ತೀರಕ್ಕೆ ಅಪ್ಪಳಿಸಿದ 80 ವರ್ಷಗಳ ಹಿಂದೆ ಕಾಣೆಯಾದ ವೇಶ್ಯಾವಾಟಿಕೆ ಹಡಗು

Written By:

ಅಮೆರಿಕದ ಕ್ಯಾಲಿಫೋರ್ನಿಯಾ ಕೊರೊನಡೊ ಕರಾವಳಿ ತೀರ ಪ್ರದೇಶದಲ್ಲಿ ಸರಿ ಸುಮಾರು 80 ವರ್ಷಗಳಷ್ಟು ಹಿಂದೆ ನಾಪತ್ತೆಯಾಗಿರುವ ಹಡಗೊಂದು ರೋಚಕ ರೀತಿಯಲ್ಲಿ ಕಡಲ ತೀರಕ್ಕೆ ಅಪ್ಪಳಿಸಿರುವ ಘಟನೆ ಭಾರಿ ಕುತೂಹಲವನ್ನು ಕೆರಳಿಸಿದೆ.

ಸ್ಥಳೀಯರನ್ನು ಬೆಚ್ಚಿ ಬೀಳಿಸಿರುವ ಹಡಗು ಕಡಲ ತೀರಕ್ಕೆ ಅಪ್ಪಳಿಸಿರುವುದು ಹಲವಾರು ನಿಗೂಢತೆಗಳಿಗೆ ಸಾಕ್ಷಿಯಾಗಿದೆ. ಈ ಸಂಬಂಧ ನಿಖರ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ರೋಚಕ ಚಿತ್ರಗಳನ್ನು ಬಯಲು ಮಾಡಲಾಗಿದೆ.

ತೀರಕ್ಕೆ ಅಪ್ಪಳಿಸಿದ 80 ವರ್ಷಗಳ ಹಿಂದೆ ಕಾಣೆಯಾದ ವೇಶ್ಯಾವಾಟಿಕೆ ಹಡಗು

ತನಿಖೆಯಲ್ಲಿ ಕಂಡುಬಂದಿರುವ ಮಾಹಿತಿಗಳ ಪ್ರಕಾರ 1921ನೇ ಇಸವಿಯಲ್ಲಿ ಎಸ್ ಎಸ್ ಮಾಂಟೆ ಕಾರ್ಲೊ ತೈಲ ನೌಕೆಯನ್ನು ಬಿಡುಗಡೆಗೊಳಿಸಲಾಗಿತ್ತು. ಬಳಿಕ ಇದು ಸಮುದ್ರದಲ್ಲೇ ಅನಧಿಕೃತ ಜೂಟಾಟ ಮತ್ತು ವೇಶ್ಯಾ ವೃತ್ತಿಯ ಕೇಂದ್ರವಾಗಿ ಮಾರ್ಪಟ್ಟಿತ್ತು.

ತೀರಕ್ಕೆ ಅಪ್ಪಳಿಸಿದ 80 ವರ್ಷಗಳ ಹಿಂದೆ ಕಾಣೆಯಾದ ವೇಶ್ಯಾವಾಟಿಕೆ ಹಡಗು

1937ನೇ ಇಸವಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಮುಂಜಾವಿನ ವೇಳೆಯಲ್ಲಿ ಸಮುದ್ರಕ್ಕೆ ಅಪ್ಪಳಿಸಿದ ಭಾರಿ ಚಂಡ ಮಾರುತಕ್ಕೆ ಹಡಗು ಸಂಪೂರ್ಣವಾಗಿ ಶರಣಾಗಿತ್ತು.

ತೀರಕ್ಕೆ ಅಪ್ಪಳಿಸಿದ 80 ವರ್ಷಗಳ ಹಿಂದೆ ಕಾಣೆಯಾದ ವೇಶ್ಯಾವಾಟಿಕೆ ಹಡಗು

ಈಗ 80 ವರ್ಷಗಳ ಬಳಿಕ ಅದ್ಭುತ ರೀತಿಯಲ್ಲಿ ಮೇಲೆ ಬಂದಿರುವ ಹಡಗು ಕೊರೊನಡೊ ಕರಾವಳಿ ಪ್ರದೇಶದ ಪ್ರಮುಖ ಆಕರ್ಷಣೆಯಾಗಿ ಮಾರ್ಪಟ್ಟಿದೆ.

ತೀರಕ್ಕೆ ಅಪ್ಪಳಿಸಿದ 80 ವರ್ಷಗಳ ಹಿಂದೆ ಕಾಣೆಯಾದ ವೇಶ್ಯಾವಾಟಿಕೆ ಹಡಗು

ಈ ಸಂಬಂಧ ಹೇಳಿಕೆ ಕೊಟ್ಟಿರುವ ಸ್ಥಳೀಯರೊಬ್ಬರು ಇದು ನಿಜಕ್ಕೂ ಅಮೋಘವಾಗಿದ್ದು, ಇಲ್ಲಿನ ಬೀಚ್ ಗೆ ಅನೇಕ ಬಾರಿ ಭೇಟಿ ಕೊಟ್ಟರೂ ಇಲ್ಲಿ ಹಡಗು ಇರುವ ವಿಚಾರ ತಿಳಿದಿರಲಿಲ್ಲ ಎಂದಿದ್ದಾರೆ.

