ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಜೆಸಿಬಿ ಹಳದಿ ಬಣ್ಣ ಏಕೆ ಹೊಂದಿದೆ. ಈ ಯಂತ್ರ ಏಕೆ ಬೇರೆ ಯಾವುದೇ ಬಣ್ಣದಲ್ಲಿ ದೊರೆಯುವುದಿಲ್ಲ. ಇದರ ಬಗ್ಗೆ ತಿಳಿದುಕೊಳ್ಳುವ ಮೊದಲು ಜೆಸಿಬಿ ಯಂತ್ರದ ಬಗ್ಗೆ ತಿಳಿದುಕೊಳ್ಳೋಣ. ಬಹುಶಃ ಜೆ‍‍ಸಿ‍‍ಬಿಯನ್ನು ನೋಡದ ವ್ಯಕ್ತಿಯೇ ಇಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಜೆ‍‍ಸಿ‍‍ಬಿ ಜನ ಸಾಮಾನ್ಯರಿಗೆ ಪರಿಚಿತವಾಗಿದೆ.

ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಅಂದ ಹಾಗೆ, ಜೆ‍‍ಸಿ‍‍ಬಿಯ ಪೂರ್ಣ ಹೆಸರು ಜೋಸೆಫ್ ಸಿರಿಲ್ ಬಾಮ್‌ಫೋರ್ಡ್. ಜೆಸಿಬಿ ಯಂತ್ರಗಳನ್ನು ತಯಾರಿಸುವ ಕಂಪನಿಯ ಹೆಸರು ಜೆ.ಸಿ ಬಾಮ್‍‍ಫೋರ್ಡ್ ಎಕ್ಸ್ ಕ್ಯಾವೆಟರ್ಸ್ ಲಿಮಿಟೆಡ್. ಜೆ‍‍ಸಿ‍‍ಬಿ ಕಂಪನಿಯ ಕೇಂದ್ರ ಕಚೇರಿ ಬ್ರಿಟನ್ನಿನ ಸ್ಟಾಫೋರ್ಡ್ ಶೈರ್‍‍ನ ರೊಸೆಸ್ಟರ್‍‍ನಲ್ಲಿದೆ.

ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಜೆಸಿಬಿ ಕಂಪನಿಯು ಪ್ರಪಂಚದ ನಾಲ್ಕು ಖಂಡಗಳಲ್ಲಿ ಕಾರ್ಖಾನೆಗಳನ್ನು ಹೊಂದಿದೆ. ಜೆ‍‍ಸಿ‍‍ಬಿಗಳನ್ನು ರಸ್ತೆ ನಿರ್ಮಾಣಕ್ಕೆ, ಕೃಷಿ ಭೂಮಿಯನ್ನು ಸಮತಟ್ಟು ಮಾಡಲು, ಮನೆ ಕಟ್ಟಲು, ಮನೆ ಕೆಡವಲು ಹಾಗೂ ಇನ್ನೂ ಅನೇಕ ಕೆಲಸಗಳಿಗಾಗಿ ಬಳಸಲಾಗುತ್ತದೆ.

ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಜೆಸಿಬಿ ಯಾವುದೇ ಹೆಸರಿಲ್ಲದೇ ತಯಾರಾದ ವಿಶ್ವದ ಮೊದಲ ಯಂತ್ರವಾಗಿದೆ. ಈ ಯಂತ್ರವನ್ನು 1945ರಲ್ಲಿ ತಯಾರಿಸಲಾಯಿತು. ಈ ಯಂತ್ರವನ್ನು ತಯಾರಿಸಿದವರು ಹೆಸರಿನ ಬಗ್ಗೆ ಸಾಕಷ್ಟು ತಲೆಕೆಡಿಸಿ ಕೊಂಡಿದ್ದರು. ಆದರೆ ಯಾವುದೇ ಸರಿಯಾದ ಹೆಸರನ್ನು ಕಂಡುಹಿಡಿಯುವಲ್ಲಿ ವಿಫಲರಾದರು.

ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಕೊನೆಗೆ ಈ ಯಂತ್ರವನ್ನು ವಿನ್ಯಾಸಗೊಳಿಸಿ, ತಯಾರಿಸಿದ ಜೋಸೆಫ್ ಸಿರಿಲ್ ಬಾಮ್‌ಫೋರ್ಡ್ (ಜೆಸಿಬಿ) ಅವರ ಹೆಸರನ್ನೇ ಈ ಯಂತ್ರಕ್ಕೆ ಇಡಲಾಯಿತು. ಜೆಸಿಬಿ ಭಾರತದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಿದ ಮೊದಲ ಖಾಸಗಿ ಬ್ರಿಟಿಷ್ ಕಂಪನಿಯಾಗಿದೆ.

ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಇಂದು, ಜೆಸಿಬಿ ಯಂತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಭಾರತಕ್ಕೆ ರಫ್ತು ಮಾಡಲಾಗುತ್ತದೆ. 1945 ರಲ್ಲಿ, ಜೋಸೆಫ್ ಸಿರಿಲ್ ಬಮ್‌ಫೋರ್ಡ್, ಮೊದಲ ಯಂತ್ರವಾದ ಟಿಪ್ಪಿಂಗ್ ಟ್ರೈಲರ್ (ಲಗೇಜ್ ಟ್ರೈಲರ್) ಅನ್ನು ಯುದ್ಧದಲ್ಲಿ ಬಳಸಿ ಉಳಿದ ಹೆಚ್ಚುವರಿ ವಸ್ತುಗಳಿಂದ ತಯಾರಿಸಿದರು.

ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಆ ಸಮಯದಲ್ಲಿ ಈ ಯಂತ್ರವನ್ನು 45 ಪೌಂಡ್‌ಗಳಿಗೆ ಮಾರಾಟ ಮಾಡಲಾಯಿತು. ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು 4000 ರೂಪಾಯಿಗಳು. ವಿಶ್ವದ ಮೊದಲ ಹಾಗೂ ವೇಗದ ಟ್ರಾಕ್ಟರ್ ಆದ ಫಾಸ್ಟ್ರಾಕ್ ಅನ್ನು ಜೆಸಿಬಿ ಕಂಪನಿಯು 1991ರಲ್ಲಿ ತಯಾರಿಸಿತು.

MOST READ: ಈ ನಟಿ ಈಗ ಟುಕ್‍‍ಟುಕ್ ಆಟೋರಾಣಿ..!

ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಈ ಟ್ರಾಕ್ಟರ್‌ನ ಗರಿಷ್ಠ ವೇಗ ಪ್ರತಿ ಗಂಟೆಗೆ 65 ಕಿ.ಮೀಗಳಾಗಿತ್ತು. 1948 ರಲ್ಲಿ ಜೆಸಿಬಿ ಕಂಪನಿಯು ಶುರುವಾದಾಗ ಕೇವಲ ಆರು ಜನ ಉದ್ಯೋಗಿಗಳಿದ್ದರು. ಆದರೆ ಇಂದು ಜೆಸಿಬಿ ಕಂಪನಿಯು ವಿಶ್ವದಾದ್ಯಂತ ಸುಮಾರು 12 ಸಾವಿರಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿದೆ.

MOST READ: ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಂಡು ಸಿಕ್ಕಿಬಿದ್ದ ಐನಾತಿ..!

ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಆರಂಭದಲ್ಲಿ ಜೆಸಿಬಿ ಯಂತ್ರಗಳು ನೀಲಿ ಹಾಗೂ ಕೆಂಪು ಬಣ್ಣವನ್ನು ಹೊಂದಿದ್ದವು. ಹಳದಿ ಬಣ್ಣವು ಸುರಕ್ಷತೆಯ ಜೊತೆಗೆ ಗುರುತಿಸಿ ಕೊಂಡಿರುವುದರಿಂದ ಹಾಗೂ ಹಳದಿ ಬಣ್ಣದಲ್ಲಿರುವ ಯಂತ್ರಗಳು ಸುಲಭವಾಗಿ ಕಣ್ಣಿಗೆ ಕಾಣುವುದರಿಂದ ಜೆಸಿಬಿ ಯಂತ್ರಗಳನ್ನು ಹಳದಿ ಬಣ್ಣಕ್ಕೆ ಬದಲಾಯಿಸಲಾಯಿತು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಈ ಬಣ್ಣದಲ್ಲಿರುವ ಜೆಸಿಬಿ ಯಂತ್ರಗಳು ಕೆಲಸ ಮಾಡುವ ಸ್ಥಳದಲ್ಲಿ ಹಗಲು ಅಥವಾ ರಾತ್ರಿ ವೇಳೆಯಲ್ಲಿ ಸುಲಭವಾಗಿ ಕಾಣಿಸುತ್ತವೆ. ಇದರಿಂದ ಜೆಸಿಬಿಯು ಕೆಲಸ ಮಾಡುತ್ತಿದೆ ಎಂದು ಜನರಿಗೆ ತಿಳಿಯುತ್ತದೆ ಎಂಬ ಕಾರಣಕ್ಕಾಗಿ ಹಳದಿ ಬಣ್ಣದಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತದೆ.

Most Read Articles

Kannada
English summary
Why JCB is in yellow color - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X