ಶ್..ಎಚ್ಚರ! ದೈವ್ವಗಳು ಸುಳಿದಾಡುತ್ತಿರುವ 8 ರೈಲ್ವೆ ನಿಲ್ದಾಣಗಳು

By Nagaraja

ರೈಲ್ವೆ ನಿಲ್ದಾಣಗಳೆಂದರೆ ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿರುತ್ತದೆ. ಒಂದೆಡೆ ಚಾಯ್, ಚಾಯ್ ಎನ್ನುವ ಚಾಯ್ ವಾಲಾ, ಇನ್ನೊಂದೆ ಮೂಟೆ ತುಂಬಿಕೊಳ್ಳುವ ಕಾರ್ಮಿಕರು, ಇವೆಲ್ಲದರ ನಡುವೆ ರೈಲಿಗಾಗಿ ಪರದಾಡುತ್ತಿರುವ ಯಾತ್ರಿಕರು ಇವೆಲ್ಲವೂ ರೈಲ್ವೆ ನಿಲ್ದಾಣದಲ್ಲಿ ಕಂಡುಬರುವ ನಿತ್ಯ ದರ್ಶನ.

ಜನವಾಸವಿಲ್ಲದ ರೈಲ್ವೆ ನಿಲ್ದಾಣಗಳನ್ನು ಯೋಚಿಸಲು ಅಸಾಧ್ಯ. ರಾತ್ರಿ ವೇಳೆಯಲ್ಲಿ ರೈಲಿನಲ್ಲಿ ಸಂಚರಿಸುವ ಯಾತ್ರಿಕರಿಗೆ ಇದರ ಅನುಭವವುಂಟಾಗಿರಬಹುದು. ಇನ್ನು ಕೆಲವು ಬಾರಿ ಸೃಷ್ಟಿಯಾಗುತ್ತಿರುವ ಕಟ್ಟುಕಥೆಗಳಿಂದಾಗಿ ರೈಲ್ವೆ ನಿಲ್ದಾಣಗಳಲ್ಲಿ ದೈವ್ವಗಳು ಸುಳಿದಾಡುತ್ತಿದೆಯೆಂಬ ಭೀತಿ ಕಾಡುತ್ತಿದೆ.

01. ಬಾರೊಗ್ ಸ್ಟೇಷನ್, ಶಿಮ್ಲಾ

01. ಬಾರೊಗ್ ಸ್ಟೇಷನ್, ಶಿಮ್ಲಾ

ಶಿಮ್ಲಾದಲ್ಲಿ ಸ್ಥಿತಗೊಂಡಿರುವ ಬಾರೊಗ್ ರೈಲ್ವೆ ನಿಲ್ದಾಣದಲ್ಲಿ ಸದಾ ಆತ್ಮಗಳು ತಿರುಗಾಡುತ್ತಿರುತ್ತದೆ ಎಂಬ ಬಗ್ಗೆ ವದಂತಿಗಳು ಹರಡುತ್ತಿದೆ. ರೈಲ್ವೆ ನಿಲ್ದಾಣದ ಹತ್ತಿರದಲ್ಲಿರುವ ಸುರಂಗ ಮಾರ್ಗವನ್ನು ನಿರ್ಮಿಸಿದ ಕರ್ನಲ್ ಬಾರೊಗ್, ಇಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ತದಾ ಬಳಿಕ ಇಲ್ಲಿನ ನಿರ್ಜನ ಪ್ರದೇಶದಲ್ಲಿ ಪದೇ ಪದೇ ತೊಂದರೆಗಳು ಕಾಣಿಸಿಕೊಳ್ಳುತ್ತಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.

02. ಬೆಗನ್ಕೊಡಾರ್ ರೈಲ್ವೆ ನಿಲ್ದಾಣ, ಪಶ್ಚಿಮ ಬಂಗಾಳ

02. ಬೆಗನ್ಕೊಡಾರ್ ರೈಲ್ವೆ ನಿಲ್ದಾಣ, ಪಶ್ಚಿಮ ಬಂಗಾಳ

ಬಹುಶ: ಅತಿ ಹೆಚ್ಚು ಭೀಕರತೆಯನ್ನು ಸೃಷ್ಟಿ ಮಾಡುತ್ತಿರುವ ಬೆಗನ್ಕೊಡಾರ್ ರೈಲ್ವೆ ನಿಲ್ದಾಣವನ್ನು ಭೂತ ಕಾಟದಿಂದಾಗಿ ಬರೋಬ್ಬರಿ 42 ವರ್ಷಗಳ ಕಾಲ ಮುಚ್ಚಿಡಲಾಗಿತ್ತು ಎಂಬ ಬಗ್ಗೆ ಮಾಹಿತಿಗಳಿವೆ. ಬಿಳಿ ಸೀರೆಯನ್ನು ಉಟ್ಟ ಮಹಿಳೆ ಇಲ್ಲಿ ಸುತ್ತಾಡುತ್ತಿರುವುದನ್ನು ಕಂಡವರಿದ್ದಾರೆ.