ತೀರಕ್ಕೆ ಅಪ್ಪಳಿಸಿದ 80 ವರ್ಷಗಳ ಹಿಂದೆ ಕಾಣೆಯಾದ ವೇಶ್ಯಾವಾಟಿಕೆ ಹಡಗು

ಸಮುದ್ರ ತೀರ ಪ್ರದೇಶಕ್ಕೆ ಅಪ್ಪಳಿಸಿದ ಬಲವಾದ ಅಲೆಗಳ ಪ್ರಭಾವದಿಂದಾಗಿ ಮರಳುಗಳು ಬದಿಗೆ ಸರಿದು ಹೋಗಿದ್ದವು. ಇದರಿಂದಾಗಿ ತೀರಕ್ಕೆ ಅಪ್ಪಳಿಸಿರುವ ಹಡಗು ಕಣ್ಣಿಗೆ ಕಾಣಿಸುವಂತಾಗಿತ್ತು.

ತೀರಕ್ಕೆ ಅಪ್ಪಳಿಸಿದ 80 ವರ್ಷಗಳ ಹಿಂದೆ ಕಾಣೆಯಾದ ವೇಶ್ಯಾವಾಟಿಕೆ ಹಡಗು

ಪ್ರಸ್ತುತ ಹಡಗಿನ ಅವೆಶೇಷಗಳಡಿಯಲ್ಲಿ 1.5 ಲಕ್ಷ ಅಮೆರಿಕಯನ್ ಡಾಲರ್ ದುಬಾರಿಯ ಭಾರಿ ಪ್ರಮಾಣದ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳ ಸಂಗ್ರಹ ಇರುವ ಬಗ್ಗೆಯೂ ಸಂದೇಹ ಮೂಡಿದೆ.

ತೀರಕ್ಕೆ ಅಪ್ಪಳಿಸಿದ 80 ವರ್ಷಗಳ ಹಿಂದೆ ಕಾಣೆಯಾದ ವೇಶ್ಯಾವಾಟಿಕೆ ಹಡಗು

ನಿಯಮ ವಿರುದ್ಧವಾಗಿ ಜೂಜಾಟ ಹಾಗೂ ವೇಶ್ಯಾ ವೃತ್ತಿಗಾಗಿ ಈ ಹಡಗನ್ನು ಬಳಕೆ ಮಾಡಲಾಗಿತ್ತು ಎಂಬುದು ತಿಳಿದು ಬಂದಿದೆ. ಇದರಿಂದಾಗಿ ಹಡಗು ಕಣ್ಮರೆಯಾದಾಗ ಇದರ ಮಾಲಿಕತ್ವ ಹೊಣೆಗೆ ಯಾರೂ ಮುಂದಾಗಿರಲಿಲ್ಲ.

ತೀರಕ್ಕೆ ಅಪ್ಪಳಿಸಿದ 80 ವರ್ಷಗಳ ಹಿಂದೆ ಕಾಣೆಯಾದ ವೇಶ್ಯಾವಾಟಿಕೆ ಹಡಗು

ಸ್ಯಾನ್ ಡಿಯಾದ ಕೊರೊನಡೊ ಬೀಚ್ ನಿಂದ ಮೂರು ಮೈಲುಗಳಷ್ಟು ದೂರದಲ್ಲಿ 1937ರ ಹೂಸ ವರ್ಷದ ಸಂಭ್ರಮಾಚರಣೆಯ ವೇಳೆಯಲ್ಲಿ ಚಂಡ ಮಾರುತ ಬಂದಪ್ಪಳಿಸಿತ್ತು.

ತೀರಕ್ಕೆ ಅಪ್ಪಳಿಸಿದ 80 ವರ್ಷಗಳ ಹಿಂದೆ ಕಾಣೆಯಾದ ವೇಶ್ಯಾವಾಟಿಕೆ ಹಡಗು

ಲೈವ್ ಬಾರ್ ತರಹನೇ ವೇಶ್ಯಾವಾಟಿಕೆ, ಜೂಜಾಟ, ಡ್ಯಾನ್ಸ್ ನೊಂದಿಗೆ ಮೋಜಿ ಮಸ್ತಿನ ಜೀವನವನ್ನು ಹಡಗಿನಲ್ಲಿ ನಡೆಸಿಕೊಳ್ಳಲಾಗಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ಬಳಿಕ 'ಗ್ಯಾಂಬ್ಲಿಂಗ್ ಶಿಪ್' ಎಂಬ ಹಾಲಿವುಡ್ ಚಿತ್ರವನ್ನು ರಚಿಸಲಾಗಿತ್ತು.

ತೀರಕ್ಕೆ ಅಪ್ಪಳಿಸಿದ 80 ವರ್ಷಗಳ ಹಿಂದೆ ಕಾಣೆಯಾದ ವೇಶ್ಯಾವಾಟಿಕೆ ಹಡಗು

ಒಟ್ಟಿನಲ್ಲಿ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿರುವ ಹಡಗು ಕೊನೆಗೂ ಅಷ್ಟೇ ರಹಸ್ಯಗಳನ್ನು ಕಾಪಾಡಿಕೊಂಡು ತೀರಕ್ಕೆ ಅಪ್ಪಳಿಸಿರುವುದು ಇತಿಹಾಸ ತಜ್ಞರಲ್ಲಿ ಅಷ್ಟೇ ಕುತೂಹಲವನ್ನು ಕೆರಳಿಸುವಂತೆ ಮಾಡಿದೆ.

English summary
lost sunken gambling ships monte carlo emerges sand
Story first published: Monday, July 25, 2016, 11:08 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark