ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಹೋಂಡಾ ಕಂಪನಿಯ ಗೋಲ್ಡ್ ವಿಂಗ್ ಬೈಕ್ ಅನ್ನು ಅಲ್ಟಿಮೇಟ್ ಕ್ರೂಸಿಂಗ್ ಮಷಿನ್ ಎಂದು ಕರೆಯಲಾಗುತ್ತದೆ. ಈ ಬೈಕ್ ಐಷಾರಾಮಿತನಕ್ಕೆ ಮತ್ತೊಂದು ಹೆಸರಾಗಿದೆ. ದುಬಾರಿ ಬೆಲೆಯ ಐಷಾರಾಮಿ ಕಾರುಗಳಲ್ಲಿ ಅಳವಡಿಸಲಾಗುವ ಫೀಚರ್‍‍ಗಳನ್ನು ಈ ಬೈಕಿನಲ್ಲಿ ಕಾಣಬಹುದು.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಬೇರೆ ದೇಶಗಳಲ್ಲಿ ಈ ಹೈ ಎಂಡ್ ಬೈಕ್ ಅನ್ನು ಟ್ರೈಕ್ ಅಂದರೆ ಮೂರು ಚಕ್ರದ ವಾಹನದ ರೀತಿಯಲ್ಲಿ ಮಾರಾಟ ಮಾಡಲಾಗುತ್ತದೆ. ಕೆಲ ದಿನಗಳ ಹಿಂದೆ ಭಾರತೀಯರೊಬ್ಬರು ಖರೀದಿಸಿರುವ ಈ ಹೋಂಡಾ ಗೋಲ್ಡ್ ವಿಂಗ್ ಟ್ರೈಕ್ ವೀಡಿಯೊವೊಂದು ಇಂಟರ್‍‍ನೆಟ್‍‍ನಲ್ಲಿ ವೈರಲ್ ಆಗಿತ್ತು.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಈ ವೀಡಿಯೊದಲ್ಲಿ ಈ ಬೈಕ್ ಅನ್ನು ಖರೀದಿಸಿರುವವರು ಈ ಬೈಕ್ ಅನ್ನು ಹೇಗೆ ಆಮದು ಮಾಡಿಕೊಳ್ಳಲಾಯಿತು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಈ ವೀಡಿಯೊವನ್ನು ಕೌಮುದಿ ತನ್ನ ಯೂಟ್ಯೂಬ್‍ ಚಾನೆಲ್‍‍ನಲ್ಲಿ ಅಪ್‍‍ಲೋಡ್ ಮಾಡಿದೆ.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಈ ವೀಡಿಯೊದಲ್ಲಿ ಮೊದಲಿಗೆ ಈ ಬೈಕಿನ ಮಾಲೀಕರು ಟ್ರೈಕ್‍‍ನಲ್ಲಿರುವ ಫೀಚರ್‍‍ಗಳ ಬಗ್ಗೆ ಮಾತನಾಡುತ್ತಾರೆ. ಹೆಚ್ಚುವರಿಯಾದ ಟಯರ್‍‍ನಿಂದಾಗಿ ಟ್ರೈಕ್ ಯಾವುದೇ ದ್ವಿಚಕ್ರ ವಾಹನಗಳಿಗಿಂತ ಹೆಚ್ಚಿನ ಸುರಕ್ಷತೆಯನ್ನು ಹೊಂದಿರುತ್ತದೆ ಎಂದು ಹೇಳುತ್ತಾರೆ.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಈ ಬೈಕಿನಲ್ಲಿ ಜೆಬಿ‍ಎಲ್‍‍ನ ವಾಟರ್‍‍ಪ್ರೂಫ್, ಆಡಿಯೋ ಔ‍‍ಟ್‍‍ಪುಟ್, ಸಿಬಿ ರೇಡಿಯೊ, ಎಫ್‍ಎಂ ರೇಡಿಯೊ, ಮ್ಯೂಸಿಕ್ ಸಿಸ್ಟಂ ಹಾಗೂ ಕ್ರೂಸ್ ಕಂಟ್ರೋಲ್‍‍ಗಳಂತಹ ಹಲವಾರು ಫೀಚರ್‍‍ಗಳಿವೆ. ಈ ಬೈಕಿನಲ್ಲಿರುವ ಹಿಂಬದಿಯ ಸೀಟಿನಲ್ಲಿರುವ ಕಂಪಾರ್ಟ್‍‍ಮೆಂಟ್‍‍ನಲ್ಲಿ ಲಗೇಜ್ ಇಡಬಹುದಾಗಿದೆ.