ವಾಹನಗಳ ಫಿಟ್‌ನೆಸ್ ಪರೀಕ್ಷಾ ಶುಲ್ಕದಲ್ಲಿ ಭಾರೀ ಬದಲಾವಣೆ.. ರೂ.25,000 ವರೆಗೆ ಏರಿಕೆ!

ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ದೇಶಾದ್ಯಂತ ವಾಹನಗಳ ಫಿಟ್‌ನೆಸ್ ಪರೀಕ್ಷಾ ಶುಲ್ಕ (Fitness Test Fees Hike) ಹೆಚ್ಚಿದೆ. ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಇದರನ್ವಯ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಸರಿ ಸುಮಾರು 10 ಪಟ್ಟು ಏರಿಕೆಯಾಗಿದೆ. ಹಳೆಯ ಹಾಗೂ ಅಸುರಕ್ಷಿತ ವಾಹನಗಳ ಬಳಕೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದಾಗಿ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ.

ಪರಿಷ್ಕೃತ ಫಿಟ್‌ನೆಸ್ ಪರೀಕ್ಷಾ ಶುಲ್ಕಗಳು ತಕ್ಷಣದಿಂದಲೇ ಜಾರಿಗೊಳ್ಳಲಿವೆ. ಕೇಂದ್ರ ಸರ್ಕಾರವು ತಿದ್ದುಪಡಿಗೂ ಮುನ್ನ, 15 ವರ್ಷಗಳಿಗಿಂತ ಹಳೆಯದಾದ ವಾಹನಗಳಿಗೆ ಮಾತ್ರವೇ ಭಾರೀ ಶುಲ್ಕವನ್ನು ವಿಧಿಸುತ್ತಿತ್ತು. ಇನ್ಮುಂದೆ 10 ವರ್ಷಗಳನ್ನು ಪೂರೈಸಿದ ವಾಹನಗಳಿಗೂ ಹೆಚ್ಚಿನ ಶುಲ್ಕ ಅನ್ವಯವಾಗಲಿದೆ.

Vehicles Fitness Test Fees Hike In India Upto Rs 25 000 Details

20 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಪರೀಕ್ಷಾ ಶುಲ್ಕ ಎಷ್ಟಿದೆ?

ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಪ್ರಕಾರ, 20 ವರ್ಷಕ್ಕಿಂತ ಹಳೆಯದಾದ ಭಾರೀ ಗಾತ್ರದ ವಾಹನಗಳ (ಟ್ರಕ್‌ & ಬಸ್‌) ಫಿಟ್‌ನೆಸ್ ಪರೀಕ್ಷೆಗೆ ರೂ.25,000 ಶುಲ್ಕವನ್ನು ಪಾವತಿಸಬೇಕಾಗಿದೆ. ಈ ಹಿಂದೆ, ರೂ.2,500 ಇತ್ತು. ಅದೇ ರೀತಿಯಲ್ಲಿ ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳ ಮೇಲಿನ ಪರೀಕ್ಷಾ ಶುಲ್ಕವನ್ನು ರೂ.1,800 ಬದಲಿಗೆ ರೂ.20,000ಕ್ಕೆ ಏರಿಸಲಾಗಿದೆ.

ಹಾಗೆಯೇ 20 ವರ್ಷಕ್ಕಿಂತ ಹಳೆಯದಾದ ಲಘು ಮೋಟಾರು ವಾಹನಗಳಿಗೆ ಫಿಟ್‌ನೆಸ್ ಪರೀಕ್ಷಾ ಶುಲ್ಕವು ರೂ.15,000ಕ್ಕೆ ತಲುಪಿದೆ. ತ್ರಿಚಕ್ರ ವಾಹನಗಳಿಗೆ ರೂ.7,000 ಮತ್ತು ದ್ವಿಚಕ್ರ ವಾಹನಗಳಿಗೆ ರೂ.600 ರಿಂದ ರೂ.2,000ಕ್ಕೆ ಹೆಚ್ಚಳ ಮಾಡಲಾಗಿದೆ. ಅಂದರೆ, 3 ಪಟ್ಟು ಅಧಿಕಗೊಂಡಿದೆ.

15 - 20 ವರ್ಷದ ಹಳೆಯದಾದ ವಾಹನಗಳಿಗೆ ಶುಲ್ಕವೆಷ್ಟು?

