲಿ ನಡೆದ ಬಾಂಬೆ-ಜಿನೇವಾ ಟ್ರಕ್ ರ‍್ಯಾಲಿಯಲ್ಲಿ ಭಾಗಿಯಾಗುವ ಮೂಲಕ ದೇಶದ ಮನೆ ಮಾತಾದ ಟಾಟಾ ಮೋಟಾರ್ಸ್ ಸಂಸ್ಥೆಯು ವಿದೇಶಿ ಟ್ರಕ್ ಮಾದರಿಗಳಿಗಿಂತಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದು ಇಂದಿಗೂ ಇತಿಹಾಸದ ಪುಟಗಳಲ್ಲಿ ಅಚ್ಚಅಳಿಯದೇ ಉಳಿದೆ. ಇದಾದ ಬಳಿಕ ಆಟೋ ಉತ್ಪಾದನಾ ಮಾರುಕಟ್ಟೆ ಹೊಸ ಸಂಚನಕ್ಕೆ ಕಾರಣವಾದ ಟಾಟಾ ಜಾಗತಿಕವಾಗಿ ಗುರುತಿಸ್ಪಟ್ಟಿತು.

60ರ ದಶಕದವರೆಗೂ ದೇಶಿಯ ಮಾರುಕಟ್ಟೆಗಾಗಿ ಮಾತ್ರವೇ ಟ್ರಕ್ ಉತ್ಪಾದನೆಯನ್ನು ಕೈಗೊಳ್ಳುತ್ತಿದ್ದ ಟಾಟಾ ಸಂಸ್ಥೆಯು 1961ರಲ್ಲಿ ಮೊದಲ ಬಾರಿಗೆ ಶ್ರೀಲಂಕಾಗೆ ವಾಣಿಜ್ಯ ವಾಹನಗಳನ್ನು ರಫ್ತು ಕೈಗೊಳ್ಳುವ ಮೂಲಕ ಸಾಗರೋತ್ತರ ವ್ಯವಹಾರಗಳನ್ನು ಆರಂಭಿಸಿತ್ತು.

ಡೈಮ್ಲರ್‌ನಿಂದ ಪ್ರತ್ಯೇಕವಾದ ಟಾಟಾ..!
1969ರಲ್ಲಿ ಡೈಮ್ಲರ್‌ನಿಂದ ಪ್ರತ್ಯೇಕಗೊಂಡ ಟಾಟಾ ಸಂಸ್ಥೆಯ ಮೊದಲ ಬಾರಿಗೆ ಸ್ವತಂತ್ರವಾಗಿ ತನ್ನ ಉತ್ಪನ್ನಗಳ ಮೇಲೆ "T" ಚಿಹ್ನೆಯುಳ್ಳ ಲೋಗೊ ಅಚ್ಚುಹಾಕಲು ಪ್ರಾರಂಭಿಸಿತು.

ಇದಕ್ಕೂ ಮುನ್ನ ಟಾಟಾ ಉತ್ಪನ್ನಗಳ ಮೇಲೆ ಬೆಂಝ್ ಚಿಹ್ನೆಯನ್ನೇ ಹಾಕುತ್ತಿದ್ದ ಡೈಮ್ಲರ್ ಸಂಸ್ಥೆಯು ಟಾಟಾ ಉತ್ಪನ್ನ ಮೇಲೆ ಹೆಚ್ಚಿನ ಹಿಡಿತ ಪಡೆದುಕೊಂಡಿತ್ತು. ಆದರೆ ಬದಲಾದ ಮಾರುಕಟ್ಟೆಯ ಸನ್ನಿವೇಶದಲ್ಲಿ ಡೈಮ್ಲರ್ ಸಂಸ್ಥೆಯು ಟಾಟಾದಿಂದ ಪ್ರತ್ಯೇಕಗೊಂಡು ಸ್ವತಂತ್ರ ಉತ್ಪನ್ನಗಳ ಉತ್ಪಾದನೆ ಮಾಡತೊಡಗಿತು.
MOST READ: ಟಾಟಾ ಸಂಸ್ಥೆಯ ಈ 10 ಕಾರುಗಳನ್ನು ನಾವೆಲ್ಲರೂ ಮರೆತು ಬಿಟ್ಟಿದ್ದೇವೆ..!

ಇತ್ತ ಡೈಮ್ಲರ್‌ನಿಂದ ಪ್ರತ್ಯೇಕವಾದ ಟಾಟಾ ಕೂಡಾ 1986ರಲ್ಲಿ ಸ್ವತಂತ್ರವಾಗಿ ಉತ್ಪಾದನೆ ಮಾಡಲಾದ 407 ವಾಹನವು ಹಲವು ಹೊಸ ದಾಖಲೆಗಳಿಗೆ ಕಾರಣವಾಗಿದಲ್ಲದೇ ಇತಿಹಾದ್ ಮಿಟ್ಸುಬಿಸಿ, ಡಿಸಿಎಂ ಟೊಯೊಟಾ ಮತ್ತು ಸ್ವರಾಜ್ ಮಸ್ದಾ ಟ್ರಕ್ ಮಾದರಿಗಳಿಗೂ ತೀವ್ರ ಪೈಪೋಟಿ ನೀಡುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಯ್ತು.
MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಕಾರು ಉತ್ಪಾದನೆಗೆ ಟಾಟಾ ಎಂಟ್ರಿ
1991ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದೇ ಮಲ್ಟಿ ಯುಟಿಲಿಟಿ ವೆಹಿಕಲ್ ಸಿಯೆರಾ. 2-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ಗಳೊಂದಿಗೆ ಮಾರಾಟವಾಗುತ್ತಿದ್ದ ಸಿಯೆರಾ ಕಾರು ಹೆಚ್ಚು ದಿನ ಮಾರಾಟವಾಗಲಿಲ್ಲ.
MOST READ: ನ್ಯಾನೋ ಬರುವುದಕ್ಕೂ ಮುನ್ನವೇ ಬಂದು ಹೋದ ಅಗ್ಗದ ಬೆಲೆ ಯ 'ಮೀರಾ' ಕಾರಿನ ಕಥೆ ಗೊತ್ತಾ?

ಸಿಯೆರಾ ಹಿಂದೆಯೇ ಬಿಡುಗಡೆಗೊಂಡ ಮತ್ತೊಂದು ಕಾರು ಅಂದ್ರೆ ಅದು ಎಸ್ಟೇಟ್. ಇದು ಸಹ ಹೆಚ್ಚು ಸದ್ದು ಮಾಡಲಿಲ್ಲ. ಸಿಯೆರಾ ಕಾರಿನಿಂದ ಎರವಲು ಪಡೆದ ಕಾಸ್ಮೆಟಿಕ್ ಭಾಗ ಮತ್ತು ಮೆಕ್ಯಾನಿಕಲ್ ಅಂಶಗಳನ್ನು ಈ ಕಾರು ಪಡೆದುಕೊಂಡಿತ್ತು. ಟಾಟಾ ಸಂಸ್ಥೆಯ ಸಾಕಷ್ಟು ಪ್ರಯತ್ನದ ನಂತರವೂ ಸಹ ಈ ಕಾರು ತನ್ನ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು.

ಇದಾದ ಬಳಿಕ 1994ರಲ್ಲಿ ಟಾಟಾ ಸಂಸ್ಥೆಯು ಬಿಡುಗಡೆ ಮಾಡಿದ್ದೆ ಸುಮೊ. ಇದು ಟಾಟಾದ ಮೊದಲ ಯುಟಿಲಿಟಿ ವಾಹನವಾಗಿದ್ದು, ಕಂಪನಿಯ ನಿವೃತ್ತ ಎಂಡಿ ಸುಮಾತ್ ಮುಲೋಂಗನ್ ಅವರ ನೆನಪಿಗಾಗಿ ಸುಮೋ ಹೆಸರಿಡುವ ಮೂಲಕ ಕಾರು ಖರೀದಿದಾರರ ಗಮನಸೆಳೆಯಿತು.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಸುಮೋ ನಿರ್ಮಾಣದ ವೇಳೆಗೆ ಕೇವಲ ವಾಣಿಜ್ಯ ವಾಹನಗಳನ್ನು ಮಾತ್ರವಲ್ಲದೇ ಮಿಲಟರಿ ವಾಹನಗಳ ಉತ್ಪಾದಲ್ಲೂ ಜನಪ್ರಿಯತೆ ಸಾಧಿಸಿದ್ದ ಟಾಟಾ ಸಂಸ್ಥೆಯು ತದನಂತರ ಸುಧಾರಿತ ತಂತ್ರಜ್ಞಾನಗಳೊಂದಿಗೆ ಇಂಡಿಕಾ, ಆರಿಯಾ, ಸಫಾರಿ, ವಿನೆಗರ್, ನ್ಯಾನೋ, ಜೆಕ್ಸಾನ್,ಜೆಸ್ಟ್ ಮತ್ತು ಬೊಲ್ಟ್ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಬಹುದೊಡ್ಡ ಯಶಸ್ಸು ಸಾಧಿಸಿತು.

ಹೀಗೆ ಹಲವು ಬಗೆಯ ವಾಹನಗಳ ಉತ್ಪಾದನೆ ಮಾಡಿ ದೇಶದ ಜನತೆಯೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿರುವ ಟಾಟಾ ಸಂಸ್ಥೆಯು, ಇಂದಿಗೂ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲೂ ತನ್ನ ಜನಪ್ರಿಯತೆ ಉಳಿಸಿಕೊಂಡಿರುವುದು ಅದರ ಯಶಸ್ಸಿಗೆ ಹಿಡಿದ ಕೈಗನ್ನಡಿ ಎಂದ್ರೆ ತಪ್ಪಾಗಲಾರದು.

ಸದ್ಯ ಟಾಟಾ ಸಂಸ್ಥೆಯು ಜೆಎಲ್ಆರ್(ಜಾಗ್ವಾರ್, ಲ್ಯಾಂಡ್ ರೋವರ್, ರೇಂಜ್ ರೋವರ್) ಜೊತೆಗೂಡಿ ಕಾರು ಉತ್ಪಾದನೆಯಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಸಾಂಪ್ರಾದಾಯಿಕ ಕಾರು ಉತ್ಪನ್ನಗಳ ಅಭಿವೃದ್ದಿಯಿಂದ ಹೊರಬರುವ ಮೂಲಕ ಐಷಾರಾಮಿ ಕಾರು ಮಾದರಿಗಳ ಉತ್ಪಾದನೆ ಜೊತೆಗೆ ಸೂಪರ್ ಕಾರುಗಳನ್ನು ಸಿದ್ದಪಡಿಸುವತ್ತ ಗಮನಹರಿಸಿದೆ.