03. ರಬೀಂದ್ರ ಸರೋಬಾರ್ ಮೆಟ್ರೋ ಸ್ಟೇಷನ್, ಕೋಲ್ಕತ್ತಾ

03. ರಬೀಂದ್ರ ಸರೋಬಾರ್ ಮೆಟ್ರೋ ಸ್ಟೇಷನ್, ಕೋಲ್ಕತ್ತಾ

ಕೋಲ್ಕತ್ತಾ ಮೆಟ್ರೋ ರೈಲಿನ ಪ್ರಮುಖ ತಲುಪುದಾಣವಾಗಿರುವ ರಬೀಂದ್ರ ಸರೋಬಾರ್ ಮೆಟ್ರೋ ಸ್ಟೇಷನ್ ನಲ್ಲಿ ಭೂತ ಕಾಟದಿಂದಾಗಿ ಇದುವರೆಗೆ ಹಲವರು ಸಾವನ್ನಪ್ಪಿದ್ದಾರೆ. ಇದೇ ರೈಲ್ವೆ ನಿಲ್ದಾಣದಲ್ಲಿ ಹಲವರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ದಿನದ ಕೊನೆಯ ರೈಲು ಹೊರಟ ಮೇಲಂತೂ ಆತ್ಮಗಳ ಕಾಟ ಜಾಸ್ತಿಯಾಗುತ್ತದೆ.

04. ದ್ವಾರ್ಕಾ ಸೆಕ್ಟರ್ 9 ಮೆಟ್ರೋ ಸ್ಟೇಷನ್, ದೆಹಲಿ

04. ದ್ವಾರ್ಕಾ ಸೆಕ್ಟರ್ 9 ಮೆಟ್ರೋ ಸ್ಟೇಷನ್, ದೆಹಲಿ

ಇಲ್ಲೂ ಬಿಳಿ ಸೀರೆ ಉಟ್ಟ ಮಹಿಳೆಯದ್ದೇ ಕಾಟ. ಅಪ್ಪಿ ತಪ್ಪಿ ರಾತ್ರಿ ವೇಳೆಯಲ್ಲಿ ಇಲ್ಲಿ ಬಂದರೆ ನಿಮ್ಮನ್ನು ದೇವರೇ ಕಾಪಾಡಬೇಕು ಎಂದು ಸ್ಥಳೀಯರು ತಿಳಿಸುತ್ತಾರೆ.

05. ಎಂಜಿ ರೋಡ್ ಮೆಟ್ರೋ ಸ್ಟೇಷನ್, ಗುರ್ಗಾಂವ್

05. ಎಂಜಿ ರೋಡ್ ಮೆಟ್ರೋ ಸ್ಟೇಷನ್, ಗುರ್ಗಾಂವ್

ಭಯಭೀತಿಗೊಳಿಸುವ ಗುರ್ಗಾಂವ್ ರೈಲ್ವೆ ನಿಲ್ದಾಣದಲ್ಲಿ ವೃದ್ಧೆ ಮಹಿಳೆ ಸುತ್ತಾಡುತ್ತಿರುತ್ತಾರೆ. ರೈಲ್ವೆ ಆಗಮನದ ವೇಳೆ ಕರ್ಕಶವಾಗಿ ಕಿರುಚಾಡುವ ಶಬ್ದ ಕೇಳಿಸುತ್ತಿದ್ದು, ಭಯಾನಕ ವಾತಾವರಣ ಸೃಷ್ಟಿಯಾಗುತ್ತದೆ.

