ಅತಿ ಕಡಿಮೆ ಸಮಯದಲ್ಲಿ 10,000ನೇ ನೆಕ್ಸಾನ್ ಎಸ್‌ಯುವಿ ಕಾರನ್ನು ಉತ್ಪಾದನೆ ಮಾಡಿದ ಟಾಟಾ

Written By:

ಟಾಟಾ ಮೋಟಾರ್ಸ್ ಸಂಸ್ಥೆಯ ಎಸ್‌ಯುವಿ ಕಾರು ನೆಕ್ಸಾನ್, ಈಗಾಗಲೇ ಭಾರತದಲ್ಲಿ ಜನರ ವಿಶ್ವಾಸಗಳಿಸುವ ಮೂಲಕ ಯಶಸ್ವಿ ಕಾರು ವಿಭಾಗಕ್ಕೆ ಸೇರ್ಪಡೆಯಾಗಿದ್ದು, ಸದ್ಯ ಈ ಕಾರಿನ ಮತ್ತೊಂದು ವಿಚಾರ ಕಂಪನಿಗೆ ಹೆಮ್ಮೆ ತಂದು ಕೊಟ್ಟಿದೆ.

ಅತಿ ಕಡಿಮೆ ಸಮಯದಲ್ಲಿ 10,000ನೇ ನೆಕ್ಸಾನ್ ಎಸ್‌ಯುವಿ ಕಾರನ್ನು ಉತ್ಪಾದನೆ ಮಾಡಿದ ಟಾಟಾ

ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಈ ವಿಶಿಷ್ಟ ರೀತಿಯ ಎಸ್‌ಯುವಿ ಕಾರನ್ನು ಟಾಟಾ ಮೋಟರ್ಸ್ ಕಂಪನಿ ಪ್ರಾರಂಬಿಸಿತ್ತು. ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಳ್ಳುವ ಮೂಲಕ ಎಸ್‌ಯುವಿ ಕಾರು ಪ್ರಿಯರನ್ನು ತನ್ನತ್ತ ಸೆಳೆದಿತ್ತು.

ಅತಿ ಕಡಿಮೆ ಸಮಯದಲ್ಲಿ 10,000ನೇ ನೆಕ್ಸಾನ್ ಎಸ್‌ಯುವಿ ಕಾರನ್ನು ಉತ್ಪಾದನೆ ಮಾಡಿದ ಟಾಟಾ

ಈ ಕಾರು ಸದ್ಯ ಹೊಸ ದಾಖಲೆಯನ್ನು ನಿರ್ಮಿಸಿದೆ. ಹೌದು, ಟಾಟಾ ಕಂಪನಿಯು ತನ್ನ ರಂಜಾನ್‌ಗೋನ್ ಉತ್ಪಾದನಾ ಘಟಕದಲ್ಲಿ 10,000ನೇ ನೆಕ್ಸನ್ ಕಾರನ್ನು ಉತ್ಪಾದಿಸಿದ್ದು, ಈ ಕಾರು 5 ರೂಪಾಂತರಗಳಲ್ಲಿ ಮತ್ತು 2 ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

ಅತಿ ಕಡಿಮೆ ಸಮಯದಲ್ಲಿ 10,000ನೇ ನೆಕ್ಸಾನ್ ಎಸ್‌ಯುವಿ ಕಾರನ್ನು ಉತ್ಪಾದನೆ ಮಾಡಿದ ಟಾಟಾ

ನೆಕ್ಸಾನ್ ಎಸ್‌ಯುವಿ ಕಾರು ಹೊಸ 1.5 ಲೀಟರ್ ರೇವೆಟ್ರಾಕ್ ಡೀಸೆಲ್ ಎಂಜಿನ್ ಮತ್ತು 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಎರಡೂ ಎಂಜಿನ್‌ಗಳೂ 6-ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಸೌಲಭ್ಯ ಪಡೆದಿವೆ.

