ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

By Nagaraja

ಕಳೆದೊಂದು ಶತಮಾನದಲ್ಲಿ ಜಾಗತಿಕ ವ್ಯೋಮಯಾನ ಕ್ಷೇತ್ರ ಭಾರಿ ಪ್ರಗತಿಯನ್ನು ಕಂಡಿದೆ. ನಾಗರಿಕ ವಿಮಾನಯಾನಗಳಿಂದ ಹಿಡಿದು ಬಲಿಷ್ಠ ಮಿಲಿಟರಿ ವಿಮಾನಗಳ ವಿನ್ಯಾಸ, ಅಭಿವೃದ್ಧಿಯು ಭರದಿಂದ ಸಾಗುತ್ತಿದೆ.

ವ್ಯೋಮಯಾನ ವಿಜ್ಞಾನದತ್ತ ಒಮ್ಮೆ ಕಣ್ಣಾಯಿಸಿದಾಗ 1863ನೇ ಇಸವಿಯಲ್ಲಿ ಫ್ರಾನ್ಸ್ ಲೇಖಕ ಹಾಗೂ ಮಾಜಿ ನಾವಿಕ ಅಧಿಕಾರಿ ಗ್ಯಾಬ್ರಿಯಲ್ ಲಾ ಲ್ಯಾಂಡಲ್ (Gabriel La Landelle) ಮೊದಲ ಬಾರಿಗೆ ವಿಮಾನಯಾನ (Aviation) ಎಂಬ ಪದವನ್ನು ಬಳಕೆಗೆ ತಂದಿದ್ದರು. ಪ್ರಸ್ತುತ ವಿಮಾನಯಾನ ಇಲ್ಲದ ಜಗತ್ತನ್ನು ಊಹಿಸಲಸಾಧ್ಯ. ಇದರಂತೆ ವ್ಯೋಮಯಾನಕ್ಕೆ ಸಂಬಂಧಪಟ್ಟ 25 ರೋಚಕ ಸತ್ಯಗಳನ್ನು ನಾವಿಲ್ಲಿ ಬಹಿರಂಗಪಡಿಸಲಿದ್ದೇವೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ಜಗತ್ತಿನ ಅತಿ ಪುರಾತನ ವಿಮಾನಯಾನ ಸಂಸ್ಥೆ ಕೆಎಲ್ ಎಂ ಆಗಿದ್ದು, 1919ನೇ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಿತ್ತು.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ವಿಶ್ವದ ಎರಡನೇ ಅತಿ ಪುರಾತನ ವಿಮಾನಯಾನ ಸಂಸ್ಥೆ ಕ್ವಾಂಟಾಸ್ ಆಗಿದ್ದು, 1920ರಲ್ಲಿ ಸ್ಥಾಪನೆಗೊಂಡಿತ್ತು.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

1987ರಲ್ಲಿ ವೆಚ್ಚ ಕಡಿತಕ್ಕೆ ಮೊರೆ ಹೋಗಿದ್ದ ಅಮೆರಿಕ, ಪ್ರಥಮ ದರ್ಜೆ ಪ್ರಯಾಣಿಕರಿಗೆ ನೀಡುತ್ತಿದ್ದ ಸಲಾಡ್ ನಿಂದ ಒಂದು ಆಲಿವನ್ನು ಕಡಿತಗೊಳಿಸಿತ್ತು. ತನ್ಮೂಲಕ ಒಟ್ಟಾರೆ ವೆಚ್ಚದಲ್ಲಿ 40,000 ಅಮೆರಿಕನ್ ಡಾಲರ್ ಗಳನ್ನು ಉಳಿತಾಯ ಮಾಡಿತ್ತು.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ಜಗತ್ತಿನ ಅತಿ ಬಿಡುವಿಲ್ಲದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಚಿಕಾಗೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿ 37 ಸೆಕೆಂಡುಗಳಿಗೊಂದು ವಿಮಾನ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ಆಗುತ್ತಿದೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ವಿಮಾನಗಿಂತಲೂ ಹೆಚ್ಚು ಅಗಲವಾದ ರೆಕ್ಕೆಗಳನ್ನು ಎರ್ ಬಸ್ ಎ380 ಪಡೆದಿದೆ. ವಿಮಾನದ ಒಟ್ಟು ಉದ್ದವು 72.7 ಮೀಟರ್ ಆಗಿದ್ದರೆ ಇದು 80 ಮೀಟರ್ ಗಳಷ್ಟು ಅಗಲವಾದ ರೆಕ್ಕೆಗಳನ್ನು ಪಡೆದುಕೊಂಡಿದೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ಸಿಂಗಾಪುರ ಏರ್ ಲೈನ್ಸ್ ವರ್ಷಂಪ್ರತಿ ಆಹಾರಕ್ಕಾಗಿ 700 ಮಿಲಿಯನ್ ಅಮೆರಿಕನ್ ಡಾಲರ್ ಹಾಗೂ ವೈನ್ ಗಾಗಿ 16 ಮಿಲಿಯನ್ ಅಮೆರಿಕನ್ ಡಾಲರ್ ಗಳನ್ನು ವ್ಯಯ ಮಾಡುತ್ತಿದೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ಗಾಳಿಯಲ್ಲಿ ಸರಾಸರಿ ಮೂರು ತಾಸುಗಳ ಪ್ರಯಾಣದ ವೇಳೆ ಮಾನವ ಶರೀರದಿಂದ 1.5 ಲೀಟರ್ ನೀರು ಆವಿಯಾಗಲಿದೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ನ್ಯೂಯಾರ್ಕ್ ನಗರದಲ್ಲಿರುವ ಜಾನ್ ಎಫ್. ಕೆನೆಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮುಂಚೆ ಐಡಲ್ ವೈಲ್ಡ್ ಏರ್ ಪೋರ್ಟ್ ಎಂಬ ಹೆಸರಿನಿಂದ ಅರಿಯಲ್ಪಟ್ಟಿತ್ತು.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ಉಪ್ಪು ಸವರಿದ ಮೀನಿನ ಮೊಟ್ಟೆಗಳಿಗೂ ಅತಿ ಹೆಚ್ಚಿನ ಬೇಡಿಕೆಯಿದ್ದು, ಜರ್ಮಿಯ ಹೆಸರಾಂತ ಲುಫ್ಥಾನ್ಸ ವಿಮಾನಯಾನವು ವರ್ಷಂಪ್ರತಿ 10 ಟನ್ ಗಳಷ್ಟು ಖರೀದಿ ಮಾಡುತ್ತದೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ವ್ರೈಟ್ ಬ್ರದರ್ಸ್ ಅವರ ವಿಶ್ವದ ಮೊದಲ ವಿಮಾನವು 120 ಅಡಿಗಳಷ್ಟು ದೂರ ಹಾರಾಟ ನಡೆಸಿತ್ತು. ಆದರೆ ಬೋಯಿಂಗ್ 747 ವಿಮಾನದ ರೆಕ್ಕೆ ಅಗಲವು ಇದಕ್ಕಿಂತಲೂ ದೊಡ್ಡದೆನಿಸಿದ್ದು, 195 ಅಡಿ ಉದ್ದದ ರೆಕ್ಕೆಯನ್ನು ಹೊಂದಿದೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

1999ರಲ್ಲಿ ಅಲಸ್ಕಾ ಏರ್ ಲೈನ್ಸ್ ಮೊದಲ ಬಾರಿಗೆ ಇಂಟರ್ ನೆಟ್ ಹಾಗೂ ಆನ್ ಲೈನ್ ಚೆಕ್-ಇನ್ ವ್ಯವಸ್ಥೆಯನ್ನು ಅವಿಷ್ಕರಿಸಿತ್ತು.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ಏರ್ ಬಸ್ 330-200 ಯಲ್ಲಿರುವ ಕಿರು ರೆಕ್ಕೆಯು ವಿಶ್ವದ ಅತಿ ಎತ್ತರದ ಮಾನವನ (2.4 ಮೀಟರ್) ಎತ್ತರಕ್ಕೆ ಸಮಾನವಾಗಿದೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

747-8 ವಿಮಾನದ ವಿದ್ಯುತ್ ಸಾಮರ್ಥ್ಯ ಎಷ್ಟಿದೆಯೆಂದರೆ 4,80,000ದಷ್ಟು 32 ಇಂಚುಗಳ ಫ್ಲ್ಯಾಟ್ ಸ್ಕ್ರೀನ್ ಟಿವಿ ಗಳನ್ನು ಬಳಕೆ ಮಾಡಬಹುದಾಗಿದೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

747 ವಿಮಾನವು ವಿಶ್ವದ್ಯಾಂತ 78 ಬಿಲಿಯನ್ನು ಕೀ.ಮೀ.ಗಳನ್ನು ಸುತ್ತಾಡಿದೆ. ಇದು ಚಂದ್ರನಲ್ಲಿಗೆ 101.500 ಟ್ರಿಪ್ ಗಳನ್ನು ಸುತ್ತಾಡಿ ಬರುವುದಕ್ಕೆ ಸಮಾನವಾಗಿದೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

