Just In
- 30 min ago
ಭಾರತದ ನಂತರ ಜಪಾನ್ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುತ್ತಿದೆ ಹೋಂಡಾ ಹೈನೆಸ್ ಸಿಬಿ 350
- 10 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 12 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 12 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
Don't Miss!
- News
ಬೈಡನ್ ಪದಗ್ರಹಣಕ್ಕೆ ಸಕಲ ಸಿದ್ಧತೆ, ಮದುಮಗಳಂತೆ ಸಿಂಗಾರಗೊಳ್ಳುತ್ತಿದೆ ಸಂಸತ್
- Movies
ಸುದೀಪ್ ಜೊತೆ ಸಿನಿಮಾ: ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, Live ಸ್ಕೋರ್: ಭಾರತದ ಆರಂಭಿಕ ವಿಕೆಟ್ ಪತನ
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ
ದಿನಂಪ್ರತಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ಬೇಸತ್ತಿರುವ ವಾಹನ ಸವಾರರು ಪರ್ಯಾಯ ಇಂಧನ ಚಾಲಿತ ವಾಹನಗಳ ಬಳಕೆಯತ್ತ ಮುಖಮಾಡುತ್ತಿದ್ದು, ಎಲೆಕ್ಟ್ರಿಕ್, ಸಿಎನ್ಜಿ ಕಾರುಗಳ ಖರೀದಿ ಹೆಚ್ಚುತ್ತಿದೆ. ಹೀಗಿರುವಾಗ ಕುಡಿಯುವ ನೀರಿನ ಮೂಲಕವೂ ಕಾರು ಚಾಲನೆ ಸಾಧ್ಯವಾಗಿರುವುದು ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಹೌದು, ಜಗತ್ತಿನಾದ್ಯಂತ ಹೆಚ್ಚುತ್ತಿರುವ ತೈಲ ಬಿಕ್ಕಟ್ಟಿಗೆ ಪರ್ಯಾಯವಾಗಿ ಹೊಸ ಮಾರ್ಗಗಳತ್ತ ಗಮನಹರಿಸಲಾಗುತ್ತಿದ್ದು, ಡೀಸೆಲ್ ಮತ್ತು ಪೆಟ್ರೋಲ್ಗೆ ಬದಲಾಗಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಎಂಜಿನ್ ವಾಹನ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜೊತೆಗೆ ಸೋಲಾರ್, ಹೈಡ್ರೊಜನ್ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಮತ್ತು ವಾಟರ್ ಪವರ್ಡ್ ಎಂಜಿನ್ ಆಧರಿತ ವಾಹನಗಳ ಆವಿಷ್ಕಾರವು ಜೋರಾಗಿದ್ದು, ಟರ್ಕಿ ಮೂಲದ 21 ವರ್ಷದ ವಿದ್ಯಾರ್ಥಿ ಕೂಡಾ ಇದೇ ನಿಟ್ಟಿನಲ್ಲಿ ಹೊಸ ಆವಿಷ್ಕಾರವೊಂದನ್ನು ಮಾಡಿದ್ದಾರೆ.

ಗ್ಯಾಸೊಲಿನ್ ಮತ್ತು ವಾಟರ್ ಪವರ್ಡ್ ಹೈಬ್ರಿಡ್ ಎಂಜಿನ್ನೊಂದಿಗೆ ಪ್ರತಿ ಲೀಟರ್ ನೀರಿಗೆ ಸರಾಸರಿಯಾಗಿ 35 ಕಿ.ಮೀ ಮೈಲೇಜ್ ನೀಡಬಲ್ಲ ಕಾರ್ ಎಂಜಿನ್ ಅಭಿವೃದ್ದಿಪಡಿಸಿರುವ ವಿದ್ಯಾರ್ಥಿ ಮುರಾತ್ ಅಬಾಬ್, ಮುಂಬರುವ ದಿನಗಳಲ್ಲಿ ಸಂಪೂರ್ಣವಾಗಿ ನೀರಿನಿಂದಲೇ ಕಾರ್ ಎಂಜಿನ್ ಚಾಲನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಲವಾರು ಪರೀಕ್ಷೆಗಳ ನಂತರ ಗ್ಯಾಸೊಲಿನ್(ಪೆಟ್ರೋಲ್) ಎಂಜಿನ್ನೊಂದಿಗೆ ಶುದ್ದ ನೀರಿನ ಮೂಲಕ ಕಾರು ಎಂಜಿನ್ ಚಾಲನೆ ಸಾಧ್ಯವಾಗಿಸಿರುವ ಮುರಾತ್ ಅಬಾಬ್, ಇದು ತನ್ನ ಆವಿಷ್ಕಾರಗಳ ಒಂದು ಭಾಗ ಮಾತ್ರ ಎಂದಿದ್ದಾರೆ.

ಭವಿಷ್ಯದಲ್ಲಿ ಸಂಪೂರ್ಣವಾಗಿ ನೀರಿನ ಮೇಲೆ ಮಾತ್ರವೇ ಕಾರ್ಯನಿರ್ವಹಿಸಬಲ್ಲ ಕಾರನ್ನು ನಿರ್ಮಿಸುವ ಗುರಿ ಹೊಂದಿರುವುದಾಗಿ ಹೇಳಿರುವ ವಿದ್ಯಾರ್ಥಿ ಮುರಾತ್ ಅಬಾಬ್ ಅವರು ಹೊಸ ಪ್ರಯೋಗಕ್ಕಾಗಿ ಹತ್ತಾರು ಕಾರುಗಳನ್ನು ಮಾಡಿಫೈಗೊಳಿಸಿ ಪರೀಕ್ಷೆ ನಡೆಸುತ್ತಿದ್ದಾರೆ. ಮತ್ತೊಂದು ವಿಶೇಷ ಅಂದರೆ ಮುರಾತ್ ಅಬಾಬ್ ಸಿದ್ದಪಡಿಸಿರುವ ಗ್ಯಾಸೊಲಿನ್ ಮತ್ತು ವಾಟರ್ ಪವರ್ಡ್ ಕಾರು ಸಾಮಾನ್ಯ ಹೈಬ್ರಿಡ್ ಕಾರುಗಳಿಂತಲೂ ಶೇ.30 ರಷ್ಟು ಹೆಚ್ಚು ಪರ್ಫಾಮೆನ್ಸ್ ನೀಡುತ್ತವೆ ಎನ್ನುವುದನ್ನು ಕಂಡುಕೊಂಡಿದ್ದಾರೆ.

ಇದರಿಂದ ಮುಂಬರುವ ದಿನಗಳಲ್ಲಿ ಸಂಪೂರ್ಣವಾಗಿ ನೀರಿನ ಮೇಲೆಯೇ ಕಾರ್ಯನಿರ್ವಹಣೆ ಮಾಡಬಲ್ಲ ಎಂಜಿನ್ ಅಭಿವೃದ್ದಿಪಡಿಸುವ ವಿಶ್ವಾಸದಲ್ಲಿರುವ ಮುರಾತ್ ಅಬಾಬ್, ಆಟೋ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದಾರೆ.

ವಾಟರ್ ಪವರ್ಡ್ ಕಾರುಗಳ ಅಭಿವೃದ್ದಿಯತ್ತ ಈಗಾಗಲೇ ಜಗತ್ತಿನಾದ್ಯಂತ ಹಲವು ಪ್ರಯತ್ನಗಳು ನಡೆಯುತ್ತಲೇ ಇದ್ದು, ಎಲೆಕ್ಟ್ರಿಕ್ ಕಾರುಗಳ ನಂತರ ಜಗತ್ತಿನಾದ್ಯಂತ ನೀರು ಮತ್ತು ಹೈಡ್ರೊಜನ್ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರುಗಳ ಸದ್ದು ಜೋರಾಗಲಿದೆ.

ಹ್ಯುಂಡೈ ಕಂಪನಿಯು ಸಹ ಈಗಾಗಲೇ ಹೈಡ್ರೊಜನ್ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟಕ್ಕೆ ಸಿದ್ದವಾಗುತ್ತಿದ್ದು, ಇದು ಸಾಮಾನ್ಯ ಎಲೆಕ್ಟ್ರಿಕ್ ಕಾರು ಮಾದರಿಗಳಿಂತಲೂ ಹೆಚ್ಚಿನ ತಂತ್ರಜ್ಞಾನ ಮತ್ತು ಮೈಲೇಜ್ ಪ್ರೇರಣೆಯನ್ನು ಹೊಂದಿರಲಿವೆ.

ಮಾಹಿತಿಗಳ ಪ್ರಕಾರ, ಹ್ಯುಂಡೈ ನಿರ್ಮಾಣದ ನೆಕ್ಸೊ ಕಾರು ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರು ಮಾದರಿಯಾಗಿದ್ದು, ದಕ್ಷಿಣ ಕೊರಿಯಾದಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿರುವ ನೆಕ್ಸೊ ಕಾರು 2023ರ ವೇಳೆಗೆ ಭಾರತದಲ್ಲೂ ಸದ್ದು ಮಾಡಲಿದೆ.

ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳು ಶುದ್ಧ ವಿದ್ಯುತ್ ವಾಹನಗಳಿಗಿಂತಲೂ ಹೆಚ್ಚಿನ ಮೈಲೇಜ್ ನೀಡುವುದು ಈಗಾಗಲೇ ಸಾಬೀತಾಗಿದ್ದು, ಹಲವು ಕಾರು ತಯಾರಕ ಕಂಪನಿಗಳು ಭಾರತವು ಹೈಡ್ರೊಜೆನ್ ಪವರ್ ವಾಹನಗಳಿಗೆ ದೊಡ್ಡ ಮಾರುಕಟ್ಟೆಯೆಂದು ಪರಿಗಣಿಸಿದ್ದಾರೆ.

ಬಿಡುಗಡೆಯಾಗಲಿರುವ ಹ್ಯುಂಡೈ ನೆಕ್ಸೊ ಕಾರು ಕೂಡಾ ಒಂದು ಬಾರಿ ಟ್ಯಾಂಕ್ ಪೂರ್ಣಗೊಳಿಸಿದ್ದಲ್ಲಿ ಬರೋಬ್ಬರಿ 1 ಸಾವಿರ ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇವು ವಿಭಿನ್ನ ತಾಂತ್ರಿಕ ಸೌಲಭ್ಯವನ್ನು ಪಡೆದುಕೊಂಡಿರುತ್ತವೆ.

ಹೈಡ್ರೊಜೆನ್ ರಾಸಾಯನಿಕವಾಗಿ ಆಮ್ಲಜನಕದೊಂದಿಗೆ ಬೆರೆತು ಗಾಡ್ ಕೆಮಿಕಲ್ ರಿಯಾಕ್ಷನ್ನೊಂದಿಗೆ ಎಲೆಕ್ಟ್ರಿಕ್ ಸೃಷ್ಠಿಯಾಗಲಿದ್ದು, ಇಲ್ಲಿ ಸೃಷ್ಠಿಯಾಗುವ ಎಲೆಕ್ಟ್ರಿಕ್ ಪವರ್ ಮೋಟಾರ್ ಅನ್ನು ಚಲಿಸುವಂತೆ ಮಾಡುತ್ತದೆ. ಈ ಮೂಲಕ ಪರಿಸರಕ್ಕೂ ಯಾವುದೇ ಹಾನಿ ಮಾಡದ ಈ ಕಾರುಗಳು ಭವಿಷ್ಯದಲ್ಲಿ ಭಾರೀ ಬೇಡಿಕೆ ಪಡೆಯಲಿದ್ದು, ವಾಟರ್ ಪವರ್ಡ್ ಕಾರುಗಳು ಸಹ ಸದ್ದು ಮಾಡುವ ನೀರಿಕ್ಷೆಯಲ್ಲಿವೆ.