15 ರಿಂದ 20 ವರ್ಷದ ಹಳೆಯದಾದ ಭಾರೀ ಗಾತ್ರದ ವಾಹನಗಳ ಪರೀಕ್ಷಾ ಶುಲ್ಕವು ರೂ.12,500ಕ್ಕೆ ಮುಟ್ಟಿದೆ. ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳಿಗೆ ರೂ.10,000, ಲಘು ಮೋಟಾರು ವಾಹನಗಳಿಗೆ ರೂ.5,000, ತ್ರಿಚಕ್ರ ವಾಹನಗಳಿಗೆ ರೂ.3,000 ಮತ್ತು ದ್ವಿಚಕ್ರ ವಾಹನಗಳಿಗೆ ರೂ.1,000 ಶುಲ್ಕವಾಗಿದೆ.

10 - 15 ವರ್ಷದ ಹಳೆಯದಾದ ವಾಹನಗಳಿಗೆ ಫಿಟ್‌ನೆಸ್ ಪರೀಕ್ಷಾ ಶುಲ್ಕ ಎಷ್ಟಿದೆ?

10 ರಿಂದ 15 ವರ್ಷದ ಹಳೆಯದಾದ ಭಾರೀ ಗಾತ್ರದ ವಾಹನಗಳ ಪರೀಕ್ಷಾ ಶುಲ್ಕವು ರೂ.1,000 ನಿಗದಿಯಾಗಿದೆ. ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳಿಗೆ ರೂ.1,000, ಲಘು ಮೋಟಾರು ವಾಹನಗಳಿಗೆ ರೂ.600, ತ್ರಿಚಕ್ರ ವಾಹನಗಳಿಗೆ ರೂ.600 ಹಾಗೂ ದ್ವಿಚಕ್ರ ವಾಹನಗಳಿಗೆ ರೂ.400 ಶುಲ್ಕವನ್ನು ವಿಧಿಸಲಾಗುತ್ತದೆ.

ಈ ಹಿಂದೆ ಜಿಎಸ್‌ಟಿ ಇಳಿಸಿ ಹೊಸ ವಾಹನ ಖರೀದಿದಾರರಿಗೆ ಸಿಹಿಸುದ್ದಿ ನೀಡಿದ್ದ ಕೇಂದ್ರ ಸರ್ಕಾರ:

ಇದೇ ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನೂತನ ಕಾರು, ಟ್ರ್ಯಾಕ್ಟರ್ & ಬೈಕ್‌ಗಳ ಖರೀದಿ ಮೇಲೆ ವಿಧಿಸುತ್ತಿದ್ದ 'ಜಿಎಸ್‌ಟಿ'ಯನ್ನು ಭಾರೀ ಪ್ರಮಾಣದಲ್ಲಿ ಕಡಿಮೆಗೊಳಿಸಿತ್ತು. ಅದರ ಭಾಗವಾಗಿ 1200 ಸಿಸಿ ವರೆಗಿನ ಪೆಟ್ರೋಲ್, ಎಲ್‌ಪಿಜಿ, ಸಿಎನ್‌ಜಿ ಮತ್ತು 1500 ಸಿಸಿ ವರೆಗಿನ ಡೀಸೆಲ್ ಎಂಜಿನ್‌ನ್ನು ಹೊಂದಿರುವ ಕಾರುಗಳ ಮೇಲಿನ ಜಿಎಸ್‌ಟಿ ಶೇಕಡ 28% ರಿಂದ 18%ಗೆ ಇಳಿಕೆಯಾಗಿತ್ತು.

350 ಸಿಸಿ ವರೆಗಿನ ಎಂಜಿನ್ ಹೊಂದಿರುವ ಸಾಮಾನ್ಯ ದ್ವಿಚಕ್ರ ವಾಹನಗಳ (ಸ್ಕೂಟರ್ & ಬೈಕ್‌ಗಳು) ಖರೀದಿ ಮೇಲೆಯೂ ಜಿಎಸ್‌ಟಿ ಪ್ರಮಾಣವನ್ನು ಶೇಕಡ 28% ರಿಂದ 18%ಗೆ ಕಡಿತಗೊಳಿಸಲಾಗಿತ್ತು. ಇದರ ಪರಿಣಾಮ ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಚ್ಚ ಹೊಸ ಕಾರು ಹಾಗೂ ದ್ವಿಚಕ್ರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡವು. ದೇಶೀಯ ವಾಹನೋದ್ಯವು ಸಹ ಚೇತರಿಕೆ ಹಾದಿಗೆ ಮರುಳಿತು.

More from DriveSpark

Article Published On: Thursday, November 20, 2025, 13:18 [IST]
English summary
Vehicles fitness test fees hike in india upto rs 25000 details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+