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಅಂದ ಹಾಗೆ ಈ ಬೈಕಿನ ಮಾಲೀಕರ ಹೆಸರು ಬಾಬು ಜಾನ್. ಈ ಬೈಕಿನಲ್ಲಿ 55 ಲೀಟರಿನ ಪೆಟ್ರೋಲ್ ತುಂಬಿಸಬಹುದು. ಇದು ಭಾರತದಲ್ಲಿರುವ ಯಾವುದೇ ಚಿಕ್ಕ ಹ್ಯಾಚ್‍‍ಬ್ಯಾಕ್ ಕಾರಿನ ಫ್ಯೂಯಲ್ ಟ್ಯಾಂಕ್‍‍ಗಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಬಾಬು ಜಾನ್‍‍ರವರು ಅನಿವಾಸಿ ಭಾರತೀಯ ಉದ್ಯಮಿಯಾಗಿದ್ದಾರೆ. ಈ ಟ್ರೈಕ್ ಅನ್ನು ಯು‍ಎ‍ಇಯಿಂದ ಆಮದು ಮಾಡಿಕೊಂಡಿದ್ದಾರೆ. ಆದರೆ ಈ ಬೈಕ್ ಅನ್ನು ಆಮದು ಮಾಡಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಈ ಟ್ರೈಕ್ ಅನ್ನು 14 ತಿಂಗಳ ಹಿಂದೆಯೇ ಆಮದು ಮಾಡಿಕೊಳ್ಳಲಾಗಿತ್ತು.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಆಗಿನಿಂದ ಕಸ್ಟಮ್ಸ್ ಅಧಿಕಾರಿಗಳು ವಿವಿಧ ಕಾರಣಗಳಿಗಾಗಿ ಈ ಟ್ರೈಕ್ ಅನ್ನು ಬಿಡುಗಡೆಗೊಳಿಸಿರಲಿಲ್ಲ. ಬಾಬುರವರು ಕಸ್ಟಮ್ ಅಧಿಕಾರಿಗಳ ವಿರುದ್ಧ ನ್ಯಾಯಲಯದಲ್ಲಿ ದಾವೆ ಹೂಡಿ, ಕಸ್ಟಮ್ ತೆರಿಗೆಗಳನ್ನು ಪಾವತಿಸಿ ಈ ಟ್ರೈಕ್ ಅನ್ನು 14 ತಿಂಗಳ ನಂತರ ವಾಪಸ್ ಪಡೆಯಲು ಯಶಸ್ವಿಯಾದರು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಈ ಟ್ರೈಕ್ ಕಸ್ಟಮ್ ಅಧಿಕಾರಿಗಳ ವಶದಲ್ಲಿದ್ದಾಗ ಟ್ರೈಕಿನಲ್ಲಿದ್ದ ವೈರ್‍‍ಗಳನ್ನು ಇಲಿಗಳು ಕಡಿದು ಹಾಕಿದ್ದರಿಂದ ಹಲವು ಫೀಚರ್‍‍ಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಭಾರತದಲ್ಲಿ ಈ ಬೈಕ್ ಅನ್ನು ರಿಪೇರಿ ಮಾಡುವ ಮೆಕಾನಿಕ್‍‍ಗಳು ಇಲ್ಲದ ಕಾರಣಕ್ಕೆ ಮೆಕಾನಿಕ್‍‍ನನ್ನು ದುಬೈನಿಂದ ಕರೆತರಲಾಯಿತು.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ಆ ಮೆಕಾನಿಕ್‍‍ಗೆ ಈ ಟ್ರೈಕ್ ಅನ್ನು ಸರಿಪಡಿಸಲು ಸುಮಾರು 11 ಗಂಟೆ ಬೇಕಾಯಿತು. ಟ್ರೈಕ್ ಸರಿಪಡಿಸಲು ಸುಮಾರು ರೂ.32 ಲಕ್ಷ ಖರ್ಚು ಮಾಡಿದ್ದಾರೆ. ಗೋಲ್ಡ್ ವಿಂಗ್ ಬೈಕಿನಲ್ಲಿ 6 ಸಿಲಿಂಡರಿನ 1,832 ಸಿಸಿಯ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 118 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಈ ಬೈಕಿನಲ್ಲಿ 5 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಈ ಬೈಕ್ ರಿವರ್ಸ್ ಗೇರ್ ಅನ್ನು ಸಹ ಹೊಂದಿದೆ. ಗೋಲ್ಡ್ ವಿಂಗ್ ಬೈಕ್ ಅನ್ನು ಭಾರತದಲ್ಲಿರುವ ಆಯ್ದ ಶೋರೂಂಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.30 ಲಕ್ಷಗಳಾಗಿದೆ.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಪೊಲೀಸ್ ಠಾಣೆಯಲ್ಲೇ ಅನಾಥವಾಗಿ ಬಿದ್ದ ಕೊಹ್ಲಿ ನೆಚ್ಚಿನ ಸೂಪರ್ ಕಾರು..

ಹೌದು, ವಿರಾಟ್ ಕೊಹ್ಲಿ ಮೊದಲೇ ಆಡಿ ಇಂಡಿಯಾ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿರುವುದರಿಂದ ಅವರ ಬಳಿ ಆಡಿ ಉತ್ಪಾದನೆಯ ಬಹುತೇಕ ಕಾರುಗಳ ಸಂಗ್ರಹವೇ ಇದ್ದು, 2015ರಲ್ಲಿ ಬರೋಬ್ಬರಿ ರೂ. 3 ಕೋಟಿ ಮೌಲ್ಯದ ಆರ್8 ವಿ10 ಮಾದರಿಯನ್ನು ತಮ್ಮ ಕಾರ್ ಕಲೆಕ್ಷನ್‌ನಲ್ಲಿ ಸೇರ್ಪಡೆಗೊಳಿಸಿದ್ದರು. ಆದ್ರೆ ನಕಲಿ ಕಾರ್ ಸೆಂಟರ್ ಮೂಲಕ ಬಹುಕೋಟಿ ವಂಚನೆ ಮಾಡುತ್ತಿದ್ದ ಸಾಗರ್ ಥಕ್ಕರ್ ಎಂಬಾತ ಕೊಹ್ಲಿ ಯಾಮಾರಿಸಿ ರೂ.3 ಕೋಟಿ ಕಾರನ್ನು ಕೇವಲ ರೂ.60 ಲಕ್ಷಕ್ಕೆ ಖರೀದಿಸಿದ್ದ.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಮುಂಬೈ ಮೂಲದ ಉದ್ಯಮಿಯಾಗಿರುವ ಸಾಗರ್ ಥಕ್ಕರ್ ಕೊಹ್ಲಿಗೆ ಯಾಮಾರಿಸಿದ್ದಲ್ಲದೇ ದುಬಾರಿ ಕಾರನ್ನು ತನ್ನ ಪ್ರೇಯಿಸಿಗೆ ಗಿಫ್ಟ್ ಆಗಿ ನೀಡಿದ್ದ. ಆದ್ರೆ ಸಾಗರ್ ನಡೆಸುತ್ತಿದ್ದ ನಕಲಿ ಕಾಲ್ ಸೆಂಟರ್ ಕಳ್ಳಾಟ ಬಯಲಿಗೆ ಬರುತ್ತಿದ್ದಂತೆ ನಾಪತ್ತೆಯಾದವನು ಇದುವರೆಗೂ ಪತ್ತೆಯಾಗಿಲ್ಲ.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಹೀಗಾಗಿ ಥಾಣೆ ಪೊಲೀಸರು ಸದ್ಯಕ್ಕೆ ಸಾಗರ್ ಥಕ್ಕರ್‌ಗೆ ಸಂಬಂಧಿಸಿದ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಸಾಗರ್ ಪ್ರೇಯಿಸಿಗೆ ಕೊಹ್ಲಿಯಿಂದ ದುಬಾರಿ ಕಾರನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದು ಪತ್ತೆಯಾಗಿತ್ತು.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಪ್ರಕರಣದ ವಿಚಾರಣೆ ಸಂಬಂಧ ಆಡಿ ಆರ್8 ವಿ10 ಐಷಾರಾಮಿ ಕಾರನ್ನು ವಶಕ್ಕೆ ಪಡೆದಿರುವ ಥಾಣೆ ಪೊಲೀಸರು ನಕಲಿ ಕಾರ್ ಸೆಂಟರ್ ವಂಚನೆ ಕುರಿತು ಪಿನ್ ಟು ಪಿನ್ ಮಾಹಿತಿ ಕಲೆಹಾಕುತ್ತಿದ್ದಾರೆ. ಆದ್ರೆ ಇಲ್ಲಿ ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಕೊಹ್ಲಿಯವರು ಕಾರು ಮಾರಾಟ ಮಾಡಿದ್ದರು ಕೂಡಾ ಕಾರಿನ ನೋಂದಣಿಯನ್ನು ಸಾಗರ್ ಹೆಸರಿಗೆ ವರ್ಗಾವಣೆ ಮಾಡಿರಲಿಲ್ಲ.