ಬರೀ 92,000 ರೂಪಾಯಿ.. ಹೊಸ ಸುಜುಕಿ ಆಕ್ಸೆಸ್ ABSಗೆ 3 ಪರ್ಯಾಯ ಸ್ಕೂಟರ್‌ಗಳಿವು, ಬೆಲೆ ಎಷ್ಟು.. ವಿಶೇಷತೆಗಳೇನು?

ಇತ್ತೀಚೆಗೆ ಹೊಸ ಸುಜುಕಿ ಆಕ್ಸೆಸ್ 125 ಎಬಿಎಸ್ (Suzuki Access 125 ABS) ಸ್ಕೂಟರ್‌ನ್ನು ಬಿಡುಗಡೆಗೊಳಿಸಲಾಯಿತು. ಇದು ರೂ.92,328 ರಿಂದ ರೂ.93,378 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ರೈಡ್ ಕನೆಕ್ಟ್ ಎಬಿಎಸ್ ಎಡಿಷನ್ & ರೈಡ್ ಕನೆಕ್ಟ್ ಟಿಎಫ್‌ಟಿ ಎಬಿಎಸ್ ಎಡಿಷನ್ ಎಂಬ ರೂಪಾಂತರಗಳೊಂದಿಗೂ ಸಿಗುತ್ತದೆ. ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್, ಮೆಟಾಲಿಕ್ ಮ್ಯಾಟ್ ಸ್ಟೆಲ್ಲರ್ ಬ್ಲೂ, ಪರ್ಲ್ ಗ್ರೇಸ್ ವೈಟ್ ಮತ್ತು ಪರ್ಲ್ ಶೈನಿ ಬೀಜ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 160 ಮಿ.ಮೀ ಗ್ರೌಂಡ್ ಕ್ಲಿಯರೆನ್ ಹಾಗೂ 1,260 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ.

ಈ ಸ್ಕೂಟರ್ 124-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 45 ರಿಂದ 64 ಕಿಲೋಮೀಟರ್‌ವರೆಗೂ ಮೈಲೇಜ್ ಕೊಡುತ್ತದೆ. 4.2-ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಮತ್ತು ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್‌ನಂತಹ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಸಿಂಗಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

Best 3 Alternative Scooter For New Suzuki Access 125 ABS Xoom 160 Ntorq 150 And Aerox 155

ನೀವು 'ಸುಜುಕಿ ಆಕ್ಸೆಸ್ 125 ಎಬಿಎಸ್'ಗೆ ಬದಲಾಗಿ ಇದೇ ರೀತಿಯ ಸುರಕ್ಷತಾ ಆಯ್ಕೆ ಹೊಂದಿರುವ ಹೀರೋ ಜೂಮ್ 160, ಟಿವಿಎಸ್ ಎನ್‌ಟಾರ್ಕ್ 150 ಹಾಗೂ ಯಮಹಾ ಏರೋಕ್ಸ್ 155 ಈ 3 ಸ್ಕೂಟರ್‌ಗಳನ್ನು ಖರೀದಿಸಬಹುದು. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಹೀರೋ ಜೂಮ್ 160 (Hero Xoom 160):

ಇದೊಂದು ಜನಪ್ರಿಯ ಸ್ಕೂಟರ್ ಆಗಿದೆ. 'ಸುಜುಕಿ ಆಕ್ಸೆಸ್ 125 ಎಬಿಎಸ್'ಗೆ ಪರ್ಯಾಯವಾಗಿದೆ. ಅದಕ್ಕೆ ತಕ್ಕಂತೆ ರೂ.1.36 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಕ್ಯಾಸ್ಟ್ ಪರ್ಲ್ ಸಮ್ಮಿಟ್ ವೈಟ್, ಕ್ಯಾಸ್ಟ್ ಕ್ಯಾನ್ಯನ್ ರೆಡ್ ಮತ್ತು ಕ್ಯಾಸ್ಟ್ ವೊಲ್ಕಾನಿಕ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ. 155 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1348 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ.

