Subscribe to DriveSpark

ಎಲೆಕ್ಟ್ರಿಕ್ ಆವೃತಿಯ ಮೊದಲ ಟೆಗೊರ್ ಕಾರನ್ನು ಅನಾವರಣಗೊಳಿಸಿದ ಟಾಟಾ

Written By:

ಟಾಟಾ ಮೋಟಾರ್ಸ್ ಅಧಿಕೃತವಾಗಿ ತನ್ನ ಟಿಗೊರ್ ಕಾರಿನ ಎಲೆಕ್ಟ್ರಿಕ್ ವೆಹಿಕಲ್ಸ್(ಇವಿ) ಆವೃತಿಯ ಮೊದಲ ಕಾರನ್ನು ಉತ್ಪಾದಿಸಿದ ಫೋಟೋ ಬಿಡುಗಡೆಗೊಳಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.

To Follow DriveSpark On Facebook, Click The Like Button
ಎಲೆಕ್ಟ್ರಿಕ್ ಆವೃತಿಯ ಮೊದಲ ಟೆಗೊರ್ ಕಾರನ್ನು ಅನಾವರಣಗೊಳಿಸಿದ ಟಾಟಾ

ಕೇಂದ್ರ ಇಂಧನ ಸಚಿವಾಲಯದ ಬಳಕೆಗೆಂದು ವಿಶೇಷವಾಗಿ ನಿರ್ಮಿಸಿರುವ ಹೊಚ್ಚ ಹೊಸ ಎಲೆಕ್ಟ್ರಿಕ್ ಆವೃತಿಯ ಟಿಗೊರ್ ಕಾರನ್ನು ಟಾಟಾ ಮೋಟರ್ಸ್ ಉತ್ಪಾದನೆ ಮಾಡುತ್ತಿದ್ದು, ಈ ಕಾರಿನ ಮೊದಲ ಮಾದರಿಯನ್ನು ಟಾಟಾ ಮೋಟರ್ಸ್ ಕಂಪನಿಯ ಅಧ್ಯಕ್ಷರಾದ ರತನ್ ಟಾಟಾ ಅವರು ಅನಾವರಣಗೊಳಿಸಿದರು.

ಎಲೆಕ್ಟ್ರಿಕ್ ಆವೃತಿಯ ಮೊದಲ ಟೆಗೊರ್ ಕಾರನ್ನು ಅನಾವರಣಗೊಳಿಸಿದ ಟಾಟಾ

ಮೊದಲ ಟಾಟಾ ಟಿಗೊರ್ ಎಲೆಕ್ಟ್ರಿಕ್ ವಾಹನವನ್ನು ಗುಜರಾತ್‌ನಲ್ಲಿರುವ ಕಂಪೆನಿಯು ಸನಂದ್ ಘಟಕದಿಂದ ಹೊರತರವಾಗಿದೆ. ಮೊದಲ ಹಂತದಲ್ಲಿ ಟಾಟಾ ಮೋಟಾರ್ಸ್ 10,000 ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವ ಗುರಿ ಹೊಂದಿದೆ.

ಎಲೆಕ್ಟ್ರಿಕ್ ಆವೃತಿಯ ಮೊದಲ ಟೆಗೊರ್ ಕಾರನ್ನು ಅನಾವರಣಗೊಳಿಸಿದ ಟಾಟಾ

ನೋಡುವುದಕ್ಕೆ ಟಿಗೊರ್ ಕಾರು ಸಾಮಾನ್ಯ ಕಾರಿನಂತೆಯೇ ಇದೆ. ಆದರೆ, ಹೊಸ ಎಲೆಕ್ಟ್ರಿಕ್ ಆವೃತಿಯ ಟಿಗೊರ್ ಕಾರು ತನ್ನ ಮುಂಭಾಗದ ಗ್ರಿಲ್ ಮೇಲೆ 'ಇವಿ' ಬ್ಯಾಡ್ಜ್ ಪಡೆಯಲಿದೆ.

ಎಲೆಕ್ಟ್ರಿಕ್ ಆವೃತಿಯ ಮೊದಲ ಟೆಗೊರ್ ಕಾರನ್ನು ಅನಾವರಣಗೊಳಿಸಿದ ಟಾಟಾ

ಟಾಟಾ ಸನ್ಸ್ ಮತ್ತು ಟಾಟಾ ಮೋಟರ್ಸ್‌ನ ಅಧ್ಯಕ್ಷರಾದ ಎನ್.ಚಂದ್ರಶೇಖರನ್ ಅವರು ಕಾರಿನ ಫ್ಲ್ಯಾಗ್ ಆಫ್ ಮಾಡಿದರು. ಈ ಸಮಯದಲ್ಲಿ ಟಾಟಾ ಗ್ರೂಪ್‌ನ ಅಧ್ಯಕ್ಷರಾದ ರತನ್ ಎನ್ ಟಾಟಾ, ಟಾಟಾ ಮೋಟರ್ಸ್‌ನ ಸಿಇಓ ಮತ್ತು ಎಂಡಿ ಗುಂಡರ್ ಬುಟ್ಸ್‌ಚಕ್ ಉಪಸ್ಥಿತರಿದ್ದರು.

ಎಲೆಕ್ಟ್ರಿಕ್ ಆವೃತಿಯ ಮೊದಲ ಟೆಗೊರ್ ಕಾರನ್ನು ಅನಾವರಣಗೊಳಿಸಿದ ಟಾಟಾ

ಎಲೆಕ್ಟ್ರಾ ಇವಿ ಸಂಸ್ಥೆಯು ಈ ಕಾರನ್ನು ಅಭಿವೃದ್ಧಿಪಡಿಸಿದ್ದು, ಅತ್ಯಂತ ಗಮನಾರ್ಹವಾದ ಬದಲಾವಣೆಯನ್ನು ಪಡೆದ ವಿದ್ಯುತ್ ಡ್ರೈವ್ ವ್ಯವಸ್ಥೆಯನ್ನು ಹೊಂದಿರುವ ಪವರ್‌ಟ್ರೈನ್ ಹೊಂದಿದೆ. ಇದು ವಿದ್ಯುತ್ ಸರಬರಾಜು ಮಾಡಲು ಸಹಾಯಕವಾಗಿದೆ.

ಎಲೆಕ್ಟ್ರಿಕ್ ಆವೃತಿಯ ಮೊದಲ ಟೆಗೊರ್ ಕಾರನ್ನು ಅನಾವರಣಗೊಳಿಸಿದ ಟಾಟಾ

ಎಲೆಕ್ಟ್ರಾ ಇವಿ ಕಂಪನಿಯು ವಿದ್ಯುತ್ ಡ್ರೈವ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ಪೂರೈಸಲು ಸ್ಥಾಪಿಸಲಾದ ಒಂದು ಸಂಸ್ಥೆಯಾಗಿದೆ. 2030ರ ಹೊತ್ತಿಗೆ ವಿದ್ಯುತ್ ವಾಹನಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಈ ಎಲೆಕ್ಟ್ರಾ ಇ.ವಿ ಕಂಪನಿಯು ಕಾರ್ಯಪ್ರವೃತ್ತವಾಗಿದೆ.

English summary
Tata Tigor Electric Vehicle (EV) Rolls Out From Sanand Plant
Story first published: Thursday, December 7, 2017, 16:07 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark