ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಟಾಟಾ ಹೆಚ್5ಎಕ್ಸ್ ಎಸ್‍ಯುವಿ ಕಾರು..
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ತನ್ನ ಹೊಸ ಹೆಚ್5ಎಕ್ಸ್ ಫ್ಲ್ಯಾಗ್‍ಶಿಫ್ ಎಸ್‍ಯುವಿ ಕಾರು ಪರಿಕಲ್ಪನೆಯನ್ನು ಬಿಡುಗಡೆಗೊಳಿಸಲು ಸಜ್ಜುಗೊಳ್ಳುತ್ತಿದೆ.
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ತನ್ನ ಹೊಸ ಹೆಚ್5ಎಕ್ಸ್ ಫ್ಲ್ಯಾಗ್‍ಶಿಫ್ ಎಸ್‍ಯುವಿ ಕಾರು ಪರಿಕಲ್ಪನೆಯನ್ನು ಬಿಡುಗಡೆಗೊಳಿಸಲು ಸಜ್ಜುಗೊಳ್ಳುತ್ತಿದ್ದು, ಇದೀಗ ಹೊಸ ಕಾರಿನ ಉತ್ಪಾದನಾ ಆವೃತ್ತಿಯನ್ನು ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಕಳೆದ ಫೆಬ್ರವರಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಹೆಚ್5ಎಕ್ಸ್ ಹೆಸರಿನ ಎಸ್‌ಯುವಿ ಪ್ರದರ್ಶನ ಮಾಡಿದ್ದ ಟಾಟಾ ಸಂಸ್ಥೆಯು ಅದೇ ಮಾದರಿಯನ್ನು ಇದೀಗ ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ. ಪುಣೆ ಬಳಿ ಟಾಟಾ ಹೆಚ್5ಎಕ್ಸ್ ಫ್ಲ್ಯಾಗ್‍ಶಿಪ್ ಎಸ್‍ಯುವಿ ಕಾರುನ್ನು ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಎಸ್‌ಯುವಿ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.

ಆದ್ರೆ ಹೊಸ ಕಾರಿನ ಬಗೆಗೆ ಯಾವುದೇ ಹೆಚ್ಚಿನ ಮಾಹಿತಿ ಸಿಕ್ಕಿವಾದರೂ, ಈ ಹಿಂದೆ ಆಟೋ ಎಕ್ಸ್‌ಪೋ ವೇಳೆಯಲ್ಲಿ ಪ್ರದರ್ಶಿಸಲಾದ ಪರಿಕಲ್ಪನೆಗಿಂತ ಕೊಂಚ ಬದಲಾವಣೆಗಳನ್ನು ಕಾಣಬಹುದಾಗಿದೆ. ಜೊತೆಗೆ ಹೊಸ ಕಾರು ಅಲಾಯ್ ಚಕ್ರಗಳನ್ನು ಪಡೆದಿರುವುದು ಸ್ಪಷ್ಟವಾಗಿದೆ.

ಟಾಟಾ ಹೆಚ್5ಎಕ್ಸ್ ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ್ದು, ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡ ಈ ಪ್ಲಾಟ್‍ಫಾರ್ಮ್ ಅನ್ನು ಕಾಣಬಹುದಾಗಿದೆ.

ಟಾಟಾ ಹೆಚ್5ಎಕ್ಸ್ ನ ಉತ್ಪಾದನಾ ಆವೃತ್ತಿಯು ಫ್ಲೇರ್ಡ್ ವೀಲ್ ಆರ್ಚೆಸ್, ಬಂಪರ್‍ಗಳಿಗೆ ಟ್ರಿ ಆರೋ ಡಿಸೈನ್, ಸ್ಕಿಡ್ ಪ್ಲೇಟ್ಸ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್‍ಲೈಟ್ ಮತ್ತು ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಕ್ಲಸ್ಟರ್‍ಗಳನ್ನು ಪಡೆದಿರಬಹುದು ಎನ್ನಲಾಗಿದೆ.

ಕಾರಿನ ಒಳಭಾಗವು ವಿಶಾಲವಾದ ಹಾಗೂ ಐಷಾರಾಮಿ ಸೌಲಭ್ಯಗಳನ್ನು ಪಡೆದಿದ್ದು, ಫಿಯೆಟ್ ಕಾರಿನಲ್ಲಿ ಬಳಸಲಾಗಿರುವ 2 ಲೀಟರ್ ಮಲ್ಟಿಜೆಟ್ 2 ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಇನ್ನು ಜೆಡ್ಎಫ್ 9 ಸ್ಪೀಡ್ ಆಟೋಮ್ಯಾಟಿಮ್ ಗೇರ್‍ಬಾಕ್ಸ್ ನೊಂದಿಗೆ ಜೋಡಣೆ ಮಾಡಿರಬಹುದೆಂದು ಊಹಿಸಲಾಗಿದೆ.

ಟಾಟಾ ಹೆಚ್5ಎಕ್ಸ್ ಕಾರುಗಳು ಐಷಾರಾಮಿ ಕಾರುಗಳ ಮಾದರಿಯಲ್ಲೇ ಆಲ್ ವೀಲ್ ಡ್ರೈ ಸಿಸ್ಟಂ ಮತ್ತು ವಿವಿಧ ಡ್ರೈವಿಂಗ್ ಮೋಡ್‍ಗಳನ್ನು ಪಡೆದಿರಲಿದ್ದು, 5 ಮತ್ತು 7 ಆಸನಗಳುಳ್ಳ ಎಸ್‍ಯುವಿ ಕಾರಿನ ವಿನ್ಯಾಸವನ್ನು ಪಡೆದಿರಲಿದೆ ಎನ್ನಲಾಗಿದೆ.

ಟಾಟಾ ಹೆಚ್5ಎಕ್ಸ್ ಫ್ಲ್ಯಾಗ್‍ಶಿಪ್ ಎಸ್‍ಯುವಿ ಕಾರಿನ ಉತ್ಪಾದನಾ ಆವೃತ್ತಿಯು ಟಾಟಾ ಸಂಸ್ಥೆಯ ಇನ್ನಿತರೆ ಕಾರುಗಳಿಗೆ ಹೋಲಿಸಿದರೆ ಹೊಸದಾದ ಮತ್ತು ಏಕಮಾತ್ರ ವಿನ್ಯಾಸವಾಗಿ ಬರಲಿದೆ.

ಪ್ರಸ್ತುತ ಈ ಕಾರನ್ನು ಭಾರತೀಯ ರಸ್ತೆಗಳಲ್ಲಿ ಪರಿಶೀಲಿಸಲಾಗುತ್ತಿದ್ದು, ಇದೇ ಹಣಕಾಸು ವರ್ಷದ ಅವಧಿಯೊಳಗೆ ಬಿಡುಗಡೆಗೊಳ್ಳಬಹುದು ಎನ್ನಲಾಗಿದೆ. ಇನ್ನು ಕಾರಿನ ಬೆಲೆಯ ಕುರಿತಾಗಿ ಮಾಹಿತಿ ದೊರೆತಿಲ್ಲವಾದರೂ ಸುಮಾರು ರೂ.16 ಲಕ್ಷದಿಂದ ರೂ.18 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗುತ್ತಿದೆ.

ಟಾಟಾ ಸಂಸ್ಥೆಯು ತಮ್ಮ ಎಸ್‍ಯುವಿ ಕಾರುಗಳ ಹೆಚ್ಚು ಮಾರಾಟಕ್ಕಾಗಿ ಹೆಚ್5ಎಕ್ಸ್ ಫ್ಲ್ಯಾಗ್‍ಶಿಫ್ ಎಸ್‍ಯುವಿ ಕಾರನ್ನು ಪರಿಚಯಿಸಲಾಗುತ್ತಿದ್ದು, ಬಿಡುಗಡೆಗೊಂಡ ನಂತರ ಜೀಪ್ ಕಂಪಸ್ ಮತ್ತು ಹ್ಯುಂಡೈ ಟಕ್ಸನ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.


Click it and Unblock the Notifications