Best 3 Alternative Scooter For New Suzuki Access 125 ABS Xoom 160 Ntorq 150 And Aerox 155

ನೂತನ 'ಜೂಮ್' 156-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 40 ಕಿಲೋಮೀಟರ್‌ವರೆಗೂ ಮೈಲೇಜ್ ನೀಡುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್‌, ಸ್ಮಾರ್ಟ್-ಕೀ ವಿತ್ ಕೀಲೆಸ್ ಇಗ್ನಿಷನ್, ರಿಮೋಟ್ ಸೀಟ್ ಅನ್‌ಲಾಕ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಸಿಂಗಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

ಟಿವಿಎಸ್ ಎನ್‌ಟಾರ್ಕ್ 150 (TVS Ntorq 150)

ಈ ಸ್ಕೂಟರ್‌ನ್ನು 'ಸುಜುಕಿ ಆಕ್ಸೆಸ್ 125 ಎಬಿಎಸ್'ಗೆ ಬದಲಾಗಿಯೂ ಕೊಂಡುಕೊಳ್ಳಬಹುದು. ರೂ.1.09 ಲಕ್ಷದಿಂದ ರೂ.1.18 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಅತ್ಯಾಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಸ್ಟೆಲ್ತ್ ಸಿಲ್ವರ್, ರೇಸಿಂಗ್ ರೆಡ್, ಟರ್ಬೊ ಬ್ಲೂ ಮತ್ತು ನೈಟ್ರೋ ಗ್ರೀನ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 155 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,285 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ.

Best 3 Alternative Scooter For New Suzuki Access 125 ABS Xoom 160 Ntorq 150 And Aerox 155

ಹೊಸ 'ಎನ್‌ಟಾರ್ಕ್' 149.7-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 40 ಕಿಲೋಮೀಟರ್‌ವರೆಗೂ ಮೈಲೇಜ್ ಕೊಡುತ್ತದೆ. ಫುಲ್-ಟಿಎಫ್‌ಟಿ ಡಿಸ್‌ಪ್ಲೇ, ಟ್ರಾಕ್ಷನ್ ಕಂಟ್ರೋಲ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಒಳಗೊಂಡನಂತೆ ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದಿದೆ. ಸವಾರರ ರಕ್ಷಣೆಗಾಗಿ ಸಿಂಗಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಯಮಹಾ ಏರೋಕ್ಸ್ 155 (Yamaha Aerox 155):

ಇದು ಪ್ರಮುಖ ಸ್ಕೂಟರ್ ಆಗಿದೆ. 'ಸುಜುಕಿ ಆಕ್ಸೆಸ್ 125 ಎಬಿಎಸ್'ಗೆ ಪರ್ಯಾಯವಾಗಿ ಖರೀದಿಸಬಹುದು. ರೂ.1.42 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಮೆಟಾಲಿಕ್ ಬ್ಲ್ಯಾಕ್, ಗ್ರೇ ವರ್ಮಿಲಿಯನ್, ಐಸ್ ಫ್ಲೂ ವರ್ಮಿಲಿಯನ್ ಹಾಗೂ ರೇಸಿಂಗ್ ಬ್ಲ್ಯೂ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 145 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,350 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

Best 3 Alternative Scooter For New Suzuki Access 125 ABS Xoom 160 Ntorq 150 And Aerox 155

ನೂತನ 'ಏರೋಕ್ಸ್' 155-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 48.62 ಕಿಲೋಮೀಟರ್‌ವರೆಗೂ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ಸ್ಮಾರ್ಟ್ ಕೀಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಸಿಂಗಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

More from DriveSpark

Article Published On: Friday, February 6, 2026, 15:54 [IST]
English summary
Best 3 alternative scooter for new suzuki access 125 abs xoom 160 ntorq 150 and aerox 155
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+