ಅತಿ ಕಡಿಮೆ ಸಮಯದಲ್ಲಿ 10,000ನೇ ನೆಕ್ಸಾನ್ ಎಸ್‌ಯುವಿ ಕಾರನ್ನು ಉತ್ಪಾದನೆ ಮಾಡಿದ ಟಾಟಾ

ಡೀಸೆಲ್ ಎಂಜಿನ್ ಕಾರು, 108 ಬಿಎಚ್‌ಪಿ ಶಕ್ತಿ ಮತ್ತು 260 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದೆಡೆ ಪೆಟ್ರೋಲ್ ಕಾರು, 108 ಬಿಎಚ್‌ಪಿ ಮತ್ತು 170 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮುಂಬರುವ ದಿನಗಳಲ್ಲಿ ಎ‌ಎಂಟಿ ಗೇರ್‌‌ಬಾಕ್ಸ್ ಆಯ್ಕೆಯನ್ನು ನೀಡಲು ಕಂಪನಿ ನಿರ್ಧರಿಸಿದೆ.

ಅತಿ ಕಡಿಮೆ ಸಮಯದಲ್ಲಿ 10,000ನೇ ನೆಕ್ಸಾನ್ ಎಸ್‌ಯುವಿ ಕಾರನ್ನು ಉತ್ಪಾದನೆ ಮಾಡಿದ ಟಾಟಾ

ಟಾಟಾ ನೆಕ್ಸನ್ ಕಾರು, 209 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 16 ಇಂಚಿನ ಮಷೀನ್ ಕಟ್ ಅಲಾಯ್ ಚಕ್ರಗಳು, ಡಿಆರ್‌ಎಲ್‌ಗಳ ಜೊತೆ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಆಂಡ್ರಾಯ್ಡ್ ಆಟೊನೊಂದಿಗೆ ಹರ್ಮನ್ ಎಂಟು ಸ್ಪೀಕರ್ ಆಡಿಯೋ ಸಿಸ್ಟಮ್ ಪಡೆದಿದೆ.

ಅತಿ ಕಡಿಮೆ ಸಮಯದಲ್ಲಿ 10,000ನೇ ನೆಕ್ಸಾನ್ ಎಸ್‌ಯುವಿ ಕಾರನ್ನು ಉತ್ಪಾದನೆ ಮಾಡಿದ ಟಾಟಾ

6.5 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಎಲೆಕ್ಟ್ರಿಕ್ ಪವರ್ ನೆರವಿನ ಸ್ಟೀರಿಂಗ್, ಡ್ಯುಯಲ್ ಪಥ್ ಸಸ್ಪೆನ್‌ಷನ್, ಬಕೆಟ್ ಸೀಟುಗಳು, ರಿಮೋಟ್ ಕೀ ಜೊತೆ ಎಲೆಕ್ಟ್ರಿಕ್ ಟೈಲ್ ಗೇಟ್ ಅನ್ಲಾಕ್ ಅಪ್ರೋಚ್ ಲ್ಯಾಂಪ್ ಸೌಲಭ್ಯ ಪಡೆದಿದೆ.

ಅತಿ ಕಡಿಮೆ ಸಮಯದಲ್ಲಿ 10,000ನೇ ನೆಕ್ಸಾನ್ ಎಸ್‌ಯುವಿ ಕಾರನ್ನು ಉತ್ಪಾದನೆ ಮಾಡಿದ ಟಾಟಾ

ಮಾರುತಿ ಸುಜುಕಿ ವಿಟಾರಾ ಬ್ರೆಝ, ಫೋರ್ಡ್ ಇಕೊಸ್ಪೋರ್ಟ್, ಹ್ಯುಂಡೈ ಕ್ರೆಟಾ ಮತ್ತು ರೆನಾಲ್ಟ್ ಡಸ್ಟರ್ ಕಾರುಗಳಿಗೆ ಸ್ಪರ್ಧೆ ನೀಡಲಿದೆ. ನೆಕ್ಸನ್ ಎಸ್‌ಯುವಿ, ಕಂಪೆನಿಯ ಹೊಸ ಇಂಪ್ಯಾಕ್ಟ್ ಡಿಸೈನ್ ಡಿಸೈನ್ ಮೇಲೆ ಆಧಾರಿತವಾಗಿದೆ. ಇಷ್ಟೆಲ್ಲಾ ಸೌಕರ್ಯಗಳನ್ನು ಪಡೆದಿರುವ ಟಾಟಾ ನೆಕ್ಸಾನ್ ಯಶಸ್ವಿಯಾಗಲೇ ಬೇಕು ಅಲ್ಲವೇ ?

Read more on tata ಟಾಟಾ
English summary
Tata Motors has rolled out the 10,000th Nexon from the Ranjangaon facility.
Story first published: Friday, December 1, 2017, 11:57 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark