ಈ ನಟಿ ಈಗ ಟುಕ್‍‍ಟುಕ್ ಆಟೋರಾಣಿ..!

ಕಾರ್ ಕೊಳ್ಳಬೇಕೆಂಬುದು ಬಹುತೇಕ ಜನರ, ಅದರಲ್ಲೂ ನಗರದಲ್ಲಿ ವಾಸಿಸುವ ಯುವಜನತೆಯ ಕನಸಾಗಿದೆ. ಆದರೆ ವಿಚಿತ್ರವೆನಿಸುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಕಿರುತೆರೆ ನಟಿಯೊಬ್ಬರು ಕಾರಿನ ಬದಲು ಆಟೋರಿಕ್ಷಾದಲ್ಲಿ ಓಡಾಡುತ್ತಿದ್ದಾರೆ.

ಈ ನಟಿ ಈಗ ಟುಕ್‍‍ಟುಕ್ ಆಟೋರಾಣಿ..!

ರಂಗ್ ಬದಲ್ತಿ ಒಡಾನಿ ಹಾಗೂ ಚಂದ್ರಗುಪ್ತ ಮೌರ್ಯದಂತಹ ಧಾರಾವಾಹಿಗಳಲ್ಲಿ ನಟಿಸಿರುವ ಯಶಶ್ರೀ ಮಸುಕರ್‍‍ರವರೇ ತಮ್ಮ ಕಾರಿನ ಬದಲು, ಈಗ ಆಟೋ ಓಡಿಸುತ್ತಿರುವ ನಟಿ. ಕಳೆದ ವರ್ಷ ಈ ಆಟೋವನ್ನು ಕಾಣಿಕೆಯಾಗಿ ಪಡೆದ ನಟಿ, ತಮ್ಮ ದಿನನಿತ್ಯದ ಬಳಕೆಗಾಗಿ ಈ ಆಟೋವನ್ನು ಬಳಸುತ್ತಿದ್ದಾರೆ. ಯಶಶ್ರೀರವರು ಇನ್ಸ್ಟಾಗ್ರಾಂನಲ್ಲಿ ಹೊಂದಿರುವ ಖಾತೆಯ ಹೆಸರು ಟುಕ್ ಟುಕ್ ರಾಣಿ. ಈ ಹೆಸರು ಅವರ ಬಳಿಯಿರುವ ಆಟೋಗೆ ಅನ್ವಯಿಸುವಂತಿದೆ.

ಕಳೆದ ವರ್ಷ ಯಶಶ್ರೀರವರನ್ನು ಭೇಟಿಯಾಗಲು ಅವರ ಸ್ನೇಹಿತ ಡೆನ್ಮಾರ್ಕ್‍‍ನಿಂದ ಸೈಕಲ್‍‍ನಲ್ಲಿ ಭಾರತಕ್ಕೆ ಬಂದಿದ್ದಾರೆ. ಆಗ ಅವರು ಆಟೋದಲ್ಲಿ ಓಡಾಡುವ ಯೋಚನೆ ಮಾಡಿದ್ದಾರೆ. ಭಾರತದ ಜನ ಭರಿತ ರಸ್ತೆಗಳಲ್ಲಿ ಆಟೋರಿಕ್ಷಾಗೆ ಸರಿಸಾಟಿಯಾದ ವಾಹನ ಮತ್ತೊಂದಿಲ್ಲ.

ಈ ನಟಿ ಈಗ ಟುಕ್‍‍ಟುಕ್ ಆಟೋರಾಣಿ..!

ಯಶಶ್ರೀರವರ ಬಳಿಯಿರುವ ಆಟೋ ನೀಲಿ ಬಣ್ಣವನ್ನು ಹೊಂದಿದೆ. ಈ ಆಟೋದಲ್ಲಿ ಅವರು ಮುಂಬೈನ ರಸ್ತೆಗಳಲ್ಲಿ ಓಡಾಡುತ್ತಾರೆ. ತಮ್ಮ ನೆಚ್ಚಿನ ನಾಯಿ ಮರಿಯನ್ನು ಈ ಆಟೋದಲ್ಲಿಯೇ ಕರೆದೊಯ್ದು ಅದರ ಸಾಕಷ್ಟು ಚಿತ್ರಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ಈ ನಟಿ ಈಗ ಟುಕ್‍‍ಟುಕ್ ಆಟೋರಾಣಿ..!

