Suzuki: ಸುಜುಕಿ ಆಕ್ಸೆಸ್ ಈಗ ಮತ್ತಷ್ಟು ಸ್ಮಾರ್ಟ್! ಹೊಸ ಫೀಚರ್‌ನೊಂದಿಗೆ ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?

ಸುಜುಕಿ ಆಕ್ಸೆಸ್ 125 (Suzuki Access 125) ಜನಮೆಚ್ಚಿದ ಸ್ಕೂಟರ್ ಎಂದೇ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಈ ಸ್ಕೂಟರ್‌ನ್ನು ಸಿಂಗಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇಫ್ಟಿ ಫೀಚರ್‌ನೊಂದಿಗೆ ಮೇಲ್ದರ್ಜೆಗೇರಿಸಲಾಗಿದೆ. ಬನ್ನಿ.. ನೂತನ 'ಸುಜುಕಿ ಆಕ್ಸೆಸ್ ಎಬಿಎಸ್'ನ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಹೊಚ್ಚ ಹೊಸ 'ಸುಜುಕಿ ಆಕ್ಸೆಸ್ 125 ಎಬಿಎಸ್' ಸ್ಕೂಟರ್ ಕೈಗೆಟುಕುವ ಬೆಲೆಯಲ್ಲಿಯೂ ಬಿಡುಗಡೆಗೊಂಡಿದೆ. ಕನಿಷ್ಠ ರೂ.92,328 ಹಾಗೂ ಗರಿಷ್ಠ ರೂ.93,378 (ಎಕ್ಸ್-ಶೋರೂಂ) ದರವನ್ನು ಪಡೆದಿದ್ದು, ಎಲ್ಲ ವರ್ಗದವರು ಸುಲಭವಾಗಿ ಕೊಂಡುಕೊಳ್ಳಬಹುದು. ರೈಡ್ ಕನೆಕ್ಟ್ ಎಬಿಎಸ್ ಎಡಿಷನ್ ಮತ್ತು ರೈಡ್ ಕನೆಕ್ಟ್ ಟಿಎಫ್‌ಟಿ ಎಬಿಎಸ್ ಎಡಿಷನ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

Suzuki Access 125 ABS Launched In India Rs 92 328 Starting Price Details

ಈ ಸುಜುಕಿ ಆಕ್ಸೆಸ್ ಎಬಿಎಸ್' ವಿನ್ಯಾಸದಲ್ಲೂ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಉತ್ತಮವಾದ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಡಿಆರ್‌ಎಲ್‌ಗಳು ಹಾಗೂ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್, ಮೆಟಾಲಿಕ್ ಮ್ಯಾಟ್ ಸ್ಟೆಲ್ಲರ್ ಬ್ಲೂ, ಪರ್ಲ್ ಗ್ರೇಸ್ ವೈಟ್, ಸಾಲಿಡ್ ಐಸ್ ಗ್ರೀನ್ ಹಾಗೂ ಪರ್ಲ್ ಶೈನಿ ಬೀಜ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಇದು ಸಾಕಷ್ಟು ವಿಶಾಲ ಗಾತ್ರದಲ್ಲಿದೆ. 1,835 ಎಂಎಂ ಉದ್ದ, 690 ಎಂಎಂ ಅಗಲ ಹಾಗೂ 1,155 ಎಂಎಂ ಎತ್ತರವಿದೆ. 160 ಎಂಎಂ ಗ್ರೌಂಡ್ ಕ್ಲಿಯರೆನ್ ಮತ್ತು 1,260 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 106 ಕೆಜಿ ತೂಕವಿದೆ.

ನೂತನ 'ಸುಜುಕಿ ಆಕ್ಸೆಸ್ 125 ಎಬಿಎಸ್' ಸ್ಕೂಟರ್‌ನ ಪವರ್‌ಟ್ರೇನ್‌ನಲ್ಲೂ ಮಾರ್ಪಾಡುಗಳನ್ನು ಮಾಡಲಾಗಿಲ್ಲ. 124-ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 6,500 ಆರ್‌ಪಿಎಂನಲ್ಲಿ 8.43 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 5,000 ಆರ್‌ಪಿಎಂನಲ್ಲಿ 10.2 ಎನ್ಎಂ (ನ್ಯೂಟನ್ ಮೀಟರ್) ಹೊರಹಾಕುತ್ತದೆ.

ಈ ಸ್ಕೂಟರ್ 5-ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. 45 ರಿಂದ 64 ಕಿಲೋಮೀಟರ್‌ವರೆಗೆ ಮೈಲೇಜ್‌ನ್ನು ಕೊಡುತ್ತದೆ. 90 ಕೆಎಂಪಿಹೆಚ್ ಸ್ಪೀಡ್‌ನ್ನು ಪಡೆದಿದೆ. ಕೇವಲ 6.93 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ. 4.2-ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಹಾಗೂ ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಇದು ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಗಾಗಿ ಹೊಸದಾದ ಸಿಂಗಲ್-ಚಾನೆಲ್ 'ಎಬಿಎಸ್'ನೊಂದಿಗೆ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಸಿಂಗಲ್-ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ. ರಸ್ತೆಯ ಮೇಲೆ ಗಟ್ಟಿಯಾದ ಹಿಡಿತ ಒದಗಿಸಲು 12-ಇಂಚಿನ ಅಲಾಯ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್​ಗಳನ್ನು ಒಳಗೊಂಡಿದೆ.

ನೂತನ 'ಸುಜುಕಿ ಆಕ್ಸೆಸ್ 125 ಎಬಿಎಸ್'ಗೆ ಸಾಲು - ಸಾಲು ಎದುರಾಳಿಗಳಿವೆ. ಟಿವಿಎಸ್ ಜುಪಿಟರ್ 125 (TVS Jupiter 125), ಹೋಂಡಾ ಆಕ್ಟಿವಾ 125 (Honda Activa 125) ಹಾಗೂ ಟಿವಿಎಸ್ ಎನ್‌ಟಾರ್ಕ್ 125 (TVS NTORQ 125) ಮಾಡೆಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

'ಎಬಿಎಸ್'ನ ಅನುಕೂಲಗಳೇನು:

ದ್ವಿಚಕ್ರ ವಾಹನಗಳಿಗೆ ಈ ಸುರಕ್ಷತಾ ವೈಶಿಷ್ಟ್ಯವು ಹೆಚ್ಚು ಉಪಯುಕ್ತವಾಗಿದೆ. ಬೈಕ್ & ಸ್ಕೂಟರ್‌ಗಳನ್ನು ಚಲಾಯಿಸುವಾಗ ಇದ್ದಕ್ಕಿಂದಂತೆ ಬ್ರೇಕ್ ಹಾಕಿದಾಗ ವೀಲ್ ಲಾಕ್ ಆಗುವುದನ್ನು ತಪ್ಪಿಸುತ್ತದೆ. ವಾಹನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ನೆರವಾಗಲಿದೆ. ಸ್ಕಿಡ್ ಆಗುವುದನ್ನು ತಡೆಗಟ್ಟುತ್ತದೆ. ಈ ಮೂಲಕ ಅಪಘಾತದ ಸಾಧ್ಯತೆಯನ್ನು ಶೇಕಡ 35 ರಿಂದ 45% ಕಡಿಮೆಗೊಳಿಸುತ್ತದೆ.

More from DriveSpark

Article Published On: Wednesday, February 4, 2026, 15:43 [IST]
English summary
Suzuki access 125 abs launched in india rs 92328 starting price details
Read more on suzuki motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+