ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ: ಬಹುಬೇಡಿಕೆಯ ಎಲೆಕ್ಟ್ರಿಕ್ ಸೂಪರ್ ಕಾರ್ ಡೆಲಿವರಿ ಪಡೆದ ಶಫಾಲಿ

ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ 'ಶಫಾಲಿ ವರ್ಮಾ' ವಿಶ್ವದ ಅತ್ಯಂತ ವೇಗದ ಎಲೆಕ್ಟ್ರಿಕ್ ಸ್ಪೋರ್ಟ್ ಕಾರಾಗಿರುವ ಎಂಜಿ ಸೈಬರ್‌ಸ್ಟರ್ ಅನ್ನು ಡೆಲಿವರಿ ಪಡೆದುಕೊಂಡಿದ್ದಾರೆ. ಈ ಐಕಾನಿಕ್ ಡೆಲಿವರಿಯು ಕ್ರಿಕೆಟ್ ಜಗತ್ತಿನಲ್ಲಿ ಶಫಾಲಿಯ ಉತ್ತುಂಗದ ಏರಿಕೆಯನ್ನು ಎತ್ತಿ ತೋರಿಸುತ್ತದೆ. ಎಂಜಿ ಸೈಬರ್‌ಸ್ಟರ್ ಕಾರು ಪ್ರಸ್ತುತ ಸೆಲೆಬ್ರಿಟಿಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಅದರ ದಿಟ್ಟ ವಿನ್ಯಾಸ, ತಂತ್ರಜ್ಞಾನ ಮತ್ತು ಅತ್ಯುತ್ತಮ ಡಿಸೈನ್‌ ಎಲ್ಲರನ್ನು ಸೆಳೆಯುತ್ತಿದೆ. ಶಫಾಲಿ ವರ್ಮಾ ಅವರ ದಿಟ್ಟ, ನಿರ್ಭೀತ ಮತ್ತು ಕ್ರಿಯಾತ್ಮಕ ವ್ಯಕ್ತಿತ್ವಕ್ಕೆ ಸಂಪೂರ್ಣವಾಗಿ ಎಂಜಿ ಸೈಬರ್‌ಸ್ಟರ್ ಸೂಕ್ತ ಆಯ್ಕೆಯಾಗಿದೆ.

ಯುವ ಕ್ರಿಕೆಟ್ ಆಟಗಾರ್ತಿ 'ಶಫಾಲಿ ವರ್ಮಾ' ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಫಾರ್ಮೆಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರ್ತಿ ಮತ್ತು 2025 ರ ಐಸಿಸಿ ಮಹಿಳಾ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಯಶಸ್ವಿ ಪ್ರಯಾಣವು ಭಾರತದಲ್ಲಿ ಹಲವರು ಯುವತಿಯರಿಗೆ ಮಾದರಿಯಾಗಿದೆ. ಇದೀಗ MG ಸೈಬರ್‌ಸ್ಟರ್‌ ಖರೀದಿ ಮೂಲಕ ವಾಹನ ವಲಯದಲ್ಲಿ ಅವರಿಗಿರುವ ಕ್ರೇಜ್ ಅನ್ನು ತೋರಿಸಿಕೊಂಡಿದ್ದಾರೆ.

indian-cricketer-shafali-verma-drives-home-the-mg-cyberster

ಎಂಜಿ ಸೈಬರ್‌ಸ್ಟರ್ ವಿಶೇಷತೆಗಳು: ಸರಾಗವಾಗಿ ಹೊಂದಿಕೊಳ್ಳುವ ಸೈಬರ್‌ಸ್ಟರ್, ಪರ್ಫಾಮೆನ್ಸ್ ಮತ್ತು ಸ್ಪೋರ್ಟಿ ಲುಕ್‌ ಹಂಬಲಿಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ. ಸೈಬರ್‌ಸ್ಟರ್ ತನ್ನ ದಿಟ್ಟ ನಿಲುವನ್ನು ಸಕ್ರಿಯ ಏರೋಡೈನಮಿಕ್ ಅಂಶಗಳು ಮತ್ತು ಕ್ಲಾಸಿಕ್ ರೋಡ್‌ಸ್ಟರ್‌ಗಳಿಂದ ಪ್ರೇರಿತವಾದ ಉದ್ದವಾದ ಬಾನೆಟ್‌ನೊಂದಿಗೆ ಬರುತ್ತದೆ. ಇದರ ಎಲೆಕ್ಟ್ರಿಕ್ ಸಿಸರ್ ಬಾಗಿಲುಗಳು, ಸಿಲೂಯೆಟ್ ಮತ್ತು ಚಾಲಕ-ಕೇಂದ್ರಿತ ಡಿಜಿಟಲ್ ಕಾಕ್‌ಪಿಟ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಇದರ ಕ್ಯಾಬಿನ್ ವಿನ್ಯಾಸವು ವಿಮಾನಕ್ಕೆ ಹೋಲಿಕೆಯಾಗುವ ರೀತಿಯಲ್ಲಿರುತ್ತದೆ. ಈ ಕಾರಿನ ಆಸನಗಳು 8-ವೇ ಎಲೆಕ್ಟ್ರಾನಿಲಿ ಅಡ್ಜಸ್ಟೇಬಲ್ ಕೂಡ ಆಗಿವೆ, ಫ್ಲಾಟ್ ಬಾಟಮ್ ಸ್ಟೀರಿಂಗ್ ವೀಲ್ ಇದ್ದು, ಡ್ರೈವಿಂಗ್ ಮೋಡ್ ಕಂಟ್ರೋಲ್‌ಗಳು ಹಾಗೂ ಪ್ಯಾಡಲ್ ಶಿಫ್ಟರ್‌ಗಳನ್ನು ನಿಯಂತ್ರಿಸಲು ನೆರವಾಗಬಲ್ಲವು. ಜೊತೆಗೆ ಸೈಬರ್‌ಸ್ಟರ್‌ನಲ್ಲಿ 10.25-ಇಂಚಿನ ಡಿಜಿಟಲ್ ಡ್ರೈವರ್ ಸ್ಕ್ರೀನ್, 7-ಇಂಚಿನ ಆಕ್ಸಿಲರಿ ಸ್ಕ್ರೀನ್, 7-ಇಂಚಿನ ಇನ್ಫೋಟೈನ್‌ಮೆಂಟ್ ಹೊಂದಿರುವ 3-ಸ್ಕ್ರೀನ್ ಸೆಟಪ್ ನೀಡಲಾಗಿದೆ.

indian-cricketer-shafali-verma-drives-home-the-mg-cyberster

ಡ್ಯುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್, 8-ಸ್ಪೀಕರ್ ಆಡಿಯೊ ಸಿಸ್ಟಮ್, ಆಂಬಿಯೆಂಟ್ ಲೈಟಿಂಗ್ ಹಾಗೂ ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸೆಡಾನ್ ಆಲ್-ವೀಲ್-ಡೈವ್ ಟೆಕ್ನಾಲಜಿಯನ್ನು ಹೊಂದಿದೆ. ಕೇವಲ 3.2 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ತಲುಪಬಲ್ಲದು. ಹಾಗೆಯೇ 200 ಕಿ.ಮೀ ಟಾಪ್ ಸ್ಪೀಡ್‌ ಹೋಗಬಲ್ಲದು.

ಈ ಕಾರು 77 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 580 ಕಿ.ಮೀ ಓಡುತ್ತದೆ. ಇದರಲ್ಲಿವ ಎಲೆಕ್ಟ್ರಿಕ್ ಮೋಟಾರ್ 510 ಹಾರ್ಸ್ ಪವರ್ ಹಾಗೂ 725 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸೆಡಾನ್ 4,535 ಎಂಎಂ ಉದ್ದ, 1,913 ಎಂಎಂ ಅಗಲ ಮತ್ತು 1,329 ಎಂಎಂ ಎತ್ತರವಿದೆ. ಇದರೊಂದಿಗೆ 140 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,690 ವೀಲ್‌ಬೇಸ್‌ನ್ನು ಒಳಗೊಂಡಿದೆ.

indian-cricketer-shafali-verma-drives-home-the-mg-cyberster

ಈ ಕಾರು 20-ಇಂಚಿರುವ ಡುಯಲ್ ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ರಸ್ತೆಯ ಮೇಲೆ ಬಿಗಿಯಾದ ಹಿಡಿತ ಒದಗಿಸಲು ಪೈರೆಲ್ಲಿ ಪಿ ಝೀರೋ ಟೈರ್‌ಗಳನ್ನು ಹೊಂದಿದೆ. ಇದರ ಬಟರ್‌ಫ್ಲೈ ಡೋರ್‌ಗಳನ್ನು ರಿಮೋಟ್ ಅಥವಾ ಬಟನ್ ಸಹಾಯದಿಂದ ಕಂಟ್ರೋಲ್ ಮಾಡಬಹುದು. ಹಾಗೆಯೇ ಕನ್ವರ್ಟಿಬಲ್ ಸಾಫ್ಟ್ ಟಾಪ್‌ನ್ನು ಹೊಂದಿದ್ದು, 10 ಸೆಕೆಂಡುಗಳಲ್ಲಿ ತೆರೆಯಬಹುದು ಹಾಗೂ ಮುಚ್ಚಬಹುದು.

ಹೊಸ ಎಂಜಿ ಸೈಬರ್‌ಸ್ಟರ್ ಹೊರಭಾಗದಲ್ಲಿ ಎಂಜಿ ಲೋಗೋ, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಬ್ಲಾಂಕ್ಡ್ - ಆಫ್ ಗ್ರಿಲ್, ವಿಡ್ತ್ ಡಿಫ್ಯೂಸರ್, ಎಲ್‌ಇಡಿ ಲೈಟ್ ಬಾರ್, ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿದೆ. ಫ್ಲೇರ್ ರೆಡ್, ನ್ಯೂಕ್ಲಿಯರ್ ಯೆಲ್ಲೋ, ಆಂಡಿಸ್ ಗ್ರೇ & ಮಾಡ್ರನ್ ಬೀಜ್ ಎಂಬ ನಾಲ್ಕು ಬಣ್ಣಗಳೊಂದಿಗೆ ದೊರೆಯುತ್ತದೆ.

More from DriveSpark

Article Published On: Sunday, November 23, 2025, 10:20 [IST]
English summary
Indian cricketer shafali verma drives home the mg cyberster
Read more on mg motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+