ಟಾಟಾ ಸಂಸ್ಥೆಯ ಈ 10 ಕಾರುಗಳನ್ನು ನಾವೆಲ್ಲರೂ ಮರೆತು ಬಿಟ್ಟಿದ್ದೇವೆ !!

Written By:

ಟಾಟಾ ಮೋಟಾರ್ಸ್ ಸಾಕಷ್ಟು ವರ್ಷಗಳಿಂದ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ ಕಾರುಗಳನ್ನು ಪರಿಚಯಿಸಿದೆ. ಟಾಟಾ ಕಂಪನಿಯ ಬಹಳಷ್ಟು ಕಾರುಗಳು ಯಶ್ಜಸ್ವಿಯಾದರೂ ಸಹ ಕೆಲವೊಂದು ಕಾರುಗಳು ಮಾರುಕಟ್ಟೆಯಲ್ಲಿ ಮಕಡೆ ಮಲಗಿವೆ.

To Follow DriveSpark On Facebook, Click The Like Button
ಟಾಟಾ ಸಂಸ್ಥೆಯ ಈ 10 ಕಾರುಗಳನ್ನು ನಾವೆಲ್ಲರೂ ಮರೆತು ಬಿಟ್ಟಿದ್ದೇವೆ !!

ಗ್ರಾಹಕರೂ ಸಹ ಈ ಹೆಸರಿನ ಟಾಟಾ ಕಾರು ಬಿಡುಗಡೆಗೊಂಡಿತ್ತೆ ? ಎನ್ನುವಷ್ಟರ ಮಟ್ಟಿಗೆ ಈ ಕಾರುಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿವೆ ಎನ್ನಬಹುದು ಹಾಗು ಈ ಕಾರುಗಳು ಇನ್ನು ನೆನಪು ಮಾತ್ರ. ಈ ರೀತಿಯ ಟಾಟಾ ಸಂಸ್ಥೆಯ ಮರೆತು ಹೋದ 10 ಕಾರುಗಳು ಮತ್ತು ಎಸ್‌ಯುವಿಗಳ ಪಟ್ಟಿ ಇಲ್ಲಿದೆ ಒಮ್ಮೆ ಕಣ್ಣಾಡಿಸಿ.

ಟಾಟಾ ಸಂಸ್ಥೆಯ ಈ 10 ಕಾರುಗಳನ್ನು ನಾವೆಲ್ಲರೂ ಮರೆತು ಬಿಟ್ಟಿದ್ದೇವೆ !!

ಸಿಯೆರಾ :

ಸಿಯೆರಾ ಕಾರು ಭಾರತದ ಮೊಟ್ಟ ಮೊದಲ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಬುಚ್ ರೀತಿಯ ಲುಕ್ ಹಾಗು ಮೂರು ಬಾಗಿಲಿನ ಎಸ್‌ಯುವಿ ಕಾರು 4X4 ಸೌಲಭ್ಯ ಹೊಂದಿದೆ. ಸಾಕಷ್ಟು ವಿಶಿಷ್ಟತೆಗಳನ್ನು ಪಡೆದುಕೊಂಡಿರುವ ಅಸಾಂಪ್ರದಾಯಿಕವಾದ ವಿನ್ಯಾಸದ ಈ ಕಾರು ಭಾರತೀಯರನ್ನು ಮೆಚ್ಚಿಸುವಲ್ಲಿ ಹಿಂದುಳಿಯಿತು ಎನ್ನಬಹುದು. ಈ ಕಾರನ್ನು 2 ಲೀಟರ್ ಡೀಸೆಲ್ ಮತ್ತು ಟರ್ಬೊ ಡೀಸೆಲ್ ಎಂಜಿನ್‌ಗಳೊಂದಿಗೆ ಮಾರಾಟ ಮಾಡಲಾಗುತ್ತಿತ್ತು.

ಟಾಟಾ ಸಂಸ್ಥೆಯ ಈ 10 ಕಾರುಗಳನ್ನು ನಾವೆಲ್ಲರೂ ಮರೆತು ಬಿಟ್ಟಿದ್ದೇವೆ !!

ಎಸ್ಟೇಟ್ :

ಸಿಯೆರಾ ಹಿಂದೆಯೇ ಬಿಡುಗಡೆಗೊಂಡ ಎಸ್ಟೇಟ್ ಕಾರೂ ಸಹ ಹೆಚ್ಚು ಸದ್ದು ಮಾಡಲಿಲ್ಲ. ಸಿಯೆರಾ ಕಾರಿನಿಂದ ಎರವಲು ಪಡೆದ ಕಾಸ್ಮೆಟಿಕ್ ಭಾಗ ಮತ್ತು ಮೆಕ್ಯಾನಿಕಲ್ ಅಂಶಗಳನ್ನು ಈ ಕಾರು ಪಡೆದುಕೊಂಡಿತ್ತು. ಕಾರಿನ ವಿನ್ಯಾಸವು 1980ರ ದಶಕದ ಮರ್ಸಿಡಿಸ್ ಬೆಂಜ್ ಸ್ಟೇಶನ್ ವೇಗಾನ್ ಕಾರುಗಳನ್ನು ಕೊಂಚ ಮಟ್ಟಿಗೆ ಆಧರಿಸಿದೆ ಎಂದು ಹೇಳಲಾಗುತ್ತದೆ.ಎಸ್ಟೇಟ್ ಕಾರು ಭಾರತದಲ್ಲಿ ಎಂದಿಗೂ ಸಹ ದೊಡ್ಡ ಮಟ್ಟದಲ್ಲಿ ಮಾರಾಟವಾದ ಉದಾಹರಣೆಗಳಿಲ್ಲ ಎನ್ನುವುದು ಸತ್ಯ ಸಂಗತಿ. ಟಾಟಾ ಸಂಸ್ಥೆ ಸಾಕಷ್ಟು ಪ್ರಯತ್ನದ ನಂತರವೂ ಸಹ ಈ ಕಾರು ತನ್ನ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು.

ಟಾಟಾ ಸಂಸ್ಥೆಯ ಈ 10 ಕಾರುಗಳನ್ನು ನಾವೆಲ್ಲರೂ ಮರೆತು ಬಿಟ್ಟಿದ್ದೇವೆ !!

ಮೊಬೈಲ್ :

ವಾಹನ ತಯಾರಕ ಟಾಟಾ ಕಂಪನಿಯ ಮೊಬೈಲ್ ಕಾರು ಮೊದಲ ಪಿಕ್ ಅಪ್ ಟ್ರಕ್ ಆಗಿದ್ದು, ಕುಟುಂಬ ಪ್ರಯಾಣಕ್ಕೆ ಉತ್ಪಾದನೆ ಮಾಡಲಾಗಿತ್ತು. ವಾಹನವು ಸಮಯಕ್ಕೆ ಬಹಳ ಮುಂಚೆಯೇ ಬಿಡುಗಡೆಗೊಂಡಿದ್ದು ತನ್ನ ಕಳೆಯನ್ನು ಕುಂದಲು ಮುಖ್ಯ ಕಾರಣ ಎನ್ನಬಹುದು. ಇಂಧನ ದಕ್ಷತೆ ಮತ್ತು ಕಾಂಪ್ಯಾಕ್ಟ್ ವಿನ್ಯಾಸ, ಸರಕುಗಳನ್ನು ಸಾಗಾಣಿಕೆ ಮತ್ತು ಸಾಂದರ್ಭಿಕ ಬಳಕೆಗಾಗಿ ಪಿಕ್ ಅಪ್ ಟ್ರಕ್ ಬಯಸಿದವರು ಈ ಕಾರು ಸೂಕ್ತವೆನ್ನಿಸುತ್ತಿತ್ತು. ಈ ಕಾರು 2 ಲೀಟರ್, 68 ಬಿಎಚ್‌ಪಿ ಟರ್ಬೊ ಇಲ್ಲದ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.

ಟಾಟಾ ಸಂಸ್ಥೆಯ ಈ 10 ಕಾರುಗಳನ್ನು ನಾವೆಲ್ಲರೂ ಮರೆತು ಬಿಟ್ಟಿದ್ದೇವೆ !!

ಸಫಾರಿ ಪೆಟ್ರೋಲ್ :

ಪೆಟ್ರೋಲ್ ಚಾಲಿತ ಸಫಾರಿ ಬಿಡುಗಡೆಯಾಗಿತ್ತಾ ? ಆಶ್ಚರ್ಯ ಪಡಬೇಡಿ. 2000ದ ದಶಕದ ಆರಂಭದಲ್ಲಿ ಸಫಾರಿ ಪೆಟ್ರೋಲ್ ಅಸ್ತಿತ್ವದಲ್ಲಿತ್ತು ಎಂದರೆ ನೀವು ನಂಬಲೇ ಬೇಕು. ಈ ಕಾರು 2 ಲೀಟರ್, 135 ಬಿಎಚ್‌ಪಿ ಪೆಟ್ರೋಲ್ ಇಂಜಿನ್ ಹೊಂದಿತ್ತು.

ಟಾಟಾ ಸಂಸ್ಥೆಯ ಈ 10 ಕಾರುಗಳನ್ನು ನಾವೆಲ್ಲರೂ ಮರೆತು ಬಿಟ್ಟಿದ್ದೇವೆ !!

ಸಫಾರಿ 3.0 ಡಿಕೋರ್ :

ಒಂದು ಕಾಲದಲ್ಲಿ ಟಾಟಾ ಸಫಾರಿ ಕಾರು ತನ್ನ ಎಂಜಿನ್ನನ್ನು 407 ಪಿಕ್ ಅಪ್ ಟ್ರಕ್‌ನೊಂದಿಗೆ ಹಂಚಿಕೊಂಡಿತ್ತು ಎಂಬ ವಿಚಾರ ನಿಮಗೆ ತಿಳಿದಿದೆಯೇ? ಹೌದು, 2002ರಲ್ಲಿ ಮೊದಲ ಬಾರಿಗೆ ಸ್ಕಾರ್ಪಿಯೊ ಬಿಡುಗಡೆಗೊಂಡ ನಂತರ ಟಾಟಾ ಈ ಸಫಾರಿ 3.0 ಡಿಕೋರ್ ಕಾರಿನ ಉತ್ಪಾದನೆಗೆ ಕೈ ಹಾಕಿತು. ಒಂದು ವರ್ಷದ ನಂತರ, 2.2 ಲೀಟರ್ ಮೋಟರ್ ಪಡೆದ ಟಾಟಾ ಸಫಾರಿ 3.0 ಡಿಕೋರ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಯಿತು.

ಟಾಟಾ ಸಂಸ್ಥೆಯ ಈ 10 ಕಾರುಗಳನ್ನು ನಾವೆಲ್ಲರೂ ಮರೆತು ಬಿಟ್ಟಿದ್ದೇವೆ !!

ಇಂಡಿಗೊ ಮರಿನಾ :

ಟಾಟಾ ವಾಹನ ತಯಾರಕವು ಇಂಡಿಕಾ ಪ್ಲಾಟ್‌ಫಾರಂ ಅಡಿಯಲ್ಲಿ ಇಂಡಿಗೊ ಮೆರಿನಾ ಸೆಡಾನ್ ಎಂಬ ವಿಶಾಲವಾದ ಸ್ಟೇಷನ್ ವ್ಯಾಗೆನ್ ಅಭಿವೃದ್ಧಿಪಡಿಸಿತು. ಪ್ರಾಯೋಗಿಕತೆಗಾಗಿ ಬಿಡುಗಡೆಗೊಂಡ ಮರೀನಾ ಪೆಟ್ರೋಲ್ ಮತ್ತು ಡೀಸಲ್ ಆವೃತ್ತಿಗಳು ಭಾರತೀಯ ಮಾರುಕಟ್ಟೆಯಲ್ಲಿ ಕ್ಲಿಕ್ ಆಗಲಿಲ್ಲ.

ಟಾಟಾ ಸಂಸ್ಥೆಯ ಈ 10 ಕಾರುಗಳನ್ನು ನಾವೆಲ್ಲರೂ ಮರೆತು ಬಿಟ್ಟಿದ್ದೇವೆ !!

ಇಂಡಿಗೊ ಎಕ್ಸ್ಎಲ್ :

ಟಾಟಾ ಮೋಟಾರ್ಸ್ ಕಂಪನಿಯ ಇಂಡಿಕಾ ಪ್ಲಾಟ್‌ಫಾರಂ ಬಹುಮುಖ ಸಾಮರ್ಥ್ಯ ಹೊಂದಿದೆ. ಇಂಡಿಗೊ ಎಕ್ಸ್ಎಲ್ ಕಾರು ಇಂಡಿಕಾ ಕಾರಿಗೆ ದಾರಿ ತೋರಿಸಿತು ಎನ್ನಬಹುದು. ಅಕ್ಷರಶಃ. ಹೋಂಡಾ ಅಕಾರ್ಡ್ ಕಾರಿಗಿಂತ ಹೆಚ್ಚು ಸ್ಥಳಾವಕಾಶ ಹೊಂದಿರುವ ಲಿಮೋಸಿನ್, ಇಂಡಿಗೊ ಎಕ್ಸ್ಎಲ್ ಸೆಡಾನ್ ಕಾರಿನ ವಿಸ್ತೃತ ಆವೃತ್ತಿಯಾಗಿದೆ.

ಟಾಟಾ ಸಂಸ್ಥೆಯ ಈ 10 ಕಾರುಗಳನ್ನು ನಾವೆಲ್ಲರೂ ಮರೆತು ಬಿಟ್ಟಿದ್ದೇವೆ !!

ಮಾನ್ಜಾ :

2010ರಲ್ಲಿ, ಟಾಟಾ ಹೋಂಡಾ ಸಿಟಿ ಮತ್ತು ಮಾರುತಿ ಎಸ್ಎಕ್ಸ್ 4 ಕಾರುಗಳೊಂದಿಗೆ ಪ್ರತಿಸ್ಪರ್ಧಿಸಲು ವಿಶಾಲವಾದ, ಐಷಾರಾಮಿ ಮಾನ್ಜಾ ಸೆಡಾನ್ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಂಡಿತು. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡೂ ಆಯ್ಕೆಯಲ್ಲಿ ಬಿಡುಗಡೆಗೊಂಡ ಮಾನ್ಜಾ ಗುಣಮಟ್ಟದಲ್ಲಿ ಒಂದು ದೊಡ್ಡ ಹಂತವಾಗಿತ್ತು.

ಟಾಟಾ ಸಂಸ್ಥೆಯ ಈ 10 ಕಾರುಗಳನ್ನು ನಾವೆಲ್ಲರೂ ಮರೆತು ಬಿಟ್ಟಿದ್ದೇವೆ !!

ಸ್ಪಾಸಿಯೊ :

ನೀವು ಎಂದಾದರೂ ಕ್ಯಾನ್ವಾಸ್ ಟಾಪ್ ಸುಮೊವನ್ನು ನೋಡಿದ್ದೀರಾ? ಖಂಡಿತ ನೋಡಿರೋದಿಲ್ಲ. 2000ರ ದಶಕದ ಆರಂಭದಲ್ಲಿ ಅಂತಹ ಒಂದು ಕಾರು ಅಸ್ತಿತ್ವದಲ್ಲಿತ್ತು ಮತ್ತು ಅದನ್ನು ಸ್ಪಾಸಿಯೊ 3.0 ಎಂದು ಕರೆಯಲಾಗುತ್ತಿತ್ತು. ಈ ಎಂಜಿನ್ ಅದ್ಭುತವಾದ ಕಡಿಮೆ-ಮಟ್ಟದ ಗುರುಗುಟ್ಟುವಿಕೆ ಹಾಗು ನಮ್ಯತೆಯೊಂದಿಗೆ ಗ್ರಾಮೀಣ ಟ್ಯಾಕ್ಸಿ ನಿರ್ವಾಹಕರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಆದರೆ ಬರು ಬರುತ್ತಾ ಈ ಕಾರಿನ ಖ್ಯಾತಿ ಕಡಿಮೆಯಾಯಿತು.

ಟಾಟಾ ಸಂಸ್ಥೆಯ ಈ 10 ಕಾರುಗಳನ್ನು ನಾವೆಲ್ಲರೂ ಮರೆತು ಬಿಟ್ಟಿದ್ದೇವೆ !!

ಬೋಲ್ಟ್ :

ಬೊಲ್ಟ್ ಕಾರು ಇಂಡಿಕಾ ವಿಸ್ಟಾ ಕಾರಿನ ಬೇರೆ ಆಯಾಮದ ಕಾರು ಎನ್ನಬಹುದು. ವಿಸ್ಟಾ ಕಾರಿಗಿಂತ ಈ ಕಾರಿನ ಒಳಾಂಗಣವು ಉತ್ತಮ ಗುಣಮಟ್ಟದಾಗಿತ್ತು. ಬೋಲ್ಟ್ ಸಹ ಎಬಿಎಸ್ ಮತ್ತು ಏರ್‌ಬ್ಯಾಗ್ ಸೌಲಭ್ಯ ಪಡೆದುಕೊಂಡಿದೆ. ಹೇಗಾದರೂ ಸಹ ಮಾರುಕಟ್ಟೆಯು ಕಾರುಗೆ ಹೆಚ್ಚು ಮನ್ನಣೆ ಸಿಗಲಿಲ್ಲ. ವೈಯಕ್ತಿಕವಾಗಿ ಹ್ಯಾಚ್‌ಬ್ಯಾಕ್ ಕೊಳ್ಳುವವರು ಈ ಕಾರನ್ನು ಮರೆತುಬಿಟ್ಟಿದ್ದಾರೆ.

Read more on tata ಟಾಟಾ
English summary
10 forgotten cars & SUVs of TATA Motors. Here’s to the memories of 10 such forgotten cars and SUVs.
Story first published: Wednesday, November 15, 2017, 14:21 [IST]
Please Wait while comments are loading...

Latest Photos