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಇದರಿಂದ ಆಡಿ ಕಾರು ಇದುವರೆಗೂ ಕೊಹ್ಲಿ ಹೆಸರಿನಲ್ಲೇ ಇದ್ದು, ಸಾಗರ್ ಮಾಡಿರುವ ಮೋಸದ ವ್ಯವಹಾರದಲ್ಲಿ ಕೊಹ್ಲಿ ಕೂಡಾ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಹೀಗಾಗಿ ರೂ. 3 ಕೋಟಿ ಮೌಲ್ಯದ ಕಾರು ಅನಾಥವಾಗಿ ಥಾಣೆ ಪೊಲೀಸ್ ಠಾಣೆಯ ಎದರು ತುಕ್ಕುಹಿಡಿಯುತ್ತಿದೆ.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಕಳೆದ 2 ವರ್ಷಗಳ ಹಿಂದಷ್ಟೇ ಇದೇ ಕಾರಿನ ಮೂಲಕ ಸಾಕಷ್ಟು ಸುದ್ದಿಯಾಗಿದ್ದ ಕೊಹ್ಲಿ ಮುಂಬೈ, ದೆಹಲಿ ಸೇರಿದಂತೆ ಹೋದ ಕಡೆಗೆಲ್ಲಾ ಇದೇ ಕಾರಿನಲ್ಲಿ ಜಾಲಿ ರೈಡ್ ಮಾಡಿ ಕಾರು ಪ್ರಿಯರಲ್ಲಿ ಸಖತ್ ಕ್ರೇಜ್ ಹುಟ್ಟುಹಾಕಿದ್ದರು. ಆದ್ರೆ ಅದೇ ಕಾರು ಇದೀಗ ಗುಜುರಿಗೆ ಸೇರುವ ಪರಿಸ್ಥಿತಿ ಬಂದಿದೆ.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಇನ್ನು ಆಡಿ ಆರ್8 ಭಾರತದಲ್ಲಿ ವಿ8 ಹಾಗೂ ವಿ10 ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಪೈಕಿ ವಿ10 ಅತ್ಯಂತ ಶಕ್ತಿಶಾಲಿಯಾದ 5.2-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 602-ಬಿಎಚ್‌ಪಿ ಮತ್ತು 560ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಆಡಿ ಆರ್8 ವಿ10 ಸೂಪರ್ ಕಾರು ಕೇವಲ 3.5 ಸೆಕೆಂಡುಗಳಲ್ಲಿ 100 ಕೀ.ಮೀ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪ್ರತಿ ಗಂಟೆಗೆ ಗರಿಷ್ಠ 317 ಕೀ.ಮೀ. ವೇಗದಲ್ಲಿ ಚಲಿಸಬಲ್ಲದು.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಆಡಿ ಆರ್8 ವಿ10 ಆವೃತ್ತಿಯ ಬೆಂಗಳೂರು ಆನ್ ರೋಡ್ ಬೆಲೆಯು ಬರೋಬ್ಬರಿ ರೂ.3.33 ಕೋಟಿ ರುಪಾಯಿಗಳಾಗಿದ್ದು, ಮುಂಭಾಗದಲ್ಲಿ ಪರಿಷ್ಕೃತ ಆಕ್ರಮಣಕಾರಿ ಗ್ರಿಲ್, ಎಲ್ ಇಡಿ ಬೆಳಕಿನ ಸೇವೆ ಹಾಗೂ ಸಂಸ್ಥೆಯ ವಿಶಿಷ್ಟ ಲೇಸರ್ ಲೈಟ್ ತಂತ್ರಜ್ಞಾನಗಳು ಈ ಕಾರಿನ ಪ್ರಮುಖ ಆಕರ್ಷಣೆಯಾಗಲಿದೆ.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಇದಲ್ಲದೇ ಕ್ವಾಟ್ರೊ ಆಲ್ ವೀಲ್ ಚಾಲನಾ ವ್ಯವಸ್ಥೆಯ ಮುಖಾಂತರ ಎಲ್ಲ ನಾಲ್ಕು ಚಕ್ರಗಳಿಗೂ ಶಕ್ತಿ ರವಾನೆಯಾಗುವುದಲ್ಲದೇ 7 ಸ್ಪೀಡ್ ಎಸ್ ಟ್ರಾನಿಕ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಜೋಡಣೆಯೊಂದಿಗೆ ಹಿಂಭಾಗದ ವಿನ್ಯಾಸದಲ್ಲೂ ಕ್ರೀಡಾ ಕಾರಿಗೆ ಸ್ಪೂರ್ತಿಯಾಗುವ ರೀತಿಯಲ್ಲಿ ಏರೋಡೈನಾಮಿಕ್ ವಿನ್ಯಾಸ, ಎಲ್‌ಇಡಿ ಟೈಲ್ ಲೈಟ್ ಪಡೆದುಕೊಂಡಿದೆ.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ಈ ಮೂಲಕ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿಎಸ್, ಪೋರ್ಷೆ 911 ಟರ್ಬೊ ಹಾಗೂ ನಿಸ್ಸಾನ್ ಜಿಟಿಆರ್ ಮಾದರಿಗಳಿಗೆ ತೀವ್ರ ಪೈಪೋಟಿ ನೀಡುವ ಸೂಪರ್ ಕಾರು ಮಾದರಿಯಾಗಿದ್ದು, ರೇಸ್ ಟ್ರ್ಯಾಕ್‌ನಲ್ಲಿ ಈ ಕಾರಿಗೆ ತನ್ನದೇ ಆದ ಬೇಡಿಕೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

ವಿರಾಟ್ ಕೊಹ್ಲಿ ಬಳಿ ಆಡಿ ಆರ್8 ಹೊರತಾಗಿ ಎ8ಎಲ್ ಡಬ್ಲ್ಯು12 ಕ್ವಾಟ್ರೊ, ಆರ್8 ಎಲ್‌ಎಂಎಕ್ಸ್ ಸೀಮಿತ ಆವತ್ತಿ, ಆಡಿ ಆರ್8 ವಿ10 ಹಾಗೂ ಆಡಿ ಕ್ಯೂ7 ಕಾರುಗಳ ಒಡೆಯರಾಗಿದ್ದು, ಈ ಪೈಕಿ ಆರ್8 ಎಲ್‌ಎಂಎಕ್ಸ್ ಸೀಮಿತ ಆವತ್ತಿಯು ಎಲ್ ಇಡಿ ಹಾಗೂ ಲೇಸರ್ ಹೈ ಬೀಮ್ ಲೈಟಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ.

ಖರೀದಿಸಿದ ಬೈಕ್ ಪಡೆಯಲು ಹೋರಾಟ ನಡೆಸಿದ ಉದ್ಯಮಿ

5.2 ಲೀಟರ್ ವಿ10 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಆಡಿ ಆರ್ ಎಲ್ ಎಂಎಕ್ಸ್ ಮಾದರಿಯು ಬರೋಬ್ಬರಿ 570-ಬಿಎಚ್‌ಪಿ ಉತ್ಪಾದಿಸುತ್ತದೆ. 7 ಸ್ಪೀಡ್ ಎಸ್ ಟ್ರಾನಿಕ್ ಗೇರ್ ಬಾಕ್ಸ್ ಸಹ ಇದರಲ್ಲಿರಲಿದ್ದು, ಆಲ್ ವೀಲ್ ಡ್ರೈವಿಂಗ್ ವ್ಯವಸ್ಥೆಯನ್ನು ಹೊಂದಿದೆ.

Most Read Articles

Kannada
English summary
Honda gold wing trike imported to India - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X