ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ನಾವು ಬೈಕು ಪ್ರಿಯರು. ದಿನದಲ್ಲಿ ಅನೇಕ ಬಾರಿ ಬೈಕುಗಳನ್ನು ಹೊರ ತೆಗೆಯುತ್ತಲೇ ಇರುತ್ತೇವೆ. ಸಾಮಾನ್ಯವಾಗಿ ಬೈಕುಗಳು ಪೆಟ್ರೋಲ್‍‍ನಲ್ಲಿ ಚಲಿಸುತ್ತವೆ. ಭಾರತವು ಸೇರಿದಂತೆ ಪ್ರಪಂಚದ ಹಲವು ದೇಶಗಳಲ್ಲಿ ಡೀಸೆಲ್‍‍ಗಿಂತ ಪೆಟ್ರೋಲ್ ಬೆಲೆ ಹೆಚ್ಚಾಗಿರುತ್ತದೆ.

ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಈ ಕಾರಣಕ್ಕಾಗಿಯೇ ಹಲವು ಬಾರಿ ಬೈಕುಗಳಲ್ಲಿ ಏಕೆ ಪೆಟ್ರೋಲ್ ಎಂಜಿನ್ ಇರಬಾರದು ಎಂದು ಅನಿಸದೇ ಇರದು. ಡೀಸೆಲ್ ಎಂಜಿನ್ ಇರುವ ಬೈಕ್ ಇದ್ದರೆ ಸಾಕಷ್ಟು ಹಣ ಉಳಿಸಬಹುದು ಎಂಬುದು ಹಲವರ ಭಾವನೆ. ಬೈಕುಗಳಲ್ಲಿ ಏಕೆ ಡೀಸೆಲ್ ಎಂಜಿನ್ ಅಳವಡಿಸುವುದಿಲ್ಲ ಎಂಬುದಕ್ಕೆ 10 ಕಾರಣಗಳನ್ನು ಈ ಲೇಖನದಲ್ಲಿ ನೋಡೋಣ.

ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

1. ಡೀಸೆಲ್ ಎಂಜಿನ್‍‍‍ನ ಕಂಪ್ರೆಷನ್ ರೆಷಿಯೊ 24:1 ಆಗಿದ್ದರೆ, ಪೆಟ್ರೋಲ್ ಎಂಜಿನ್‍‍ನ ಕಂಪ್ರೆಷನ್ ರೆಷಿಯೊ 11:1 ಆಗಿದೆ. ಈ ದೊಡ್ಡ ಪ್ರಮಾಣದ ಕಂಪ್ರೆಷನ್ ರೆಷಿಯೊವನ್ನು ನಿರ್ವಹಿಸಲು ಡೀಸೆಲ್ ಎಂಜಿನ್ ದೊಡ್ಡದಾಗಿರಬೇಕು, ಹೆವಿ ಮೆಟಲ್ ಹೊಂದಿರಬೇಕು. ಅದಕ್ಕಾಗಿಯೇ ಡೀಸೆಲ್ ಎಂಜಿನ್ ಪೆಟ್ರೋಲ್ ಎಂಜಿನ್‍‍ಗಿಂತ ಭಾರವಾಗಿರುತ್ತದೆ. ಬೈಕಿನಂತಹ ಸಣ್ಣ ವಾಹನಗಳಿಗೆ ಸೂಕ್ತವಲ್ಲ.

ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

2. ಹೆಚ್ಚಿನ ಕಂಪ್ರೆಷನ್ ರೆಷಿಯೊದಿಂದಾಗಿ, ಡೀಸೆಲ್ ಎಂಜಿನ್ ಪೆಟ್ರೋಲ್ ಎಂಜಿನ್‌ಗಿಂತ ಹೆಚ್ಚು ವೈಬ್ರೆಷನ್ ಉಂಟು ಮಾಡಿ ಹೆಚ್ಚು ಶಬ್ದವನ್ನು ಉತ್ಪಾದಿಸುತ್ತದೆ. ಈ ಹೆಚ್ಚಿನ ವೈಬ್ರೆಷನ್ ಹಾಗೂ ಶಬ್ದವನ್ನು ನಿಭಾಯಿಸಲು ಹಗುರವಾದ ವಾಹನಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ ಬೈಕುಗಳಲ್ಲಿ ಡೀಸೆಲ್ ಎಂಜಿನ್‌ಗಳನ್ನು ಬಳಸಲಾಗುವುದಿಲ್ಲ.

ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

3. ಹೆಚ್ಚಿನ ಕಂಪ್ರೆಷನ್ ರೆಷಿಯೊ ಹಾಗೂ ಹೆವಿ ಎಂಜಿನ್‌ನಿಂದಾಗಿ, ಡೀಸೆಲ್ ಎಂಜಿನ್‌ನ ಆರಂಭಿಕ ಬೆಲೆಯು ಪೆಟ್ರೋಲ್ ಎಂಜಿನ್‌ಗಿಂತ ಹೆಚ್ಚಾಗುತ್ತದೆ. ಈ ಬೆಲೆ ವ್ಯತ್ಯಾಸವು ಸುಮಾರು 50,000 ರೂಪಾಯಿಗಳವರೆಗೂ ಇರುತ್ತದೆ. ಇಷ್ಟೊಂದು ಬೆಲೆಯನ್ನು ಸಣ್ಣ ವಾಹನಕ್ಕೆ ವಿನಿಯೋಜಿಸುವುದಿಲ್ಲ.

ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

4. ಪೆಟ್ರೋಲ್ ಎಂಜಿನ್‌ಗೆ ಹೋಲಿಸಿದರೆ ಡೀಸೆಲ್ ಎಂಜಿನ್ ಪ್ರತಿ ಗ್ಯಾಲನ್‌ಗೆ ಸುಮಾರು 13% ಹೆಚ್ಚಿನ ಕಾರ್ಬನ್ ಡೈ ಆಕ್ಸೈಡ್ ಅನ್ನು ಉತ್ಪಾದಿಸುತ್ತದೆ. ಆದ್ದರಿಂದ ಇದು ಪೆಟ್ರೋಲ್ ಎಂಜಿನ್ ಗಿಂತ ಹೆಚ್ಚಿನ ಮಾಲಿನ್ಯವನ್ನುಂಟು ಮಾಡುತ್ತದೆ. ಇದು ಪರಿಸರಕ್ಕೆ ಹಾನಿಕಾರ.

ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

5. ಡೀಸೆಲ್ ಎಂಜಿನ್ ಅಧಿಕ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತದೆ. ಪೆಟ್ರೋಲ್ ಎಂಜಿನ್‍‍ನಲ್ಲಿ ಪ್ರತಿ 10,000 ಕಿ.ಮೀಗಳಿಗೆ ಆಯಿಲ್ ಬದಲಿಸಿದರೆ, ಡೀಸೆಲ್ ಎಂಜಿನ್‍‍ನಲ್ಲಿ ಪ್ರತಿ 5,000 ಕಿ.ಮೀಗಳಿಗೆ ಬದಲಿಸಬೇಕಾಗುತ್ತದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

6. ಡೀಸೆಲ್ ಎಂಜಿನ್ ಪೆಟ್ರೋಲ್ ಎಂಜಿನ್‍‍ಗಿಂತ ಹೆಚ್ಚಿನ ಪ್ರಮಾಣದ ಟಾರ್ಕ್ ಹಾಗೂ ಕಡಿಮೆ ಪ್ರಮಾಣದ ಆರ್‍‍ಪಿ‍ಎಂ ಉತ್ಪಾದಿಸುತ್ತದೆ. ಹೆಚ್ಚಿನ ವೇಗ ಅಗತ್ಯವಿರುವ ಬೈಕುಗಳಿಗೆ ಇದು ಸೂಕ್ತವಲ್ಲ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