06. ನೈನಿ ರೈಲ್ವೆ ನಿಲ್ದಾಣ, ಉತ್ತರ ಪ್ರದೇಶ

06. ನೈನಿ ರೈಲ್ವೆ ನಿಲ್ದಾಣ, ಉತ್ತರ ಪ್ರದೇಶ

ಉತ್ತರ ಪ್ರದೇಶದ ನೈನಿ ರೈಲ್ವೆ ನಿಲ್ದಾಣ ಪರಿಸರದಲ್ಲಿ ದೈವ್ವಗಳ ಸಾನಿಧ್ಯವಿದೆ. ಆದರೆ ಇದುವರೆಗೆ ಯಾರೂ ಕಂಡವರಿಲ್ಲ. ಇಲ್ಲಿ ಹತ್ತಿರದಲ್ಲಿರುವ ನೈನಿ ಕಾರಾಗೃಹದಲ್ಲಿ ಹಲವಾರು ಸ್ವಾತಂತ್ರ್ಯ ಹೋರಾಟಗಾರರನ್ನು ಮೃಗೀಯವಾಗಿ ಕೊಲೆ ಮಾಡಲಾಗಿತ್ತು.

07. ಚಿತ್ತೂರು ರೈಲ್ವೆ ನಿಲ್ದಾಣ, ಆಂಧ್ರ ಪ್ರದೇಶ

07. ಚಿತ್ತೂರು ರೈಲ್ವೆ ನಿಲ್ದಾಣ, ಆಂಧ್ರ ಪ್ರದೇಶ

ರಾತ್ರಿ ವೇಳೆಯಾಗುವಾಗ ಚಿತ್ತೂರು ರೈಲ್ವೆ ನಿಲ್ದಾಣದಲ್ಲಿ ದೈವ್ವಗಳು ಸುಳಿದಾಡುತ್ತಿದೆ ಎಂಬುದಕ್ಕೆ ಸಾಕ್ಷಿಗಳಿವೆ. 2013ರಲ್ಲಿ ನವದೆಹಲಿ-ಕೇರಳ ಎಕ್ಸ್ ಪ್ರೆಸ್ ನಲ್ಲಿ ಸಿಆರ್‌ಪಿಎಫ್ ಅಧಿಕಾರಿಯಾಗಿರುವ ಹರಿ ಸಿಂಗ್ ಎಂಬವರಿಗೆ ಆರ್‌ಪಿಎಫ್ ಪೇದೆ ಮತ್ತು ಕರ್ತವ್ಯದಲ್ಲಿದ್ದ ಇಬ್ಬರು ಟಿಟಿಇ ಅಧಿಕಾರಿಗಳು ಸೇರಿ ಹಲ್ಲೆ ನಡೆಸಿದ್ದರು. ಬಳಿಕ ಗಂಭೀರ ಗಾಯಗಳೊಂದಿಗೆ ಚಿತ್ತೂರು ರೈಲ್ವೆ ನಿಲ್ದಾಣದಲ್ಲಿ ಇಳಿದಿರುವ ಹರಿ ಸಿಂಗ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಅವರ ಆತ್ಮವೀಗ ನ್ಯಾಯಕ್ಕಾಗಿ ಪರಿತಪಿಸುತ್ತಿದ್ದು, ಸದಾ ಅಲೆಡಾಡುತ್ತಿದೆ.

08. ಲೂಧಿಯಾನಾ ರೈಲ್ವೆ ನಿಲ್ದಾಣ

08. ಲೂಧಿಯಾನಾ ರೈಲ್ವೆ ನಿಲ್ದಾಣ

ಹಗಲು ಸಮಯದಲ್ಲಿ ಯಾವುದೇ ತೊಂದರೆಯಿರುವುದಿಲ್ಲ. ಎಲ್ಲವೂ ಎಂದಿನಂತೆ ಸಾಗುತ್ತದೆ. ಆದರೆ ರಾತ್ರಿ ವೇಳೆಯಲ್ಲಿ ದೈವ್ವ ಹಾವಳಿ ಜಾಸ್ತಿಯಾಗುತ್ತದೆ. 2004ರಲ್ಲಿ ಇಲ್ಲಿನ ಕಂಪ್ಯೂಟರ್ ರಿಸರ್ವವೇಷನ್ ಸಿಸ್ಟಂ ಕೊಠಡಿಯಲ್ಲಿ ಸುಭಾಷ್ ಎಂಬ ಅಧಿಕಾರಿ ಸಾವನ್ನಪ್ಪಿದ್ದರು. ತದಾ ಬಳಿಕ ಇಲ್ಲಿ ತೊಂದರೆ ಜಾಸ್ತಿಯಾಗಿದೆ.

Most Read Articles

Kannada
English summary
8 Most Haunted Train Stations In India
Story first published: Friday, July 8, 2016, 10:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X