747 ವಿಮಾನವು ಇದುವರೆಗೆ 5.6 ಬಿಲಿಯನ್ ಯಾತ್ರಿಕರನ್ನು ಹೊತ್ತೊಯ್ದಿದೆ. ಇದು ಜಗತ್ತಿನ ಶೇಕಡಾ 80ರಷ್ಟು ಜನಸಂಖ್ಯೆಗೆ ಸಮಾನವಾಗಿದೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ನಿರ್ದಿಷ್ಟ ಒಂದು ತಾಸಿನ ಸಮಯದಲ್ಲಿ ಅಮೆರಿಕದಲ್ಲಿ 61,000 ಮಂದಿ ವಿಮಾನದಲ್ಲಿ ಹಾರಾಡುತ್ತಿರುತ್ತಾರೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

1960ರ ದಶಕದ ಜೆಟ್ ಗಳಿಗೆ ಹೋಲಿಸಿದಾಗ ಆಧುನಿಕ ವಿಮಾನಗಳು ಶೇಕಡಾ 70ರಷ್ಟು ಹೆಚ್ಚು ಇಂಧನ ಕ್ಷಮತೆಯನ್ನು ನೀಡುತ್ತಿದೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ನಿಮಗಿದು ಗೊತ್ತೆ? 1979ರಲ್ಲಿ ಕ್ವಾಂಟಾಸ್ ಮೊದಲ ಬಾರಿಗೆ ವಾಣಿಜ್ಯ ದರ್ಜೆಯ ಪ್ರಯಾಣವನ್ನು ಅವಿಷ್ಕರಿಸಿತ್ತು.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ದೂರವನ್ನು ಅಳೆಯುವಾಗ ಸಿಡ್ನಿಯಿಂದ ದಲ್ಲಾಸ್ ವರೆಗೆ ಸಂಚರಿಸುವ ಕ್ವಾಂಟಾಸ್ ಎ380 ವಿಮಾನವು ವಿಶ್ವದ ಅತಿ ದೂರದ ವಿಮಾನಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ಅಮೆರಿಕನ್ ಏರ್ ಲೈನ್ಸ್ ನಲ್ಲಿ ಪೇಪರ್ ಬರೆದಿಟ್ಟುಕೊಳ್ಳುವುದನ್ನು ಐಪ್ಯಾಡ್ ಗೆ ವರ್ಗಾಯಿಸುವುದರ ಮೂಲಕ 1.2 ಮಿಲಿಯನ್ ಡಾಲರ್ ಗಳ ಇಂಧನವನ್ನು ಉಳಿತಾಯ ಮಾಡಲಾಗಿದೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

747 ವಿಮಾನವು ಸರಾಸರಿ 240ರಿಂದ 280 ಕೀ.ಮೀ. ದೂರದಷ್ಟು ವೈರಿಂಗ್ ವ್ಯವಸ್ಥೆಯನ್ನು ಪಡೆದುಕೊಂಡಿದೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ಅಮೆರಿಕದಲ್ಲಿ ದೈನಂದಿನ 30,000ದಷ್ಟು ವಿಮಾನಗಳು ಹಾರಾಟ ನಡೆಸುತ್ತಿದ್ದು, ಎರಡು ದಶಲಕ್ಷ ಯಾತ್ರಿಕರು ಇದನ್ನು ಆಶ್ರಯಿಸಿಕೊಂಡಿದ್ದಾರೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ವಿಷಾಹಾರವನ್ನು ತಪ್ಪಿಸುವ ನಿಟ್ಟಿನಲ್ಲಿ ಪೈಲಟ್ ಮತ್ತು ಸಹ ಪೈಲಟ್ ಗಳಿಗೆ ವಿಭಿನ್ನವಾದ ಆಹಾರ ಕ್ರಮವನ್ನು ಅನುಸರಿಸಲಾಗುತ್ತದೆ.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ಹಾರಾಟದ ವೇಳೆ ನಾಲಗೆಯ ರುಚಿ ಹಿಡಿಯುವ ಸಾಮರ್ಥ್ಯವು ಮೂರರಲ್ಲಿ ಒಂದರಷ್ಟು ಮರಗಟ್ಟುತ್ತದೆ. ಇದರಿಂದ ಆಹಾರವು ಸಪ್ಪೆಯಾಗಿ ಅನಿಸಲೂಬಹುದು.

ನಿಮಗೂ ಗೊತ್ತಿರದ ವಿಮಾನಯಾನದ 25 ರೋಚಕ ಸತ್ಯಗಳು!

ವಾಣಿಜ್ಯ ವಿಮಾನವೊಂದು ಪ್ರತಿ ಗಂಟೆಗೆ ಸರಾಸರಿ 800 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.

Most Read Articles

Kannada
English summary
25 Interesting facts about Aviation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X