7. ಪೆಟ್ರೋಲ್‌ಗೆ ಹೋಲಿಸಿದರೆ ಡೀಸೆಲ್ ಪ್ರತಿ ಗ್ಯಾಲನ್‌ಗೆ ಹೆಚ್ಚಿನ ಎನರ್ಜಿಯನ್ನು ಹೊಂದಿರುತ್ತದೆ. ಡೀಸೆಲ್ ಉರಿಯುವಾಗ, ಹೆಚ್ಚಿನ ಪ್ರಮಾಣದ ಶಾಖವನ್ನು ಉತ್ಪಾದಿಸುತ್ತದೆ. ಇದರಿಂದಾಗಿ ಸಿಲಿಂಡರ್‌ನ ವಾಲ್ ಹಾಗೂ ಎಂಜಿನ್‍‍ನ ಇತರ ಭಾಗಗಳು ನಾಶವಾಗುತ್ತವೆ. ಆದ್ದರಿಂದ ಈ ಶಾಖವನ್ನು ಕಡಿಮೆ ಮಾಡಲು, ಹೆಚ್ಚಿನ ಸರ್ಫೆಸ್ ಏರಿಯಾ ಹಾಗೂ ಸರಿಯಾದ ಕೂಲಿಂಗ್ ಸಿಸ್ಟಂ ಬೇಕಾಗುತ್ತದೆ. ಈ ಹೆಚ್ಚಿನ ಸರ್ಫೆಸ್ ಏರಿಯಾಗಾಗಿ ಎಂಜಿನ್‌ಗಳನ್ನು ದೊಡ್ಡದಾಗಿ ತಯಾರು ಮಾಡಬೇಕಾಗುತ್ತದೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

8. ಡೀಸೆಲ್ ಎಂಜಿನ್, ಟರ್ಬೋಚಾರ್ಜರ್ ಅಥವಾ ಸೂಪರ್ ಚಾರ್ಜರ್ ಅನ್ನು ಸಿಲಿಂಡರ್‌ಗೆ ಹೆಚ್ಚಿನ ಗಾಳಿಯನ್ನು ಪಂಪ್ ಮಾಡಲು ಬಳಸುತ್ತದೆ. ಇದರಿಂದಾಗಿ ಅದರ ಬೆಲೆ ಹಾಗೂ ಗಾತ್ರ ಹೆಚ್ಚಾಗುತ್ತದೆ.

ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

9. ಡೀಸೆಲ್ ಎಂಜಿನ್‌ಗಳಲ್ಲಿ, ಕಂಬಸ್ಜನ್ ಚೇಂಬರ್‍‍‍ನಲ್ಲಿ ಇಂಧನವನ್ನು ಇಂಜೆಕ್ಟ್ ಮಾಡಲು ಇಂಜೆಕ್ಟರ್ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದು ಪೆಟ್ರೋಲ್ ಎಂಜಿನ್‌ನ ಸ್ಪಾರ್ಕ್ ಪ್ಲಗ್ ತಂತ್ರಜ್ಞಾನಕ್ಕಿಂತ ಹೆಚ್ಚು ದುಬಾರಿಯಾಗಿದೆ.

ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

10. ಪೆಟ್ರೋಲ್ ಎಂಜಿನ್‌ಗೆ ಹೋಲಿಸಿದರೆ ಡೀಸೆಲ್ ಎಂಜಿನ್ ತುಂಬಾ ದೊಡ್ಡದಾಗಿರುತ್ತದೆ. ಇದು ಎಂಜಿನ್ ಅನ್ನು ಸ್ಟಾರ್ಟ್ ಮಾಡುವಾಗ ಹೆಚ್ಚಿನ ಪವರ್ ಸ್ಟಾರ್ಟ್ ಮೋಟರ್ ಅನ್ನು ಬಳಸುತ್ತದೆ. ಆದ ಕಾರಣ ಡೀಸೆಲ್ ಎಂಜಿನ್ ಬೈಕುಗಳಿಗೆ ಸೂಕ್ತವಲ್ಲ.

ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಆದರೂ ಸಹ ರಾಯಲ್ ಎನ್‌ಫೀಲ್ಡ್ ನಂತಹ ಕೆಲವು ಕಂಪನಿಗಳು ಡೀಸೆಲ್ ಎಂಜಿನ್ ಬೈಕುಗಳನ್ನು ತಯಾರಿಸುವಲ್ಲಿ ಯಶಸ್ವಿಯಾಗಿವೆ. ಕೆಲವು ವರ್ಷಗಳ ನಂತರ ಈ ಡೀಸೆಲ್ ಬೈಕ್‌ಗಳನ್ನು ಸ್ಥಗಿತಗೊಳಿಸಬಹುದು.

Most Read Articles

Kannada
English summary
Why are diesel engines not used in bikes - Read in Kannada
Story first published: Tuesday, November 5, 2019, 16:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X