ಈ ಆಟೋ ಬಿಳಿ ಬಣ್ಣದ ನಂಬರ್ ಪ್ಲೇಟ್ ಹೊಂದಿದೆ. ಯಶಶ್ರೀರವರು ಬೇರೆ ಯಾರನ್ನು ಈ ಆಟೋದಲ್ಲಿ ಹತ್ತಿಸಿಕೊಳ್ಳುವುದಿಲ್ಲ. ಬೇರೆಯವರಿಗೆ ಡ್ರಾಪ್ ನೀಡುವುದೂ ಇಲ್ಲ. ತಾವೊಬ್ಬರೇ ಈ ಆಟೋರಿಕ್ಷಾದಲ್ಲಿ ಓಡಾಡುತ್ತಾರೆ.

ಈ ನಟಿ ಈಗ ಟುಕ್‍‍ಟುಕ್ ಆಟೋರಾಣಿ..!

ಈ ಬಗ್ಗೆ ಮಾತನಾಡಿರುವ ಯಶಶ್ರೀರವರು ಪುರುಷ ಪ್ರಧಾನ ಸಮಾಜದಲ್ಲಿ ವಿಭಿನ್ನವಾಗಿ ಏನಾದರೂ ಮಾಡಬೇಕೆಂಬ ಹಿನ್ನೆಲೆಯಲ್ಲಿ ಈ ಆಟೋವನ್ನು ಚಲಾಯಿಸುತ್ತಿರುವುದಾಗಿ ತಿಳಿಸಿದರು. ಅವರು ಈ ಆಟೋವನ್ನು ಓಡಿಸಲು ಶುರು ಮಾಡಿದಾಗ ಕೆಲವು ಆಟೋರಿಕ್ಷಾ ಚಾಲಕರು ಅವರನ್ನು ಈಕೆ ತಮಗೆ ಪೈಪೋಟಿ ನೀಡಬಹುದೆಂದು ದುರುಗುಟ್ಟಿ ನೋಡುತ್ತಿದ್ದರು.

ಈ ನಟಿ ಈಗ ಟುಕ್‍‍ಟುಕ್ ಆಟೋರಾಣಿ..!

ದಾರಿ ಕೇಳಿದಾಗ ಕೆಲವು ಆಟೋರಿಕ್ಷಾ ಚಾಲಕರು ಗೇಲಿ ಮಾಡುತ್ತಿದ್ದರು. ಆದರೆ ಈಗ ಎಲ್ಲವೂ ಸರಿಯಾಗಿದೆ ಎಂದು ಹೇಳಿದರು. ಯಶಶ್ರೀರವರ ಪ್ರಕಾರ, ಆಟೋರಿಕ್ಷಾ ಹಣ ಹಾಗೂ ಸಮಯ ಎರಡನ್ನೂ ಉಳಿಸುತ್ತದೆ. ಅದಕ್ಕಾಗಿ ಆಟೋರಿಕ್ಷಾದಲ್ಲಿ ಓಡಾಡುತ್ತಿರುವುದಾಗಿ ಹೇಳುತ್ತಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಈ ನಟಿ ಈಗ ಟುಕ್‍‍ಟುಕ್ ಆಟೋರಾಣಿ..!

ಯಶಶ್ರೀರವರ ಬಳಿ ಈ ಮೊದಲು ಕಾರ್ ಇತ್ತು. ಆದರೆ ಅವರಿಗೆ ಕಾರನ್ನು ಚಾಲನೆ ಮಾಡಲು ಬರುತ್ತಿರಲಿಲ್ಲ. ಕಾರು ಚಾಲನೆಗಾಗಿ ಒಬ್ಬ ಡ್ರೈವರ್‍‍‍ನನ್ನು ನೇಮಿಸಿಕೊಂಡಿದ್ದರು. ಡ್ರೈವರ್ ಬರದೇ ಇದ್ದಾಗ ಹೊರಗಡೆ ಓಡಾಡಲು ಪರದಾಡುವ ಸ್ಥಿತಿ ಎದುರಾಗುತ್ತಿತ್ತು. ಈಗ ಯಾವುದೇ ಚಿಂತೆಯಿಲ್ಲದೇ ತಾವೇ ಆಟೋರಿಕ್ಷಾ ಚಲಾಯಿಸುತ್ತಾರೆ.

MOST READ: ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಈ ನಟಿ ಈಗ ಟುಕ್‍‍ಟುಕ್ ಆಟೋರಾಣಿ..!

ಈ ಆಟೋರಿಕ್ಷಾವನ್ನು ಡೆನ್ಮಾರ್ಕ್‍‍ನಿಂದ ಬಂದಿದ್ದ ಅವರ ಸ್ನೇಹಿತರಾದ ಕ್ರಿಶ್ಚಿಯನ್‍‍‍ರವರು ಖರೀದಿಸಿದರು. ಕ್ರಿಶ್ಚಿಯನ್‍‍‍ರವರು ಈ ಆಟೋದಲ್ಲಿ ಮುಂಬೈನಿಂದ ಆಗ್ರಾಗೆ ಹೋಗಿ ತಾಜ್ ಮಹಲ್ ನೋಡುವ ಉದ್ದೇಶ ಹೊಂದಿದ್ದರು. ಕ್ರಿಶ್ಚಿಯನ್‍‍‍ರವರು ತಮ್ಮ ದೇಶಕ್ಕೆ ಮರಳುವಾಗ ಈ ಆಟೋವನ್ನು ಯಶಶ್ರೀರವರಿಗೆ ಕಾಣಿಕೆಯಾಗಿ ನೀಡಿದರು.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಈ ನಟಿ ಈಗ ಟುಕ್‍‍ಟುಕ್ ಆಟೋರಾಣಿ..!

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕೆಲವು ವರ್ಷಗಳ ಹಿಂದೆಯೇ ಮೂರು ಚಕ್ರದ ವಾಹನಗಳಿಗೆ ಖಾಸಗಿ ಡ್ರೈವಿಂಗ್ ಲೈಸೆನ್ಸ್ ನೀಡುವುದನ್ನು ನಿಲ್ಲಿಸಲಾಗಿದೆ. ಆದರೆ ಆಟೋರಿಕ್ಷಾದ ಮಾಲೀಕನಿಂದ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ಪಡೆದು ಆಟೋರಿಕ್ಷಾವನ್ನು ಚಲಾಯಿಸಬಹುದಾಗಿದೆ.

ಈ ನಟಿ ಈಗ ಟುಕ್‍‍ಟುಕ್ ಆಟೋರಾಣಿ..!

ಯಶಶ್ರೀರವರನ್ನು ಅನೇಕ ಬಾರಿ ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ ಎಂದು ಹೇಳುತ್ತಾರೆ. ಯಶಶ್ರೀರವರ ಬಳಿಯಿರುವ ನೀಲಿ ಬಣ್ಣದ ಆಟೋರಿಕ್ಷಾ ಆಕರ್ಷಕವಾಗಿ ಕಾಣುತ್ತದೆ. ಜನದಟ್ಟಣೆಯಿರುವ ರಸ್ತೆಗಳಲ್ಲಿ ಆಟೋರಿಕ್ಷಾದಲ್ಲಿ ಸಲೀಸಾಗಿ ಓಡಾಡಬಹುದು.

Image Courtesy: Yashashri Masurkar/Instagram And India Forums

1, 2

More from DriveSpark

Article Published On: Thursday, August 29, 2019, 14:36 [IST]
English summary
Actress using auto rickshaw instead of car - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+