Nayanthara: ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ದುಬಾರಿ ರೋಲ್ಸ್ ರಾಯ್ಸ್ ಕಾರು ಗಿಫ್ಟ್! ಯಪ್ಪಾ.. ಬೆಲೆ ಎಷ್ಟು?

ನಿನ್ನೆಯಷ್ಟೇ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanthara), 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಿಕೊಂಡಿದ್ದಾರೆ. ಸೆಲೆಬ್ರಿಟಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ನಟಿ ನಯನತಾರಾ ಬಹುಭಾಷಾ ಕಲಾವಿದೆಯಾಗಿದ್ದು, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಲೂ ಫುಲ್ ಆಕ್ಟಿವ್ ಇದ್ದು, ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಲ್ಲಿವೆ. ಪ್ರಮುಖವಾಗಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ 'ಟಾಕ್ಸಿಕ್'ನಲ್ಲೂ ಬಣ್ಣ ಹಚ್ಚಿದ್ದಾರೆ.

ಜನ್ಮದಿನದ ಸವಿನೆನಪಿಗಾಗಿ ನಟಿ ನಯನತಾರಾಗೆ ಪತಿ ವಿಗ್ನೇಶ್ ಶಿವನ್ (Vignesh Shivan), ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಸ್ಪೆಕ್ಟರ್ (Rolls Royce Spectre) ಕಾರನ್ನು ಉಡೊಗೊರೆಯಾಗಿ ನೀಡಿದ್ದಾರೆ. ಸ್ವತಃ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೂತನ ಕಾರಿನೊಂದಿಗೆ ಪತ್ನಿ ಹಾಗೂ ಮಕ್ಕಳೊಂದಿಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

Vignesh Shivan gifted Nayanthara Rolls Royce Spectre sedan Details

ರೋಲ್ಸ್ ರಾಯ್ಸ್ ಸ್ಪೆಕ್ಟರ್ ವಿಶೇಷತೆಗಳೇನು:

ಇದೊಂದು ಎಲೆಕ್ಟ್ರಿಕ್ ಚಾಲಿತ ಕೂಪೆ ಸೆಡಾನ್ ಆಗಿದೆ. ಕನಿಷ್ಠ ರೂ.7.50 ಕೋಟಿ ಹಾಗೂ ಗರಿಷ್ಠ ರೂ.9.50 ಕೋಟಿ (ಎಕ್ಸ್-ಶೋರೂಂ - ನವದೆಹಲಿ) ದರವನ್ನು ಪಡೆದಿದೆ. ಬೇಸ್ ಮತ್ತು ಬ್ಲ್ಯಾಕ್ ಬ್ಯಾಡ್ಜ್ ಎಂಬ ಎರಡು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ಈ ಕಾರು ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಒಳಗೊಂಡಿದ್ದು, ನೋಡುಗರ ಕಣ್ಮನ ಸೆಳೆಯುತ್ತದೆ. ದೊಡ್ಡದಾದ ಗ್ರಿಲ್, ಅಡ್ವಾನ್ಸ್ಡ್ ಎಲ್ಇಡಿ ಲೇಸರ್ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲ್ಯಾಂಪ್‌ಗಳು ಮತ್ತು 23 ಇಂಚಿನ ವೀಲ್‌ಗಳನ್ನು ಪಡೆದಿದೆ. ಇಂಗ್ಲಿಷ್ ವೈಟ್, ಆರ್ಕ್ಟಿಕ್ ವೈಟ್, ಟೆಂಪೆಸ್ಟ್ ಗ್ರೇ, ಜುಬಿಲಿ ಸಿಲ್ವರ್, ಆಂಥ್ರಾಸೈಟ್, ಗ್ರ್ಯಾಫೈಟ್, ಚಾರ್ಟ್ರೂಸ್, ಸ್ಕಾಲಾ ರೆಡ್, ಬೋಹೀಮಿಯನ್ ರೆಡ್ ಹಾಗೂ ಡಾರ್ಕ್ ಎಮರಾಲ್ಡ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.

ನೂತನ 'ರೋಲ್ಸ್ ರಾಯ್ಸ್ ಸ್ಪೆಕ್ಟರ್' ಸಾಕಷ್ಟು ವಿಶಾಲವಾವಾಗಿದೆ. 5,475 ಮಿ.ಮೀ ಉದ್ದ, 2,017 ಮಿ.ಮೀ ಅಗಲ ಮತ್ತು 1,573 ಮಿ.ಮೀ ಎತ್ತರವಿದೆ. 146 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 3,210 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 2,975 ಕೆಜಿ ತೂಕವಿದೆ.

ಇದು 2 ಡೋರ್ ಆಯ್ಕೆಯನ್ನು ಹೊಂದಿದೆ. ಆದರೂ 4 ಸೀಟ್‌ಗಳನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾದ ಕುಳಿತುಕೊಂಡು ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 380 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ಈ ಕಾರು ಹೆಚ್ಚು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಹೊಂದಿದೆ. 102 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 520 ಕಿಲೋಮೀಟರ್‌ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 576.6 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ ಪವರ್) ಹಾಗೂ 900 ಎನ್ಎಂ (ನ್ಯೂಟನ್ ಮೀಟರ್) ಹೊರಹಾಕುತ್ತದೆ. 250 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೆಲವೇ 4.5 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.

ಹೊಸ 'ರೋಲ್ಸ್ ರಾಯ್ಸ್ ಸ್ಪೆಕ್ಟರ್' ಕ್ಯಾಬಿನ್ ವಿನ್ಯಾಸವು ಚೆನ್ನಾಗಿದೆ. ಅಡ್ವಾನ್ಸ್ಡ್ ಟಚ್‌ಸ್ಕ್ರೀನ್‌ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಯುಎಸ್‌ಬಿ ಚಾರ್ಜರ್‌ಗಳು, ಪವರ್ ಸ್ಟೀರಿಂಗ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್, ರೇರ್ ಎಸಿ ವೆಂಟ್‌ಗಳು ಹಾಗೂ ಎಲೆಕ್ಟ್ರಿಕಲಿ ಅಡ್ಜಸ್ಟೇಬಲ್ ಸೀಟ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 8 ಏರ್‌ಬ್ಯಾಗ್‌ಗಳನ್ನು ಹೊಂದಿದೆ.

More from DriveSpark

Article Published On: Wednesday, November 19, 2025, 10:52 [IST]
English summary
Vignesh shivan gifted nayanthara rolls royce spectre sedan details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+